ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 15 ಗುರುವಾರ 2022

ಸರಳತೆಯ ಶ್ರೇಷ್ಠ ವ್ಯಕ್ತಿ
ಈ ಸಲದ ನಮ್ಮ ನಾಡ ಹಬ್ಬ ದಸರಾ ಉದ್ಘಾಟನೆಗೆ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಬರುತ್ತಿರುವುದು ತುಂಬಾ ಸಂತಸದ ಸಂಗತಿ. ನಮ್ಮ ರಾಷ್ಟ್ರಪತಿಯವರು ತುಂಬಾ ಸರಳ ಸಜ್ಜನಿಕೆಯ ವ್ಯಕ್ತಿ. ಸರಳತೆಯಲ್ಲಿ ಇರುವ ಶ್ರೇಷ್ಠತೆ ಆಡಂಬರದಲ್ಲಿ ಇಲ್ಲ ಎಂಬ ಮಾತಿಗೆ ಹೇಳಿ ಮಾಡಿಸಿದ ವ್ಯಕ್ತಿತ್ವ ನಮ್ಮ ರಾಷ್ಟ್ರಪತಿಯವರದು.  ಮುಂದಿನ ದಿನಗಳಲ್ಲೂ ವಿವಿಧ ತರಹದಲ್ಲಿ ಸಾಧನೆಗೈದ ಮಹನೀಯರನ್ನು ಗುರುತಿಸಿ ನಮ್ಮ ನಾಡ ಹಬ್ಬ ದಸರಾವನ್ನು ಉದ್ಘಾಟನೆ ಮಾಡಿಸುವ ಮೂಲಕ ನಮ್ಮ ಸರ್ಕಾರಗಳು ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳಬೇಕು.
 -ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.


ಅವೈಜ್ಞಾನಿಕ ಕಾಮಗಾರಿಯನ್ನು ನಿಲ್ಲಿಸಿ
ಮೈಸೂರಿನ ಜಯನಗರದ ಗ್ರಂಥಾಲಯ ಮತ್ತು ಸಾರ್ವಜನಿಕ ಆಸ್ಪತ್ರೆ ಬಳಿ ಮುಖ್ಯ ರಸ್ತೆಯ ಎತ್ತರದ ಸಮಕ್ಕೆ ಪೇವ್‌ಮೆಂಟ್ ಬ್ಲಾಕ್‌ಗಳನ್ನು ಅಳವಡಿಸಿ ಪಾದಚಾರಿ ಮಾರ್ಗ ನಿರ್ಮಾಣವಾಗುತ್ತಿದೆ. ಇದರಿಂದ ಪಾದಚಾರಿಗಳಿಗೆ ಯಾವುದೇ ಉಪಯೋಗವಾಗುವುದಿಲ್ಲ. ಕಾರಣ, ರಸ್ತೆಯ ವಾಹನಗಳು ಪಾದಚಾರಿ ಮಾರ್ಗದ ಮೇಲೆ ಯಾವುದೇ ತಡೆಯಿಲ್ಲದೆ ಸರಾಗವಾಗಿ ಚಲಿಸಬಹುದು. ಹಾಗೆಯೇ ಪಾದಚಾರಿಗಳಿಗೆಂದು ನಿರ್ಮಿಸಿರುವ ಪಥವನ್ನು ವಾಹನಗಳ ನಿಲ್ದಾಣವಾಗಿ ಬಳಸಿಕೊಳ್ಳುತ್ತಾರೆ. ರಸ್ತೆಯಿಂದ ಸ್ವಲ್ಪ ಎತ್ತರಕ್ಕೆ ಪಾದಚಾರಿ ಪಥವನ್ನು ನಿರ್ಮಾಣ ಮಾಡಬೇಕೆಂಬ ಕನಿಷ್ಠ ತಿಳಿವಳಿಕೆಯೂ ಇಲ್ಲದ ಅಧಿಕಾರಿಗಳು  ನಮ್ಮ ಪಾಲಿಕೆಯಲ್ಲಿ ಇದ್ದಾರೆಂಬುದು ನಮ್ಮ ದುರದೃಷ್ಠ. ಸಾಮಾನ್ಯರು ನೋಡಿದರೂ ಇದು ಅವೈಜ್ಞಾನಿಕ ಕಾಮಗಾರಿ ಎಂಬುದು ವೇದ್ಯವಾಗುತ್ತದೆ. ಆದ ಕಾರಣ ಮುಂದಿನ ಕಾಮಗಾರಿಗಳನ್ನು ಸರಿಯಾಗಿ ಮಾಡಿ. ಈಗಾಗಲೇ ಆಗಿರುವ ತಪ್ಪನ್ನು ಸರಿಪಡಿಸತಕ್ಕದ್ದು. ಇಲ್ಲವಾದಲ್ಲಿ ಪಾದಚಾರಿ ಮಾರ್ಗವೆಂದು ಪಾದಚಾರಿಗಳು ಚಲಿಸಿದರೆ ವಾಹನಗಳಿಂದ ಅಪಘಾತಕ್ಕೀಡಾಗುವುದು ಖಂಡಿತ.
-ಎಸ್.ರವಿ, ವಕೀಲ,ಮೈಸೂರು.

ನೇಮಕಾತಿ ಅನ್ಯಾಯ ಸರಿಪಡಿಸಿ
ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪ್ರಸ್ತುತ ನಡೆಯುತ್ತಿರುವ  ನೇಮಕಾತಿಯಲ್ಲಿ ಮೂಲ ರಾಜ್ಯಶಾಸ್ತ್ರ ವಿಷಯದ ಅಭ್ಯರ್ಥಿಗಳು ಹುದ್ದೆಯಿಂದ ವಂಚಿತರಾಗುವಂತಹ ಆತಂಕವಿದೆ. ಕೆಲವು ಅಭ್ಯರ್ಥಿಗಳು ಪದವಿಯ ಹಂತದಲ್ಲಿ ಬಿ.ಇ ಮತ್ತು ಬಿ.ಎಸ್ಸಿ    ವಿಷಯಗಳನ್ನು ಅಧ್ಯಯನ ಮಾಡಿ ನಂತರ ಸ್ನಾತಕೋತ್ತರ ಪದವಿಯನ್ನು ರಾಜ್ಯಶಾಸ್ತ ವಿಷಯದಲ್ಲಿ ಪಡೆದು ಬಳಿಕ ಕೆ.ಸೆಟ್ ಅಥವಾ ನೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯನ್ನು ಬರೆದು ಆಯ್ಕೆಯಾಗುತ್ತಿದ್ದಾರೆ. ಇದರಿಂದ ಮೂಲ ರಾಜ್ಯಶಾಸ್ತ್ರ ವಿಷಯದಲ್ಲಿ ಆಳವಾದ ಜ್ಞಾನ ಪಡೆದು ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯ ಹಂತದಲ್ಲಿ ರಾಜ್ಯಶಾಸ್ತ್ರ ವಿಷಯವನ್ನು ಅಧ್ಯಯನ ಮಾಡಿರುವವರಿಗೆ ಅನ್ಯಾಯವಾಗುತ್ತಿದೆ. ಇದೇ ರೀತಿ ಆದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಶಾಸ್ತ್ರ ಪದವಿ ಪಡೆದಿರುವ ಸಾವಿರಾರು ಆಕಾಂಕ್ಷಿಗಳಿಗೆ ಹುದ್ದೆಗಳು ಕೈ ತಪ್ಪುವ ಅಪಾಯವಿದೆ.
-ಹುದ್ದೆ ವಂಚಿತ ಅಭ್ಯರ್ಥಿಗಳು.

‘ಗ್ರಾಹಕರಿಗೆ ಹೊರೆಯಾಗದಂತೆ’ ಅಂದ್ರೆ?!
ಕೆಲ ದಿನಗಳ ಹಿಂದಷ್ಟೇ ಕಹಾಮ ಅಧೀನದ ಹಾಲು ಒಕ್ಕೂಟಗಳು ಹೈನೋತ್ಪನ್ನಗಳಾದ ಪೇಡಾ, ಮೈಸೂರು ಪಾಕ್, ತುಪ್ಪ ಮತ್ತಿತರವುಗಳ ದರವನ್ನು ತೀವ್ರವಾಗಿ ಏರಿಸಿವೆ. ಇದೀಗ ಮತ್ತೊಮ್ಮೆ ಕಹಾಮ ಹಾಲಿನ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಲು ನಿರ್ಧರಿಸಿದೆ.  ಹಾಲು ಉತ್ಪಾದಕರ ಹಿತವನ್ನೇ ಮುಂದಿಟ್ಟುಕೊಂಡು, ‘ಗ್ರಾಹಕರಿಗೆ ಹೊರೆಯಾಗದಂತೆ’ ಎಂದು ಹೇಳುವ ಕಹಾಮ ಮತ್ತು ಸರ್ಕಾರ ಬೆಲೆ ಏರಿಕೆಯಲ್ಲಿ ಯಾವುದೇ ವ್ಯತ್ಯಯವಾದರೂ ಅದರಿಂದ ಗ್ರಾಹಕನಿಗೆ ಹೊರೆ ಎಂಬುದನ್ನೇ ಮರೆತಿವೆ.  ಹಾಲಿನ ಬೆಲೆ ಲೀಟರಿಗೆ ನಾಲ್ಕೋ ಅಥವಾ ಮೂರೋ ರೂಪಾಯಿ ಜಾಸ್ತಿಯಾದರೂ, ಮತ್ತೊಮ್ಮೆ ಒಕ್ಕೂಟಗಳು ಉಪ ಉತ್ಪನ್ನಗಳ ಬೆಲೆ ಜಾಸ್ತಿಯಾಗುವುದಿಲ್ಲವೇ? ಈಗಾಗಲೇ
ಒಂದು ಕಪ್ ಕಾಫಿ, ಟೀಗೆ ಹದಿನೈದರಿಂದ ಇಪ್ಪತ್ತು ರೂ. ಇದೆ.  ಹಾಲನ್ನು ಆಧರಿಸಿ ಮಾಡುವ ಸಿಹಿ ಖಾದ್ಯಗಳು, ತಿಂಡಿಗಳ ಬೆಲೆಯನ್ನು ಖಾಸಗಿ ಹೋಟೆಲ್‌ನವರು ಮತ್ತೆ ಜಾಸ್ತಿ ಮಾಡುವುದಿಲ್ಲವೇ? ಹೀಗೆ ಒಂದರ ಹಿಂದೆ ಮಗದೊಂದು ಏರಿಕೆಯಾಗುತ್ತಿದ್ದರೆ, ಇದು ಗ್ರಾಹಕರಿಗೆ ಹೊರೆಯಾಗುವುದಿಲ್ಲವೇ?  ಕಹಾಮ ತನ್ನ ಅಧೀನ ಸಂಸ್ಥೆಗಳಿಗೆ ತಾನೇ ಸೂಚನೆ ಮತ್ತು ಠರಾವಿನ ಮಾದರಿ ಕಳುಹಿಸಿ, ನಂತರ ಹಾಲು ಉತ್ಪಾದಕರ ಒತ್ತಾಯ ಎಂದು ಹೇಳುತ್ತಾ, ಮತ್ತೊಂದೆಡೆ ‘ಗ್ರಾಹಕರಿಗೆ ಹೊರೆಯಾಗದಂತೆ’ ಎನ್ನುವುದು ಎಷ್ಟರ ಮಟ್ಟಿಗೆ ಸರಿ?
-ವಿಜಯ್ ಹೆಮ್ಮಿಗೆ, ಮೈಸೂರು
andolanait

Recent Posts

ಕೊಳ್ಳೇಗಾಲ| ಹಳೆ ವೈಷಮ್ಯ ಓರ್ವನ ಕೊಲೆ

ಕೊಳ್ಳೇಗಾಲ: ರಾತ್ರಿ ಕಂಠಪೂರ್ತಿ ಕುಡಿದ ಇಬ್ಬರ ನಡುವೆ ಹಳೇ ವೈಷಮ್ಯದಿಂದ ಕಲಹ ನಡೆದು ಓರ್ವನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ…

41 mins ago

ಮುಂದಿನ ಒಂದು ವಾರದವರೆಗೆ ರಾಜ್ಯದಲ್ಲಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಆರ್ಭಟ ಜೋರಾಗಿರುವ ಬೆನ್ನಲ್ಲೇ ಮುಂದಿನ ಒಂದು ವಾರದವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

2 hours ago

ಕರ್ನಾಟಕದಲ್ಲಿ ರಾತ್ರಿ ವೇಳೆಯೂ ಬೀಸಲಿದೆ ಉಷ್ಣ ಅಲೆ: ಜನತೆಗೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯಾದ್ಯಂತ ತಾಪಮಾನ ಹೆಚ್ಚಾಗಿದ್ದು, ಜನರು ಹೈರಾಣಾಗಿದ್ದಾರೆ. ಸುಡು ಬಿಸಿಲು ಹಾಗೂ ಸೆಖೆಯಿಂದಾಗಿ ಕರುನಾಡ ಜನರು…

2 hours ago

ಮುತ್ತತ್ತಿಯಲ್ಲಿ ನೀರಿಗಿಳಿದ ಯುವಕ ಸಾವು

ಮುತ್ತತ್ತಿಯಲ್ಲಿ ನೀರಿಗಿಳಿದ ಯುವಕ ಸಾವು ಹಲಗೂರು: ಇಲ್ಲಿಗೆ ಸಮೀಪದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ತೀವ್ರ ಸೆಳೆತಕ್ಕೆ…

3 hours ago

ಛತ್ತೀಸ್‌ಗಢದಲ್ಲಿ ಖಾಸಗಿ ವಿಮಾನ ಪತನ: ಪೈಲಟ್‌ ಹಾಗೂ ಕೋ ಪೈಲಟ್‌ ಸಾವು

ರಾಯ್ಪುರ: ಛತ್ತೀಸ್‌ಗಢದಲ್ಲಿ ಖಾಸಗಿ ವಿಮಾನವೊಂದು ಪತನವಾಗಿದ್ದು, ಪೈಲಟ್‌ ಹಾಗೂ ಸಹ ಪೈಲಟರ್‌ ಇಬ್ಬರೂ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಛತ್ತೀಸ್‌ಗಢದ…

4 hours ago

ಟ್ರಂಪ್‌ ಹೇಳಿದ್ದನ್ನು ಪಾಲಿಸಲು ಮೋದಿ ಇಸ್ರೇಲ್‌ಗೆ ಭೇಟಿ ನೀಡಿದ್ದರು: ರಾಹುಲ್‌ ಗಾಂಧಿ

ಚೆನ್ನೈ: ಇರಾನ್-ಇಸ್ರೇಲ್‌ ಯುದ್ಧ ಶುರುವಾಗುವ ಮೊದಲು ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದನ್ನು ಪಾಲಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ…

4 hours ago