ನವದೆಹಲಿ: ವಿಶ್ವಶ್ರೇಷ್ಠ ಫುಟ್‌ಬಾಲ್ ಆಟಗಾರ, ಜರ್ಮನಿ ತಂಡದ ವಿಶ್ವಕಪ್ ವಿಜೇತ ನಾಯಕ ಮತ್ತು ಕೋಚ್ ಫ್ರಾಂಜ್ ಬೆಕೆನ್‌ಬಾಯರ್ (78) ಸೋಮವಾರ ನಿಧನರಾಗಿದ್ದಾರೆ.
ಈ ಕುರಿತು ಜರ್ಮನಿಯ ಸುದ್ದಿ ಸಂಸ್ಥೆ ಡಿಪಿಎ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಬೆಕನ್‌ಬೌರ್ 1974ರಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಟ್ರೋಫಿ ಗೆದ್ದ ಜರ್ಮನಿ ತಂಡದ ನಾಯಕರಾಗಿದ್ದರು. ಮತ್ತು ಅವರು 1990ರಲ್ಲಿ ಜರ್ಮನ್ ತಂಡ ಮ್ಯಾನೇಜರ್ ಆಗಿದ್ದಾಗ ತಂಡ ಮತ್ತೊಮ್ಮೆ ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಬೇಯರ್ನ್ ಮ್ಯೂನಿಚ್‌ನೊಂದಿಗೆ ಬೆಕೆನ್‌ಬೌರ್ ನಾಲ್ಕು ಬಾರಿ ಬುಂಡೆಸ್ಲಿಗಾ ಮತ್ತು ನಾಲ್ಕು ಬಾರಿ ಜರ್ಮನ್ ಕಪ್ ಗೆದ್ದಿದ್ದಾರೆ. ಅವರು 1974 ರಿಂದ 1976 ರವರೆಗೆ ಸತತ ಮೂರು ಯುರೋಪಿಯನ್ ಕಪ್ ವಿಜೇಯತ ತಂಡವನ್ನು ಮುನ್ನಡೆಸಿದ್ದರು.
ಫ್ರಾಂಜ್ ಬೆಕೆನ್‌ಬೌರ್ ಜರ್ಮನಿ ತಂಡದ ತರಬೇತುದಾರರಾಗಿದ್ದಾಗ, ಅವರ ತರಬೇತಿಯಲ್ಲಿ ಜರ್ಮನ್ ತಂಡವು 1986 ರ ವಿಶ್ವಕಪ್‌ನಲ್ಲಿ ಫೈನಲ್ ತಲುಪಿತು. ಆದರೆ, ಜರ್ಮನಿ ತಂಡ ಫೈನಲ್‌ನಲ್ಲಿ ಅರ್ಜೆಂಟೀನಾ ಎದುರು ಸೋತಿತ್ತು.
ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…
ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…
ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…
ಮಂಡ್ಯ: ಮನ್ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…
ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…
ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…