ನವದೆಹಲಿ : ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ಇಂದಿನಿಂದ (ಡಿಸೆಂಬರ್ 1)ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಗಳ ಬೆಲೆಯಲ್ಲಿ 21 ರೂ. ಗಳಷ್ಟು ಏರಿಕೆ ಮಾಡಲಾಗಿದೆ.
ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ನ ರಿಟೇಲ್ ದರವನ್ನು ಇಂದಿನಿಂದ ಜಾರಿಗೆ ಬರುವಂತೆ 21 ರೂ ಗಳನ್ನು ಹೆಚ್ಚಳ ಮಾಡಿದೆ. ಈ ಮೂಲಕ 1775.50 ಇದ್ದ ಸಿಲಿಂಡರ್ ನ ಚಿಲ್ಲರೆ ಮಾರಾಟ ಬೆಲೆ ಇಂದಿನಿಂದ 1796.50 ರೂ. ಗೆ ಹೆಚ್ಚಳವಾಗಿದೆ. ಇನ್ನು, ಮುಂಬೈ ನಲ್ಲಿ 902. 5 ಹಾಗೂ ಕೋಲ್ಕತ್ತಾದಲ್ಲಿ 929 ರೂ. ಮತ್ತು ಚೆನ್ನೈ ನಲ್ಲಿ 918.5 ರೂ. ಇದೆ.
ಬೆಲೆ ಏರಿಕೆಯ ನಂತರ ದೇಶದ ಪ್ರಮುಖ ರಾಜ್ಯಗಳಲ್ಲಿನ ರಿಟೇಲ್ ದರ
ನವದೆಹಲಿಯಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ನ ಬೆಲೆ 1,796.5 ರೂ ಇದ್ದು, ಮುಂಬೈ ನಲ್ಲಿ 1,749 ರೂ. ಆಗಿದೆ. ಇನ್ನು ಗುರುಗ್ರಾಮದಲ್ಲಿ 1804 ರೂ. ಇದೆ. ಬೆಂಗಳೂರಿನಲ್ಲಿ 21 ರೂಪಾಯಿಯ ಬದಲಿಗೆ 26 ರೂ ಏರಿಕೆಯಾಗಿದ್ದು, ಸಿಲಿಂಡರ್ ನ ಬೆಲೆ 1883 ರೂ ತಲುಪಿದೆ.
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ನ ಬೆಲೆಯನ್ನು ಏರಿಕೆ ಮಾಡಲಾಗಿದೆಯಾದರೂ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಏರಿಸಿಲ್ಲ. ಹಾಗಾಗಿ ರಾಜ್ಯದ ಪ್ರಮುಖ ವಾಣಿಜ್ಯ ನಗರವಾದ ಬೆಂಗಳೂರಿನಲ್ಲಿ 14.2 ಕೆಜಿಯ ಎಲ್ ಪಿಜಿ ಸಿಲಿಂಡರ್ ನ ಬೆಲೆ ಪ್ರಸ್ತುತ 929 ರೂ. ಇದೆ. ಇನ್ನು, ಮುಂಬೈ ನಲ್ಲಿ 902. 5 ಹಾಗೂ ಕೋಲ್ಕತ್ತಾದಲ್ಲಿ 929 ರೂ. ಮತ್ತು ಚೆನ್ನೈ ನಲ್ಲಿ 918.5 ರೂ. ಇದೆ.
ನವೆಂಬರ್ ತಿಂಗಳಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆಯಾಗಿ, 1775.50 ರೂ. ಆಗಿತ್ತು. ಇದೀಗ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಗ್ರಾಹಕರ ಕೈ ಸುಟ್ಟಿದೆ.
ಹನೂರು : ಮಹದೇಶ್ವರ ಬೆಟ್ಟ ರಸ್ತೆಯಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಜಿಂಕೆಯೊಂದು ರಸ್ತೆಯಲ್ಲಿಯೇ ಮೃತಪಟ್ಟಿರುವ ಘಟನೆ ಭಾನುವಾರ…
ಹನೂರು : ತಾಲ್ಲೂಕಿನ ದೊಡ್ಡಾಲತ್ತೂರು, ಅಜ್ಜೀಪುರ ಸುತ್ತಮುತ್ತಲೂ ಜಿಎಸ್‌ಐ ಅಧಿಕಾರಿಗಳು ಚಿನ್ನದ ನಿಕ್ಷೇಪ ಇರುವ ಬಗ್ಗೆ ಅಧ್ಯಯನಕ್ಕೆ ಮುಂದಾಗುತ್ತಿದ್ದಂತೆ ಚಿನ್ನದಾಸೆಗಾಗಿ…
ಮೈಸೂರು : ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಕ್ಕೆ ಮುನ್ನುಡಿಯಾಗಿ ಅರಮನೆ ಫಲಪುಷ್ಪ ಪ್ರದರ್ಶನ ಭಾನುವಾರದಿಂದ ವರ್ಣರಂಜಿತವಾಗಿ ಆರಂಭಗೊಂಡಿದೆ. ಮೈಸೂರು…
ಜೋಹಾನ್ಸ್‌ಬರ್ಗ್ : ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ಪಶ್ಚಿಮದಲ್ಲಿರುವ ಬೆಕರ್ಸ್‌ಡಾಲ್ ಪಟ್ಟಣದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಈ ಸಾಮೂಹಿಕ ಗುಂಡಿನ…
ಎಚ್.ಡಿ.ಕೋಟೆ : ಹುಲಿ ದಾಳಿಯಿಂದ ತತ್ತರಿಸಿರುವ ತಾಲ್ಲೂಕಿನ ಜನತೆಗೆ ಇದೀಗ ಚಿರತೆ ದಾಳಿಯು ನಿದ್ದೆಗೆಡಿಸಿದೆ. ಪಟ್ಟಣದ ವಾರ್ಡ್ ನಂಬರ್ 21ರ…
ಚಾಮರಾಜನಗರ : ತಾಲ್ಲೂಕಿನ ಗಂಗವಾಡಿ ಗ್ರಾಮದ ಬಳಿ ಶನಿವಾರ ರಾತ್ರಿ ಜಮೀನಿನಲ್ಲಿ ಕಟ್ಟಿ ಹಾಕಿದ್ದ ಕರುಗಳ ಮೇಲೆ ಚಿರತೆ ದಾಳಿ…