ಹೆಬ್ಬಾಳ ಜಲಾಶಯ ಕೋಡಿ ಬಿದ್ದು ಅವಾಂತರ; ಹಲವು ಗ್ರಾಮಗಳ ಸಂಚಾರ ಸ್ಥಗಿತ
ಮಂಜು ಕೋಟೆ
ಎಚ್.ಡಿ.ಕೋಟೆ: ಭಾರಿ ಮಳೆಯಿಂದಾಗಿ ಪಟ್ಟಣದ ಬೆಳಗನಹಳ್ಳಿ ರಸ್ತೆ ಸೇತುವೆ ಮತ್ತೊಮ್ಮೆ ಸಂಪೂರ್ಣ ಜಲಾವೃತವಾಗಿ ಜನ ಸಾವಾನ್ಯರ ಪರಿಸ್ಥಿತಿ ಪರದಾಡುವಂತಾಗಿದೆ.
ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಹೆಬ್ಬಾಳದ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದ ಪರಿಣಾಮ ಬೆಳಗನಹಳ್ಳಿ ಸೇತುವೆ ಜಲಾವೃತಗೊಂಡು ಭಾಗದ ಅನೇಕ ಗ್ರಾಮಗಳ ಕೆಲಸಮಾನ್ಯರ ಸಂಚಾರ ಸ್ಥಗಿತಗೊಂಡು ಶಾಲಾ ವಿದ್ಯಾರ್ಥಿಗಳು, ವೃದ್ಧರು, ರೋಗಿಗಳು, ಕೂಲಿ ಕಾರ್ಮಿಕರು ಪಟ್ಟಣಕ್ಕೆ ಪರ್ಯಾಯ ರಸ್ತೆ ಮತ್ತು ಜಮೀನುಗಳು ತೋಟಗಳ ಮುಖಾಂತರ ಬರಬೇಕಾಗಿತ್ತು. ಮತ್ತೆ ಕೆಲವರು ಪ್ರಾಣದ ಹಂಗು ತೊರೆದು ನೀರು ತುಂಬಿ ಹರಿಯುತ್ತಿರುವ ಸೇತುವೆ ಮೇಲೆ ಬರುತ್ತಿದ್ದರು.
೬ ತಿಂಗಳಿನಿಂದ ೪ ಬಾರಿ ಜಲಾವೃತಗೊಂಡಿರುವ ಈ ಸೇತುವೆಯಿಂದಾಗಿ ಈ ಭಾಗದ ಜನರಿಗೆ ಮಳೆ ಬಂದರೆ ದೊಡ್ಡ ಆಘಾತವೇ ಎದುರಾಗಲಿದೆ . ಸೇತುವೆ ಅನೇಕ ಬಾರಿ ಜಲಾವೃತಗೊಂಡಿರುವುದರಿಂದ ಸೇತುವೆ ಅಕ್ಕಪಕ್ಕದ ತಡೆಗೋಡೆ ಮುರಿದು ಬಿದ್ದಿದ್ದು ಸೇತುವೆ ಸಹ ದುಸ್ಥಿತಿಗೆ ಬಂದಿದೆ. ಹೀಗಾಗಿ ನೀರಿನ ಪ್ರವಾಣ ಕಡಿಮೆಯಾದರೂ ಈ ಸೇತುವೆ ಮೇಲೆ ಸಂಚರಿಸಲು ಜನರು ಭಯಪಡುವಂತಾಗಿದೆ.
ತಾರಕ ಜಲಾಶುಂದ ನೀರಾವರಿ ಇಲಾಖೆಯ ಅಧಿಕಾರಿಗಳು ಸೇತುವೆಯನ್ನು ಮೇಲ್ದರ್ಜೆಗೆ ಏರಿಸಲು ಅನೇಕ ಬಾರಿ ಪತ್ರ ಬರೆದರೂ ಏನೂ ಪ್ರಯೋಜನವಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಸೇತುವೆಯಿಂದ ಆಗುವ ದುರಂತವನ್ನು ತಪ್ಪಿಸಲು ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ವಹಿಸಬೇಕಾಗಿದೆ.
ಪ್ರತಿನಿತ್ಯ ರಸ್ತೆ ಸೇತುವೆ ಮೇಲೆ ಕೂಲಿ ಕೆಲಸಕ್ಕೆ ಹೋಗಿ ಹಣ ಸಂಪಾದಿಸಿ ಜೀವನ ವಾಡಬೇಕಾಗಿದೆ. ಸೇತುವೆ ಹೀಗೆ ಆಗಾಗ್ಗೆ ಜಲಾವೃತವಾದರೆ ನಾವು ಬದುಕು ಕಟ್ಟಿಕೊಳ್ಳಲು ಮತ್ತು ಜೀವನ ವಾಡಲು ಹೇಗೆ ಸಾಧ್ಯ? ಅಧಿಕಾರಿಗಳು, ಜನಪ್ರತಿನಿಧಿಗಳು ಸೇತುವೆ ಅಭಿವೃದ್ಧಿಗೆ ಮುಂದಾಗಬೇಕು.
–ಪ್ರಕಾಶ್, ತೊರೊಳ್ಳಿ ನಿವಾಸಿ.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…