ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ಮಹಾಲಿಂಗನ ಕಟ್ಟೆ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಹಿಟಾಚಿ ವಾಹನಗಳಲ್ಲಿ ಬ್ಯಾಟರಿ, ಡೀಸೆಲ್ ಹಾಗೂ ಎಲ್‌ಇಡಿ ಬಲ್ಪ್‌ಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಮಾಲೀಕ ಅಂಬರೀಷ್ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹುಬ್ಬೆ ಹುಣಸೆ ಕೆರೆಯಲ್ಲಿ ಹೂಳು ತೆಗೆಯಲು ಬಳಸುತ್ತಿರುವ ಎರಡು ಹಿಟಾಚಿ ವಾಹನಗಳನ್ನು ಸಂಜೆ ವೇಳೆಗೆ ಮಹಾಲಿಂಗನ ಕಟ್ಟೆ ಬಸ್ ನಿಲ್ದಾಣದ ಬಳಿ ಪ್ರತಿದಿನ ನಿಲ್ಲಿಸಲಾಗುತ್ತಿತ್ತು. ಬೆಳಗ್ಗೆ ವಾಹನವನ್ನು ಹಿಟಾಚಿ ವಾಹನದ ಮಾಲೀಕರಾದ ಅಂಬರೀಶ್ ಹಾಗೂ ಅಪ್ಪ ದೊರೆ ಪರಿಶೀಲನೆ ನಡೆಸಿದಾಗ, ವಾಹನಗಳ ಬ್ಯಾಟರಿ, ಡೀಸೆಲ್ ಮತ್ತು ಬೆಲೆಬಾಳುವ ಎಲ್‌ಇಡಿ ಬಲ್ಪ್‌ಗಳನ್ನು ಕಳ್ಳರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ವಾಹನ ಮಾಲೀಕರು ತಕ್ಷಣ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಪರಾಧ ವಿಭಾಗದ ಸಬ್‌ಇನ್ಸ್ಪೆಕ್ಟರ್ ರವಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ಮಡಿಕೇರಿ : ಕೊಡಗು ಜಿಲ್ಲೆಯ ಅತ್ಯುನ್ನತ ಶಿಖರವಾದ ತಾಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ ಮಾಡಲು ಹೊರಟಿದ್ದ 36 ವರ್ಷದ ಮಹಿಳೆ ಶರಣ್ಯ…
ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರಿಗೆ ರಸ್ತೆ ಬದಿಯಲ್ಲಿಯೇ ಚಿರತೆ ಕಾಣಿಸಿಕೊಂಡಿದೆ. ವಾಹನ ಮುಂದೆ…
ಸಿದ್ದಾಪುರ : ಮಾಲ್ದಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲ್ದಾರೆ–ಗುಡ್ಲೂರು ರಸ್ತೆ ಹಾಗೂ ಮೈಲಾಪುರ–ಗುಡ್ಲೂರು ರಸ್ತೆ ಕಾಮಗಾರಿಗಳು ಪೂರ್ಣಗೊಂಡಿದ್ದರೂ, ಕಾಮಗಾರಿಯಲ್ಲಿ ಬಳಸಿದ…
ಬೆಂಗಳೂರು : ಪಶ್ಚಿಮ ಕೊಲ್ಲಿ ರಾಷ್ಟ್ರಗಳ ಯುದ್ಧದಿಂದಾಗಿ ಇದೀಗ ದೇಶದಲ್ಲಿ ಅನಿಲ ಬಿಕ್ಕಟ್ಟು ಎದುರಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರೆ…
24ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಬೇತ್ರಿ ಮುಕ್ಕಾಟೀರ ಕುಟುಂಬಸ್ಥರಿಂದ ಸಿದ್ದತೆ; 24 ದಿನಗಳ ಕಾಲ ಕ್ರಿಕೆಟ್ ಹಬ್ಬ ಪುನೀತ್ ಮಡಿಕೇರಿ…
ಮುರ್ಖರ ದಿನ ವಾದ ಏಪ್ರಿಲ್ ಒಂದರಂದು ( ಬುಧವಾರ), ಕೆಲವು ಜಾಲತಾಣಗಳಲ್ಲಿ ದೇಶದ ರಾಷ್ಟ್ರೀಯ ಲಾಂಛನದ ಅಡಿಯಲ್ಲಿ,(ಸಿಂಹ ಮತ್ತು ಅಶೋಕ…