ಬಿಸಲವಾಡಿ, ಮುಕ್ಕಡಹಳ್ಳಿಯಲ್ಲಿ ಗೋವುಗಳು-ಕರು ಬಲಿ
ರಾಜೇಶ್ ಬೆಂಡರವಾಡಿ
ಚಾಮರಾಜನಗರ: ಕಾಡು ಪ್ರಾಣಿಗಳಾದ ಹುಲಿ, ಚಿರತೆ ದೃಶ್ಯ ನೋಡಿದರೆ ಭಯ. ಅವು ಗ್ರಾಮದ ಹತ್ತಿರ ಬಂದು ಗೋವು, ಕರುಗಳನ್ನು ಕೊಂದು ತಿಂದುಹೋದರೆ! ಹೌದು, ತಾಲ್ಲೂಕಿನ ಬಿಸಲವಾಡಿ ಬಳಿ ಹುಲಿ ಉಪಟಳ ಹಾಗೂ ಮುಕ್ಕಡಹಳ್ಳಿ ಗ್ರಾಮದ ಹತ್ತಿರ ಚಿರತೆ ಹಾವಳಿ ಎಲ್ಲರನ್ನು ಭಯಭೀತರನ್ನಾಗಿಸಿದೆ. ಈ ಗ್ರಾಮಗಳು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಟ್ಟಿವೆ. ಬಿಸಲವಾಡಿ ಶಿವಣ್ಣಶೆಟ್ಟಿ ಅವರ ೨ ಹಸುಗಳು ಗುರುವಾರ(ನ.೩) ಹುಲಿಬಾಯಿಗೆ ತುತ್ತಾಗಿವೆ.
ಇದು ಹುಲಿರಾಯನ ಕತೆಯಾದರೆ ಇನ್ನು ಚಿರತೆ ಮುಕ್ಕಡಹಳ್ಳಿ-ಹರವೆ ನಡುವಿನ ಜಮೀನೊಂದರಲ್ಲಿ ಸುಮಾರು ಒಂದೂವರೆ ವರ್ಷದ ಕರುವನ್ನು ಕೊಂದು ತಿಂದು ಅದರ ಕಳೇಬರವನ್ನು ಬಿಟ್ಟುಹೋಗಿದೆ. ಗ್ರಾಮದ ಶಿವಣ್ಣ ಅವರು ಜಮೀನಿಂದ ಮನೆಗೆ ಹಸುಗಳೊಂದಿಗೆ ಮುಂದೆ ಬಂದಿದ್ದು ಹಿಂದೆ ಕರು ಬರುತ್ತಿತ್ತು. ಈ ವೇಳೆ ಚಿರತೆ ದಾಳಿ ಮಾಡಿದೆ. ಕರು ಕಾಣದಿದ್ದಾಗ ವಾಪಸ್ ಜಮೀನಿಗೆ ಬಂದು ನೋಡಿದಾಗ ಅದು ಇರಲಿಲ್ಲ. ಮಾರನೇ ದಿನ ಅದರ ಕಳೇಬರ ಬಿಡಿಬಿಡಿಯಾಗಿ ಬಿದ್ದಿರುವುದು ಗೋಚರಿಸಿದೆ.
ಈ ಘಟನೆ ನಡೆದು ೫ ದಿನಗಳಾಗಿವೆ. ಕಾಕತಾಳೀಯವೋ ಅಥವಾ ಅಲ್ಲಿಯೇ ಚಿರತಗಳು ಬೀಡುಬಿಟ್ಟಿವೆಯೋ ಗೊತ್ತಿಲ್ಲ. ಶಿವಣ್ಣ ಅವರಿಗೆ ಸೇರಿದ ಕರು ಹಾಗೂ ಕುರಿಯನ್ನು ಕಳೆದ ವರ್ಷವೂ ಇದೇ ರೀತಿ ಚಿರತೆ ಬೇಟೆಯಾಡಿತ್ತು.
ಹರವೆ ಮತ್ತು ಮುಕ್ಕಡಹಳ್ಳಿ ಗ್ರಾಮಕ್ಕೆ ನೇರ ಸಂಪರ್ಕ ಕಲ್ಪಿಸುವ ಕಾಲು ದಾರಿಯಲ್ಲಿರುವ ಜಮೀನೊಂದರಲ್ಲಿ ಚಿರತೆ ದಾಳಿ ಮಾಡಿ ಕರುವನ್ನು ಕೊಂದಿರುವ ವಿಚಾರವನ್ನು ಪ್ರಗತಿಪರ ಕೃಷಿಕ ಮಧುಸೂದನ್ ಅವರು ಅರಣ್ಯ ಇಲಾಖೆಯ ಆರ್‌ಎಫ್‌ಒ ಗಮನಕ್ಕೆ ತರಲಾಗಿ ಆ ಕೂಡಲೇ ಬೋನನ್ನು ತಂದಿರಿಸಲಾಗಿದೆ. ಆದರೆ ಬೋನಿಗೆ ಚಿರತೆ ಬಿದ್ದಿಲ್ಲ. ಹೀಗಾಗಿ ಕೃಷಿಕರು, ದನಗಾಹಿಗಳು ಮತ್ತು ಕಾರ್ಮಿಕರು ಜೀವಭಯದಿಂದ ತಿರುಗಾಡುವಂತಾಗಿದೆ. ಹುಲಿ ಹಸುಗಳನ್ನು ಕೊಂದಿರುವ ಬಿಸಲವಾಡಿ ಗ್ರಾಮ ತಮಿಳುನಾಡಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿದೆ. ಹತ್ತಿರದಲ್ಲೇ ಹೊನ್ನಹಳ್ಳಿ ಗುಡ್ಡವೂ ಇದೆ. ಇಲ್ಲಿ ಚಿರತೆಗಳ ಕಾಟವೂ ಜಾಸ್ತಿಯಾಗಿದೆ.. ಹೀಗಾಗಿ ಈ ಭಾಗದಲ್ಲಿ ಹಸು, ಮೇಕೆ, ಕುರಿ, ನಾಯಿಗಳು ಬಲಿಯಾಗುತ್ತಲೇ ಇವೆ. ಕಳೆದ 4 ತಿಂಗಳಲ್ಲಿ 8 ಸಾಕು ಪ್ರಾಣಿಗಳು ಬಲಿಯಾಗಿವೆ ಎಂದು ಚಾಮರಾಜನಗರ ಪ್ರಾದೇಶಿಕ ಅರಣ್ಯವಲಯದ(ಕೇಂದ್ರಸ್ಥಾನ) ಮೂಲಗಳು ತಿಳಿಸಿವೆ.
–ಮುಕ್ಕಡಹಳ್ಳಿ ಮಧುಸೂದನ್, ಪ್ರಗತಿಪರ ರೈತ.
ಹಾಸನ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ತವರು ಜಿಲ್ಲೆಗೆ ಆಗಮಿಸಿದ್ದು, ಮನೆ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.…
ಮಂಡ್ಯ: ಮಧು ಜಿ.ಮಾದೇಗೌಡ ಅವರ ಅಭಿಮಾನಿಗಳ ಬಳಗದ ವತಿಯಿಂದ ವಿಧಾನ ಪರಿಷತ್ ಸದಸ್ಯ ಹಾಗೂ ಭಾರತಿ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ…
ಮೈಸೂರು: ಮಕ್ಕಳು ಕೇವಲ ಪಠ್ಯ ಕ್ರಮಕ್ಕೆ ಮಾತ್ರ ಸೀಮಿತವಾಗದೆ, ತಮ್ಮಲ್ಲಿರುವಂತಹ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ…
ಬೆಂಗಳೂರು: ಕೆಪಿಎಸ್‌ಸಿ ವತಿಯಿಂದ ಇದೇ ಡಿಸೆಂಬರ್ 29ಕ್ಕೆ ಕೆಎಎಸ್ ಮರು ಪರೀಕ್ಷೆ ನಡೆಯುತ್ತಿದ್ದು, ಮತ್ತೆ ಈ ಪರೀಕ್ಷೆಯಲ್ಲಿ ಮತ್ತೆ ಬೇಜವಾಬ್ದಾರಿತನ…
ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…
ಹುಬ್ಬಳ್ಳಿ : ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…