ಪ್ರತಿಷ್ಠಿತ ಮೊಬೈಲ್ ತಯಾರಕ ಕಂಪನಿ ಆ್ಯಪಲ್ ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಹಲವರ ಕನಸಾಗಿರುತ್ತೆ. ಅಂತೆಯೇ ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಯಾವೆಲ್ಲಾ ಅರ್ಹತೆಗಳಿರಬೇಕು. ವಿದ್ಯಾಭ್ಯಾಸ ಏನಿರಬೇಕು ಎಂಬ ಗೊಂದಲಗಳಿರುತ್ತವೆ. ಈ ಎಲ್ಲಾ ಗೊಂದಲಗಳಿಗೆ ಕಂಪನಿಯ ಸಿಇಒ ಟಿಮ್ ಕುಕ್ ಉತ್ತರ ನೀಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಆಪಲ್ ಕಂಪನಿಯ ಸಿಇಒ ಟಿಮ್ ಕುಕ್ ಅವರಿಗೆ ಸಂದರ್ಶನಕಾರರು ನಿಮ್ಮ ಕಂಪನಿಯಲ್ಲಿ ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ ? ಉದ್ಯೋಗ ಪಡೆದುಕೊಳ್ಳಬೇಕಾದರೆ ಏನು ಮಾಡಬೇಕು ? ಎಂಬ ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಉತ್ತರಿಸಿದ ಟಿಮ್ ಕುಕ್ ನಮ್ಮ ಕಂಪನಿಯ ನೇಮಕಾತಿ ಪ್ರಕ್ರಿಯೆಯು ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಸೃಜನಶೀಲತೆ, ಕುತೂಹಲದಂತಹ ಗುಣಲಕ್ಷಣಗಳ ಮೇಲೆ ನಿಗಧಿಯಾಗಿರುತ್ತದೆ. ನಮ್ಮ ಕಂಪನಿಯು ಒನ್ ಪ್ಲಸ್ ಥ್ರೀ ಕಲ್ಪನೆಯಲ್ಲಿ ಕೆಲಸ ನಿರ್ವಹಿಸುತ್ತದೆ. ನಿಮ್ ಹಾಗೂ ನನ್ನ ಕಲ್ಪನೆ ಒಟ್ಟಿಗೆ ಸೇರಿದಾಗ ವಯಕ್ತಿಕ ಆಲೋಚನೆಗಳಿಗಿಂ ಉತ್ತಮವಾಗಿರುತ್ತದೆ. ಇದನ್ನು ಕಂಪನಿಯು ಬಲವಾಗಿ ನಂಬಿದೆ.
ನಮ್ಮ ಕಂಪನಿಯು ಪದವಿ ಹೊಂದಿರುವ ಹಾಗೂ ಪದವಿ ಹೊಂದಿಲ್ಲದವರನ್ನೂ ಕೂಡ ಕೆಲಸಕ್ಕೆ ನೇಮಿಸಿಕೊಂಡಿದೆ. ಕೋಡಿಂಗ್ ಪ್ರತಿಯೊಬ್ಬರಿಗೂ ಮೌಲ್ಯಯುತವಾದ ಪರಿಗಳಿಸಿದ್ದರೂ ಕೂಡ ಆ್ಯಪಲ್ ಕೋಡಿಂಗ್ ಪರಿಣತಿ ಹೊಂದಿರುವ ಆಥವಾ ತಮ್ಮ ನಿತ್ಯದ ಕೆಲಸದಲ್ಲಿ ನಿಯಮಿತವಾಗಿ ಕೋಡಿಂಗ್ ಬಳಸುವ ವ್ಯಕ್ತಿಗಳನ್ನೂ ಸಹ ನೇಮಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಆ್ಯಪಲ್ ಕಂಪನಿಯು ಇತ್ತಿಚೆಗಷ್ಟೆ ಐ ಫೋನ್ 15 ಸರಣಿಯನ್ನು ತಂತ್ರಜ್ಞಾನದೊಂದಿಗೆ ಲಾಚ್ ಮಾಡಿತ್ತು. ಇದರಲ್ಲಿ 48 ಎಂಪಿ ಮುಖ್ಯ ಕ್ಯಾಮೆರಾವನ್ನು ಹೊಂದಿತ್ತು. ಇದು ಐ ಫೋನ್ 14 ಹಾಗೂ ಐ ಫೋನ್ 14 ಪ್ಲಸ್ ಗಿಂತ ನವೀಕರಣ ಪಡೆದಿದೆ. ಇದರಲ್ಲಿ ಮೊದಲ ಬಾರಿಗೆ ಯುಎಸ್ ಬಿ ಟೈಪ್ ಸಿ ಪರಿಚಯಿಸಿರುವುದು ಮತ್ತೊಂದು ದೊಡ್ಡ ಬದಲಾವಣೆಯಾಗಿದೆ.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…