ಚಾಮರಾಜನಗರ

ಚಾಮರಾಜನಗರ: ಬದನಗುಪ್ಪೆಯಲ್ಲಿ ಮುತ್ತಯ್ಯ ಮುರಳೀಧರನ್ 1400 ಕೋಟಿ ಹೂಡಿಕೆ

ಚಾಮರಾಜನಗರ: ಶ್ರೀಲಂಕಾ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ನಿವೃತ್ತಿಯ ಬಳಿಕ ಉದ್ಯಮದತ್ತ ಮುಖ ಮಾಡಿದ್ದು, ಸ್ವದೇಶದಲ್ಲಿ ಆರಂಭಿಸಿದ್ದ ತಂಪು‌ ಪಾನೀಯ ತಯಾರಿಕಾ ಉದ್ಯಮವನ್ನು ಈಗ ಚಾಮರಾಜನಗರ ಬದನಗುಪ್ಪೆಗೂ ವಿಸ್ತರಿಸಿದ್ದಾರೆ.

ಈ ಕುರಿತು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ‌. ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ‌ ಮಾಡಿದ ಮುರಳೀಧರನ್ ತಮ್ಮ ಯೋಜನೆ ಕುರಿತು ಚರ್ಚಿಸಿದ್ದಾರೆ.

‘ಮುತ್ತಯ್ಯ ಬೆವರೇಜಸ್ ಅಂಡ್ ಕನ್ಫೆಕ್ಷನರಿ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯಡಿಯಲ್ಲಿ ಮುತ್ತಯ್ಯ ಮುರಳೀಧರನ್ ಬದನಗುಪ್ಪೆಯಲ್ಲಿ 1400 ಕೋಟಿ ರೂಪಾಯಿಗಳ ಹೂಡಿಕೆ ಮಾಡಲು ಮುಂದಾಗಿದ್ದಾರೆ.

ಆರಂಭದಲ್ಲಿ 250 ಕೋಟಿ ರೂಪಾಯಿಗಳ ಹೂಡಿಕೆ ಮಾಡಲು ಮುರಳೀಧರನ್ ನಿರ್ಧರಿಸಿದ್ದರು. ಆದರೆ ಈಗಾಗಲೇ ಮೊತ್ತ 1000 ಕೋಟಿ ಮುಟ್ಟಿದ್ದು, ಮುಂದಿನ ದಿನಗಳಲ್ಲಿ 1400 ಕೋಟಿ ನಿರೀಕ್ಷೆಗಳಿವೆ ಎಂದು ತಿಳಿಸಲಾಗಿದೆ.

ಎಂಬಿ ಪಾಟೀಲ್ ಎಕ್ಸ್ ಪೋಸ್ಟ್ ಹೀಗಿದೆ: ವಿಶ್ವವಿಖ್ಯಾತ ಸ್ಪಿನ್ ಬೌಲರ್ ಶ್ರೀಲಂಕಾದ ಶ್ರೀ ಮುತ್ತಯ್ಯ ಮುರಳೀಧರನ್ ತಮ್ಮ ಕ್ರಿಕೆಟ್ ನಿವೃತ್ತಿ ಬಳಿಕ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ತಮ್ಮ ದೇಶದಲ್ಲಿ ತಂಪು ಪಾನೀಯ ಉತ್ಪಾದನಾ ಘಟಕವನ್ನು ಹೊಂದಿದ್ದಾರೆ. ತಮ್ಮ ವಹಿವಾಟನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ನಮ್ಮ ರಾಜ್ಯವನ್ನು ಆಯ್ಕೆಮಾಡಿಕೊಂಡಿರುವುದು ಸಂತಸದ ಸಂಗತಿ.

ಚಾಮರಾಜನಗರ ಜಿಲ್ಲೆಯಲ್ಲಿ ಉತ್ಪಾದನಾ ಘಟಕ ಸ್ಥಾಪಿಸುತ್ತಿದ್ದು, ಆರಂಭದಲ್ಲಿ ರೂ. 250 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದ್ದರು, ಆದರೆ ರೂ. 1,000 ಕೋಟಿ ಮುಟ್ಟತ್ತಿದೆ. ಮುಂದಿನ ದಿನಗಳಲ್ಲಿ ರೂ. 1,400 ಕೋಟಿ ತಲುಪುವ ನಿರೀಕ್ಷೆಗಳಿವೆ. ಇದೇ ಸಂದರ್ಭದಲ್ಲಿ ಧಾರವಾಡದಲ್ಲಿ ಘಟಕ ಸ್ಥಾಪನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಉತ್ತರಿಸಿದರು. ಸಣ್ಣ ಪುಟ್ಟ ಸಮನ್ವಯಕ್ಕೆ ಸಂಬಂಧಿಸಿದಂತೆ ಈದಿನ ಚರ್ಚೆಗಳು ನಡೆಯಿತು. ಅಗತ್ಯದ ನೆರವು ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವೆ.

ಶ್ರೀನಿವಾಸ ಎ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನನ್ನೂರು. ಡಿ ಬನುಮಯ್ಯ ಕಾಲೇಜಿನಲ್ಲಿ ಪದವಿ ಮುಗಿಸಿದ ನಾನು ಕಳೆದ ನಾಲ್ಕು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದೇನೆ. ಒನ್‌ಇಂಡಿಯಾ ಕನ್ನಡದಲ್ಲಿ ಸೋಷಿಯಲ್‌ ಮೀಡಿಯಾ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಆರಂಭಿಸಿ ಮೈಖೇಲ್‌ ಕನ್ನಡ ಹಾಗೂ ಕನ್ನಡ ಫಿಲ್ಮಿಬೀಟ್‌ನಲ್ಲಿ ಮೂರು ವರ್ಷಗಳ ಕಾಲ ಸಬ್‌ಎಡಿಟರ್‌ ಆಗಿ ಕೆಲಸ ನಿರ್ವಹಿಸಿದ್ದೇನೆ. ಪ್ರಸ್ತುತ ಆಂದೋಲನ ದಿನಪತ್ರಿಕೆಯ ಡಿಜಿಟಲ್‌ ಟೀಮ್‌ ಲೀಡ್‌ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕ್ರೀಡೆ ಹಾಗೂ ಸಿನಿಮಾ ನನ್ನ ಆಸಕ್ತಿ ಕ್ಷೇತ್ರಗಳಾಗಿದ್ದು, ಪ್ರವಾಸ ಮತ್ತು ಫೋಟೋಗ್ರಫಿ ನೆಚ್ಚಿನ ಹವ್ಯಾಸಗಳಾಗಿವೆ.

Recent Posts

‘ಬಡವರಿಗೆ ನೀಡಿದ ಭೂಮಿಯನ್ನು ಕಬಳಿಸುವ ಯತ್ನ’

ಸಾಲಿಗ್ರಾಮ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಚಂದ್ರು ಆರೋಪ ಸಾಲಿಗ್ರಾಮ: ದಲಿತ ಮತ್ತು ಹಿಂದುಳಿದ…

3 hours ago

ಸಿದ್ದಾಪುರ ಮಾರುಕಟ್ಟೆಯಲ್ಲೊಂದು ತ್ಯಾಜ್ಯ ಶಿಖರ

ಕೃಷ್ಣ ಸಿದ್ದಾಪುರ ಸಂತೆಮಾಳದಲ್ಲಿ ತರಕಾರಿ ಜೊತೆ ಸಾಂಕ್ರಾಮಿಕ ರೋಗವೂ ಉಚಿತ ಕ್ರಮಕೈಗೊಳ್ಳದ ಗ್ರಾ.ಪಂ. ವಿರುದ್ಧ ಸಾರ್ವಜನಿಕರ ಅಸಮಾಧಾನ  ಸಿದ್ದಾಪುರ: ಸಾರ್ವಜನಿಕ…

3 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಸಾಮಾಜಿಕ ಬಹಿಷ್ಕಾರ ನಿಷೇಧ ಕಾಯ್ದೆ: ಸಂವಿಧಾನದ ಆತ್ಮಕ್ಕೆ ಗೌರವ

ಬೆಂಗಳೂರು ಡೈರಿ  ಆರ್.ಟಿ.ವಿಠ್ಠಲಮೂರ್ತಿ  ಘನತೆಯ ಬದುಕು ಬಯಸುವ ಮನುಷ್ಯನ ಹಕ್ಕನ್ನು ಎತ್ತಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ  ಬ್ರಿಟಿಷರ ಗುಲಾಮಗಿರಿಯಲ್ಲಿದ್ದ ಭಾರತಕ್ಕೆ…

3 hours ago

ಬಳ್ಳಾರಿ ಗಲಭೆ ಪ್ರಕರಣ: ನಿರ್ದಾಕ್ಷಿಣ್ಯ ಕ್ರಮ ಅಗತ್ಯ

ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಘರ್ಷಣೆ ಸಂದರ್ಭದಲ್ಲಿ ಗುಂಡೇಟಿನಿಂದ ಕಾಂಗ್ರೆಸ್ ಕಾರ್ಯಕರ್ತ…

3 hours ago

ಶತೋತ್ತರ ಬೆಳ್ಳಿ ಹಬ್ಬದ ಕನಸಿನಲ್ಲಿ ಶಾಲೆ: ಅಭಿವೃದ್ಧಿ ಕುಂಠಿತ

ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿವಿ ಅಶೋಕಪುರಂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ೨,೦೦೦ ಇದ್ದ…

3 hours ago