ಹನೂರು : ಮರ ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 4 ಹಸುಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಬೋರೆದೊಡ್ಡಿ ಗ್ರಾಮದ ಸಮೀಪ ಜರುಗಿದೆ.
ಬೋರೆದೊಡ್ಡಿ ಗ್ರಾಮದ ರಂಗಸ್ವಾಮಿ, ರವಿ, ಮಾದಯ್ಯ ಎಂಬುವರಿಗೆ ಸೇರಿದ ನಾಲ್ಕು ಹಸುಗಳು ಮೃತಪಟ್ಟರೆ, ನಾಗ ಎಂಬುವರಿಗೆ ಸೇರಿದ ಹಸು ಕಾಲು ಮುರಿದಿದೆ.
ಘಟನೆಯ ವಿವರ : ಒಡೆಯರ ಪಾಳ್ಯ ಗ್ರಾಮದಿಂದ ತುಮಕೂರು ನಗರಕ್ಕೆ ಮರ ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬೋರೆದೊಡ್ಡಿ ಗ್ರಾಮದ ಸಮೀಪ ಪಲ್ಟಿ ಹೊಡೆದಿದೆ. ಪರಿಣಾಮ ಜಮೀನಿನಲ್ಲಿ ಮೇವು ಮೇಯುತಿದ್ದ ನಾಲ್ಕು ಹಸುಗಳು ಸ್ಥಳದಲ್ಲೇ ಮತ ಪಟ್ಟಿವೆ.
ಪರಿಹಾರ ವಿತರಿಸಿದ ಜನ ಧ್ವನಿ ಬಿ ವೆಂಕಟೇಶ್ : ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಮಗುಚಿಕೊಂಡು ಸ್ಥಳದಲ್ಲೇ ನಾಲ್ಕು ಹಸು ಮೃತಪಟ್ಟಿರುವ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಒಬಿಸಿ ಕಾರ್ಯಕಾರಿಣಿ ರಾಜ್ಯ ಸಮಿತಿ ಸದಸ್ಯ ಜನದ್ವನಿ ಬಿ ವೆಂಕಟೇಶ್ ತಡರಾತ್ರಿ ಗ್ರಾಮಕ್ಕೆ ಭೇಟಿ ನೀಡಿ ರೈತರಿಗೆ ಸಾಂತ್ವನ ತಿಳಿಸಿ ಹಸುಗಳ ಮಾಲೀಕರಿಗೆ ತಲಾ ಐದು ಸಾವಿರ ವೈಯಕ್ತಿಕ ಪರಿಹಾರ ವಿತರಿಸಿದ್ದಾರೆ.
ಬೆಂಗಳೂರು : ದೇಶದಲ್ಲಿ ಮೊದಲ ಬಾರಿಗೆ ಮಕ್ಕಳಿಗೆ ಮೀಸಲಾಗಿ 450 ಹಾಸಿಗೆಗಳ ಬೃಹತ್, ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಇಂದಿರಾ…
ಬೈಲಕುಪ್ಪೆ : ನಿನ್ನೆ ರಾತ್ರಿ ನಡೆದ ಹಿಟ್ ಅಂಡ್ ರನ್ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ…
ಹೈದರಬಾದ್ : ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸುವರ್ಣಲತಾ ಅವರು ನಿಧನರಾಗಿದ್ದಾರೆ. 85 ವರ್ಷದ ಸುವರ್ಣಲತಾ ಅವರು…
ಮುಂಬೈ : ‘ಧುರಂಧರ್-2’ ಚಿತ್ರದ ಯಶಸ್ವಿ ನಟಿ ಸಾರಾ ಅರ್ಜುನ್ ಅವರಿಗೆ ಸದ್ಯ ಖ್ಯಾತಿ ಹೆಚ್ಚಾಗಿದೆ. ಭಾನುವಾರ ಮುಂಬೈನ ವಾಂಖೆಡೆ…
ಚೆನ್ನೈ : ಏಪ್ರಿಲ್ 23 ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಮತ್ತು ಪ್ರತಿಸ್ಪರ್ಧಿ ಟಿವಿಕೆ…
ಮಡಿಕೇರಿ : ಸರ್ಕಾರಿ ಬಸ್‌ವೊಂದು ನಿಯಂತ್ರಣ ತಪ್ಪಿ ಬಸ್ ನಿಲ್ದಾಣದಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಗರದ ಕೆಎಸ್‌ಆರ್‌ಟಿಸಿ ಬಸ್…