ಅಪರಾಧ

ಗಿಲ್ಕಿ ವೆಂಕಟೇಶ್‌ ಹತ್ಯೆ ಪ್ರಕರಣ : ಡಾನ್‌ ಪಟ್ಟಕ್ಕಾಗಿ ನಡೀತಾ ಮರ್ಡರ್‌..! ಆರೋಪಿಗಳು ತಪ್ಪೊಪ್ಪಿಕೊಂಡಿದ್ದೇನು.?

ಮೈಸೂರು : ನಿನ್ನೆ(ಅ.7) ಮಧ್ಯಾಹ್ನ ವೆಂಕಟೇಶ್‌ ಆಲಿಯಾಸ್‌ ಗಿಲ್ಕಿ ವೆಂಕಟೇಶ್‌ನ ಬರ್ಬರ ಕೊಲೆಯಾಗಿತ್ತು. ಕೊಲೆಗೆ ಡಾನ್ ಪಟ್ಟಕ್ಕಾಗಿ ಶುರುವಾದ ಪೈಪೋಟಿಯೆ ಕಾರಣ ಅನ್ನೋದು ಈಗ ಸ್ಪಷ್ಟವಾಗುತ್ತಿದ್ದು, ಅಲ್ಲದೇ ಆರೋಪಿಗಳೇ ಪೊಲೀಸರಿಗೆ ಶರಣಾಗಿರೋದು ಅಚ್ಚರಿಯೂ ಆಗಿದೆ.

ನಿನ್ನೆ ಮಧ್ಯಾಹ್ನ ಆಟೋ ಮತ್ತು ದ್ವಿಚಕ್ರ ವಾಹನದಲ್ಲಿ ಬಂದ ಆರು ಜನರು ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದ ವೆಂಕಟೇಶ್‌ನನ್ನು ನಿಲ್ಲಿಸಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಘಟನೆ ಮೈಸೂರನ್ನ ಬೆಚ್ಚಿಬೀಳಿಸಿತ್ತು. ಕೊಲೆ ಮಾಡಿ ಪರಾರಿ ಆಗಿದ್ದ ಆರೋಪಿಗಳು ಇದೀಗ ತಡರಾತ್ರಿ ಪೊಲೀಸರಿಗೆ ಶರಣಾಗಿದ್ದಾರೆ. ಪೊಲೀಸರಿಗೆ ಶರಣಾದ ಆರೋಪಿಗಳು ಯಾತಕ್ಕಾಗಿ ಕೊಲೆ ಮಾಡಿದ್ದು ಎಂದು ತಪ್ಪೊಪ್ಪಿಕೊಂಡಿದ್ದು. ರೌಡಿ ಫೀಲ್ಡ್‌ನಲ್ಲಿ ಡಾನ್ ಪಟ್ಟಕ್ಕಾಗಿ ನಡೆದ ಪೈಪೋಟಿಯಿಂದಲೇ ಕೊಲೆ ಎಂಬುದು ಬಯಲಾಗಿದೆ.

ಇದನ್ನು ಓದಿ : ಮೈಸೂರು: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ

ಐದು ತಿಂಗಳ ಹಿಂದೆ ಮೈಸೂರಿನ ಕ್ಯಾತಮಾರನಹಳ್ಳಿಯ ರೌಡಿಶೀಟರ್ ಕಾರ್ತಿಕ್‌ನ ಮರ್ಡರ್ ಆಗಿತ್ತು. ಹೀಗಾಗಿ ಕಾರ್ತಿಕ್‌ಗೆ ಇದ್ದ ಡಾನ್ ಪಟ್ಟದಲ್ಲಿ ಯಾರು ಕೂರಬೇಕು ಎಂಬ ಬಗ್ಗೆ ಕಾರ್ತಿಕ್ ಗುಂಪಿನಲ್ಲೇ ಪೈಪೋಟಿ ಶುರುವಾಗಿತ್ತು. ಡಾನ್ ಪಟ್ಟಕ್ಕಾಗಿ ಕೊಲೆಯಾದ ವೆಂಕಟೇಶ್ ಹಾಗೂ ಕೊಲೆಯ ರೂವಾರಿ ಹಾಲಪ್ಪ ನಡುವೆ ಒಳ ಜಗಳ ನಡೆಯುತ್ತಿತ್ತು. ಕಾರ್ತಿಕ್ ಕೊಲೆಗೂ ಮುನ್ನ ಮನಃಸ್ತಾಪವಾಗಿ ವೆಂಕಟೇಶ್ ಈ ಗುಂಪಿನಿಂದ ಬೇರೆ ಆಗಿದ್ದ. ಕಾರ್ತಿಕ್ ಕೊಲೆ ನಂತರ ಫೀಲ್ಡ್‌ನಲ್ಲಿ ಮತ್ತೆ ಮೆರೆಯಲು ವೆಂಕಟೇಶ್ ಶುರು ಮಾಡಿದ್ದ. ಇದನ್ನು ಸಹಿಸದ ಹಾಲಪ್ಪ ಹಾಗೂ ಸಹಚರರು ಜಗಳ ಶುರು ಮಾಡಿದ್ದರು ಎನ್ನಲಾಗಿದೆ.

ಹಾಲಪ್ಪ ತನ್ನ ಡಾನ್ ಪಟ್ಟಕ್ಕೆ ಅಡ್ಡಿಯಾಗಿದ್ದಾನೆ ಎಂದು ಗಿಲ್ಕಿ ವೆಂಕಟೇಶ ಹಾಲಪ್ಪನ ಕೊಲೆಗೆ ಸ್ಕೆಚ್ ಹಾಕಿದ್ದ. ಹಾಲಪ್ಪನನ್ನು ಕೊಲ್ಲಲು ವೆಂಕಟೇಶ್ ಹಾಗೂ ಅವನ ಶಿಷ್ಯಂದಿರು ಹುಡುಕಾಟ ನಡೆಸಿದ್ದರು. ವಾರದ ಹಿಂದೆ ಹಾಲಪ್ಪ ಸ್ನೇಹಿತ ಮಂಜುನಾಥ್ ಮನೆ ಮುಂದೆ ಹಾಲಪ್ಪ ಎಲ್ಲಿ ಅಂತಾ ಜಗಳವಾಡಿದ್ದರು. ಈ ಸಂಬಂಧ ನಜರಬಾದ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಗಿಲ್ಕಿ ವೆಂಕಟೇಶ್ ಗ್ಯಾಂಗ್ʼನ ಗಲಾಟೆಗೆ ಬೆಚ್ಚಿದ್ದ ಹಾಲಪ್ಪ, ಪ್ರತಿಯಾಗಿ ಗಿಲ್ಕಿ ವೆಂಕಟೇಶ್ ಕೊಲೆಗೆ ಸ್ಕೆಚ್ ಹಾಕಿದ್ದ. ತನ್ನ ಐವರು ಸಹಚರರನ್ನು ಬಿಟ್ಟು ವೆಂಕಟೇಶ್‌ನನ್ನ ನಡು ರಸ್ತೆಯಲ್ಲೇ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿಸಿದ್ದಾನೆ. ಕೊಲೆಯಾದ ಬಳಿಕ ಹಾಲಪ್ಪ ಎಸ್ಕೇಪ್ ಆಗಿದ್ದಾನೆ. ಸಹಚರರು ಪೊಲೀಸರಿಗೆ ಶರಣಾಗಿದ್ದಾರೆ.

ಆಂದೋಲನ ಡೆಸ್ಕ್

Recent Posts

ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಅಜ್ಜಿ ನಿಧನ

ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…

9 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ನಾಳೆ ಅಧಿಕೃತ ಚಾಲನೆ

ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…

10 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…

11 hours ago

ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅಜಿಂಕ್ಯ ಶಿಂಧೆ ಸಾರಥ್ಯ

ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…

12 hours ago

ಓದುಗರ ಪತ್ರ: ಹೋರಾಟಗಳು ರಚನಾತ್ಮಕವಾಗಿರಲಿ, ಗಂಭೀರವಾಗಿರಲಿ

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…

15 hours ago

ಓದುಗರ ಪತ್ರ: ಒಂದು ವರ್ಷ ಅಲೆದಾಡಿಸಿದ ನಂತರ… !

ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…

15 hours ago