ಚಾಮರಾಜನಗರ

ಚಾಮರಾಜನಗರ: ರಾಜ್ಯಕ್ಕೆ ನಂಬರ್ ಓನ್ ಸ್ಥಾನ ಪಡೆದ ಕುದೇರು ಪೊಲೀಸ್ ಠಾಣೆ!

ಚಾಮರಾಜನಗರ : ಕೇಂದ್ರ ಗೃಹ ಇಲಾಖೆ ನಡೆಸಿದ ಸರ್ವೆಯಲ್ಲಿ ಕುದೇರು ಪೊಲೀಸ್ ಠಾಣೆ ರಾಜ್ಯಕ್ಕೆ ನಂಬರ್ ಓನ್ ಹಾಗೂ ದೇಶದಲ್ಲೇ ಐದನೇ ಸ್ಥಾನ ಲಭಿಸಿದೆ. ಪೊಲೀಸ್ ಠಾಣೆ ನಿರ್ವಹಣೆ ಹಾಗೂ ಜನ ಸ್ನೇಹಿ ಪೊಲೀಸ್ ಠಾಣೆ ಎಂಬ ಹೆಗ್ಗಳಿಕೆಗೆ ಕುದೇರು ಪೊಲೀಸ್ ಠಾಣೆ ಪಾತ್ರವಾಗಿದೆ.

ಕೇಂದ್ರ ಗೃಹ ಇಲಾಖೆ ನಡೆಸಿದ ಸರ್ವೆಯಲ್ಲಿ ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಕುದೇರು ಪೊಲೀಸ್ ಠಾಣೆ ರಾಜ್ಯದಲ್ಲೇ ನಂಬರ್ ಓನ್ ಪೊಲೀಸ್ ಠಾಣೆ ಹಾಗೂ ದೇಶದಲ್ಲೇ ಐದನೇ ಸ್ಥಾನ ಎಂಬ ಪ್ರಶಂಸೆ ಪಡೆದಿದೆ.

ಇನ್ನು ಯಾವ ಆಯಾಮದಲ್ಲಿ ಈ ಕುದೇರು ಪೊಲೀಸ್ ಠಾಣೆಗೆ ನಂಬರ್ ಓನ್ ಸ್ಥಾನ ಸಿಕ್ಕಿದೆ ಎಂದು ನೋಡುವುದಾದರೆ. ಕ್ರೈಂ ಕಂಟ್ರೋಲ್, ಅಬಕಾರಿ ನೀತಿ, ಜನಸ್ನೇಹಿ, ಶುಚಿತ್ವ, ಕ್ರೈಂ ಪ್ರಿವೆನ್ಷನ್ ಸೇರಿದಂತೆ ಈ ಎಲ್ಲಾ ಆಯಾಮಗಳನ್ನ ಪರಿಶೀಲಿಸಿ ರಾಜ್ಯದ 2223 ಪೊಲೀಸ್ ಠಾಣೆಗಳ ಪೈಕಿ ಈಗ ಕುದೇರು ಪೊಲೀಸ್ ಠಾಣೆಗೆ ನಂಬರ್ ಓನ್ ಸ್ಥಾನ ಸಿಕ್ಕಿದ್ದು ಈಗ ಸಾಕಷ್ಟು ಜನ ಮನ್ನಣೆಗೆ ಪಾತ್ರವಾಗಿದೆ.

ಒಟ್ಟಾರೆ ಚಾಮರಾಜನಗರ ಜಿಲ್ಲೆಯ ಕುದೇರು ಪೊಲೀಸ್ ಠಾಣೆಗೆ ರಾಜ್ಯದಲ್ಲೇ ನಂಬರ್ ಓನ್ ಸ್ಥಾನ, ದೇಶದಲ್ಲೇ ಐದನೇ ಸ್ಥಾನ ಪಡೆದು ಜಿಲ್ಲೆಗೆ ಪ್ರಶಂಸೆ ತಂದಿದೆ.

andolanait

Recent Posts

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

3 hours ago

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…

3 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಪ್ರತಿ ಭಾರತೀಯರ ಎದೆ ಬಡಿತದ ಚೇತನ ಗಾಂಧೀಜಿ:  ಕೈಯಲ್ಲೊಂದು ಕೋಲು ಹಿಡಿದು, ದುಂಡು ಕನ್ನಡಕ ಧರಿಸಿ, ಸತ್ಯ, ಅಹಿಂಸೆಯ ಅಸದಿಂದ…

3 hours ago

ಸುಬ್ಬಮ್ಮ ಜೋಯಿಸ್ ಮೈಸೂರಿನಲ್ಲಿ ತ್ರಿವರ್ಣಧ್ವಜ ಹಾರಿಸಿದ್ದು

ಸೋನಿಯಾ ಎಮ್.ವಿ., ಉಪನ್ಯಾಸಕಿ, ಟೆರಿಷಿಯನ್ ಕಾಲೇಜ್ ಎಮ್. ಎನ್. ಜೋಯಿಸ್ ಮತ್ತು ಸುಬ್ಬಮ್ಮ ಜೋಯಿಸ್ ಮೈಸೂರಿನ ಸ್ವತಂತ್ರ ಹೋರಾಟಗಾರರಲ್ಲಿ ತಮ್ಮ…

3 hours ago

ಉರಿ ಉಂಡ ಕರ್ಪೂರ ಟಿ.ಎಸ್.ಸುಬ್ಬಣ್ಣ

ಪರಮಶಿವ ನಡುಬೆಟ್ಟ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ಧ್ವಜ ಸತ್ಯಾಗ್ರಹ ಕಾರ್ಯ ಕ್ರಮವನ್ನು ಹಮ್ಮಿ ಕೊಂಡಿದ್ದರು. ಈ ಧ್ವಜ ಸತ್ಯಾಗ್ರಹವನ್ನು…

3 hours ago

ಬ್ಯಾರಿಸ್ಟರ್ ಏನೋ ಆದೆ ಆದರೆ ಆಮೇಲೆ?

ಗಾಂಧಿ ಮಹಾತ್ಮನ ಆತ್ಮಕಥೆಗೆ ಶತಮಾನೋತ್ಸವದ ಸಂದರ್ಭದಲ್ಲಿ ‘ಆಂದೋಲನ’ ದಿನಪತ್ರಿಕೆಯ ಗಾಂಧಿ ಅಭಿಯಾನ ನಾನು ಇಂಗ್ಲೆಂಡಿಗೆ ಹೋದ ಉದ್ದೇಶವನ್ನು ಬ್ಯಾರಿಸ್ಟರ್ ಆಗುವುದನ್ನು, ಕುರಿತು ನಾನು…

3 hours ago