ಮೈಸೂರು: ಜಿಲ್ಲೆಯಲ್ಲಿ ಚಿರತೆಗಳ ಉಪಟಳ ಮುಂದುವರಿದಿದ್ದು ತಿ.ನರಸೀಪುರ ತಾಲ್ಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದಲ್ಲಿ ಚಿರತೆ ದಾಳಿಗೆ ಯುವತಿಯೊಬ್ಬಳು ಬಲಿಯಾಗಿದ್ದಾಳೆ.
20 ವರ್ಷದ ಮೇಘನ ಚಿರತೆ ದಾಳಿಗೊಳಗಾದ ಯುವತಿ. ತಿ. ನರಸೀಪುರ ಸರಕಾರಿ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಮೇಘನಾ ಇಳಿಸಂಜೆಯ ವೇಳೆಗೆ ಮನೆ ಹಿಂಬದಿ ಇದ್ದ ಶೌಚಾಲಯಕ್ಕೆ ಹೋದಾಗ ಚಿರತೆ ದಾಳಿ ಮಾಡಿದೆ.
ಮೇಘನಾಳ ಮೇಲೆ ಹಠಾತ್ ದಾಳಿ ನಡೆಸಿದ ಚಿರತೆ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಕಚ್ಚಿದೆ. ಆಕೆ ಚೀರಿಕೊಂಡಾಗ ಮನೆಯವರು ರಕ್ಷಣೆಗೆ ಧಾವಿಸಿದ್ದು. ಕೂಗಾಟ ಕೇಳಿ ಚಿರತೆ ಪರಾರಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಮೇಘನಾಳನ್ನು ಪಟ್ಟಣದ ಸರಕಾರಿ ಆಸ್ಪತ್ರೆಗೆ ತರುವಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಗ್ರಾಮಸ್ಥರ ಧರಣಿ
ತಾಲ್ಲೂಕಿನಲ್ಲಿ ಚಿರತೆಗಳ ಹಾವಳಿ ಮಿತಿ ಮೀರಿದ್ದು ಈ ಬಗ್ಗೆ ಜನರು ಪ್ರತಿಭಟನೆಗಿಳಿದಿರುವಾಗಲೇ ಈ ಘಟನೆ ಸಂಭವಿಸಿದೆ. ಮೇಘನಾಳ ಶವವನ್ನು ಪಟ್ಟಣದ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು ಉಸ್ತುವಾರಿ ಸಚಿವರು ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಭೇಟಿಗೆ ಆಗ್ರಹಿಸಿ ಗ್ರಾಮಸ್ಥರು ಧರಣಿ ಕುಳಿತಿದ್ದಾರೆ. ಸಂತ್ರಸ್ತರ ಜತೆ ಶಾಸಕ ಟಿ. ಅಶ್ವಿನ್ ಕುಮಾರ್ ಕೂಡ ಧರಣಿ ಕುಳಿತಿದ್ದಾರೆ.
ಎರಡನೇ ಬಲಿ
ಅಕ್ಟೋಬರ್ 31ರಂದು ತಾಲ್ಲೂಕಿನ ಮದ್ಗಾರ್ ಲಿಂಗಯ್ಯನ ಹುಂಡಿ ಗ್ರಾಮದಲ್ಲಿ ಮೈಸೂರಿನ ಮಹಾರಾಜ ಕಾಲೇಜಿನ ಬಿಕಾಂ ವಿದ್ಯಾರ್ಥಿ ಚಿರತೆ ದಾಳಿಗೆ ಬಲಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಸ್ನೇಹಿತರ ಜತೆ ಕಾರ್ತಿಕ ಜಾತ್ರೆಗೆಂದು ಹೊರಟ ಮಂಜುನಾಥ್ (19) ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿತ್ತು. ಈ ಘಟನೆಯ ಬಳಿಕ ಅರಣ್ಯ ಇಲಾಖೆ ಚಿರತೆ ಹಾವಳಿ ಹೆಚ್ಚಿರುವ ಗ್ರಾಮಗಳಲ್ಲಿ ಬೋನು ಇರಿಸಿ ಚಿರತೆಗಳನ್ನು ಸೆರೆ ಹಿಡಿಯುವ ಪ್ರಯತ್ನ ನಡೆಸಿತ್ತು. ಆದರೆ ಚಿರತೆಗಳು ಮತ್ತೆ ಮತ್ತೆ ಕಾಣಿಸಿಕೊಂಡರೂ ಬಲೆಗೆ ಬಿದ್ದಿರಲಿಲ್ಲ.
20ಕ್ಕೂ ಹೆಚ್ಚು ಚಿರತೆ ಸೆರೆ
ಮೈಸೂರು ಭಾಗದಲ್ಲಿ ಕಳೆದ ಆರು ತಿಂಗಳಲ್ಲಿ 20 ಕ್ಕೂ ಹೆಚ್ಚು ಚಿರತೆಗಳು ಸೆರೆಯಾಗಿರುವುದು ಚಿರತೆಗಳ ಹಾವಳಿ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.
ಹದಿನೇಳನೇ ಬಾರಿಗೆ ರಾಜ್ಯದ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿರುವ ವಿತ್ತ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅದರ…
ಪಕ್ಷಕ್ಕೆ ಬಹುಮತ ಬಂದರೆ ಸಿಎಂ, ಬರದಿದ್ದರೆ ಪ್ರತಿಪಕ್ಷ ನಾಯಕರಾಗುವ ಪ್ರಭಾವಿ ವ್ಯಕ್ತಿ ವೇಗವಾಗಿ ಸಾಗುತ್ತಿದ್ದ ಜೀಪು ಸಂಗನಕಲ್ಲು ಕ್ರಾಸ್ ಬಳಿ…
ನವೀನ್ ಡಿಸೋಜ ೨೦೨೨ರಲ್ಲಿ ಕೆ.ನಿಡುಗಣೆ ಗ್ರಾಮದಲ್ಲಿ ನಿರ್ಮಾಣವಾದ ಗೋಶಾಲೆ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಮತ್ತಷ್ಟು ಜಾನವಾರುಗಳಿಗೆ ಆಶ್ರಯ ಒದಗಿಸಲು ಚಿಂತನೆ …
ಮಾಗಳಿ ರಾಮೇಗೌಡ ಬೆಟ್ಟದಪುರ: ಕೇವಲ ೬೦ ದಿನಗಳಲ್ಲಿ ಉತ್ಪಲ ಕಂಪೆನಿಯ ತೃಪ್ತಿ ತಳಿಯ ಕಲ್ಲಂಗಡಿ ಹಣ್ಣನ್ನು ಬೆಳೆದು ಒಂದೂವರೆ ಲಕ್ಷ…
ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು: ವಯಸ್ಸಾದವರು ಈ ಶಾಲೆಯನ್ನು ನೋಡಿದರೆ, ತಮ್ಮ ಬಾಲ್ಯದ ನೆನಪುಗಳಿಗೆ ರೆಕ್ಕೆಪುಕ್ಕ…
ಕೆ.ಬಿ.ರಮೇಶನಾಯಕ ಯಾತ್ರಾಸ್ಥಳ ಚಾಮುಂಡಿಬೆಟ್ಟ, ಅಲ್ಪಸಂಖ್ಯಾತರು ಹೆಚ್ಚಿರುವ ಬಡೇಮಕಾನ್‌ನಲ್ಲಿ ಶೀಘ್ರ ಆರಂಭ ಮೈಸೂರು: ನಗರ ಪ್ರದೇಶದ ಜನರಿಗೆ ಸ್ಥಳೀಯವಾಗಿ ಚಿಕಿತ್ಸೆ ದೊರೆಯುವಂತೆ…