ಮೈಸೂರು: ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿಯವರ ಮೂಗಿನಡಿಯಲ್ಲೇ ದೊಡ್ಡ ಭ್ರಷ್ಟಾಚಾರ ನಡೆಯುತ್ತಿರುವ ಕಾರಣ ಹಣಕಾಸು ಖಾತೆಗೆ ಪ್ರತ್ಯೇಕ ಸಚಿವರನ್ನು ನೇಮಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯವರು ವಿನಿಯೋಗದ ಪವರ್ ಇಟ್ಟುಕೊಂಡರೂ ಸಂಪನ್ಮೂಲ ಕ್ರೋಢೀಕರಣಕ್ಕೆ ನಿಗಾ ಇಡಲು ಬೇರೆಯವರಿಗೆ ವಹಿಸಬೇಕಾಗಿದೆ. ಹಣಕಾಸು ಇಲಾಖೆ ಮೂಲಕ ೧.೨೦ ಲಕ್ಷ ಕೋಟಿ ರೂ. ಆದಾಯ ಸಂಗ್ರಹವಾಗಲಿದೆ. ಆದರೆ, ಸಂಪನ್ಮೂಲ ಸಂಗ್ರಹಿಸುವ ಇಲಾಖೆಯಲ್ಲೇ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ. ಹಣಕಾಸು ಇಲಾಖೆಯ ಪ್ರಗತಿ ಪರಿಶೀಲನೆ ಮಾಡಲು ಸಾಧ್ಯವಾಗದಿರುವುದರಿಂದ ಆದಾಯ ಸೋರಿಕೆಗೆ ಕಾರಣವಾಗಿದೆ. ಮುಖ್ಯಮಂತ್ರಿಯವರ ಅಧೀನದಲ್ಲಿ ಏಳೆಂಟು ಇಲಾಖೆಗಳಿವೆ. ಇವುಗಳನ್ನು ನಿರ್ವಹಿಸಲು ಸಾಧ್ಯವಾಗದೆ ಸತ್ತು ಹೋಗಿವೆ. ಹಾಗಾಗಿ, ಈ ಇಲಾಖೆಗಳಿಗೆ ಪ್ರತ್ಯೇಕ ಸಚಿವರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಮಹಾತ್ಮ ಗಾಂಧೀಜಿ ಉಪ್ಪಿನ ಮೇಲೆ ತೆರಿಗೆ ವಿಧಿಸಬೇಡಿ ಎಂದಿದ್ದರು. ಆದರೆ, ಈಗ ಉಪ್ಪಿಗೂ ಜಿಎಸ್‌ಟಿ ವಿಧಿಸಲಾಗುತ್ತಿದೆ. ತಂಬಾಕು ಉತ್ಪನ್ನಗಳ ಮೇಲೆ ಶೇ.೨೮ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ೧೦೦ ಕೋಟಿ ರೂ.ಗೆ ೭೦ ಕೋಟಿ ರೂ. ಜಿಎಸ್‌ಟಿ ಆಗುತ್ತಿರುವ ಕಾರಣ ಕಳ್ಳದಾರಿಯಲ್ಲಿ ಹೋಗುತ್ತಿದೆ. ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ನಿಷೇಧ ಹೇರಿರುವ ಕಾರಣ ಕರ್ನಾಟಕದಲ್ಲಿ ಭಾರೀ ಬೇಡಿಕೆಯಾಗಿದೆ. ಹಾಗಾಗಿ, ಈ ಕಳ್ಳ ದಾರಿಯಲ್ಲಿ ಸಾಗಿಸಲು ಅಧಿಕಾರಿಗಳೇ ದಾರಿ ತೋರಿಸುತ್ತಿದ್ದಾರೆ. ಆದಾಯ ಸಂಗ್ರಹವಾಗುವ ವಾಣಿಜ್ಯ ತೆರಿಗೆ ಇಲಾಖೆಯಲ್ಲೇ ಭ್ರಷ್ಟಾಚಾರ ನಡೆಯುತ್ತಿರುವುದು ಆತಂಕದ ವಿಚಾರವಾಗಿದೆ ಎಂದು ತಿಳಿಸಿದರು.
ಪ್ರಾಥಮಿಕ, ಕಾಲೇಜು ಶಿಕ್ಷಣ ಇಲಾಖೆ ಹರಣ: ಪ್ರಾಥಮಿಕ ಮತ್ತು ಕಾಲೇಜು ಶಿಕ್ಷಣವನ್ನು ಹರಣ ಮಾಡಲಾಗುತ್ತಿದೆ. ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ತಂದಿದ್ದಾಗ ಇಡೀ ಅಧಿಕಾರಿಗಳು ಒಂದು ಊರಿನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಈಗ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಕೇಸರಿಮಯ ಮಾಡಲು ಶಾಲಾ ಕೊಠಡಿಗಳಿಗೆ ಬಣ್ಣ ಬಳಿಯಲಾಗುತ್ತಿದೆ. ಪಕ್ಷದ ತತ್ವ, ಸಿದ್ಧಾಂತವನ್ನು ಮಕ್ಕಳ ಮನಸ್ಸಿನ ಮೇಲೆ ಹೇರುವಂತಹ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ವಿವೇಕ, ವಿವೇಚನೆ ಮತ್ತು ದೂರದೃಷ್ಟಿತ್ವದಿಂದ ಕೆಲಸ ಮಾಡುವ ಬದಲಿಗೆ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಲಾಗುತ್ತಿದೆ. ವಿವಿಗಳನ್ನು ವಿಭಜನೆ ಮಾಡಿ ಮತ್ತೆ ಒಂಬತ್ತು ವಿವಿಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಒಬ್ಬರ ಪಿಎಚ್.ಡಿ. ಪದವಿ ಪ್ರಮಾಣ ಪತ್ರ ನಕಲು ಎಂದು ತಿರಸ್ಕರಿಸಿದ್ದರೂ ಕುಲಪತಿಯನ್ನಾಗಿ ನೇಮಿಸಲಾಗಿದೆ. ೫ ಕೋಟಿ ರೂ. ಕೊಟ್ಟವರಿಗೆ ಕುಲಪತಿಯನ್ನಾಗಿ ನೇಮಿಸಲಾಗುತ್ತಿದೆ. ಐದಾರು ಕೋಟಿ ರೂ. ಕೊಟ್ಟು ಕುಲಪತಿಯಾಗಿ ಬರುವವರು ಜನರನ್ನು ತುಂಬಿ ಹಣ ವಸೂಲಿ ಮಾಡುವಂತಾಗಿದೆ. ವಿವಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕ ಅಧಿಕಾರವನ್ನು ಕುಲಪತಿಗಳಿಂದ ವಾಪಸ್ ಪಡೆದು ಪ್ರತ್ಯೇಕ ಮಂಡಳಿ ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಮುಂಬರುವ ಚುನಾವಣೆಯಲ್ಲಿ ನನ್ನ ಪುತ್ರ ಸ್ಪರ್ಧಿಸುವುದಿಲ್ಲ. ಕೆಲ ಅಪ್ಪ-ಮಕ್ಕಳು ಚುನಾವಣೆ ಕಣಕ್ಕೆ ಧುಮುಕಲು ಸಿದ್ಧತೆ ನಡೆಸಿದ್ದಾರೆ. ಅವರಲ್ಲಿ ಶಕ್ತಿ ಇದೆ. ಚುನಾವಣೆಗೆ ನಿಲ್ಲಲು ನಮ್ಮ ಬಳಿ ಹಣವಿಲ್ಲ. ದೇವರಾಜ ಅರಸು ಕಾಲದಿಂದ ಸ್ನೇಹಿತರು, ಅಭಿಮಾನಿಗಳು ಕೊಡುವ ಹಣದಿಂದ ಆಯ್ಕೆಯಾಗಿ ಬರುತ್ತಿದ್ದೆವು. ಈಗ ಐದು, ಆರು ಕೋಟಿ ರೂ. ಹಣ ಎಲ್ಲಿಂದ ತರುವುದು. -ಎ.ಎಚ್.ವಿಶ್ವನಾಥ್
ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಅವರು ಮೈಸೂರಿನಲ್ಲಿರುವ ತಮ್ಮ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದರು.
ಬಳ್ಳಾರಿ : ಬಿಜೆಪಿ ನಾಯಕ ಜನಾರ್ದನ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ…
ಬಳ್ಳಾರಿ : ಜನಾರ್ಧನ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು,…
ಚಾಮರಾಜನಗರ : ತಾಲ್ಲೂಕಿನ ನಂಜೇದೇವಪುರ ಬಳಿ ನಾಲ್ಕು ಮರಿಗಳ ಜೊತೆ ತಾಯಿ ಹುಲಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವುಗಳ ಸೆರೆಗಾಗಿ ಕೂಂಬಿಂಗ್…
ಮೈಸೂರು : ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಗುರುವಾರ ಅಧಿಕಾರ ಸ್ವೀಕಾರ ಮಾಡಿದರು. ಮಂಡ್ಯ ಜಿಲ್ಲೆಯ ಎಸ್‌ಪಿ…
ಗುಂಡ್ಲುಪೇಟೆ: ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿ ಏಳು ಬಾರಿ ಶಾಸಕಿ ,ಸಚಿವೆಯಾಗಿ ಮೊದಲ ಮಹಿಳಾ ಸ್ಪೀಕರ್ ಆದಂತಹ ಗಟ್ಟಿಗಿತ್ತಿ ಕೆ.ಎಸ್.ನಾಗರತ್ನಮ್ಮ ಅವರ…
ಗುಂಡ್ಲುಪೇಟೆ: ಪಟ್ಟಣದ ಕೂತನೂರು ಗುಡ್ಡ ಹಾಗೂ ತೆರಕಣಾಂಬಿ ಭಾಗದಿಂದ ಅಧಿಕ ಭಾರಹೊತ್ತು ಸಾಗುವ ಟಿಪ್ಪರ್ ಗಳ ಸಂಚಾರ ನಡೆಸುತಿದ್ದರು ಆರ್…