ಗುಂಡ್ಲುಪೇಟೆ: ಅರಣ್ಯ ಅಪರಾಧಗಳನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ವಿನೂತನ ಪ್ರಯತ್ನ ಮಾಡಿದೆ.
ರಾಷ್ಟ್ರೀಯ ಉದ್ಯಾನವನ ಬಂಡೀಪುರದಲ್ಲಿ ಪತ್ತೆದಾರಿ ಶ್ವಾನ ತರಬೇತಿ ಕೇಂದ್ರ ಆರಂಭ ಮಾಡಲಾಗಿದೆ.
ಈ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಶ್ವಾನ ತರಬೇತಿ ಕೇಂದ್ರವನ್ನು ಆರಂಭಮಾಡಿದ ಕೀರ್ತಿ ಬಂಡೀಪುರಕ್ಕೆ ಸಲ್ಲುತ್ತದೆ.
ಶ್ವಾನದಳ ತರಬೇತಿ ಕೇಂದ್ರವನ್ನು ಮೈಸೂರು ವೃತ್ತದ ಸಿಎಫ್ ಡಾ.ಮಾಲತಿ ಪ್ರಿಯಾ ಅವರು ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್ ಕುಮಾರ್, ಬಂಡೀಪುರದ ಸಿಎಫ್‌ಓ ಪ್ರಭಾಕರನ್, ಎಸಿಎಫ್ ನವೀನ್ ಕುಮಾರ್, ಆರ್‌ಎಫ್‌ಓ ಮಲ್ಲೇಶ್, ಶ್ವಾನದಳ ತರಬೇತಿದಾರ ಅಮೃತ್ ಶ್ರೀಧರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಬಂಡೀಪುರ ಅರಣ್ಯ ಇಲಾಖೆ ವತಿಯಿಂದ ಟ್ರ್ಯಾಕರ್ ಡಾಗ್ ಸ್ಕ್ವಾಡ್ ರಚಿಸಲಾಗಿದ್ದು, ಸುಮಾರು 20 ಮಂದಿ ಸಿಬ್ಬಂದಿಗಳನ್ನು ಒಳಗೊಂಡ 12 ಶ್ವಾನಗಳಿಗೆ ತರಬೇತಿ ನಡೆಸಲಾಗುತ್ತಿದೆ.
ಇಲ್ಲಿ ಬೆಲ್ಜಿಯಂ ಮೆಲಿನೋಯಿಸ್ ತಳಿಯ ಶ್ವಾನ ಮರಿಗಳಿಗೆ ಸುಮಾರು 10ತಿಂಗಳ ಕಾಲ ನುರಿತ ಸಿಬ್ಬಂದಿ ತರಬೇತಿ ನೀಡಲಿದ್ದಾರೆ. ಈ ಮೂಲಕ ಅಳಿವಿನಂಚಿಲ್ಲಿರುವ ಕಾಡು ಪ್ರಾಣಿಗಳ ರಕ್ಷಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ.
ಇನ್ನು ಮುಂದೆ ಕಳ್ಳಬೇಟೆಗಾರರು ಕಾಡು ಪ್ರವೇಶಿಸಲು ಹೆದರಬೇಕಾದ ಪರಿಸ್ಥಿತಿ ಎದುರಾಗಿದ್ದು, ಶ್ವಾನಗಳು ಎಲ್ಲಾ ಕಡೆ ಹದ್ದಿನ ಕಣ್ಣಿಡಲಿವೆ ಎನ್ನಲಾಗಿದೆ.
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…