ವಾಣಿಜ್ಯ

ಡಾಲರ್‌ ಎದುರು ಉತ್ತಮ ಚೇತರಿಕೆ ಕಂಡ ರೂಪಾಯಿ ಮೌಲ್ಯ

ಮುಂಬೈ: ಕಳೆದ ಹಲವು ದಿನಗಳಿಂದ ತೀವ್ರ ಕುಸಿತ ಕಾಣುತ್ತಿದ್ದ ರೂಪಾಯಿ ಮೌಲ್ಯ ಗುರುವಾರ ಬೆಳಿಗ್ಗೆ ಉತ್ತಮ ಚೇತರಿಕೆ ಕಂಡಿದ್ದು ಭರವಸೆ ಮೂಡಿಸಿದೆ. ಬೆಳಿಗ್ಗೆ 10 ಗಂಟೆ ವೇಳೆಗೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್) ಎದುರು ರೂಪಾಯಿ 67 ಪೈಸೆ ವೃದ್ಧಿಯಾಗಿ 82.14ರಲ್ಲಿ ವಹಿವಾಟು ನಡೆಸಿತು. ಮಂಗಳವಾರದ ವಹಿವಾಟಿನ ಕೊನೆಯಲ್ಲಿ ರೂಪಾಯಿ ಮೌಲ್ಯ 7 ಪೈಸೆ ವೃದ್ಧಿಯಾಗಿ 82.81 ಆಗಿತ್ತು. ಬುಧವಾರ ಬಲಿಪಾಡ್ಯಮಿ ನಿಮಿತ್ತ ವಿದೇಶಿ ವಿನಿಮಯ ಮಾರುಕಟ್ಟೆ ಕಾರ್ಯಚರಣೆ ಮಾಡಿರಲಿಲ್ಲ.

ಡಾಲರ್ ಸೂಚ್ಯಂಕ 110ಕ್ಕಿಂತ ಕೆಳಮಟ್ಟಕ್ಕೆ ಕುಸಿದಾಗ ರೂಪಾಯಿ ಬಲಗೊಳ್ಳಲಾರಂಭಿಸಿತು ಎಂದು ಫಾರೆಕ್ಸ್ ಟ್ರೆಷರಿ ಅಡೈಸರ್ಸ್ ಮುಖ್ಯಸ್ಥ ಅನಿಲ್ ಕುಮಾರ್ ಬನ್ಸಾಲಿ ತಿಳಿಸಿದರು.

‘ಅಮೆರಿಕದಲ್ಲಿ ಹಣದುಬ್ಬರ ಮತ್ತಷ್ಟು ಏರಿಕೆಯಾಗಿರುವುದು, ರೆಪೊ ದರ ಹೆಚ್ಚಳದಲ್ಲಿ ವಿಳಂಬ ನೀತಿ ಅನುಸರಿಸಿರುವುದು ಡಾಲರ್ ಸೂಚ್ಯಂಕ ಕುಸಿತಕ್ಕೆ ಕಾರಣವಿರಬಹುದು’ ಎಂದು ಬನ್ಸಾಲಿ ಹೇಳಿದ್ದಾರೆ. ಡಾಲರ್ ಸೂಚ್ಯಂಕವು ವಿಶ್ವದ ಇತರ ಪ್ರಮುಖ ಆರು ಕರೆನ್ಸಿಗಳ ವಿರುದ್ಧ ಡಾಲರ್ ಮೌಲ್ಯವನ್ನು ಅಳೆಹಯುವ ಮಾಪನವಾಗಿದೆ. ಸೂಚ್ಯಂಕವು ಸದ್ಯ ಶೇಕಡಾ 0.06 ವೃದ್ಧಿಯಾಗಿ 109.76ರಲ್ಲಿ ವಹಿವಾಟು ನಡೆಸುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್​ಗೆ 90 ಡಾಲರ್ ಇದ್ದುದು ಇದೀಗ 94 ಡಾಲರ್​ಗೆ ಏರಿಕೆಯಾಗಿದೆ. ಇದೂ ಸಹ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ಭಾರತದ ರೂಪಾಯಿ ಬಲಗೊಳ್ಳಲು ಕಾರಣವೆನ್ನಲಾಗಿದೆ. ತೈಲ ಕಂಪನಿಗಳು ಮತ್ತು ಆಮದುದಾರರು ಈ ಅವಕಾಶವನ್ನು ಬಳಸಿಕೊಂಡು ಡಾಲರ್ ಅನ್ನು ಕಡಿಮೆ ದರಕ್ಕೆ ಖರೀದಿ ಮಾಡಬಹುದು ಎಂದು ಅವರು ಬನ್ಸಾಲಿ ಹೇಳಿದ್ದಾರೆ.

ಬ್ರೆಂಟ್ ಕಚ್ಚಾ ತೈಲದ ದರ ಕೂಡ ಪ್ರತಿ ಬ್ಯಾರೆಲ್​ಗೆ ಶೇಕಡಾ 0.26ರಷ್ಟು ಹೆಚ್ಚಾಗಿ 95.94 ಡಾಲರ್ ಆಗಿದೆ.

ಕೆಲವು ದಿನಗಳ ಹಿಂದಷ್ಟೇ ಪಾತಾಳದತ್ತ ಕುಸಿಯುತ್ತಿದ್ದ ರೂಪಾಯಿ ಮೌಲ್ಯ ಒಂದು ಹಂತದಲ್ಲಿ 83.06ರ ವರೆಗೂ ಕುಸಿತ ಕಂಡಿತ್ತು. ಸಾರ್ವಕಾಲಿಕ ಗರಿಷ್ಠ ಕುಸಿತ ದಾಖಲಿಸಿದ್ದ ರೂಪಾಯಿ ಮುಂದಿನ ಕೆಲವು ದಿನಗಳಲ್ಲಿ 83.50ರ ವರೆಗೂ ಕುಸಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದರು. ಆದರೆ, ಇತ್ತೀಚಿನ ಟ್ರೆಂಡ್​​ನಲ್ಲಿ ತುಸು ಬಲವರ್ಧನೆಯಾಗುವ ಮೂಲಕ ರೂಪಾಯಿ ಮೌಲ್ಯವು ಇನ್ನಷ್ಟು ಚೇತರಿಕೆ ಕಾಣುವ ಭರವಸೆ ಮೂಡಿಸಿದೆ.

andolana

Share
Published by
andolana

Recent Posts

ಕೊಳ್ಳೇಗಾಲ: ಅಂಬೇಡ್ಕರ್ ಪ್ರತಿಮೆಗೆ ಸಿಎಂ ಡಿ.ಕೆ.ಶಿವಕುಮಾರ್ ಮಾಲಾರ್ಪಣೆ

ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…

19 hours ago

ಶಿಕಾರಿಪುರದಿಂದ ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಚಾಲನೆ!

ಶಿವಮೊಗ್ಗ: ಕಾಂಗ್ರೆಸ್‌ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…

19 hours ago

ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ: ಸಿಎಂ ಡಿ.ಕೆ.ಶಿವಕುಮಾರ್‌

ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…

20 hours ago

ಹನೂರು ತಾಲೂಕಿನಲ್ಲಿ ಮುಂದುವರಿದ ಮಳೆ ಅವಾಂತರ: ಹಳ್ಳದಲ್ಲಿ ಗಣಪತಿ ದೇವಾಲಯ ಜಲಸಮಾಧಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…

21 hours ago

ಹನೂರಿನಲ್ಲಿ ಮಳೆಯ ಅಬ್ಬರ: 50ಕ್ಕೂ ಹೆಚ್ಚು ಮನೆಗಳು ಜಲಾವೃತ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…

21 hours ago

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

1 day ago