ಬೆಂಗಳೂರು: ಹೊಸತಾಗಿ ನಿರ್ಮಾಣವಾಗಿರುವ ದಶಪಥಗಳ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಅವರು ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆದಿರುವ ಅವರು, ಒಡೆಯರ್ ಹೆಸರು ಇಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ
ಒತ್ತಾಯಿಸಿದ್ದಾರೆ.
‘1902ರಿಂದ 1940ರವರೆಗೆ ಮೈಸೂರು ರಾಜ್ಯವನ್ನು ಆಳಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅನೇಕ ಶತಮಾನಗಳ ಪರಂಪರೆ ಮತ್ತು ಪದ್ಧತಿಗಳಲ್ಲಿ ಸಮೃದ್ಧವಾಗಿರುವ ಮೈಸೂರು ಸಂಸ್ಕೃತಿಯನ್ನು ರೂಪಿಸಿದ ಒಡೆಯರ್, ಕೃಷ್ಣ ರಾಜಸಾಗರ ಅಣೆಕಟ್ಟೆಯನ್ನು ನಿರ್ಮಿಸಿದ್ದು ಅವರ ಜೀವಮಾನದ ಮಹತ್ಸಾಧನೆಯಾಗಿದೆ. ಅವರು ದೂರದೃಷ್ಟಿಯ ಜನಪರ ರಾಜರಾಗಿದ್ದರು’ ಎಂದೂ ಪತ್ರದಲ್ಲಿ ಬಣ್ಣಿಸಿದ್ದಾರೆ.
ಲಕ್ಷ್ಮೀಕಾಂತ್ ಕೋಮಾರಪ್ಪ ಗ್ರಾಮದೇವತೆ ಸಬ್ಬಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆ, ಬೆಳೆಗಾಗಿ ಪ್ರಾರ್ಥನೆ ಸೋಮವಾರಪೇಟೆ: ಗ್ರಾಮೀಣ ಭಾಗದ ಆಚರಣೆಗಳಲ್ಲಿ…
ಅಣ್ಣೂರುಸತೀಶ್ ಶ್ರೀಆದಿಚುಂಚನಗಿರಿ ಮಠದ ನೇತೃತದಲ್ಲಿ ಅದ್ಧೂರಿ ಜಾತ್ರೆ ಭಾರತೀನಗರ: ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರಸ್ವಾಮಿ ಪುಣ್ಯಕ್ಷೇತ್ರವು ದಕ್ಷಿಣ ಕಾಶಿಯೆಂದೇ ಪರಿಚಿತವಾಗಿ ಹಲವಾರು…
ಭೇರ್ಯ ಮಹೇಶ್ ಇಂದು ಭೇರ್ಯದಲ್ಲಿ ಕರಿಯಮ್ಮ ದೊಡ್ಡಮ್ಮ ದೇವಿ ಸಿಡಿ ಉತ್ಸವ, ನಾಳೆ ಜಾತ್ರಾ ಮಹೋತ್ಸವ ಭೇರ್ಯ: ಭೇರ್ಯ ಗ್ರಾಮದ…
ಸಮಾಜ ಕಲ್ಯಾಣ ಇಲಾಖೆ ನೌಕರರಿಂದ ‘ಮುಟ್ಟಿಸಿಕೊಂಡವನು’ ನಾಟಕ; ಪಿ.ಲಂಕೇಶ್ ರಚನೆಯ ಕಥೆ ಮೈಸೂರು: ಮುಟ್ಟಬಾರದ ಜಾತಿಯವರು ಎನಿಸಿಕೊಂಡವರೊಬ್ಬರಿಂದ ಮುಟ್ಟಿಸಿಕೊಂಡ ಜಾತಿ…
ಮೈಸೂರು: ಹುಣಸೂರು ಬಳಿಯ ತೋಟದ ಮನೆಯೊಂದ ರಲ್ಲಿ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತಗಳನ್ನು ವಶಕ್ಕೆ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ…