ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯ
ಮೈಸೂರು: ಕ್ಯಾಮರಾ / ಕುವೆಂಪು ಪುಸ್ತಕದಲ್ಲಿ ಕೃಪಾಕರ ಮತ್ತು ಸೇನಾನಿಯವರು ಚಿತ್ರಗಳಿಗೆ ಉತ್ತಮ ಶೀರ್ಷಿಕೆಯನ್ನು ನೀಡಿದ್ದು, ಕಲಾವಿದ ಮತ್ತು ಕವಿ ಎಂಬ ಇಬ್ಬರು ಭಾವ ಜೀವಿಗಳು ಒಂದೇ ಎನಿಸುತ್ತದೆ. ಅಷ್ಟರ ಮಟ್ಟಿಗೆ ಚಿತ್ರಗಳ ಜೊತೆ ಮಾತನಾಡಿರುವುದು ಈ ಪುಸ್ತಕದ ವಿಶೇಷವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ವಿಶ್ಲೇಷಿಸಿದರು.
ಮೈಸೂರು ವಿವಿ ಮಾನಸಗಂಗೋತ್ರಿ ಆವರಣದಲ್ಲಿರುವ ಬಿ.ಎಂ.ಶ್ರೀ. ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಕ್ಯಾಮರಾ / ಕುವೆಂಪು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕ್ಯಾಮರಾ / ಕುವೆಂಪು ಪುಸ್ತಕದ ಮೊದಲ ಪುಟ ನೋಡಿದರೆ ಪುಸ್ತಕದ ಮಹತ್ವ ತಿಳಿದು ಬಿಡುತ್ತದೆ. ಅಲ್ಲಿ ಕುವೆಂಪು ಅವರು ಸಿಕ್ಕುಕಟ್ಟಿದ ಕೈ ಅಲ್ಲಿನ ಶೀರ್ಷಿಕೆಗಳು ಅದ್ಬುತವಾಗಿವೆ. ಬಹುಶಃ ನಾನು ಒಂದೇ ಸುತ್ತಿನಲ್ಲಿ ಓದಿದ ಪುಸ್ತಕವೆಂದರೆ ಈ ಪುಸ್ತಕ ಮಾತ್ರ ಎಂದರು.
ಕುವೆಂಪುರವರ ಕೆಲವೊಂದು ಸಂದರ್ಭಗಳನ್ನು ಸುಂದರವಾಗಿ ಈ ಪುಸ್ತಕದಲ್ಲಿ ಚಿತ್ರಿಸಲಾಗಿದೆ. ಕುವೆಂಪು ಅವರು ಮುಖ್ಯವಾಗಿ ಶಿಸ್ತು ಹಾಗೂ ಸಮಯ ಪಾಲನೆಗೆ ಮಹತ್ವ ನೀಡಿದವರು. ಬರೆದ ಹಾಗೆಯೇ ಬದುಕಿದವರು ಎಂದು ಖಚಿತವಾಗಿ ಹೇಳಬಹುದಾಗಿದೆ. ಅಂತಹ ದಾರ್ಶನಿಕ ಕವಿಯ ಭಾವನೆ ಮತ್ತು ಸಂವೇದನೆಗಳು ಚಿತ್ರದಲ್ಲಿವೆ. ಇಂತಹ ಒಂದು ವಿಶಿಷ್ಟವಾದ ಪುಸ್ತಕ ಬಹುಶಃ ಕನ್ನಡ ಮತ್ತು ಕುವೆಂಪುರವರಿಗೆ ಸಲ್ಲಿಬಹುದಾದ ಉತ್ತಮ ಕಾಣಿಕೆಯಾಗಿದೆ ಎಂದು ಬಣ್ಣಿಸಿದರು.
ನಟ ಪ್ರಕಾಶ್ ರಾಜ್ ಮಾತನಾಡಿ, ಕ್ಯಾಮರಾ / ಕುವೆಂಪು ಎಂಬುವುದರೊಂದಿಗೆ ಓದುಗ / ಕೃಪಾಕರ ಸೇನಾನಿ ಎಂಬಂತೆಯೂ ಮೂಡಿಬಂದಿದೆ. ಕಾವ್ಯ, ಸಾಹಿತ್ಯ, ಕಾದಂಬರಿ, ಕಥೆಯನ್ನು ಎಲ್ಲ ಪ್ರಕಾರಗಳೊಂದಿಗೆ ಈ ಪುಸ್ತಕ ವಿಭಿನ್ನವೆನಿಸಿತ್ತು. ಇವರು ನೋಡಿದ ಕಣ್ಣುಗಳು ನನಗೆ ಬಹಳ ಆಸಕ್ತಿ ಎನಿಸಿತ್ತು. ಪ್ರಸ್ತುತ ಒಂದು ವಿಷಯವನ್ನು ಗ್ರಹಿಸುವ, ಜೀರ್ಣಿಸಿ ಕೊಳ್ಳುವ, ಅರ್ಥೈಸಿಕೊಳ್ಳುವ, ನೋಡುವ ದೃಷ್ಟಿ ಕಡಿಮೆಯಾಗಿದೆ. ಆದರೆ, ಈ ಪುಸ್ತಕದಲ್ಲಿ ಅವರ ನೋಟ ಆಳವಾಗಿದೆ. ನೋಡುವ ದೃಷ್ಟಿಯನ್ನು ಕಲಿಸಿದೆ ಎಂದು ತಿಳಿಸಿದರು.
ಬಳಿಕ ಪುಸ್ತಕ ಪ್ರಕಾಶನದ ಬಿ.ಎನ್.ಶ್ರೀರಾಮ್ ಮಾತನಾಡಿ, ಸಾಮಾನ್ಯ ಒಬ್ಬ ವ್ಯಕ್ತಿಯ ವ್ಯಕ್ತಿಚಿತ್ರ ಹಿಡಿದಿಡುವುದು ಕಷ್ಟದ ಕೆಲಸ. ಆದರೆ ಇಲ್ಲಿ ಕೃಪಾಕರ ಮತ್ತು ಸೇನಾನಿರವರು ಮಹಾನ್ ಕವಿ ಕುವೆಂಪುರವರ ವ್ಯಕ್ತಿಚಿತ್ರವನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಅಲ್ಲಿ ಕುವೆಂಪುರವರ ವ್ಯಕ್ತಿತ್ವವನ್ನು ಬಹಳ ಅರ್ಥಪೂರ್ಣವಾಗಿ ಹಿಡಿದಿಟ್ಟಿದ್ದು, ಪುಸ್ತಕ ಸಂಚಲನ ಮೂಡಿಸಿದೆ ಎಂದರು.
ಕಾರ್ಯಕ್ರಮದಲ್ಲಿ ‘ಆಂದೋಲನ’ ದಿನಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ, ಡಾ.ಸುಮನ, ಡಾ.ಸಂತೃಪ್ತ, ಗೋವಿಂದರಾಜು, ಪ್ರಸನ್ನ, ದೇವನೂರು ಶಿವಮಲ್ಲು, ನಾಗೇಶ್, ಸ್ನೇಹ, ಬೇಸಗರಹಳ್ಳಿ ರವಿಪ್ರಸಾದ್ ಮತ್ತಿತರರು ಹಾಜರಿದ್ದರು.
ನಾನು ಸಾಕಷ್ಟು ಪುಸ್ತಕಗಳನ್ನು ಓದಿದ್ದೇನೆ. ಅದರಲ್ಲಿ ಇದು ನನಗೆ ಬಹಳ ವಿಶಿಷ್ಟವೆನಿಸಿದೆ. ಇಲ್ಲಿ ಮೂಡಿರುವ ಚಿತ್ರಗಳು, ಸನ್ನಿವೇಶಗಳು, ಕುವೆಂಪು ಎಂದರೆ ನೆರೆಹೊರೆಯವರ ಸಂಭ್ರಮ ಹಕ್ಕಿಗಳ ಬಗ್ಗೆ ಸಾಕಷ್ಟು ಸುಂದರ ಸನ್ನಿವೇಶಗಳು ಅಲ್ಲಿವೆ. ಈ ಪುಸ್ತಕವನ್ನು ಓದಿದ ಬಳಿಕ ನನಗೆ ಪುಸ್ತಕ ಮೌನವನ್ನು ಕಲಿಸಿತು.
-ಮೂಡ್ನಾಕೂಡು ಚಿನ್ನಸ್ವಾಮಿ, ಸಾಹಿತಿ.
ಯಾವುದೇ ಕ್ಷೇತ್ರದಲ್ಲಿ ಸಾಕಷ್ಟು ಸಮಯ ಕಳೆದ ನಂತರ ಅದು ಮುಗಿದ ಬಳಿಕ ನಿಮ್ಮ ಅಭಿಪ್ರಾಯಗಳನ್ನು ಬೇರೆಯವರಿಗೆ ಹೇಳಬೇಕೆನಿಸುತ್ತದೆ. ಆ ಜರ್ನಿಯಲ್ಲಿ ನಾವು ಕಂಡ ಖುಷಿ ಎನ್ನುವುದು ಇದ್ದೇ ಇರುತ್ತದೆ. ಅಂತಹದ್ದೇ ಒಂದು ಪ್ರಯತ್ನವಿದು.
-ಕೃಪಾಕರ, ವನ್ಯಜೀವಿ ತಜ್ಞ.
ಕುವೆಂಪು ಅವರನ್ನು ವ್ಯಕ್ತಿ ಚಿತ್ರದಲ್ಲಿ ಹಿಡಿದಿಡಲು ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುಬೇಕು. ಕಳೆದು ೩೦ ವರ್ಷಗಳಿಂದ ಪ್ರಯತ್ನ ಮಾಡಿ ಕೈಬಿಟ್ಟಿದ್ದೇ. ಕಳೆದ ೬ ತಿಂಗಳಿನಿಂದ ಮನಸ್ಸಿನಲ್ಲಿ ಈ ಆಲೋಚನೆ ಓಡಲು ಆರಂಭಿಸಿ ಈಗ ಈ ರೂಪದೊಂದಿಗೆ ಹೊರಬಂದಿದೆ. ಈಗ ಪುಸ್ತಕದ ಬಗ್ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ.
-ಸೇನಾನಿ, ವನ್ಯಜೀವಿ ತಜ್ಞ.
ಬೆಂಗಳೂರು: ನಟ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಅವರಿಂದು ಇತ್ತೀಚೆಗೆ ನಿಧನರಾಗಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ…
ಮುಂಬೈ: ಬಾಲಿವುಡ್ನ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರಿಂದು ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ತಿಂಗಳುಗಳಿಂದ…
ಜೈಪುರ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದ…
ಮೈಸೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಈ…
ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಜಾಮೀನು ಮಂಜೂರು ಮಾಡಿ…
ಬೆಂಗಳೂರು: 9823 ರೂ ಕೋಟಿ ಮೌಲ್ಯದ 9 ಕೈಗಾರಿಕಾ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸರಿ…