ಚಾಮರಾಜನಗರ

ಹನೂರು| ನಿರಂತರ ಕಾಡಾನೆ ದಾಳಿಯಿಂದ ರಾಗಿ ಬೆಳೆ ನಾಶ: ಕಂಗಾಲಾದ ಜನರು

ಹನೂರು: ನಿರಂತರ ಕಾಡಾನೆ ದಾಳಿಯಿಂದಾಗಿ ರಾಗಿ ಫಸಲು ಹಾನಿಯಾಗಿದ್ದು, ಇತ್ತ ಬೆಳೆಯೂ ಇಲ್ಲದೇ ಅತ್ತ ಪರಿಹಾರವೂ ಇಲ್ಲದೇ ಅತಂತ್ರ ಸ್ಥಿತಿಗೆ ತಲುಪಿದ್ದೇವೆ ಎಂದು ಕೋಣನಕೆರೆ ಗ್ರಾಮದ ಕಾಳಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣನಕೆರೆ ಗ್ರಾಮದಲ್ಲಿ ಕಾಳಮ್ಮ ಬಿನ್ ಮಾದಯ್ಯ ಎಂಬುವವರು, ಪಾರಂಪರಿಕ ಅರಣ್ಯವಾಸಿ ಕಾಯ್ದೆ ಅಡಿಯಲ್ಲಿ ತಮಗೆ ಸರ್ಕಾರ ನೀಡಿರುವ 1.17 ಎಕರೆ ಜಮೀನಿನಲ್ಲಿ ರಾಗಿ ಬೆಳೆ ಬೆಳೆದಿದ್ದರು. ಇದೀಗ ಕಳೆದ ಎರಡು ದಿನಗಳಿಂದಲೂ ಸಹ ನಿರಂತರವಾಗಿ ಕಾಡಾನೆ ದಾಳಿ ಮಾಡುತ್ತಿದ್ದು, ಬೆಳೆ ನಾಶವಾಗುತ್ತಿದೆ ಎಂದು ರೈತ ಮಹಿಳೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧವಿದೆ: ಸಿಎಂ ಸಿದ್ದರಾಮಯ್ಯ ಘೋಷಣೆ

ಕೋಣನಕೆರೆ ಗ್ರಾಮದಲ್ಲಿ ಕಳೆದ ಎರಡು ಮೂರು ದಿನಗಳಿಂದಲೂ ಸಹ ನಿರಂತರವಾಗಿ ಕಾಡಾನೆಗಳು ಜಮೀನಿಗೆ ನುಗ್ಗಿ ಬೆಳೆಗಳನ್ನು ತಿಂದು ತೇಗಿ, ಜೊತೆಗೆ ತುಳಿದು ಹಾಳು ಮಾಡುತ್ತಿದ್ದು ಬೆಳೆ ರೈತನ ಕೈ ಸೇರದೆ ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ. ಇದರಿಂದ ರೈತ ಮಹಿಳೆ ಸಾಲದ ಸುಳಿಯಲ್ಲಿ ಸಿಲುಕಿ ಸಾಲ ತೀರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿ ಕಂಗಾಲಾಗಿದ್ದಾರೆ. ಜೊತೆಗೆ ನಿರಂತರ ದಾಳಿಯಿಂದ ಬೇಸತ್ತು ವ್ಯವಸಾಯ ಮಾಡುವುದನ್ನೇ ನಿಲ್ಲಿಸಿ ಬಿಡಬೇಕು ಎಂಬಂತಾಗಿದೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

ಆದಿವಾಸಿ ಸಮುದಾಯಕ್ಕೆ ನೀಡಿರುವ ಜಮೀನುಗಳಿಗೆ ಕೇವಲ ಹಕ್ಕು ಪತ್ರಗಳನ್ನು ಮಾತ್ರ ನೀಡಿದ್ದು, ಹಕ್ಕು ಪತ್ರಗಳನ್ನ ನೀಡಿದರೆ ಸರ್ಕಾರ ಅಥವಾ ಸಂಬಂಧಪಟ್ಟ ಅರಣ್ಯ ಇಲಾಖೆ ಬೆಳೆ ಪರಿಹಾರವನ್ನು ನೀಡುವುದಿಲ್ಲ. ಬದಲಿಗೆ ಸೂಕ್ತ ದಾಖಲಾತಿಗಳನ್ನು ಒದಗಿಸಿ ಎಂದು ಹೇಳುತ್ತಾರೆ. ಆದರೆ ಅರಣ್ಯ ವಾಸಿ ಕಾಯ್ದೆ ಅಡಿಯಲ್ಲಿ ನಮಗೆ ನೀಡಿರುವ ಜಮೀನುಗಳಿಗೆ ಕೇವಲ ಹಕ್ಕು ಪಾತ್ರಗಳನ್ನು ಮಾತ್ರ ನೀಡಿದ್ದು, ಉಳಿದಂತೆ ಯಾವುದೇ ಪಹಣಿ ದಾಖಲಾತಿಗಳು ನಮ್ಮಲ್ಲಿ ಇರುವುದಿಲ್ಲ. ಹಾಗಾಗಿ ನಮಗೆ ಪರಿಹಾರದ ರೂಪದಲ್ಲಿ ಸಹ ಹಣ ಕೈ ಸೇರುತ್ತಿಲ್ಲ. ಹಾಗಾಗಿ ನಮಗೆ ಆನೆ ದಾಳಿಯಿಂದ ನುಂಗಲಾರದ ತುತ್ತಾಗಿದೆ ಎಂದು ಕೋಣನಕೆರೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದಿವಾಸಿ ಸಮುದಾಯದ ಜನರು ಬದುಕುತ್ತಿರುವ ಪ್ರದೇಶಗಳಲ್ಲಿ ಕಾಡಾನೆ ಅಥವಾ ಕಾಡು ಪ್ರಾಣಿಗಳಿಂದ ಬೆಳೆಗಳಿಗೆ ಹಾನಿಯಾದರೆ ಅದಕ್ಕೆ ತಕ್ಕಂತೆ ಪರಿಹಾರ ಸಿಗುತ್ತಿಲ್ಲ. ಹಾಗಾಗಿ ಕಾಡುಪ್ರಾಣಿಗಳ ಉಪಟಳದಿಂದ ಬೆಳೆಯನ್ನು ರಕ್ಷಿಸಬೇಕು. ದವಸ ಧಾನ್ಯಗಳನ್ನ ಬೆಳೆಯಲು ಅನುಕೂಲ ಕಲ್ಪಿಸಬೇಕು ಎಂದು ಸೋಲಿಗ ಸಮುದಾಯದ ಮುಖಂಡ ಮುತ್ತಯ್ಯ ಆಗ್ರಹಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

15 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

15 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

16 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

18 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

22 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

22 hours ago