ಮಂಡ್ಯ: ಮಾರಕ ಕಾಯಿಲೆ ಕ್ಯಾನ್ಸರ್‌ನಿಂದ ನರಳುತ್ತಿದ್ದರೂ ಎಲ್ಲರಿಗೂ ಆದರ್ಶವಾಗಬೇಕೆಂದು ಕ್ಯಾನ್ಸರ್ ಅನ್ನು ಹೇಗೆ ಎದುರಿಸಬೇಕೆಂದು ‘ಗೆದ್ದೇ ಗೆಲ್ಲುವೆನು ಒಂದು ದಿನ’ ಎಂಬ ಪುಸ್ತಕ ಹೊರತಂದಿದ್ದ ಲೇಖಕಿ ಸತ್ಯಭಾಮ ದೇವಿ
(49) ಅವರು ಮೃತಪಟ್ಟಿದ್ದು, ತಮ್ಮ ದೇಹವನ್ನು ಮಿಮ್ಸ್‌ಗೆ ದಾನ ಮಾಡುವ ಮೂಲಕ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಅನುಪಮ ಅವರ ಸಹೋದರಿಯಾದ ಸತ್ಯಭಾಮದೇವಿ ಅವರು ಕಳೆದ ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಎಲ್ಲವನ್ನೂ ಮರೆತು ತಮ್ಮ ಮಗಳು ಹಾಗೂ ಕುಟುಂಬದವರ ಜತೆ ಸಂತಸದಿಂದ ಕಾಲ ಕಳೆಯುತ್ತಿದ್ದರು. ಆದರೆ, ಬೆಂಬಿಡದ ಕ್ಯಾನ್ಸರ್ ಕೊನೆಗೂ ಶನಿವಾರ ಬಲಿತೆಗೆದುಕೊಂಡಿದೆ.
ಆರೋಗ್ಯ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸಿ, ಆರೋಗ್ಯದ ಮಹತ್ವ ಅರಿತಿದ್ದ ಸತ್ಯ ಅವರು ಆರೋಗ್ಯದ ಅಧ್ಯಯನದ ಉದ್ದೇಶದಿಂದ ತಮ್ಮ ದೇಹವನ್ನು ಮಿಮ್ಸ್‌ಗೆ ಹಸ್ತಾಂತರಿಸುವ ನಿರ್ಧಾರ ಮಾಡಿದ್ದರು. ಅಂತೆೆಯೇ ಅವರ ಕುಟುಂಬದವರು ಸತ್ಯ ಅವರ ದೇಹವನ್ನು ಮಿಮ್ಸ್‌ಗೆ ಶನಿವಾರ ಹಸ್ತಾಂತರಿಸಿದರು. ಇವರ ನಿಧನಕ್ಕೆ ಅಪಾರ ಸಅಹಿತ್ಯ ಬಳಗವು ಕಂಬನಿ ಮಿಡಿದಿದ್ದಾರೆ.
ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಸಿಎಂಗೆ ಪತ್ರ ಬರೆದಿದ್ದ ಗ್ರಾಮದ ವಿದ್ಯಾರ್ಥಿಗಳು ಹನೂರು: ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ನಿವಾಸಿಗಳಿಗೆ ಸಮರ್ಪಕ…
ಎಂ.ನಾರಾಯಣ್ ತಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಜ.೩ರಂದು ಆಕರ್ಷಕ ಬಂಡಿ ಉತ್ಸವ; ೫ರಂದು ರಥೋತ್ಸವ ತಿ.ನರಸೀಪುರ: ಪುರಾಣ ಪ್ರಸಿದ್ಧ ತಾಲ್ಲೂಕಿನ ಮೂಗೂರಿನ…
ಶಾಸಕರ ಸೂಚನೆಯ ಮೇರೆಗೆ ಕ್ಯಾಂಟೀನ್ ಆರಂಭ; ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಂತಸ ಎಚ್.ಡಿ.ಕೋಟೆ: ಕಡಿಮೆ ದರದಲ್ಲಿ ರುಚಿಕರವಾದ ತಿಂಡಿ, ಊಟ…
ವರಹಳ್ಳಿ ಆನಂದ ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ೧ರಿಂದ ೭ನೇ ತರಗತಿವರೆಗೆ ಪ್ರವೇಶಾವಕಾಶ ಇರುವ ಸ.ಹಿ.ಪ್ರಾ. ಶಾಲೆ ಮೈಸೂರು: ನೂರಾರು…
ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…