ಚಾಮರಾಜನಗರ: ಪ್ರಸಿದ್ಧ ಯಾತ್ರಾಸ್ಥಳ ಬಿಳಿಗಿರಿರಂಗನಬೆಟ್ಟಕ್ಕೆ ಹೋಗುವ ವಾಹನ ಸವಾರರಿಂದ ಹಸಿರು ಸುಂಕ ಸಂಗ್ರಹಿಸಲು ಅರಣ್ಯ ಇಲಾಖೆ ಆರಂಭಿಸಲಾಗಿದ್ದು, 2024ರ ಜನವರಿ.1 ರಂದು ಹಸಿರು ಸುಂಕ ಸಂಗ್ರಹಿಸಲಾಗುತ್ತಿದ್ದು, ದ್ವಿಚಕ್ರವಾಹನಹಳಿಗೆ 10, ನಾಲ್ಕು ಚಕ್ರದ ವಾಹನಗಳಿಗೆ 20 ನಿಗದಿ ಪಡಿಸಲಾಗಿದೆ.
ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಒಳಗಡೆ ನೆಲೆಸಿರುವವರಿಗೆ ಸುಂಕದಿಂದ ವಿನಾಯಿತಿ ಇದೆ. ಕೆಎಸ್‌ಆರ್‌ಟಿಸಿ ಬಸ್, ಅಂಬುಲೆನ್ಸ್ ಸೇರಿದಂತೆ ತುರ್ತು ವಾಹನಗಳಿಗೂ ವಿನಾಯಿತಿ ನೀಡಲಾಗಿದೆ.
‘ಪ್ರಾಯೋಗಿಕವಾಗಿ ಸುಂಕವನ್ನು ಸಂಗ್ರಹಿಸಲಾಗುತ್ತಿದ್ದು, ಹಣವನ್ನು ಅರಣ್ಯ ಸಂರಕ್ಷಣೆ ಹಾಗೂ ಸಂರಕ್ಷಿತ ವ್ಯಾಪ್ತಿಯ ಗಿರಿಜನರಿಗೆ ಅನುಕೂಲ ಕಲ್ಪಿಸುವ ಕಾರ್ಯಗಳಿಗೆ ಬಳಸಲಾಗುವುದು’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ನಿರ್ದೇಶಕಿ ಹಾಗೂ ಡಿಸಿಎಫ್ ದೀಪ್ ಜೆ.ಕಾಂಟ್ರ್ಯಾಕ್ಟರ್ ತಿಳಿಸಿದ್ದಾರೆ.
ಯಳಂದೂರು ಮತ್ತು ಚಾಮರಾಜನಗರ ಮಾರ್ಗವಾಗಿ ಬೆಟ್ಟಕ್ಕೆ ಹೋಗಬಹುದಾಗಿದ್ದು, ಯಳಂದೂರು ಮಾರ್ಗದಲ್ಲಿ ಗುಂಬಳ್ಳಿಯಲ್ಲಿ ಮತ್ತು ಚಾಮರಾಜನಗರ ಮಾರ್ಗದಲ್ಲಿ ಹೊಂಡರಬಾಳುವಿನಲ್ಲಿ ಚೆಕ್‌ಪೋಸ್ಟ್‌ಗಳಿವೆ. ಅರಣ್ಯ ಪ್ರವೇಶಿಸುವುದಕ್ಕೂ ಮೊದಲು ಜನರು ತಮ್ಮ ವಿವರಗಳನ್ನು ದಾಖಲು ಮಾಡುವ ವ್ಯವಸ್ಥೆ ಈ ಹಿಂದೆಯೇ ಜಾರಿಯಲ್ಲಿತ್ತು. ಈಗ ಹಸಿರು ಶುಲ್ಕವನ್ನೂ ಪಡೆಯಲಾಗುವುದು.
ಬಂಡೀಪುರ ನಾಗರಹೊಳೆಗೆ ಹೋಲಿಸಿದರೆ ಬಿಆರ್‌ಟಿಯಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮದಿಂದ ಸಂಗ್ರಹವಾಗುವ ಆದಾಯ ಕಡಿಮೆ. ಹಸಿರು ಸುಂಕ ಸಂಗ್ರಹಿಸಿದರೆ ಅಗತ್ಯವಿದ್ದಷ್ಟು ತಾತ್ಕಾಲಿಕ ಸಿಬ್ಬಂದಿಯನ್ನು ನೇಮಿಸುವುದರ ಜೊತೆಗೆ ಇಲಾಖೆಯ ಇನ್ನಿತರ ವೆಚ್ಚ ಭರಿಸಲು ಸಹಕಾರಿಯಾಗಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ನವದೆಹಲಿ: ಇರಾನ್ ಮೇಲೆ ಇಸ್ರೇಲ್-ಅಮೇರಿಕಾ ದಾಳಿತ ನಂತರ ನಡೆಯುತ್ತಿರುವ ಉದ್ವಿಗ್ನತೆಯ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ…
ಟೆಹರಾನ್: ಇರಾನ್ ವಿರುದ್ಧ ಅಮೇರಿಕಾ ಹಾಗೂ ಇಸ್ರೇಲ್ ನಡೆಸಿದ ಜಂಟಿ ಮಿಲಿಟರಿ ಕಾರ್ಯಾಚರಣೆಯಲ್ಲಿ 48 ಇರಾನಿನ ನಾಯಕರು ಸಾವನ್ನಪ್ಪಿದ್ದಾರೆ ಎಂದು…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಾರ್ಚ್.3ರ ಮಂಗಳವಾರ ಮಧ್ಯಾಹ್ನದ ನಂತರ ಚಂದ್ರಗ್ರಹಣವಿದ್ದರೂ ಶ್ರೀ ಮಹದೇಶ್ವರ ಸ್ವಾಮಿಯ…
ಸರ್ಕಾರಿ ನೌಕರಿ ಕನಸಾಗಿಯೇ ಉಳಿದಿದೆ ಎಂಬ ಉದ್ಯೋಗಾಕಾಂಕ್ಷಿಗಳ ಆಕ್ರೋಶ ಧಾರವಾಡದಲ್ಲಿ ಮೊದಲ ಬಾರಿಗೆ ಸ್ಛೋಟಗೊಂಡಿದೆ. ಅದರಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, …
ಜಾ.ದಳ ಸಮಾವೇಶ, ಯಡಿಯೂರೋತ್ಸವದ ಮೂಲಕ ಮತದಾರರ ಗಮನ ಸೆಳೆಯಲು ಯತ್ನ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಬಿಜೆಪಿ-ಜಾ.ದಳ ಪಾಳೆಯಗಳಿಗೆ ಹರ್ಷ ತಂದಿರುವುದು…
ನವೀನ್ ಡಿಸೋಜ ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.೬ರಂದು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಸಹಜವಾಗಿಯೇ ಕೊಡಗು ಜಿಲ್ಲೆಯಲ್ಲಿಯೂ ಹತ್ತಾರು ನಿರೀಕ್ಷೆಗಳಿದ್ದು,…