ಜಿಲ್ಲೆಗಳು

ಮತ್ತೆ ಸುವರ್ಣಾವತಿ ಹೊಳೆ ಪಾತ್ರದಲ್ಲಿ ನೆರೆ ಭೀತಿ

ಚಾಮರಾಜನಗರ: ಜಿಲ್ಲೆಯಲ್ಲಿ ಸತತ ಎರಡನೇ ದಿನಶುಕ್ರವಾರರಾತ್ರಿಯೂ ಧಾರಕಾರ ಮಳೆ ಮುಂದುವರಿದಿದ್ದು ಚಿಕ್ಕಹೊಳೆ -ಸುವರ್ಣಾವತಿ ಜಲಾಶಯಗಳ ನದಿ ಪಾತ್ರದಲ್ಲಿ ನೆರೆ ಭೀತಿ ಉಂಟಾಗಿದೆಯಲ್ಲದೇ ವಾಸದಮನೆ ಹಾಗೂ ವಿದ್ಯುತ್ ಕಂಬಗಳು ನೆಲಕ್ಕೆ ಒರಗಿವೆ.
ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಿಂದ ೧೪೦೦ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಅಲ್ಲದೇ, ಬಿ.ರಂ.ಬೆಟ್ಟ ಕೆರೆ, ಮರಗದಕೆರೆ, ಮಾಲೆಗೆರೆಕೆರೆ ಕೋಡಿ ಬಿದ್ದು ಹರಿಯುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕಿನ ಎರಡೂ ಜಲಾಶಯಗಳ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ನೆರೆ ಭೀತಿ ಎದುರಾಗಿದೆ.
ನದಿ ಪಾತ್ರದ ಸುತ್ತಮುತ್ತ ವಾಸಿಸುವ ಜನರು ಮತ್ತು ಕೃಷಿಕರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಯಳಂದೂರು ತಹಶೀಲ್ದಾರ್ ಕೆ ಬಿ.ಆನಂದಪ್ಪ ನಾಯಕ ಮನವಿ ಮಾಡಿದ್ದಾರೆ.
ಯಳಂದೂರಿನ ಕೆಸ್ತೂರು ಕೆರೆ ಮತ್ತೆ ಕೋಡಿಬಿದ್ದು ಮನೆಗಳತ್ತ ನೀರು ನುಗ್ಗಿದ್ದು ಯಳಂದೂರು ತಾ.ಮದ್ದೂರು, ಗಣಗನೂರು, ಅಗರ, ಮಾಂಬಳ್ಳಿ ಗ್ರಾಮಗಳತ್ತ ನೆರೆ ಆವರಿಸಿದೆ.
ಯಳಂದೂರು ತಾಲ್ಲೂಕಿನಲ್ಲಿ ೪೨, ಹನೂರು ತಾ.೬ ಮತ್ತು ಚಾ.ನಗರ ತಾ.ನಲ್ಲಿ ೧ ಮನೆ ಭಾಗಶಃ ಹಾನಿ ಗೊಳಗಾಗಿರುವುದಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಶನಿವಾರ ವರದಿ ಸಲ್ಲಿಕೆಯಾಗಿದೆ.ಶುಕ್ರವಾರ ಯಳಂದೂರಿನಲ್ಲಿ ೧೩ ಮತ್ತು ಚಾ.ನಗರ ತಾಲ್ಲೂಕಿನಲ್ಲಿ
೨ಮನೆ ಭಾಗಶಃ ಕುಸಿದಿರುವ ವರದಿಯಾಗಿದೆ.
ಅಕ್ಟೋಬರ್ ನಲ್ಲಿ ಈ ತನಕ ಮಳೆಯಿಂದ ಜಿಲ್ಲೆಯಲ್ಲಿ ೯೩ಮನೆ ಮತ್ತು ೭ವಿದ್ಯುತ್ ಪೋಲುಗಳಿಗೆ ಹಾನಿ ಸಂಭವಿಸಿರುವುದಾಗಿ ಆಯಾ ತಾಲ್ಲೂಕು ಕಚೇರಿಗಳಿಂದ ಪ್ರಾಧಿಕಾರಕ್ಕೆ ವರದಿ ಸಲ್ಲಿಕೆಯಾಗಿದೆ.
ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಜಿಲ್ಲೆಯಲ್ಲಿ ಮಳೆ ಪ್ರಮಾಣ ಸ್ವಲ್ಪ ತಗ್ಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ. ಶನಿವಾರ ಸಂಜೆ ೫ಘಂಟೆ ವರೆಗೂ ಮಳೆ ಧರೆಗೆ ಇಳಿದಿರಲಿಲ್ಲವಾದರೂ ಮೋಡ ಕವಿದ ದಟ್ಟ ವಾತಾವರಣ ಆವರಿಸಿತ್ತು.
ಚಿಕ್ಕಮೋಳೆ, ದೊಡ್ಡ ಮೋಳೆ, ಬ್ಯಾಡಮೂಡ್ಲು ಭಾಗದ ನೂರಾರು ಎಕರೆ ಜಲಾವೃತವಾಗಿ ಬೆಳೆಹಾನಿ ಯಾಗಿರುವುದಾಗಿ ತಿಳಿದು ಬಂದಿದೆ.

andolanait

Recent Posts

ರೈತರ ಹಿತರಕ್ಷಣೆಗೆ ಕೇಂದ್ರದ ಕದ ತಟ್ಟಿದ ಚಲುವರಾಯಸ್ವಾಮಿ : ತುರ್ತು ಪರಿಹಾರಕ್ಕೆ ಮನವಿ

ಬೆಂಗಳೂರು :  ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಬುಧವಾರ (ಜನವರಿ 7)  ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ…

3 hours ago

ಮೈಸೂರು | ಪಿಸಿ ಮೇಲೆ ಹಲ್ಲೆ, ಮೊಬೈಲ್‌ ದೋಚಿದ ಖದೀಮರು ; ನಾಲ್ವರ ಬಂಧನ

ಮೈಸೂರು : ಮಾದಕ ವ್ಯಸನಿಗಳಾದ ನಾಲ್ವರು ಯುವಕರ ತಂಡ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್…

3 hours ago

ಫಿಟ್‌ ಮೈಸೂರು ವಾಕ್‌ಥಾನ್‌ಗೆ ಮೈಸೂರು ಸಜ್ಜು

 ಸಾವಿರಾರು ಹೆಜ್ಜೆಗಳೊಂದಿಗೆ ಆರೋಗ್ಯದ ಸಂದೇಶ ಜ.11ರಂದು ನಡೆಯಲಿರುವ ಜಾಗೃತಿ ಅಭಿಯಾನ ಮೈಸೂರು : ಹಲವು ಮೊದಲುಗಳಿಗೆ ನಾಂದಿ ಹಾಡಿರುವ ಸಾಂಸ್ಕೃತಿಕ…

4 hours ago

ಹಿಮದಿಂದ ಆವೃತವಾದ ಕೇದರನಾಥ

ರಾಂಚಿ : ಉತ್ತರ ಭಾರತವು ತೀವ್ರ ಶೀತಗಾಳಿಗೆ ತತ್ತರಿಸಿದ್ದು, ಭಾರೀ ಹಿಮಪಾತದಿಂದ ಪಟ್ಟಣಗಳು, ದೇವಾಲಯಗಳು ಮತ್ತು ಸುತ್ತಮುತ್ತಲಿನ ಬೆಟ್ಟಗಳು ದಟ್ಟ…

4 hours ago

ಹುಲಿ ದಾಳಿಗೆ ಹಸು ಬಲಿ : ವ್ಯಾಘ್ರ ಸೆರೆಗೆ ಗ್ರಾಮಸ್ಥರ ಒತ್ತಾಯ

ಸಿದ್ದಾಪುರ : ವಿರಾಜಪೇಟೆ ತಾಲೂಕು ಮಠ ಗ್ರಾಮದಲ್ಲಿ ಬುಧವಾರ ಸಂಜೆ ಹುಲಿಯೊಂದು ಹಾಲು ಕರೆಯುವ ಹಸುವಿನ ಮೇಲೆ ದಾಳಿ ನಡೆಸಿ…

4 hours ago

ಹಂತ ಹಂತವಾಗಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ,ಟ್ರಾಮಾ ಸೆಂಟರ್ ಸ್ಥಾಪನೆ : ಸಿಎಂ ಭರವಸೆ

ಹಾವೇರಿ  : ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಕ್ಯಾನ್ಸರ್, ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ…

4 hours ago