ಚಾಮರಾಜನಗರ

ಚಾ.ನಗರ | ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಚಾಮರಾಜನಗರ: ತಾಲೂಕಿನ ಸಂತೆಮರಹಳ್ಳಿ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ 8 ಅಂಗನವಾಡಿ ಕಾರ್ಯಕರ್ತೆ ಹಾಗೂ 19 ಸಹಾಯಕಿಯರ ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು  ಇಲಾಖಾ ವೆಬ್ ಸೈಟ್  https://karnemakaone.kar.nic.in/abcd/‌ ನಲ್ಲಿ ಫೆಬ್ರವರಿ 7 ರೊಳಗೆ ಸಲ್ಲಿಸಬೇಕು.  ಆನ್‌ಲೈನ್ ಮೂಲಕವೇ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ಇತರೇ ಯಾವುದೇ ಮೂಲದಿಂದ ಸಲ್ಲಿಸಲು ಅವಕಾಶವಿರುವುದಿಲ್ಲ.

ಒಬ್ಬರೇ ಅಭ್ಯರ್ಥಿ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಲ್ಲಿ, ಪ್ರತ್ಯೇಕವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಕನಿಷ್ಠ ಪಿ.ಯು.ಸಿ. ತೇರ್ಗಡೆ ಹೊಂದಿರಬೇಕು. ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು. ಅಂಗನವಾಡಿ ಸಹಾಯಕಿ ಹುದ್ದೆಗೆ ಕನಿಷ್ಠ  ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮಪಂಚಾಯಿತಿಯ ಕುಂಟಗುಡಿ ಅಂಗನವಾಡಿ ಕೇಂದ್ರ (ಪರಿಶಿಷ್ಟ ಪಂಗಡ), ದೇಮಹಳ್ಳಿ ಗ್ರಾಮಪಂಚಾಯಿತಿಯ ಹೆಬ್ಬಹಳ್ಳಿ ಅಂಗನವಾಡಿ ಕೇಂದ್ರ (ಇತರೆ), ನವಿಲೂರು ಗ್ರಾಮಪಂಚಾಯಿತಿಯ ಬಿ.ಎಂ.ಕೆ ಹುಂಡಿ ಅಂಗನವಾಡಿ ಕೇಂದ್ರ (ಇತರೆ), ಕೆಂಪನಪುರ ಗ್ರಾಮಪಂಚಾಯಿತಿಯ ಕೆಂಪನಪುರ ಕೇಂದ್ರ-೪ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಇರಸವಾಡಿ ಗ್ರಾಮಪಂಚಾಯಿತಿಯ ಕಳ್ಳಿಪುರ ಅಂಗನವಾಡಿ ಕೇಂದ್ರ (ಇತರೆ), ಭೋಗಾಪುರ ಗ್ರಾಮಪಂಚಾಯಿತಿಯ ಕಸ್ತೂರು ಅಂಗನವಾಡಿ ಕೇಂದ್ರ (ಇತರೆ), ಕಾಗಲವಾಡಿ ಗ್ರಾಮ ಪಂಚಾಯಿತಿಯ ಕಾಗಲವಾಡಿಮೋಳೆ-೧ನೇ ಅಂಗನವಾಡಿ ಕೇಂದ್ರ (ಇತರೆ), ಆಲೂರು ಗ್ರಾಮಪಂಚಾಯಿತಿಯ ಬಸಪನಪಾಳ್ಯ -೨ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಮಾದಪುರ ಗ್ರಾಮಪಂಚಾಯಿತಿಯ ಕಾಡಹಳ್ಳಿ-೨ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಇರಸವಾಡಿ ಗ್ರಾಮಪಂಚಾಯಿತಿಯ ಸುತ್ತೂರು ೩ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಗಂಗವಾಡಿ-೧ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಜ್ಯೋತಿಗೌಡನಪುರ ಗ್ರಾಮಪಂಚಾಯಿತಿಯ ನಲ್ಲೂರು ೧ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಕುರುಬರಹುಂಡಿ (ಇತರೆ), ದೇಮಳ್ಳಿ ಗ್ರಾಮಪಂಚಾಯಿತಿಯ ಮೂಡಲ ಅಗ್ರಹಾರ ೨ನೇ ಅಂಗನವಾಡಿ ಕೇಂದ್ರ (ಇತರೆ ೩ನೆ ಬಾರಿ), ಹೊಂಗನೂರು ಗ್ರಾಮಪಂಚಾಯಿತಿಯ ಹೊಂಗನೂರು ೭ನೇ ಅಂಗನವಾಡಿ ಕೇಂದ್ರ (ಇತರೆ), ಕೆಂಪನಪುರ ಗ್ರಾಮ ಪಂಚಾಯಿತಿಯ ಚುಂಗಡಿಪುರ ಅಂಗನವಾಡಿ ಕೇಂದ್ರ (ಇತರೆ), ಮಸಣಾಪುರ ಗ್ರಾಮಪಂಚಾಯಿತಿಯ ಚಾಟೀಪುರ ೩ನೇ ಅಂಗನವಾಡಿ ಕೇಂದ್ರ (ಇತರೆ), ನಾಗವಳ್ಳಿ ಗ್ರಾಮಪಂಚಾಯಿತಿಯ ಪುಟ್ಟನಪುರ ಅಂಗನವಾಡಿ ಕೇಂದ್ರ (ಇತರೆ), ನವಿಲೂರು ಗ್ರಾಮಪಂಚಾಯಿತಿಯ ಬಿಎಂಕೆ ಹುಂಡಿ ಅಂಗನವಾಡಿ ಕೇಂದ್ರ (ಇತರೆ), ಗಣಿಗನೂರು ೧ನೇ ಅಂಗನವಾಡಿ ಕೇಂದ್ರ (ಇತರೆ), ಬಾಗಳಿ ಗ್ರಾಮಪಂಚಾಯಿತಿಯ ಬಾಗಳಿ-೪ ಅಂಗನವಾಡಿ ಕೇಂದ್ರ (ಇತರೆ), ಬದನಗುಪ್ಪೆ ಗ್ರಾಮಪಂಚಾಯಿತಿಯ ಬದನಗುಪ್ಪೆ-೨ನೇ ಅಂಗನವಾಡಿ ಕೇಂದ್ರ (ಇತರೆ), ಮಂಗಲ ಗ್ರಾಮಪಂಚಾಯಿತಿಯ ಹುಲ್ಲೇಪುರ ಅಂಗನವಾಡಿ ಕೇಂದ್ರ (ಇತರೆ), ಹೆಗ್ಗೋಠಾರ ಗ್ರಾಮಪಂಚಾಯಿತಿಯ ಪಣ್ಯದಹುಂಡಿ ಅಂಗನವಾಡಿ ಕೇಂದ್ರ (ಇತರೆ), ನವಿಲೂರು ಗ್ರಾಮಪಂಚಾಯಿತಿಯ ಸೊತ್ತನಹುಂಡಿ ಅಂಗನವಾಡಿ ಕೇಂದ್ರ (ಇತರೆ), ಭೋಗಾಪುರ ಗ್ರಾಮಪಂಚಾಯಿತಿಯ ಕೆ.ಮೂಕಹಳ್ಳಿ ಅಂಗನವಾಡಿ ಕೇಂದ್ರ (ಇತರೆ), ಆಲೂರು ಗ್ರಾಮಪಂಚಾಯಿತಿಯ ಲಿಂಗರಾಜಪುರ ಅಂಗನವಾಡಿ ಕೇಂದ್ರ (ಇತರೆ) ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

೧೯ ರಿಂದ ೩೫ ವಯೋಮಿತಿಯೊಳಗಿನ ಮಹಿಳೆಯರು ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು.  ಆಯ್ಕೆ ಪ್ರಕ್ರಿಯೆಯಲ್ಲಿ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಸಂತೇಮರಹಳ್ಳಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಹೋಟೆಲ್,ರೆಸ್ಟೋರೆಂಟ್‌ಗಳ ಮೇಲೆ ಮುಂದುವರೆದ ದಾಳಿ

ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…

8 hours ago

ನಂ.ಗೂಡು | ಮತ್ತೆ ಕಳಚಿ ಬೀಳುತ್ತಿರುವ ಸೇತುವೆಯ ಸೀಲಿಂಗ್ ಕಾಂಕ್ರೀಟ್

ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…

11 hours ago

ರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ : ಯಶ್

ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…

11 hours ago

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ : ಸಿಎಜಿ ವರದಿ

ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…

12 hours ago

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

14 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

15 hours ago