ಕೊಳ್ಳೇಗಾಲ : ಹಳೇ ವೈಷಮ್ಯ ಹಿನ್ನೆಲೆ ವ್ಯಕ್ತಿಯೋರ್ವನನ್ನು ಪತಿ ಪತ್ನಿ ಇಬ್ಬರು ಮಾರಕಾಸ್ತ್ರದಿಂದ ಹೊಡೆದು ಭೀಕರವಾಗಿ ಹತ್ಯೆಗೈದಿರುವ ಘಟನೆ ತಾಲ್ಲೂಕಿನ ಚನ್ನೀಪುರದೊಡ್ಡಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ.
ಚನ್ನೀಪುರದೊಡ್ಡಿ ಗ್ರಾಮದ ಹಾಲಿನ ಡೈರಿ ಕಾರ್ಯದರ್ಶಿ ಹಾಗೂ ವ್ಯವಸಾಯ ಮಾಡುತ್ತಿದ್ದ ಉಮೇಶ್(50) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಸ್ವಾಮಿಗೌಡ(60) ಹಾಗೂ ನಾಗಮ್ಮ(50) ಎನ್ನುವರು ಕೊಲೆ ಮಾಡಿದ ಆರೋಪಿ.
ಚನ್ನೀಪುರ ಗ್ರಾಮದಲ್ಲಿ ಹಾಲಿನ ಡೈರಿ ಇಟ್ಟಿದ್ದ ಉಮೇಶ್ ಎನ್ನುವನು ಆರೋಪಿ ಸ್ವಾಮಿಗೌಡನಿಗೆ ಹಿಂದೆ ಒಂದು ಲಕ್ಷ ಹಣವನ್ನು ವಯಕ್ತಿಕವಾಗಿ ನೀಡಿದ್ದನು. ಕಳೆದ ಒಂದು ವರ್ಷದಿಂದ ಉಮೇಶ್ ನ ಡೈರಿಗೆ ಹಾಲು ಹಾಕದೇ ಪಕ್ಕದ ಹೊಸಹಳ್ಳಿ ನಿಂಗಯ್ಯದೊಡ್ಡಿ ಗ್ರಾಮದ ಡೈರಿ ಹಾಲು ಹಾಕುತ್ತಿದ್ದನು. ಮೊನ್ನೆ ತಾನು ನೀಡಿದ್ದ ಹಣವನ್ನು ಕೇಳಲು ಹೋಗಿದ್ದ ಉಮೇಶ್ ನ ಜೊತೆ ಆರೋಪಿ ಗಲಾಟೆ ಮಾಡಿದ್ದನು.
ಇಂದು ಮಧ್ಯಾಹ್ನ ಉಮೇಶ್ ಆರೋಪಿ ಮನೆ ಮುಂದೆ ನಡೆದುಕೊಂಡು ಹೋಗುವಾಗ ಆರೋಪಿ ಸ್ವಾಮಿಗೌಡ ಹಾಗೂ ಆತನ ಹೆಂಡತಿ ನಾಗಮ್ಮ ಇವರಿಬ್ಬರು ಉಮೇಶ್ ನ ಮೇಲೆ ಗಲಾಟೆ ಮಾಡಿ ಲಾಂಗ್ ಮಚ್ಚು ಮಾರಕಾಸ್ತ್ರದಿಂದ ತಲೆ ಹಾಗೂ ಕತ್ತು ಭಾಗಕ್ಕೆ ಹೊಡೆದು ಪಕ್ಕದ ಚಾನಲ್ ಗೆ ಬಿಸಾಡಿದ್ದಾನೆ.
ಗಲಾಟೆ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಮಹದೇವ ಚಾನಲ್ ಬಿದ್ದಿದ್ದ ಉಮೇಶ್ ನನ್ನು ನೋಡಿದಾಗ ಉಸಿರಾಡುವುದನ್ನು ಕಂಡು ತಕ್ಷಣ ಕಾರಿನಲ್ಲಿ ಗಾಯಾಳುವನ್ನು ಕೊಳ್ಳೇಗಾಲ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವಷ್ಟರಲ್ಲಿ ಸಾವನ್ನಪ್ಪಿದ್ದಾನೆ. ವಿಚಾರ ತಿಳಿದು ಆಸ್ಪತ್ರೆಗೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಭೇಟಿ ನೀಡಿ ಬಳಿಕ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತ್ತೆಗೆ ಬಲೆಬೀಸಿದ್ದಾರೆ. ಮೃತ್ತದೇಹವನ್ನು ಚಾ.ನಗರ ಸಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದ್ದು ನಾಳೆ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…
ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…
ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…
ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…