ಚಾಮರಾಜನಗರ

2 ದಿನಗಳಲ್ಲಿ 3 ಹುಲಿ ಮರಿಗಳು ಪತ್ತೆ, ರಕ್ಷಣೆ ; ತಾಯಿ ಹುಲಿ ಪತ್ತೆಗೆ ಮುಂದುವರಿದ ಕೂಂಬಿಂಗ್

ಚಾಮರಾಜನಗರ : ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರಿರುವ ಪುಣಜನೂರು ವನ್ಯಜೀವಿ ವಲಯದಲ್ಲಿ 2 ದಿನಗಳಲ್ಲಿ 3 ಹುಲಿ ಮರಿಗಳು ಪತ್ತೆಯಾಗಿದ್ದು ಅವುಗಳನ್ನು ರಕ್ಷಣೆ ಮಾಡಲಾಗಿದೆ. ಆದರೆ, ಇನ್ನೂ, ತಾಯಿ ಹುಲಿ ಕಾಣಿಸಿಕೊಂಡಿಲ್ಲ.

ಅರಣ್ಯ ಇಲಾಖೆ ಸಿಬ್ಬಂದಿ ಚಾಮರಾಜನಗರ ತಾಲ್ಲೂಕಿನ ಪುಣಜನೂರು-ಬೇಡಗುಳಿ ಸಂಪರ್ಕಿಸುವ ರಸ್ತೆಯಲ್ಲಿ ರಾತ್ರಿ ಗಸ್ತು ಮಾಡುವಾಗ ಬಜೇಬಾವಿ ಅರಣ್ಯ ಪ್ರದೇಶದಲ್ಲಿ 2 ಹುಲಿ ಮರಿಗಳು ಸೋಮವಾರ ಸಹಜವಾಗಿ ಕಾಣಿಸಿಕೊಂಡಿವೆ. ನಂತರ ಸಿಬ್ಬಂದಿ ಕಪ್ಪಿಣ ಕಣಿವೆ ಅರಣ್ಯ ಪ್ರದೇಶದವರೆಗೂ ಗಸ್ತು ಮಾಡಿಕೊಂಡು ಮರಳಿ ಪುಣಜನೂರು ಕಡೆಗೆ ವಾಪಸ್ಸು ಬರುವಾಗ ಅದೇ ಎರಡು ಹುಲಿ ಮರಿಗಳು ಅಲ್ಲೇ ಎದುರಾಗಿವೆ.

ಸಂಶಯ ಬಂದು ಸುತ್ತಲೂ ಪರಿಶೀಲಿಸಿ ನೋಡಿದಾಗ ತಾಯಿ ಹುಲಿ ಇರುವಿಕೆಯ ಬಗ್ಗೆ ಯಾವುದೇ ಸಂಕೇತ ಸಿಬ್ಬಂದಿಗೆ ಕಂಡು ಬರಲಿಲ್ಲ. ಹೀಗಾಗಿ, ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸುತ್ತಮುತ್ತಲಿನ ಸ್ಥಳಗಳಲ್ಲಿ ಕ್ಯಾಮೆರಾ ಟ್ರಾಪ್‌ಗಳನ್ನು ಅಳವಡಿಸಿ, ತಾಯಿ ಹುಲಿಯ ಚಲನವಲನಗಳ ಮೇಲೆ ನಿಗಾವಹಿಸಲು ರಾತ್ರಿ ಕಾವಲು ಸಿಬ್ಬಂದಿ ನಿಯೋಜಿಸಲಾಗಿದೆ. ಮಂಗಳವಾರ ಇಲಾಖಾ ಸಿಬ್ಬಂದಿ ತಾಯಿ ಹುಲಿಯನ್ನು ಪತ್ತೆ ಮಾಡಲು ಕೂಂಬಿಂಗ್ ಕಾರ್ಯಾಚರಣೆ ನಡೆಸಿದಾಗ ಮತ್ತೊಂದು ಹುಲಿ ಮರಿ ಪತ್ತೆಯಾಗಿದೆ.

ಇದನ್ನೂ ಓದಿ:-ಮೈಸೂರು | ಶ್ರೀಮಂತರ ಸೋಗಿನಲ್ಲಿ ಪೀಠೋಪಕರಣ ಖರೀದಿಗೆ ಬಂದ ಕುಟುಂಬ : ಮಳಿಗೆ ಮಾಲೀಕನಿಗೆ 99.65 ಲಕ್ಷ ರೂ. ವಂಚನೆ

ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ (ಬಿಆರ್ ಟಿ) ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರಾದ ಶ್ರೀಪತಿ ಅವರ ಮಾರ್ಗದರ್ಶನದಂತೆ ಮೂರು ಹುಲಿ ಮರಿಗಳನ್ನು ಇಲಾಖಾ ಪಶುವೈದ್ಯರ ಮೇಲುಸ್ತುವಾರಿಯಲ್ಲಿ, ಎನ್ ಟಿಸಿಎ ಮಾರ್ಗಸೂಚಿಯಂತೆ ರಕ್ಷಣೆ ನಿಗಾ ವಹಿಸಲಾಗಿದೆ ಎಂದು ಚಾಮರಾಜನಗರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಸಿಸಿ ಕ್ಯಾಮರಾ ಸುಳಿವು ಆಧರಿಸಿ ಇಬ್ಬರು ಜಾನುವಾರು ಕಳ್ಳರ ಬಂಧನ

ನಂಜನಗೂಡು: ಸಿಸಿ ಕ್ಯಾಮರಾ ಸುಳಿವು ಆಧರಿಸಿ ಇಬ್ಬರು ಜಾನುವಾರು ಕಳ್ಳರನ್ನು ಬಂಧಿಸುವಲ್ಲಿ ನಂಜನಗೂಡು ಟೌನ್‌ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಕೆಸರೆ…

10 mins ago

ಹನೂರು| ಲೊಕ್ಕನಹಳ್ಳಿ-ಒಡೆಯರಪಾಳ್ಯ ಮಾರ್ಗಮಧ್ಯೆ ಎರಡು ಚಿರತೆಗಳು ಪ್ರತ್ಯಕ್ಷ: ಆತಂಕದಲ್ಲಿ ವಾಹನ ಸವಾರರು

ಮಹಾದೇಶ್‌ ಎಂ ಗೌಡ  ಹನೂರು: ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಭಕ್ತನ ಮೇಲೆ ಚಿರತೆ…

44 mins ago

ಓದುಗರ ಪತ್ರ: ನಗರ ಸಾರಿಗೆ ಬಸ್‌ಗಳಿಂದ ಪರಿಸರ ಮಾಲಿನ್ಯ

ಮೈಸೂರಿನ ಕುವೆಂಪುನಗರ ಮಾರ್ಗದಲ್ಲಿ ಸಂಚರಿಸುವ ನಗರ ಸಾರಿಗೆಯ ಕೆಲವು ಬಸ್ಸುಗಳಿಂದ ವಿಪರೀತವಾಗಿ ಕಪ್ಪು ಹೊಗೆ ಬರುತ್ತಿದ್ದು, ಇದರಿಂದಾಗಿ ಸಾರ್ವಜನಿಕರ ಆರೋಗ್ಯದ…

4 hours ago

ಓದುಗರ ಪತ್ರ: ರಾಜ್ಯಕ್ಕೆ ಕೇಂದ್ರದ ಅನುದಾನ ಕಡಿತ: ಹೋರಾಟ ಅಗತ್ಯ

ಪ್ರತಿ ವರ್ಷ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಸುಮಾರು ಐದು ಲಕ್ಷ ಕೋಟಿ ರೂ.ಗಳ ತೆರಿಗೆ ಹೋಗುತ್ತಿದ್ದರೂ, ಕೇಂದ್ರ ಸರ್ಕಾರ ರಾಜ್ಯಕ್ಕೆ…

4 hours ago

ಓದುಗರ ಪತ್ರ: ಕುವೆಂಪುನಗರ ಸಾರ್ವಜನಿಕ ಗ್ರಂಥಾಲಯ ಅಭಿವೃದ್ಧಿಪಡಿಸಿ

ಮೈಸೂರಿನ ಕುವೆಂಪು ನಗರದಲ್ಲಿರುವ ಕೇಂದ್ರ ಗ್ರಂಥಾಲಯಕ್ಕೆ ಪ್ರತಿ ದಿನ ಹಿರಿಯ ನಾಗರಿಕರು ಬರುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಗಳಿಗೆ ಸಿದ್ಧತೆ…

4 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಕನ್ನಡ ಚಿತ್ರರಂಗವೂ ಅರಸು-ಸಿದ್ದರಾಮಯ್ಯ ಆಡಳಿತ ರಂಗವೂ

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ಅತಿ ಹೆಚ್ಚು ಕಾಲ ನಾಡಿನ ಆಡಳಿತ ಚುಕ್ಕಾಣಿ ಹಿಡಿದಿದ್ದವರು ದೇವರಾಜ ಅರಸು. ಆ ದಾಖಲೆಯನ್ನು ಮೊನ್ನೆ…

4 hours ago