ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರದ ಸಭಾಂಗಣದಲ್ಲಿ ೬೮ ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ನಡೆದ ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಹುಲಿ ಯೋಜನೆ ನಿರ್ದೇಶಕ ರಮೇಶ್‌ಕುಮಾರ್ ಮಾತನಾಡಿ ಕಳ್ಳಬೇಟೆ ತಡೆಯುವ ನಿಟ್ಟಿನಲ್ಲಿ ಗನ್ ಸೌಂಡ್ ಗ್ರಹಿಸಿ ಮಾಹಿತಿ ನೀಡುವ ತಂತ್ರಜ್ಞಾನ ಮತ್ತು ಡ್ರೋಣ್ ತಂತ್ರಜ್ಞಾನ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
೨೦೦೬ ರಿಂದ ನಾಲ್ಕು ವರ್ಷಕ್ಕೊಮ್ಮೆ ಹುಲಿ ಗಣತಿ ನಡೆಯುತಿದ್ದು, ೨೦೧೮ ರ ಗಣತಿ ಪ್ರಕಾರ ದೇಶದಲ್ಲಿ ೨೯೬೭ ಹುಲಿಗಳಿದ್ದು, ಬಂಡೀಪುರದ ೬೦೦ ಕಡೆ ಹುಲಿ ಪಟ್ಟೆ ಧೃಡಪಡಿಸಲು ಎರಡು ಬದಿಯಲ್ಲಿ ಕ್ಯಾಮರ ಇಟ್ಟು, ೨೦೨೨ ಮೇ ನಲ್ಲಿ ಸಂಗ್ರಹವಾದ ಡಾಟಾವನ್ನು ಎನ್‌ಟಿಸಿಎ ನೀಡಿದ್ದೇವೆ. ಮಾರ್ಚ್ ವೇಳೆಗೆ ಹುಲಿಗಳ ಸಂಖ್ಯೆ ತಿಳಿಯಲಿದೆ ಎಂದರು. ೧೯೭೩ ರಲ್ಲಿ ಬಂಡೀಪುರ ಹುಲಿ ಯೋಜನೆ ಪ್ರಾರಂಭವಾಗಿದೆ. ಕೋರ್ ಮತ್ತು ಬಫರ್ ಜೋನ್ ಒಳಗೊಂಡು ಉದ್ಯಾನ ೧೨೫೦ ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಅರಣ್ಯದ ಗುಣಮಟ್ಟ ಎಲ್ಲಾ ರೀತಿಯಲ್ಲೂ ಉತ್ತಮ ಆಗಿದೆ. ಇದಕ್ಕಾಗಿ ಉದ್ಯಾನಕ್ಕೆ ೯೭.೫ ಅಂಕ ಬಂದಿದ್ದು, ನಿರ್ವಹಣೆ ವಿಷಯದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಅಲ್ಲದೇ ಬಂಡೀಪುರ ವಲಯವನ್ನು ಲಂಟಾನ ಮುಕ್ತ ಮಾಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು. ಉದ್ಯಾನದಂಚಿನ ಕೃಷಿ ಭೂಮಿಗಳಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ನಿಗಾ ಇಡಲಾಗಿದ್ದು, ಪ್ರಾದೇಶಿಕ ನಿರ್ದೇಶಕರ ನೇತೃತ್ವದ ಸಭೆಯಲ್ಲಿ ಆದ ತೀರ್ಮಾನದಂತೆ ೧೫೦೦ ಕಡೆಗಳಲ್ಲಿ ಇದುವರೆಗೆ ಒತ್ತುವರಿ ತೆರವು ಮಾಡಿದ್ದೇವೆ ಎಂದು ತಿಳಿಸಿದರು. ಮಾನವ ಪ್ರಾಣಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸೋಲಾರ್ ವಿದ್ಯುತ್ ತಂತಿ ಬೇಲಿ, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಇತರೆ ಎಲ್ಲಾ ಕ್ರಮಗಳು ಆಗಿದೆ. ಜತೆಗೆ ಈ ಭಾರಿ ಬೆಳೆ ಹಾನಿ ಪರಿಹಾರ ನೀಡಿದ್ದೇವೆ. ಶೇ.೪೦ ನೌಕರರ ಕೊರತೆ ಇರುವುದು ಸಮಸ್ಯೆಯಾಗಿದೆ ಎಂದು ಮಾಹಿತಿ ನೀಡಿದರು. ೧೩ ಕ್ಕಿಂತ ಹೆಚ್ಚಿಗೆ ಆನೆಗಳು ಇರುವಂತಿಲ್ಲ ಎಂಬ ನಿಯಮದ ಹಿನ್ನೆಲೆಯಲ್ಲಿ ಬಂಡೀಪುರ ಕೇಂದ್ರ ಸ್ಥಾನದಲ್ಲಿ ಮತ್ತೊಂದು ಸಾಕಾನೆ ಆನೆ ಕ್ಯಾಂಪ್ ಆರಂಭಿಸುವ ಉದ್ದೇಶ ಇದೆ ಎಂದು ಮಾಹಿತಿ ನೀಡಿದರು.
ಪ್ರಕೃತಿ ಕರೆ ಇತರೆ ಕಾರಣಗಳಿಗೆ ಉದ್ಯಾನದ ನಡುವಿನ ರಾಷ್ಟಿçÃಯ ಹೆದ್ದಾರಿಯ ಅಲ್ಲಲ್ಲಿ ವಾಹನ ನಿಲುಗಡೆ ತಡೆಯಲು ಚೆಕ್‌ಪೋಸ್ಟ್ಗಳ ಬಳಿ ಶೌಚಾಲಯ ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ಅರಣ್ಯ ಮತ್ತು ವನ್ಯಜೀವಿ ದೇಶದ ಸಂಪತ್ತಾಗಿದ್ದು, ಇವುಗಳನ್ನು ರಕ್ಷಿಸಲು ಮಾಧ್ಯಮದವರು ಸಹಕಾರ ನೀಡಬೇಕು. ಉದ್ಯಾನದ ಬಗ್ಗೆ ಸಕಾರಾತ್ಮಕ ವರದಿಗಳನ್ನು ಪ್ರಕಟಿಸುವ ಮೂಲಕ ನೆರವಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ.ಪರಮೇಶ್, ನವೀನಕುಮಾರ್ ಹಾಜರಿದ್ದರು.
ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…
ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…
ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…
ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…
ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…
ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…