ಚಾಮರಾಜನಗರ

ಚಾ.ನಗರ ದಸರಾ ಸಾಂಸ್ಕೃತಿಕ ಮಹೋತ್ಸವಕ್ಕೆ ಚಾಲನೆ ; ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ

ಚಾಮರಾಜನಗರ : ಜಿಲ್ಲಾ ಯುವ ಕಲಾವಿದರ ಬಳಗದ ವತಿಯಿಂದ ನಗರದಲ್ಲಿ 2 ದಿನಗಳ ಕಾಲ ಹಮ್ಮಿಕೊಂಡಿರುವ ಚಾಮರಾಜನಗರ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಜಾನಪದ ಕಲಾತಂಡಗಳ ಮೆರವಣಿಗೆಗೆ ಸೋಮವಾರ ಚಾಲನೆ ನೀಡಲಾಯಿತು.

ನಗರದಲ್ಲಿ ಪ್ರತಿ ವರ್ಷ ರಾಜ್ಯ ಸರ್ಕಾರ ನಡೆಸುತ್ತಿದ್ದ ಚಾಮರಾಜನಗರ ಸಾಂಸ್ಕೃತಿಕ ದಸರಾವನ್ನು ಈ ಬಾರಿ ವಿವಿಧ ಕಾರಣಗಳಿಂದ ರದ್ದುಗೊಂಡಿದೆ. ಈ ಹಿನ್ನೆಲೆಯಲ್ಲಿ ದಸರಾ ಪರಂಪರೆ ಇಲ್ಲಿಗೆ ನಿಲ್ಲಬಾರದು ಎಂಬ ದೃಷ್ಟಿಯಿಂದ ಬಳಗವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕಲಾತಂಡಗಳ ಮೆರವಣಿಗೆಗೆ ಹಸಿರು ನಿಶಾನೆ ತೋರಿದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಗರದಲ್ಲಿ ಈ ಬಾರಿ ರಾಜ್ಯ ಸರ್ಕಾರ ದಸರಾ ಹಮ್ಮಿಕೊಳ್ಳದೆ ಇರುವುದರಿಂದ ಕಲಾವಿದರೆ ಸ್ವಯಂಪ್ರೇರಿತರಾಗಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ ಎಂದರು.

ಮುಂದಿನ ವರ್ಷ ಜಿಲ್ಲೆಯಲ್ಲಿ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಲು ಸ್ಥಳೀಯ ಶಾಸಕರು, ಜಾನಪದ ಕಲಾವಿದರ ಜತೆ ಚರ್ಚಿಸಿ, ಅದ್ಧೂರಿ ಕಾರ್ಯಕ್ರಮ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ:-ಮಂಡ್ಯ | ಕೆರೆಗಳಿಗೆ ಒಳಹರಿವಿನ ತೊಂದರೆಯಿದ್ದಲ್ಲಿ ಪರಿಹರಿಸಿ : ಉಸ್ತುವಾರಿ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ

ಇದೇ ವೇಳೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರು ಮೆರವಣಿಗೆಗೆ ಚಾಲನೆ ನೀಡಿ, ಕಲಾವಿದರಿಗೆ ಶುಭ ಹಾರೈಸಿದರು.

ಮೆರವಣಿಗೆಯಲ್ಲಿ ಸತ್ತಿಗೆ ಸೂರಿಪಾಣಿ, ಡೊಳ್ಳು ಕುಣಿತ, ವೀರಗಾಸೆ, ನಾದಸ್ವರ, ಬೀಸು ಕಂಸಾಳೆ, ಸೋಬಾನೆ ಕಲಾವಿದರ ತಂಡಗಳು, ಮಂಟೇಸ್ವಾಮಿ ಕಂಡಾಯ, ನೀಲಗಾರ ಕಲಾವಿದರು ಭಾಗವಹಿಸಿದ್ದರು.

ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಹೊರಟ ಮೆರವಣಿಗೆ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮುಖಾಂತರ ಜಿಲ್ಲಾಡಳಿತ ಭವನವನ್ನು ತಲುಪಿ, ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಮಾವೇಶಗೊಂಡಿತು.

ಆಂದೋಲನ ಡೆಸ್ಕ್

Recent Posts

ರಾಜ್ಯದಲ್ಲಿ ಇಂದು ಕೂಡ ಅಬ್ಬರಿಸಲಿದ್ದಾನೆ ವರುಣ

ಬೆಂಗಳೂರು: ಕಳೆದ ಮೂರು ದಿನಗಳಿಂದ ಕರ್ನಾಟಕದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಇಂದು ಸಂಜೆಯ ವೇಳೆಗೆ ಕೆಲ ಜಿಲ್ಲೆಗಳಲ್ಲಿ ಭಾರೀ ಭಾರೀ…

7 mins ago

ದೇಶದೊಳಗಿನ ದೇಶದ್ರೋಹಿಗಳ ವಿರುದ್ಧ ಇರಾನ್‌ ಕಠಿಣ ಕ್ರಮ

ಟೆಹರಾನ್:‌ ಇರಾನ್‌ ಮೇಲೆ ಯುದ್ಧ ಆರಂಭವಾಗಿ ಸುಮಾರು 20 ದಿನಗಳು ಕಳೆಯುತ್ತಿರುವ ಬೆನ್ನಲ್ಲೇ ಪೊಲೀಸ್‌ ಅಧಿಕಾರಿಗಳ ಕೊಲೆ ಮತ್ತು ಅಮೇರಿಕಾ…

12 mins ago

ಅಯೋಧ್ಯೆ ರಾಮಮಂದಿರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಲಕ್ನೋ: ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲರಾದ…

11 hours ago

ಮುಕ್ತಾಯ ಹಂತಕ್ಕೆ ತಲುಪಿದ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ

ಬೆಂಗಳೂರು: ಉದ್ಯಮಿ ಸಿಜೆ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಮುಂದಿನ ವಾರದಲ್ಲಿ ತನಿಖಾ ತಂಡ…

11 hours ago

ರಾಮಚಂದ್ರರಾವ್‌ ರಾಸಲೀಲೆ ಪ್ರಕರಣ: ವಿಡಿಯೋ ಅಸಲಿ ಎಂದ ತನಿಖಾ ತಂಡ

ಬೆಂಗಳೂರು: ಕಚೇರಿಯಲ್ಲಿ ಮಹಿಳೆಯರೊಂದಿಗೆ ರಾಮಚಂದ್ರರಾವ್‌ ಅನುಚಿತ ವರ್ತನೆ ಕುರಿತ ವೈರಲ್‌ ವಿಡಿಯೋಗಳು ಅಸಲಿ ಎಂದು ತನಿಖಾ ತಂಡ ದೃಢಪಡಿಸಿದೆ. ಸಮವಸ್ತ್ರದಲ್ಲಿಯೇ…

11 hours ago

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಪರಿಹಾರಕ್ಕೆ ಯತ್ನ: ಮ್ಯಾಕ್ರನ್‌ ಜೊತೆ ಮೋದಿ ಮಾತುಕತೆ

ನವದೆಹಲಿ: ಮಧ್ಯ ಏಷ್ಯಾದಲ್ಲಿ ಬಿಕ್ಕಟ್ಟು ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಜೊತೆ…

12 hours ago