ಜಿಲ್ಲೆಗಳು

ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ತಿ.ನರಸೀಪುರ : ತಾಲ್ಲೂಕಿನ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ೨೦೨೨-೨೩ ನೇ ಸಾಲಿಗೆ ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ಸಾಧನೆಗೈದ ಕೃಷಿಕರಿಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೃಷಿ, ಹೈನುಗಾರಿಕೆ, ಮೀನುಗಾರಿಕೆ ತೋಟಗಾರಿಕೆ, ರೇಷ್ಮೆ, ಕೃಷಿ ಅರಣ್ಯ ಈ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ರೈತರು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆ ಸಮಿತಿಯ ತೀರ್ಮಾನದಂತೆ ಜಿಲ್ಲಾ ಮಟ್ಟದಲ್ಲಿ ಪ್ರತಿ ಕ್ಷೇತ್ರದಲ್ಲಿ ಇಬ್ಬರಂತೆ ಒಟ್ಟು ಐದು ಕ್ಷೇತ್ರಗಳಿಂದ ೧೦ ಜನರಿಗೆ ತಲಾ ೨೫ ಸಾವಿರ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತಿ ಕ್ಷೇತ್ರದಲ್ಲಿ ಒಬ್ಬರಂತೆ ಐದು ಮಂದಿಗೆ ತಲಾ ೧೦ ಸಾವಿರ ರೂ. ಬಹುಮಾನ, ಶ್ರೇಷ್ಠ ಕೃಷಿಕ ಗೌರವಗಳೊಂದಿಗೆ ನೀಡಲಾಗುತ್ತದೆ.
ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ರೈತರು, ರೈತ ಮಹಿಳೆಯರು ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ ಡಿ. ೩೦ರೊಳಗಾಗಿ ಮತ್ತೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಇಲಾಖೆಯ ಪ್ರಕಟಣೆಉಲ್ಲಿ ಕೋರಲಾಗಿದೆ.

andolanait

Recent Posts

ಗಂಗವಾಡಿ ಬಳಿ ಚಿರತೆ ದಾಳಿ : ಮೂರು ಕರು ಸಾವು

ಚಾಮರಾಜನಗರ : ತಾಲ್ಲೂಕಿನ ಗಂಗವಾಡಿ ಗ್ರಾಮದ ಬಳಿ ಶನಿವಾರ ರಾತ್ರಿ ಜಮೀನಿನಲ್ಲಿ ಕಟ್ಟಿ ಹಾಕಿದ್ದ ಕರುಗಳ ಮೇಲೆ ಚಿರತೆ ದಾಳಿ…

31 mins ago

ರೈಲು ಪ್ರಯಾಣ ದರ ಹೆಚ್ಚಳ : ಫೆ.1ರಿಂದ ಪರಿಷ್ಕೃತ ದರ ಜಾರಿ

ಹೊಸದಿಲ್ಲಿ : ಭಾರತೀಯ ರೈಲ್ವೆ ಇಲಾಖೆಯು ಡಿಸೆಂಬರ್ 26ರಿಂದ ಅನ್ವಯವಾಗುವಂತೆ ಹೊಸ ರೈಲು ಟಿಕೆಟ್ ದರವನ್ನು ಪರಿಷ್ಕರಣೆ ಮಾಡಿದೆ. ಪ್ರಯಾಣಿಕರಿಗೆ…

35 mins ago

‌ಗುಂಡ್ಲುಪೇಟೆ | ಬಾಳೆ ತೋಟದಲ್ಲಿ ಹುಲಿ ಪ್ರತ್ಯಕ್ಷ

ಗುಂಡ್ಲುಪೇಟೆ : ತಾಲ್ಲೂಕಿನ ಮುಕ್ತಿ ಕಾಲೋನಿ ಗ್ರಾಮದ ಜಮೀನೊಂದರ ಬಾಳೆ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು ಜನರು ಕಿರುಚಾಡಿ, ಪಟಾಕಿ ಸಿಡಿಸಿದರೂ…

41 mins ago

ವನ್ಯಜೀವಿ ಛಾಯಾಗ್ರಹಕರಾಗುವ ಮೊದಲು ಕಾಡಿನ ಭಾಷೆ ಅರಿಯಿರಿ : ಕೃಪಾಕರ್‌ ಸೇನಾನಿ

ಮೈಸೂರು : ವನ್ಯಜೀವಿ ಛಾಯಾಗ್ರಹಣ ಹಾಗೂ ಸಾಕ್ಷ್ಯಚಿತ್ರ ತಯಾರಕರಾಗುವ ಮೊದಲು ಕಾಡಿನ ಭಾಷೆ ಅರಿತುಕೊಂಡಿರಬೇಕು ಎಂದು ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ್…

43 mins ago

ಶಾಲಾ ಮಕ್ಕಳಿಂದ ಹೆರಿಟೇಜ್‌ ಫ್ಲ್ಯಾಶ್‌ಮೊಬ್‌ ಪ್ರದರ್ಶನ : ಮನಗೆದ್ದ ಹೆರಿಟೇಜ್ ಟ್ರೆಷರ್ ಹಂಟ್

ಮೈಸೂರು : ಮುಂಜಾನೆಯ ಚುಮುಚುಮು ಚಳಿಗೆ, ಸೂರ್ಯ ಇನ್ನೂ ಮಂಜಿನ ನಡುವೆ ಕಣ್ಣು ಬಿಡುವ ಮುನ್ನವೇ ಅರಮನೆಯ ಕೋಟೆ ಆಂಜನೇಯ…

1 hour ago

ರಾಜ್ಯದಲ್ಲಿ ಇಬ್ಬರು ತಲೆಕೆಟ್ಟ ಮಂತ್ರಿಗಳಿದ್ದಾರೆ: ಶಾಸಕ ಜನಾರ್ಧನ ರೆಡ್ಡಿ

ಕೊಪ್ಪಳ: ಯಾವುದೇ ಕ್ಷಣದಲ್ಲಿ ರಾಜ್ಯದಲ್ಲಿ ಅಧಿಕೃ ಹಸ್ತಾಂತರವಾಗಬಹುದು ಎಂದು ಶಾಸಕ ಜನಾರ್ಧನ ರೆಡ್ಡಿ ಭವಿಷ್ಯ ನುಡಿದಿದ್ದಾರೆ. ಈ ಕುರಿತು ಕೊಪ್ಪಳದಲ್ಲಿ…

2 hours ago