ಚಂದಕವಾಡಿ ವ್ಯಾಪ್ತಿಯ ಗ್ರಾಮಗಳಲ್ಲಿ ಭೂಕಂಪನವಾಗಿಲ್ಲ
* ೩ ಗ್ರಾಮಗಳಲ್ಲಿ ಪರಿಶೀಲನೆ, ಮಾಹಿತಿ ಸಂಗ್ರಹ
* ಗಣಿ ಇಲಾಖೆ ಉಪ ನಿರ್ದೇಶಕರಿಂದ ಸ್ಪಷ್ಟನೆ
ಚಾಮರಾಜನಗರ: ತಾಲ್ಲೂಕಿನ ಚಂದಕವಾಡಿ ಹೋಬಳಿ ವ್ಯಾಪ್ತಿಯ 3 ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಭೂಮಿ ಕಂಪಿಸಿತ್ತು ಎಂಬ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು, ಭೂ ವಿಜ್ಞಾನಿಗಳು ಹಾಗೂ ಇಂಜಿನಿಯರ್‌ಗಳು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಾದ ಕೆ.ಎಂ. ನಂಜುಂಡಸ್ವಾಮಿ, ಭೂ ವಿಜ್ಞಾನಿಗಳಾದ ಅನುಷಾ, ಯಶಸ್ವಿನಿ, ಇಂಜಿನಿಯರ್‌ಗಳಾದ ಭವಾನಿ ಮತ್ತು ರೀಟಾ ಅವರು ಚಂದಕವಾಡಿ, ಬಸಪ್ಪನಪಾಳ್ಯ, ದಡದಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮಸ್ಥರನ್ನು ಶಬ್ದ ಕೇಳಿಬಂದ ಬಗ್ಗೆ ವಿಚಾರಿಸಿ ಮಾಹಿತಿ ಪಡೆದರು.
ಚಂದಕವಾಡಿ ಮತ್ತು ದಡದಹಳ್ಳಿಗಳಲ್ಲಿ ಹೆಚ್ಚಿನ ಶಬ್ದ ಕೇಳಿಬಂದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬಸಪ್ಪನಪಾಳ್ಯದಲ್ಲಿ ಭಾರಿ ಸದ್ದು ಕೇಳಿ ಪಾತ್ರೆಗಳು ಅಲುಗಾಡಿದೆ ಎಂದು ಸ್ಥಳೀಯರು ಹೇಳಿದ್ದಾಗಿ ಉಪ ನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ರಿಕ್ಟರ್ ಮಾಪಕ ಅಳವಡಿಲ್ಲ. ಕೆ.ಆರ್.ಎಸ್. ಜಲಾಶಯದ ಬಳಿ ಈ ಮಾಪಕವಿದೆ. ಅಲ್ಲಿನ ತಜ್ಞರಾದ ಅಭಿನಯ್ ಅವರನ್ನು ಈ ಬಗ್ಗೆ ವಿಚಾರಿಸಲಾಯಿತು. ಅಲ್ಲದೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರದ ತಜ್ಞರನ್ನು ವಿಚಾರಿಸಿದಾಗ ರಿಕ್ಟರ್ ಮಾಪನದಲ್ಲಿ ಭೂಕಂಪನ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ನಿರ್ದೇಶಕರು ಹೇಳಿದರು.
ಕಳೆದ 10-12 ವರ್ಷಗಳಿಂದ ಈ ಭಾಗದಲ್ಲಿ ಭಾರಿ ಮಳೆಯಾಗಿರಲಿಲ್ಲ. ಕಳೆದ 15 ದಿನಗಳ ಹಿಂದೆ ಧಾರಾಕಾರ ಮಳೆಯಾಗಿ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳು ಭರ್ತಿಯಾಗಿವೆ. ಭೂಮಿಯ ಶಿಲಾಪದರಗಳ ಕಂದಕಗಳಲ್ಲಿ ನೀರು ಚಲನೆಯಾಗಿ ಹೈಡ್ರಾಲಿಕ್ ಪ್ರೆಸರ್ ಅಥವಾ ಹೈಡ್ರೊ ಡೈನಾಮಿಕ್ ಪ್ರೆಸರ್ ಸೃಷ್ಟಿಯಾಗಿ ಭಾರಿ ಸದ್ದು ಕೇಳಿಬರುತ್ತದೆ. ಅಂತಹ ಶಬ್ದ ಇದಾಗಿರಬಹುದು ಎಂದು ಊಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಭಾಗವನ್ನು ದಕ್ಷಿಣ ಶಿಯರ್ ವಲಯ, ಬಿಆರ್‌ಟಿ ಮತ್ತು ಕೊಳ್ಳೇಗಾಲ ಭಾಗವನ್ನು ಪೂರ್ವ ಶಿಯರ್ ವಲಯವೆಂದು ಕರೆಯಲಾಗುವುದು. ಈ ಶಿಯರ್ ವಲಯಗಳಲ್ಲಿ ಭೂ ಖಂಡಗಳ ಚಲನೆ ಆಗುವಾಗ ಘರ್ಷಣೆಯಾಗಿ ಒತ್ತಡವು ಅಲೆ ರೂಪದಲ್ಲಿ ಭೂಮಿಯೊಳಗೆ ಸಾಗಿದರೆ ಭರ್ಜರಿ ಶಬ್ದ ಕೇಳಿಬರಲಿದೆ. ಅಲ್ಲದೆ ಸೂಪರ್ ಸಾನಿಕ್ ಮತ್ತು ಪೈಟರ್ ಜೆಟ್ ವಿಮಾನಗಳು ಸಂಚರಿಸಿದಾಗಲೂ ಇಂತಹ ಶಬ್ದ ಕೇಳಿಸುತ್ತದೆ. ಇದು ಸಹ ಆಗಿರಬಹುದೆಂಬ ಊಹಿಸಲಾಗಿದೆ. ಭೂಕಂಪನ ಆಗಿರುವ ಬಗ್ಗೆ ಅಧಿಕೃತತೆ ಇಲ್ಲ. ಆದ್ದರಿಂದ ಚಂದಕವಾಡಿ ವ್ಯಾಪ್ತಿಯ ಮತ್ತು ಜಿಲ್ಲೆಯ ಜನರು ಆತಂಕಪಡಬೇಕಾಗಿಲ್ಲ ಎಂದು ಉಪ ನಿರ್ದೇಶಕರು ತಿಳಿಸಿದ್ದಾರೆ.
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…
ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…