ಜಿಲ್ಲೆಗಳು

ಉತ್ತಮ ಆಡಳಿತಕ್ಕಾಗಿ ಕರೆ ನೀಡಿದ ಮೌನ ಸತ್ಯಾಗ್ರಹ ಯಶಸ್ವಿ

ನಗರದ ವಿವಿಧೆಡೆ ‘ಮೈಸೂರು ಗ್ರಾಹಕರ ಪರಿಷತ್’ ಬೆಂಬಲಿತರ ಮೌನ ಪ್ರತಿಭಟನೆ


ಮೈಸೂರು: ಉತ್ತಮ ಆಡಳಿತಕ್ಕಾಗಿ ಸಾರ್ವಜನಿಕರನ್ನು ‘ಯಜಮಾನರು’ ಎಂದು ಪರಿಗಣಿಸಬೇಕು ಎಂಬುದೂ ಸೇರಿದಂತೆ ನಗರದ ನಾಗರಿಕ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನ ಸೆಳೆಯಲು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ‘ಮೈಸೂರು ಗ್ರಾಹಕರ ಪರಿಷತ್’ ವತಿಯಿಂದ ಉತ್ತಮ ಆಡಳಿತಕ್ಕಾಗಿ ಕರೆ ನೀಡಿದ ಸತ್ಯಾಗ್ರಹ ಯಶಸ್ವಿಯಾಗಿ ನಡೆಯಿತು.
ಭಾನುವಾರ ನಗರದ ಚೆಲುವಾಂಬ ಪಾರ್ಕ್‌ನಲ್ಲಿ ಹೋರಾಟಗಾರ ಭಾಮಿನಿ ವಿ.ಶೆಣೈ ನೇತೃತ್ವದಲ್ಲಿ ಸತ್ಯಾಗ್ರಹ ನಡೆಯಿತು. ಜತೆಗೆ ವಿವಿಧ ಬಡಾವಣೆಗಳಾದ ಯಾದವಗಿರಿ, ಒಂಟಿಕೊಪ್ಪಲು, ಜಯಲಕ್ಷ್ಮೀಪುರಂ, ವಿಜಯನಗರ 4ನೇ ಬ್ಲಾಕ್ ಪಾರ್ಕ್‌ನಲ್ಲಿ, ವಿಜಯನಗರ 3ನೇ ಹಂತದ ಪಾರ್ಕ್, ಮಧುವನ ಪಾರ್ಕ್, ಜಯನಗರ ಪಾರ್ಕ್, ಎನ್.ಆರ್ ಮೊಹಲ್ಲಾದ ಶಿವಾಜಿ ಪಾರ್ಕ್‌ನಲ್ಲಿ, ಸಾತಗಳ್ಳಿಯ ಲರ್ನರ್ ಪಿಯು ಕಾಲೇಜು, ನ್ಯಾಯಾಲಯದ ಮುಂಭಾಗ ಸೇರಿದಂತೆ 9ಕಡೆಗಳಲ್ಲಿ ತಮ್ಮ ಹೊಣೆಗಾರಿಕೆಯನ್ನು ಅರಿತು ನಾಗರಿಕರು ಸತ್ಯಾಗ್ರಹ ನಡೆಸಿದರು.

ಹೋಟೆಲ್ ಮತ್ತು ಮಾಲ್‌ಗಳಿಗೆ ತೆರಳದೆ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೂ ವ್ಯಾಪಾರವನ್ನು ಮಾಡುವುದನ್ನು ನಿಲ್ಲಿಸಿದ್ದ ಸತ್ಯಾಗ್ರಹಿಗಳು. ಬೆಳಿಗ್ಗೆ 9ರಿಂದ ಎರಡು ಗಂಟೆಗಳ ಕಾಲ ಪಾರ್ಕ್‌ಗಳಲ್ಲಿ ಮೌನವಾಗಿ ಕುಳಿತು ನಗರದ ಪಾರ್ಕ್‌ಗಳ ಒತ್ತುವರಿಯನ್ನು ತೆರವುಗೊಳಿಸುವುದು, ಪಾರ್ಕ್‌ಗಳಲ್ಲಿ ಯಾವುದೇ ಕಟ್ಟಡ ಸೇರಿದಂತೆ ಕಾಮಗಾರಿಗಳನ್ನು ನಡೆಸದಂತೆ ಕಟ್ಟುನಿಟ್ಟು ನಿುಂಮ ವಿಧಿಸುವುದು, ಚಾಮುಂಡಿಬೆಟ್ಟದ ಪ್ರಸಾದ ಯೋಜನೆಯಡಿ ಹಮ್ಮಿಕೊಳ್ಳುವ ಕಾಮಗಾರಿಯನ್ನು ಕೈಬಿಟ್ಟು ಇಲ್ಲಿ ಅಭಿವೃದ್ಧಿ ವಿಷಯಗಳಿಗೆ ಸಂಬಂಧಪಟ್ಟಂತೆ ಜನಾಭಿಪ್ರಾಯ ಪಡೆಯುವುದು, ಉತ್ತಮ ಕುಡಿಯುವ ನೀರು ಸರಬರಾಜು ನಿರ್ವಹಣೆ ಮಾಡುವುದು, ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು, ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ರಸ್ತೆ ಅಪಘಾತಗಳನ್ನು ತಡೆಯಲು ಕ್ರಮ ಕೈಗೊಳ್ಳುವುದು ಮತ್ತು ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರನ್ನು ಯಜಮಾನರು ಎಂದು ಪರಿಗಣಿಸುವಂತೆ ಸತ್ಯಾಗ್ರಹಿಗಳು ಆಗ್ರಹಿಸಿದರು.

ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ  ನಿಗದಿಪಡಿಸಿರುವ ಜಾಗದಲ್ಲಿರುವ ಕಾಣನಕಟ್ಟೆ ಕೆರೆಯನ್ನು ಪುನರುಜ್ಜೀವನ ಕ್ರೀಡಾಂಗಣಕ್ಕೆ ಬೇರೆ ಸ್ಥಳವನ್ನು ನಿಗದಿ ಮಾಡಬೇಕು. ಅದರ ಪಕ್ಕದಲ್ಲಿ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಿಸಲು ಮುಂದಾಗಿದ್ದು, ಅಲ್ಲಿಯೂ ನೆಗಲಕಟ್ಟೆ ಕೆರೆ ಇತ್ತು. ಹಾಗಾಗಿ, ಈ ಯೋಜನೆಯನ್ನು ಕೈ ಬಿಟ್ಟು ಕೆರೆಯನ್ನು ಪುನರುಜ್ಜೀವನಗೊಳಿಸಬೇಕು ಎಂದು ಬೇಡಿಕೆ ಇಟ್ಟರು.

ಚಾಮುಂಡಿಬೆಟ್ಟದಲ್ಲಿನ ಪ್ರಾಣಿ-ಪಕ್ಷಿಗಳ ಹಿತ ದೃಷ್ಟಿಯಿಂದ ಅವೈಜ್ಞಾನಿಕವಾದ ವಾಣಿಜ್ಯೀಕರಣದ ಕಾಮಗಾರಿ ಮಾಡುವುದು ಬೇಡ. ಕೂಡಲೇ ಎಲ್ಲ ಕಾಮಗಾರಿಗಳನ್ನು ನಿಲ್ಲಿಸಬೇಕು. ಉದ್ಯಾನವನ ಕಾಯಿದೆ ಮತ್ತು ಕಾನೂನಿನ ಆದೇಶವನ್ನು ಮೀರಿ ಕಟ್ಟಡ ಕಾಮಗಾರಿ ಮಾಡುತ್ತಿದ್ದು, ಕೂಡಲೇ ನಿಲ್ಲಿಸಿ ಇಲ್ಲವಾದರೆ ಪರಿಸರ ವಾದಿಗಳು ಎಲ್ಲ ಅಧಿಕಾರಿಗಳ ಮೇಲೆ ನ್ಯಾಯಾಲಯದಲ್ಲಿ ಪಿಐಎಲ್ ಹೂಡಬೇಕಾಗುತ್ತದೆ ಎಂದು ಪರಿಸರವಾದಿ ಭಾನು ಮೋಹನ್ ನಗರದ ನ್ಯಾಯಾಲಯದ ಮುಂಭಾಗ ಪ್ಲೇ ಕಾರ್ಡ್ ಹಿಡಿದು ಸತ್ಯಾಗ್ರಹ ನಡೆಸಿದರು.
ಮೈಸೂರು ಗ್ರಾಹಕರ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಭಾಮಿ ಶೆಣೈ, ಪರಿಷತ್ ಅಧ್ಯಕ್ಷರಾದ ಶ್ರೀಶೈಲ ರಾಮಣ್ಣನವರ್, ಶಂಕರ್, ಶೋಭಾನಾ, ಮೇಜರ್ ಜನರಲ್ ಸುಧೀರ್ ಓಂಭತ್ಕೇರೆ, ಸಿಎಫ್‌ಟಿಆರ್‌ಐ ನಿವೃತ್ತ ನಿರ್ದೇಶಕ ಡಾ.ವಿ.ಪ್ರಕಾಶ್, ಪ್ಲಾಸ್ಟಿಕ್ ಸರ್ಜನ್ ಡಾ.ಜಯರಾಮ್, ಡಾ.ನಂಜಪೂರ್ ಯದುರಾಜ್, ಗೀತಾ ಮೇಲುಮನಿ, ಪ್ರೊ.ದ್ವಾರಕಿ, ಅರುಣ್ ಕುಮಾರ್ ಶೆಟ್ಟರ , ರಾಕೇಶ್ , ಮುನಿರ್, ಮುರುಳಿ ಮೋಹನ್, ಕೊ.ಸು.ನರಸಿಂಹಮೂರ್ತಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಅನೇಕರು ಪರೋಕ್ಷವಾಗಿ ಬೆಂಬಲ ನೀಡಿದರು.

andolanait

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

20 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

20 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

1 day ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

1 day ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

1 day ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

1 day ago