ಮೈಸೂರು : ನಾಡು ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 115 ನೇ ಜಯಂತಿಯ ಅಂಗವಾಗಿ ಸಮಾನಮನಸ್ಕ ಬಳಗದ ವತಿಯಿಂದ ನಗರದ ಗಾಂಧಿವೃತ್ತದಲ್ಲಿ ಭಗತ್ ಸಿಂಗ್ ಒಂದು ನೆನಪು ಕಾರ್ಯಕ್ರಮ ಆಯೋಜಿಸಲಾಗಿತ್ತು,
ಭಗತ್ ಸಿಂಗ್ ಅರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿದ್ಯಾವಿಕಾಸ ಸಂಸ್ಥೆಯ ಕವೀಶ್ ಗೌಡ ರವರು ಮಾತನಾಡಿ ಸಿಂಗ್ ರವರ ಹೆಸರು ಪ್ರತಿಯೊಬ್ಬ ದೇಶಭಕ್ತನ ಮನದಲ್ಲಿ ಸದಾ ಕಾಲ ಉಳಿಯುವಂತದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ರವರ ಹೆಸರನ್ನು ನಾಮಕರಣ ಮಾಡಿರುವುದು ನಮ್ಮೆರಿಗೂ ಸಂತವನ್ನುಂಟು ಮಾಡಿದೆ ಎಂದರು.
ಬಳಿಕ ಮಾತನಾಡಿದ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಪಡುವಾರಹಳ್ಳಿಯ ಎಂ ರಾಮಕೃಷ್ಣ ರವರು 23 ವರ್ಷದ ಕ್ರಾಂತಿಕಾರಿ ಯುವ ಶಕ್ತಿ ಭಗತ್ ಸಿಂಗ್ ರವರು ಇನ್ ಕಿಲಾಬ್ ಜಿಂದಾಬಾದ್ ಘೋಷಣೆ ಮೂಲಕ ದೇಶಾದ್ಯಂತ ಬ್ರಿಟಿಶರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ಅಪ್ರತಿಮ ದೇಶಭಕ್ತ 1924 ರಲ್ಲಿ ಅಸೆಂಬ್ಲಿ ನಡೆಯುತ್ತಿದ್ದಾಗ ಭಗತ್ ಸಿಂಗ್ ಬಿ.ಕೆ ದತ್ ರವರು ಬಾಂಬ್ ಎಸೆದು ಇನ್ ಕಿಲಾಬ್ ಜಿಂದಾಬಾದ್ ಬ್ರಿಟಿಷ್ ಸಾಮ್ರಾಜ್ಯ ಶಾಹಿಗೆ ದಿಕ್ಕಾರ ಎಂದು ಕ್ರಾಂತಿಕಾರಿ ಘೋಷಣೆ ಕೂಗಿ ಭರತಖಂಡದಲ್ಲಿ ಯುವಕರನ್ನು ಬ್ರಿಟಿಷರ ವಿರುದ್ಧ ಹೋರಾಡಲು ಸಜ್ಜುಗೊಳಿಸಿದರು. ದೇಶಕ್ಕಾಗಿ ಹೋರಾಡಲು ಕರೆನೀಡಿ ವೈಯಕ್ತಿಕ ಜೀವನ ತೊರೆಯಲು ಕರೆ ನೀಡಿದರು, ಇದು ದೇಶಾದ್ಯಂತ ಸ್ವಾತಂತ್ರ್ಯ ಕಿಚ್ಚು ಹಚ್ಚಿದ ಅವರ ಜೀವನದ ಸ್ವಾತಂತ್ರ್ಯ ಕಿಚ್ಚು ನಮಗೆಲ್ಲ ಇಂದಿಗೂ ಸ್ಪೂರ್ತಿದಾಯಕ ಅವರ ಜಯಂತಿಯನ್ನು ಮೈಸೂರಿನಲ್ಲಿ ಆಚರಣೆ ಮಾಡಿ ಗೌರವಿಸುತ್ತಿದ್ದೇವೆ ಎಂದರು,
ನಂತರ ಯುವ ಮುಖಂಡ ಅಜಯ್ ಶಾಸ್ತ್ರಿ ಮಾತನಾಡಿ ಜಿಲಿಯಾನ್ ವಾಲಾಬಾಗ್ ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಭಾರತೀಯರು ನೂರಾರು ಸಂಖ್ಯೆಯಲ್ಲಿ ಮಡಿದರು, ಅಲ್ಲಿದ 12ವರ್ಷದ ಬಾಲಕ ಭಾರತೀಯರ ರಕ್ತವನ್ನ ಬಾಟಲಿನಲ್ಲಿ ತುಂಬಿ ಬ್ರೀಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಶಪಥ ಮಾಡಿದ ಬಾಲಕನೇ ಅಪ್ರತಿಮ ಹೋರಾಟಗಾರ ಭಗತ್ ಸಿಂಗ್, ಅವರ ಚಿಕ್ಕಪ್ಪ ಅಜಿತ್ ಸಿಂಗ್ ರವರಿಂದ ಪ್ರೇರೆಪಿತರಾಗಿ ಸ್ವಾತಂತ್ರ್ಯ ಹೋರಾಟದ ಆಂದೋಲನ ಕೈಗೊಂಡು ಲಕ್ಷಾಂತರ ಯುವಕರನ್ನ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಸಂಘಟಿಸಿದರು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭಗತ್ ಸಿಂಗ್ ರವರ ಅಧ್ಯಯನ ಪೀಠ ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಅರಿವು, ಮತ್ತು ದೇಶಪ್ರೇಮ ಜಾಗೃತಿ ಮೂಡಿಸಬೇಕಿದೆ ಎಂದರು,
ಕಾರ್ಯಕ್ರಮದಲ್ಲಿ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಮಾಜಿ ಅದ್ಯಕ್ಷರಾದ ಕೆ ಉಮಾಶಂಕರ್, ನಿರ್ದೇಶಕ ಎಸ್.ಅರವಿಂದ್,ಚಾಮರಾಜ ಬಿಜೆಪಿ ಅದ್ಯಕ್ಷರಾದ ಸೋಮಶೇಖರ್ ರಾಜು, ನಗರಪಾಲಿಕೆ ಸದಸ್ಯರಾದ ಎಂ. ಚಿಕ್ಕವೆಂಕಟು,
ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾದ ಎಸ್.ಕೃಷ್ಣಕುಮರ್,ಬಿ.ಕುಮಾರ್, ಸಿ.ಸಂತೋಷ್, ಯುವ ಮುಖಂಡರಾದ ಅಜಯ್ ಶಾಸ್ತಿ,ವಿಕ್ರಂ ಅಯ್ಯಂಗಾರ್, ಕೇಬಲ್ ಕಿಟ್ಟಿ, ಸುರೇಂದ್ರ, ಅನುಜ್,ಛಲಪತಿ, ರವಿ ,ವೀರನಗೆರೆಯ ನಕ್ಷತ್ರ ಗ್ರೂಪ್ ವಿಜಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಪುನರಾರಂಭಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕರ್ನಾಟಕ ರಾಜ್ಯ…
ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಸಾಮೂಹಿಕ ಸುಂಕಗಳನ್ನು ಅಮೆರಿಕ…
ಹನೂರು : ಮುಂದಿನ ದಿನಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು ಯಶಸ್ವಿಯಾಗಿ ನಡೆಸಲು ಕರ್ನಾಟಕ ಪೊಲೀಸರು ಹಾಗೂ ಅಬಕಾರಿ ಇಲಾಖೆ…
ಕೆ.ಆರ್.ಪೇಟೆ : ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಮುಂಭಾಗದಲ್ಲಿ ಶಫಿಉಲ್ಲಾ ಅವರು ನಡೆಸುತ್ತಿದ್ದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ಸ್ ಅಂಗಡಿಯು ವಿದ್ಯುತ್ ಶಾರ್ಟ್…
ಬೆಂಗಳೂರು : ಬೆಂಗಳೂರು ನಗರ ಮಾತ್ರವಲ್ಲದೆ ಇಡೀ ಕರ್ನಾಟಕ ಎಲೆಕ್ಟ್ರಿಕ್ ವಾಹನ ಉದ್ಯಮದ ಹಬ್ ಆಗಿ ಅಭಿವೃದ್ಧಿ ಹೊಂದುತ್ತಿದ್ದು, ಅದಕ್ಕೆ…
ಸುಪ್ರೀಂ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿದ ಅಮೆರಿಕ ಅಧ್ಯಕ್ಷ ವಾಷಿಂಗ್ಟನ್ : ವಿವಿಧ ದೇಶಗಳ ಸರಕುಗಳ ಮೇಲೆ ವಿಧಿಸಿದ್ದ ಭಾರಿ ಸುಂಕಗಳನ್ನು…