ಚಾಮರಾಜನಗರ

ಗುಂಡ್ಲುಪೇಟೆ | ನಡುರಸ್ತೆಯಲ್ಲಿ ಹೊತ್ತಿ ಉರಿದ ಗೂಡ್ಸ್ ವಾಹನ

ಗುಂಡ್ಲುಪೇಟೆ : ನಡುರಸ್ತೆಯಲ್ಲಿ ಗೂಡ್ಸ್ ವಾಹನ ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಚೆಕ್ ಪೋಸ್ಟ್ ಬಳಿ ಸೋಮವಾರ ನಡೆದಿದೆ.

ಕರ್ನಾಟಕ- ಕೇರಳ ಗಡಿಯಾದ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಚೆಕ್ ಪೋಸ್ಟ್ ಬಳಿ ಘಟನೆ ನಡೆದಿದ್ದು, ಕೇರಳದಿಂದ ಬರುತ್ತಿದ್ದ ಬೊಲೆರೊ ಪಿಕ್ ಅಪ್ ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಇಡೀ ವಾಹನ ಹೊತ್ತಿ ಉರಿದಿದೆ.

ವಾಹನದಿಂದ ಇಳಿದು ಚಾಲಕ ಪಾರಾಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಶುಶ್ರೂಷೆ ವೃತ್ತಿಗೆ ಮೆರುಗು ನೀಡಿದ ಫ್ಲಾರೆನ್ಸ್ ನೈಟಿಂಗೇಲ್

ಎನ್.ಹರೀಶ್ ಕುಮಾರ್ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖವಾಗಿ ಮುಂಚೂಣಿಯಲ್ಲಿ ಬರುವ ಹೆಸರೆಂದರೆ ಅದು ವೈದ್ಯ ವೃತ್ತಿ. ಆದರೆ ಒಬ್ಬ ರೋಗಿಯು ಗುಣಮುಖ…

57 mins ago

ಜನಮೆಚ್ಚುಗೆ ಗಳಿಸಿದ ರಾಜ್ಯಮಟ್ಟದ ಯಿಫಾ ಹಾಕಿ

ಲಕ್ಷ್ಮೀಕಾಂತ್ ಕೊಮಾರಪ್ಪ ಉತ್ತಮ ಪ್ರದರ್ಶನ ನೀಡಿದ ಎಜಿಒಆರ್‌ಸಿ ತಂಡ ಚಾಂಪಿಯನ್; ಸದರ್ನ್ ಕಮಾಂಡ್ ತಂಡಕ್ಕೆ ದ್ವಿತೀಯ ಬಹುಮಾನ ಸೋಮವಾರಪೇಟೆ: ಸುಮಾರು…

1 hour ago

ಮಾರುಕಟ್ಟೆ ಬಂದ್ ಭೀತಿ; ಹೊಗೆಸೊಪ್ಪು ತಂದ ರೈತರ ಪರದಾಟ

ಮಂಜು ಕೋಟೆ ಕೋಟೆ: ಹೆಬ್ಬಾಳ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬೇಲ್‌ಗಳ ರಾಶಿ; ಮಳೆ ಬಂದರೆ ನಷ್ಟದ ಆತಂಕ ಎಚ್.ಡಿ.ಕೋಟೆ: ಮಾರುಕಟ್ಟೆ…

1 hour ago

ಬಂಡೀಪಾಳ್ಯದಲ್ಲಿ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ ಶೀಘ್ರ ಆರಂಭ

ಕೆ.ಬಿ.ರಮೇಶನಾಯಕ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ರೈತರಿಗೆ ಅನುಕೂಲ ರೈತರು ರೇಷ್ಮೆ ಬೆಳೆಯತ್ತ ಮುಖ ಮಾಡಿರುವ ಪರಿಣಾಮ ಉತ್ಪಾದನೆಯಲ್ಲಿ ಹೆಚ್ಚಳ…

1 hour ago

ನೂರು ಸಾವಿರದ ಗಡಿ ದಾಟಿದ ಆಂದೋಲನ ಇನ್ ಸ್ಟಾ ಪೇಜ್ ಹಿಂಬಾಲಕರು

‘ಆಂದೋಲನ’ ಪತ್ರಿಕೆಯ ಹೊಸ ಡಿಜಿಟಲ್ ಮೈಲಿಗಲ್ಲಿಗೆ ಹರಿದು ಬಂದ ಹಾರೈಕೆಗಳು " ಒಂದು ಲಕ್ಷ ಹಿಂಬಾಲಕರು ತಲುಪಿರುವುದು ಕೂಡ ಹೊಸ…

1 hour ago

ದುಸ್ಥಿತಿಯಲ್ಲಿ ಸರ್ಕಾರಿ ಮಹಾರಾಜ ಸಂಸ್ಕೃತ ಪಾಠಶಾಲೆ ಕಟ್ಟಡ

ಪ್ರಶಾಂತ್ ಎಸ್. ಮೈಸೂರು: ಸಂಸ್ಕೃತ, ವೇದ, ಆಗಮ ಮತ್ತು ಶಾಸ್ತ್ರಗಳನ್ನು ಬೋಽಸುವ ಪ್ರಮುಖ ಸಾಂಪ್ರದಾಯಿಕ ಶಿಕ್ಷಣ ನೀಡುತ್ತಿರುವ ನಗರದ ಸರ್ಕಾರಿ…

1 hour ago