ಜಿಲ್ಲೆಗಳು

ಭೋಗಯ್ಯನಹುಂಡಿ ಕೆರೆ ಜೀರ್ಣೋದ್ಧಾರಕ

ಸ್ವಂತ ಅರ್ಧ ಕೋಟಿ ರೂ. ಖರ್ಚಿನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸದಾನಂದರಿಂದ ಮಾದರಿ  ಸೇವಾ ಕಾರ್ಯ

ಶ್ರೀಧರ್ ಆರ್.ಭಟ್
ನಂಜನಗೂಡು: ಹಣ ಸಂಪಾದನೆಯೊಂದೇ ಜೀವನದ ಪ್ರಮುಖ ಧ್ಯೇಯ ಎಂಬಂತಾಗಿರುವ ಈ ಕಾಲ ಘಟ್ಟದಲ್ಲೂ ಇಲ್ಲೊಬ್ಬರು ಹೂಳು ತುಂಬಿಕೊಂಡು, ಕಾಣದಂತಾದ ಕೆರೆಯ ಪುನರ್ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಸರ್ಕಾರದಿಂದ ಅಥವಾ ವಿವಿಧ ಎನ್‌ಜಿಓಗಳಿಂದ ಬರಬಹುದಾದ ಹಣದಲ್ಲಿ ನೆಪ ಮಾತ್ರಕ್ಕೆ ಕಾಮಗಾರಿ ಮಾಡಿಸಿ ಅದರಲ್ಲಿ ತಮ್ಮ ಪಾಲೆಷ್ಟು ಎಂದು ಕೇಳುವ ಈ ಕಾಲದಲ್ಲೂ ಸ್ವಂತ ಹಣದಿಂದ ಕೆರೆ ಪುನರ್ ನಿರ್ಮಾಣ ಮಾಡುತ್ತಿರುವವರನ್ನು ನೋಡಲು ನೀವು ನಂಜನಗೂಡು ತಾಲ್ಲೂಕಿನ ಭೋಗಯ್ಯನ ಹುಂಡಿಗೆ ಆಗಮಿಸಬೇಕು.

50 ಲಕ್ಷ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಪುನರ್ ನಿರ್ಮಾಣ : ಸುಮಾರು 7 ಎಕರೆ ವಿಸ್ತೀರ್ಣದ ಮಧ್ಯದಲ್ಲಿ ಐದಾರು ಬೃಹತ್ ಆಲದ ಮರಗಳಿರುವ ಇಲ್ಲಿನ ಪುರಾತನವಾದ ರುದ್ರಪ್ಪನ ಕೆರೆಯ ಪುನರ್ ನಿರ್ಮಾಣ ಈಗ ಭರದಿಂದ ಸಾಗಿದೆ.
ಇಂಥ ಜನೋಪಯೋಗಿ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿರುವವರು ಇದೇ ಕ್ಷೇತ್ರದ ತಗಡೂರು ಜಿಲ್ಲಾ ಪಂಚಾಯಿತಿಯ ನಿರ್ಗಮಿತ ಸದಸ್ಯ ಸದಾನಂದ.
ಈ ಪ್ರದೇಶ ಹೇಳಿ ಕೇಳಿ ತಾಲ್ಲೂಕಿನ ಖಾಯಂ ಬರಪೀಡಿತ ಪ್ರದೇಶ. ಅಂತರ್ಜಲ ಇಲ್ಲಿ ಕನಸೇ ಆಗಿದೆ. ಹತ್ತಾರು ವರ್ಷಗಳಿಗೆ ಒಮ್ಮೆ ಮಳೆ ಬಂದರೆ ಅದೇ ಪುಣ್ಯ ಎನ್ನುವ ಈ ಭೋಗಯ್ಯನಹುಂಡಿ ಈ ಕೆರೆಯ ಪುನರ್ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಅಹವಾಲು ಸಲ್ಲಿಸಿ 85 ಲಕ್ಷ ರೂ. ಅಂದಾಜು ಪಟ್ಟಿ ಸಿದ್ಧವಾಗಿಯೂ ಅದಕ್ಕೆ ಅನುಮತಿ ದೊರೆಯದೇ ಇದ್ದುದರಿಂದ ಹತಾಶರಾದ ಸದಾನಂದ ಈಗ ತಾವೇ ಮುಂದಾಗಿ ಕಾಮಗಾರಿ ಮಾಡಿ ಕೆರೆಗೆ ಕಾಯಕಲ್ಪ ನೀಡಲು ಸಂಕಲ್ಪ ಮಾಡಿದ ಸದಾನಂದ 15 ದಿನಗಳಿಂದ ಕೆರೆ ಕಾಮಗಾರಿ ಆರಂಭಿಸಿದ್ದಾರೆ.
ಪ್ರತಿನಿತ್ಯ ಲಕ್ಷಾಂತರ ರೂ. ಖರ್ಚಾಗುತ್ತಿರುವ ಈ ಕೆರೆಯ ಕಾಮಗಾರಿಯು ನೇರ ಉಸ್ತುವಾರಿ ಸಹ ಇವರದ್ದೇ ಆಗಿದೆ. ಗ್ರಾಮಸ್ಥರೊಂದಿಗೆ ಸ್ಥಳದಲ್ಲೇ ನಿಂತು ಕೆಲಸ ಮಾಡಿಸುತ್ತಿದ್ದಾರೆ.
ಇವರು ಜಿಪಂ ಸದಸ್ಯರಾದ ನಂತರ ಕ್ಷೇತ್ರದ ಕಾರ್ಯ, ಕಾಮಳ್ಳಿ, ಕಾರಾಪುರ ಹಾಗೂ ಅಳಂಗಂಚಿ ಕೆರೆಗಳಿಗೆ ಕಾಯಕಲ್ಪ ನೀಡಿ, ಈಗ 50 ಲಕ್ಷ ರೂ. ವೆಚ್ಚದಲ್ಲಿ ಸ್ವಂತ ಹಣದಿಂದ ಕೆರೆ ಕಾಮಗಾರಿ ಕೈಗೊಂಡಿದ್ದಾರೆ.

ಎರಡು ಜಿಲ್ಲೆಗಳಿಗೆ ಸೇರಿದ ಕೆರೆ
ಎರಡು ಜಿಲ್ಲೆ, ಎರಡು ತಾಲ್ಲೂಕುಗಳಿಗೆ ಸೇರಿದ ಈ ಕೆರೆಯ ಅರ್ಧ ಭಾಗ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನ ನವಿಲೂರು ಪಂಚಾಯಿತಿಗೆ ಸೇರಿದರೆ ಉಳಿದ ಅರ್ಧ ಭಾಗ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ.


ವೆಚ್ಚ ಎಷ್ಟಾದರೂ ಸರಿ, ಕೆರೆಯ ಕಾಮಗಾರಿ ಪೂರ್ಣಗೊಳಿಸಿಕೊಡುತ್ತೇನೆ. ನಂತರವಾದರೂ ಇಲ್ಲಿನ ಶಾಸಕರಾದವರು ಮುತುವರ್ಜಿ ವಹಿಸಿ ಈ ಕೆರೆಯನ್ನು ಕಪಿಲಾ ನದಿಯ ನೀರು ತುಂಬುವ ಯೋಜನೆಗೆ ಸೇರಿಸಿ ಈ ಕೆರೆಗೆ ನೀರು ಹರಿಸಲಿ.
-ಸದಾನಂದ


ಮಳೆ ಇಲ್ಲ, ಬೆಳೆ ಇಲ್ಲ. ಕೊಳವೆ ಬಾವಿ ತೋಡಿದರೂ ನೀರು ಮರೀಚಿಕೆಯಾಗುವ ಈ ಪ್ರದೇಶದಲ್ಲಿ ಅಲ್ಪ ಸ್ವಲ್ಪ ಮಳೆ ಬಂದರೂ ಬಿತ್ತುವ ಹುರುಳಿ ಸಾರಂಗ, ಜಿಂಕೆಗಳ ಪಾಲಾಗುತ್ತಿದೆ. ಈ ಕರೆ ಪುನರ್ ನಿರ್ಮಾಣಗೊಂಡು ಅದಕ್ಕೆ ನದಿ ನೀರು ಹರಿದರೆ ಇಲ್ಲಿನ ನೂರಾರು ಎಕರೆ ಭೂಮಿಯಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಅದರ ಶ್ರೇಯಸ್ಸು ಸದಾನಂದ ಅವರದ್ದಾಗಲಿದೆ.
-ಬಸವಣ್ಣ, ಸ್ಥಳೀಯರು.


ಸಿದ್ದರಾಮಯ್ಯನವರು ಇಲ್ಲಿನ ಶಾಸಕರಾಗಿ, ಮುಖ್ಯಮಂತ್ರಿಯಾಗಿ ಕ್ಷೇತ್ರಕ್ಕೆ ಬಂದಿದ್ದಾಗ ಗ್ರಾಮಸ್ಥರೆಲ್ಲ ಸೇರಿ ಈ ಕೆರೆ ಅಭಿವೃದ್ಧಿಗಾಗಿ ಮನವಿ ನೀಡಿದ್ದೆವು. ಆದರೆ ಈವರೆಗೂ ಅಭಿವೃದ್ಧಿಯಾಗಿಲ್ಲ. ಈಗ ಸದಾನಂದರು ಸ್ವಂತ ಹಣದಿಂದ ಕೆರೆ ಅಭಿವೃದ್ಧಿ ಕೈಗೊಂಡಿದ್ದಾರೆ. ನದಿ ನೀರು ಬಂದರೆ ಮಾತ್ರ ಸದಾನಂದರ ಕನಸು ನನಸಾಗಲು ಸಾಧ್ಯ. ಹಾಗಾಗಲಿ ಎಂಬುದೇ ಈ ಪುಟ್ಟ ಗ್ರಾಮದ ಜನತೆಯ ಆಶಯ.
-ನಾಗರಾಜ, ಸ್ಥಳೀಯರು.

andolanait

Recent Posts

ಓದುಗರ ಪತ್ರ: ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಸ್ವಾಗತಾರ್ಹ

ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…

5 hours ago

ಓದುಗರ ಪತ್ರ: ನಿಜವಾದ ಭಾವೈಕ್ಯತೆಯ ಸಂಗಮ

ಮಂಡ್ಯ ಜಿಯ ಮದ್ದೂರಿನಲ್ಲಿ ಭಾನುವಾರ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಗೌರಿ -ಗಣೇಶ ಮೂರ್ತಿಗಳನ್ನು ಹೊತ್ತ ಟ್ರ್ಯಾಕ್ಟರ್…

5 hours ago

ಓದುಗರ ಪತ್ರ: ನಾಡಿಗೆ ಮಾದರಿ!

ನಾಡಿಗೆ ಮಾದರಿ! ವಿವಿಧ ಧರ್ಮ ಸಮುದಾಯಗಳ ಮನಸುಗಳ ಅಕ್ಕರೆಯಲಿ ಬೆಸೆವ ಸ್ನೇಹ ಸೌಹಾರ್ದ ಸಾಮರಸ್ಯದ ಪ್ರತೀಕ, ಹಬ್ಬ ಉತ್ಸವಗಳು! ನಾಡಿಗೆ…

5 hours ago

ಓದುಗರ ಪತ್ರ: ಪ್ರೀತಿಯ ಅಣ್ಣ ಪ್ರತಾಪ್ ಸಿಂಹ…

ನಾವಿಬ್ಬರು ಪ್ರೊ. ಬಿ. ಪಿ. ಮಹೇಶ್ ಚಂದ್ರ ಗುರುಗಳ ಶಿಷ್ಯರು. ನಮ್ಮಿಬ್ಬರಿಗೂ ಪ್ರೊ. ಗುರು ಇಷ್ಟ. ನೀನು ಮಂಗಳೂರು ವಿವಿ,…

5 hours ago

ದಸರಾ ಬರುತ್ತಿದೆ, ಮೈಸೂರು ಸಿದ್ಧವಾಗುತ್ತಿದೆಯೇ?

ಶ್ರೇಯಸ್ ದೇವನೂರು ಅಭಿವೃದ್ಧಿಯ ಹೆಸರಿನಲ್ಲಿ ಅರ್ಧ ಕಾಮಗಾರಿ, ಸಂಚಾರದ ಹೆಸರಿನಲ್ಲಿ ಹೆಚ್ಚುತ್ತಿರುವ ಸಂಕಷ್ಟ  ಮೈಸೂರು ದಸರಾ ಎಂದರೆ ಕೇವಲ ಹತ್ತು…

6 hours ago

ಫಾಲ್ಕೆ ಪ್ರಶಸ್ತಿ ಕಲಾಸೇವೆಗೆ ಸಂದ ಗೌರವ: ಅನಂತ್ ನಾಗ್‌

ಸಂದರ್ಶನ: ಬಾನಾಸು  ಇಂದು ಗುಜರಾತಿನ ಕೆವಾಡಿಯಾದಲ್ಲಿ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಡೆಯಲಿದೆ. ಚಿತ್ರರಂಗಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ…

6 hours ago