ಜಿಲ್ಲೆಗಳು

ಕಂದೇಗಾಲದಲ್ಲಿ ಸಿದ್ದಪ್ಪಾಜಿ ಕಂಡಾಯೋತ್ಸವ

ಗುಂಡ್ಲುಪೇಟೆ: ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಸಿದ್ದಪ್ಪಾಜಿ ಕಂಡಾಯೋತ್ಸವ ನಡೆಯಿತು.

ಸುಮಾರು ಹತ್ತಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಈ ಒಂದು ಉತ್ಸವದಲ್ಲಿ ಸುತ್ತಲಿನ ಕೊಡಹಳ್ಳಿ, ಶಿವಪುರ, ಕೆಬ್ಬೇಪುರ, ಅಂಕಹಳ್ಳಿ, ಬಾಚಹಳ್ಳಿ, ಯಲಚಟ್ಟಿ ಗ್ರಾಮಗಳಿಂದ ನೂರಾರು ಜನರು ಆಗಮಿಸಿ ಸಿದ್ದಪ್ಪಾಜಿಗೆ ಪೂಜೆ, ಪುನಸ್ಕಾರ ಸಲ್ಲಿಸಿ ಭಕ್ತಿ ಭಾವ ಮೆರೆದರು‌.
ವಿವಿಧ ಹೂವು, ಹೊಂಬಾಳೆಯೊಂದಿನ ಅಲಂಕೃತಗೊಂಡಿದ್ದ ಕಂಡಾಯ, ಸತ್ತಿಗೆ ಸೂರಿಪಾನಿಯನ್ನು ತಮಟೆ ಸದ್ದಿನೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಂಡಾಯೋತ್ಸವ ಸಾಗುತ್ತಿದ್ದ ವೇಳೆ ಮಹಿಳೆಯರು ಕಜ್ಜಾಯದ ಪೂಜೆಯನ್ನು ಸಲ್ಲಿಸಿ ಭಕ್ತಿಭಾವ ಮೆರೆದರು.
ಉತ್ಸವದ ಹಿನ್ನೆಯಲ್ಲಿ ಬೀದಿಗಳನ್ನು ಸ್ವಚ್ಛಗೊಳಿಸಿ, ಮನೆಗಳ ಮುಂದೆ ಬಿಡಿಸಿದ ರಂಗೋಲಿ, ಪುನೀತ್ ಚಿತ್ರಗಳು ಗಮನಸೆಳೆದವು. ಕುಂದಕೆರೆ, ಮಲ್ಲಮನಹುಂಡಿ, ಬರಟಹಳ್ಳಿ ಗ್ರಾಮಗಳಿಂದ ಕರೆತಂದಿದ್ದ ಕಂಡಾಯಗಳನ್ನು ಸಿದ್ದಪ್ಪಾಜಿ ಗುಂಡಂದಿರು, ದಾಸರ ಒಕ್ಕಲಿಗರು ಹೊತ್ತು ಸಾಗಿದರು. ಈ ವೇಳೆ ಹರಗ ಕುಣಿತ, ಮಹಿಳಾ ಸಂಘದವರ ಜಾನಪದ ಗೀತೆಗಳನ್ನು ಹಾಡಿದರು.
ಯಜಮಾನರಾದ ರಾಚಯ್ಯ,
ಚಿಕ್ಕಬಸವಯ್ಯ, ಚಿಕ್ಕಂಡಯ್ಯ, ದಾಸಯ್ಯ, ಬಸವಯ್ಯ, ಕೊಂತಯ್ಯ ಸಿದ್ದಯ್ಯ, ಪುಟ್ಟರಾಚಯ್ಯ, ಮೊತ್ತಗಯ್ಯ ಸಿದ್ದಯ್ಯ, ಕಣ್ಣಯ್ಯ, ಬಸವಯ್ಯ, ಪುಟ್ಟನಿಂಗಯ್ಯ, ಕುಳ್ಳಪತ್ತಯ್ಯ ಸಿದ್ದಯ್ಯ, ಚಿಕ್ಕರಾಚಯ್ಯ, ಸಿದ್ದಣ್ಣ ಬಸವಯ್ಯ, ಸಿದ್ದರಾಜು, ಕೆ.ಬಿ.ಶಿವರಾಜು, ದೊರೆಸ್ವಾಮಿ, ಕೃಷ್ಣ, ಪಾಪಣ್ಣ, ರಾಜು, ವೆಂಕಟೇಶ್, ಮಹೇಶ್, ಅಪ್ಪು ಅಭಿಮಾನಿ ಬಳಗದ ಯುವಕರು, ಮುಖಂಡರು ಹಾಜರಿದ್ದರು..

andolanait

Recent Posts

ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆ ಮೀರಿ ಜನಬೆಂಬಲ: ಸಿಎಂ ಸಿದ್ದರಾಮಯ್ಯ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯುತ್ತಿದ್ದು, ಅಭಿವೃದ್ಧಿ ಮಾಡದ ಬಿಜೆಪಿಯ ಸತ್ಯವನ್ನು ಜನರು ಅರಿತಿದ್ದಾರೆ…

48 mins ago

ಎಲ್ಲಾ ರಾಜ್ಯದಲ್ಲೂ ದ್ವಿಭಾಷಾ ಶಿಕ್ಷಣದ ವ್ಯವಸ್ಥೆ ಜಾರಿಯಲ್ಲಿದೆ: ಸಚಿವ ಮಧುಬಂಗಾರಪ್ಪ

ಬೆಂಗಳೂರು: ಎಲ್ಲಾ ರಾಜ್ಯದಲ್ಲೂ ದ್ವಿಭಾಷಾ ಶಿಕ್ಷಣದ ವ್ಯವಸ್ಥೆ ಜಾರಿಯಲ್ಲಿದೆ ಎಂದು ಶಾಲಾ ಶಿಕ್ಷಣ ಸಾಕ್ಷರತಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು,…

51 mins ago

ಬೇಸಿಗೆಯ ಉಷ್ಣತೆ ಹೆಚ್ಚಾದಂತೆ ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ

ಬೆಂಗಳೂರು: ಬೇಸಿಗೆಯ ಉಷ್ಣತೆ ಹೆಚ್ಚಾದಂತೆ ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ರಾಜ್ಯ ಮಟ್ಟದ ಹವಾಮಾನ ವೀಕ್ಷಣಾ…

58 mins ago

ಹನೂರು: ಪಾಲಾರ್ ಚೆಕ್‌ಪೋಸ್ಟ್‌ನಲ್ಲಿ ಒಂಟಿಸಲಗ ದಾಂಧಲೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಅಂತರರಾಜ್ಯ ಪಾಲಾರ್ ಚೆಕ್‌ಪೋಸ್ಟ್‌ನಲ್ಲಿ ಒಂಟಿ ಸಲಗದ ದಾಂಧಲೆಗೆ ಅರಣ್ಯ…

2 hours ago

ಕಾನೂನು ಸುವ್ಯವಸ್ಥೆಗೂ ಜಿಡಿಪಿಗೂ ನೇರ ಸಂಬಂಧವಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸೈಬರ್ ಅಪರಾಧಗಳು ಸೇರಿದಂತೆ ನಾನಾ ಅಪರಾಧಗಳಲ್ಲಿ ನಮ್ಮ ರಾಜ್ಯ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದ್ದು ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಿ ಎಂದು…

3 hours ago

ಹಾಸನ: ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ನುಗ್ಗಿದ ಕಾರು

ಹಾಸನ: ಕಾರೊಂದು ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ನುಗ್ಗಿ ಪಲ್ಟಿಯಾದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆ…

3 hours ago