ಜಿಲ್ಲೆಗಳು

‘ತರಾತುರಿಯಲ್ಲಿ ರಸ್ತೆ ಕೆಲಸ ಬೇಡ: ೨ ತಿಂಗಳ ಮೊದಲೇ ಮುಗಿಸಿ’

ನಾಡಹಬ್ಬಕ್ಕೆ ಮೈಸೂರು ರಸ್ತೆ ಸುಂದರಗೊಳಿಸುವ ಗುತ್ತಿಗೆದಾರರ ಸಲಹೆ ಹಲವು

ಎಚ್.ಎಸ್.ದಿನೇಶ್‌ಕುಮಾರ್

ಮೈಸೂರು: ನಾಡಹಬ್ಬ ದಸರಾ ಮೈಸೂರಿನ ಪಾಲಿಗೆ ಸಂಜೀವಿನಿ ಇದ್ದಂತೆ. ಕಲಾವಿದರಿಗೆ, ವ್ಯಾಪಾರಸ್ಥರಿಗೆ ಹಬ್ಬದ ಸಂಭ್ರಮವಾದರೆ ಕಳಪೆ ಕಾಮಗಾರಿಯಿಂದ ಅಥವಾ ಹೆಚ್ಚು ಮಳೆಯಿಂದ ಗುಂಡಿ ಬಿದ್ದ ರಸ್ತೆಗಳಿಗೂ ದಸರಾ ಎಂಬುದು ಒಂದು ಸಂಭ್ರಮವೇ!
ದಸರಾ ಹಬ್ಬ ಬಂತೆಂದರೆ ಸಾಕು ಗುತ್ತಿಗೆದಾರರ ಕಣ್ಣು ನಗರಪಾಲಿಕೆಯತ್ತ ನೋಡುತ್ತದೆ. ರೆಡಿ ಗ್ರಾಂಟ್ ಮೂಲಕ ಬಿಡುಗಡೆಯಾಗುವ ಹಣದಲ್ಲಿ ಸಿದ್ಧವಾಗುವ ಕಾಮಗಾರಿಗಳಿಗೆ ಗುತ್ತಿಗೆದಾರರು ನಾಮುಂದು, ತಾಮುಂದು ಎಂದು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ.
ರಸ್ತೆ ದುರಸ್ತಿ ಹಾಗೂ ಗುಂಡಿ ಮುಚ್ಚುವ ಕೆಲಸಕ್ಕೆ ಜಿಲ್ಲಾಡಳಿತ, ಮುಡಾ ಅಧಿಕಾರಿಗಳು ಕನಿಷ್ಠ ೫ ಕೋಟಿ ರೂ. ಮೀಸಲಿಡುತ್ತಾರೆ. ದಸರಾ ಹಬ್ಬ ಆರಂಭಕ್ಕೆ ೨೦ ದಿನಗಳ ಮುಂಚೆ ಕಾಮಗಾರಿಗಳು ಆರಂಭವಾಗಿ ಒಂದು ವಾರದಲ್ಲಿ ಪೂರ್ಣಗೊಳ್ಳುತ್ತದೆ.
ಅದರಂತೆ ಈ ಬಾರಿಯ ದಸರಾಗೂ ರಸ್ತೆ ನಿರ್ಮಾಣ, ದುರಸ್ತಿ, ಗುಂಡಿ ಮುಚ್ಚುವ ಕೆಲಸಕ್ಕೆ ಜಿಲ್ಲಾಡಳಿತ ೧೫ ಕೋಟಿ ರೂ. ಗಳ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದೆ. ಮುಂದಿನ ಒಂದು ವಾರದಲ್ಲಿ ಅನುದಾನ ಬಿಡುಗಡೆಯಾಗಬಹುದು.
ಹೀಗಾಗಿ ಗುತ್ತಿಗೆದಾರರು ರಸ್ತೆ ಕಾಮಗಾರಿಗಳ ದುರಸ್ತಿ ಟೆಂಡರ್‌ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಟೆಂಡರ್ ಪ್ರಕ್ರಿೆುಂ ಆರಂಭವಾದಲ್ಲಿ ಜಿಲ್ಲಾಡಳಿತ ನಿಗದಿಪಡಿಸಿರುವ ಮೊತ್ತಕ್ಕಿಂತಲೂ ಕಡಿಮೆ ದರವನ್ನು ನಮೂದು ಮಾಡಿ ಟೆಂಡರ್‌ನಲ್ಲಿ ಭಾಗವಹಿಸಲು ಕೆಲ ಗುತ್ತಿಗೆದಾರರು ನಿರ್ಧರಿಸಿದ್ದಾರೆ.
ಈ ಸಂಬಂಧ ಗುತ್ತಿಗೆದಾರರೂ ಸರ್ಕಾರಕ್ಕೆ ಅಥವಾ ಜಿಲ್ಲಾಡಳಿತಕ್ಕೆ ಕೆಲ ಸಲಹೆಗಳನ್ನು ನೀಡುತ್ತಾರೆ. ದಸರಾ ಹಬ್ಬ ಎಂದರೆ ದೇಶ ವಿದೇಶಗಳಿಂದ ಜನರು ಆಗಮಿಸುತ್ತಾರೆ. ಹೀಗಾಗಿ ವಾಹನ ಸಂಚಾರಕ್ಕೆ ಉತ್ತಮ ರಸ್ತೆಗಳ ಅಗತ್ಯವಿದೆ. ಪ್ರವಾಸಿಗರು ಮೊದಲು ಗಮನಿಸುವುದೇ ರಸ್ತೆಗಳನ್ನು. ಈ ಕಾರಣಕ್ಕಾಗಿ ದಸರಾ ಹಬ್ಬಕ್ಕೆ ಮೂರು ತಿಂಗಳು ಇರುವಾಗಲೇ ಸರ್ಕಾರ ಜಿಲ್ಲಾಧಿಕಾರಿ, ನಗರಪಾಲಿಕೆ ಹಾಗೂ ಮುಡಾ ಅಧಿಕಾರಿಗಳ ಸಭೆಯನ್ನು ಕರೆಯಬೇಕು. ರಸ್ತೆ ದುರಸ್ತಿ ಹಾಗೂ ಮರು ನಿರ್ಮಾಣ ಕಾಮಗಾರಿಗೆ ಕನಿಷ್ಠ ೨ ತಿಂಗಳು ಮುಂಚೆ ನುದಾನವನ್ನು ಬಿಡುಗಡೆ ಮಾಡಬೇಕು. ಕಾಮಗಾರಿ ಗುರುತಿಸುವಿಕೆ, ಟೆಂಡರ್ ಪ್ರಕ್ರಿಯೆ ಎಲ್ಲವೂ ಆಗಲು ಕನಿಷ್ಠ ೧೦ ದಿನಗಳು ಬೇಕು. ನಂತರ ಕಾಮಗಾರಿ ಆರಂಭವಾದರೂ ದಸರಾ ಹಬ್ಬದ ಒಂದು ತಿಂಗಳ ಮುಂಚೆ ರಸ್ತೆಗಳು ವಾಹನಗಳ ಸಂಚಾರಕ್ಕೆ ಮುಕ್ತವಾಗುತ್ತವೆ. ಹೀಗಾದಾಗ ಪ್ರವಾಸಿಗರೂ ಖುಷಿಪಡುತ್ತಾರೆ.
ದಸರಾ ಹಬ್ಬಕ್ಕೆ ೧೫, ೨೦ ದಿನಗಳ ಮುಂಚೆ ಅನುದಾನ ಬಿಡುಗಡೆಯಾದಲ್ಲಿ ರಸ್ತೆ ದುರಸ್ತಿ ಕಾಮಗಾರಿಯನ್ನು ತರಾತುರಿಯಲ್ಲಿ ಮಾಡಬೇಕಾಗುತ್ತದೆ. ಹೀಗಾದಾಗ ಗುಣಮಟ್ಟದ ಬಗ್ಗೆ ಚಿಂತಿಸುವುದಕ್ಕೆ ಸಮಯವೂ ಇರುವುದಿಲ್ಲ. ನಂತರ ಜನರು ನಮ್ಮನ್ನು ದೂರುತ್ತಾರೆ. ಸರ್ಕಾರ ೨ ತಿಂಗಳ ಮುಂಚೆೆಯೇ ಸಿದ್ಧತೆ ಆರಂಭಿಸಬೇಕು ಎನ್ನುತ್ತಾರೆ.

೪ ತಿಂಗಳಿನಿಂದ ಮಳೆಯ ಸಮಸ್ಯೆ ಕಾಡುತ್ತಿದೆ. ಹೆಚ್ಚು ಮಳೆ ಬಿದ್ದ ಕಾರಣ ರಸ್ತೆಯಲ್ಲಿ ಗುಂಡಿಗಳಾಗಿವೆ. ದಸರಾ ಹಬ್ಬದ ಒಂದು ತಿಂಗಳ ಮುಂಚೆೆಯೇ ರಸ್ತೆ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಪ್ರವಾಸಿಗರ ಮುಂದೆ ಕಾಮಗಾರಿ ನಡೆಸಬೇಕಾಗುತ್ತದೆ. ಇದರಿಂದ ಅವರು ಜಿಲ್ಲಾಡಳಿತವನ್ನು ದೂರುವಂತಾಗುತ್ತದೆ. ಸರ್ಕಾರ ಮುಂದಾದರೂ ಈ ವ್ಯವಸ್ಥೆಯನ್ನು ಬದಲಿಸಬೇಕಿದೆ.
-ವೆಂಕಟಪ್ಪ, ಪ್ರಥಮ ದರ್ಜೆ ಗುತ್ತಿಗೆದಾರರು.

ಮಳೆ ಬೀಳುತ್ತಿರುವ ಸಂದರ್ಭದಲ್ಲಿ ಯಾವುದೇ ಕಾಮಗಾರಿ ನಡೆಸಿದರೂ ಪ್ರೋಂಜನವಾಗುವುದಿಲ್ಲ. ಇದರಿಂದ ಗುತ್ತಿಗೆದಾರರಿಗೆ ಅನುಕೂಲವಾಗುತ್ತದೆ. ತಡವಾದರೂ ಗುಣಮಟ್ಟದ ಕಾಮಗಾರಿ ನಡೆಸಬೇಕು. ದಸರಾ ಸಂದರ್ಭದಲ್ಲಿ ಮಾತ್ರ ಕಾಮಗಾರಿ ನಡೆಸಬೇಕು ಎಂಬ ತೀರ್ಮಾನವನ್ನು ಸರ್ಕಾರ ನಿಲ್ಲಿಸಬೇಕು. ಗುಂಡಿ ಕಂಡ ತಕ್ಷಣ ಮುಚ್ಚುವ ಕೆಲಸವಾದಲ್ಲಿ ಗುಂಡಿ ವಿಸ್ತಾರವಾಗುವುದೂ ತಪ್ಪುತ್ತದೆ. ಹಣವೂ ಉಳಿತಾಯವಾಗುತ್ತದೆ.
-ನಟರಾಜ್, ಆಲನಹಳ್ಳಿ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

6 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

9 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago