ವಾಣಿಜ್ಯ

ನೀತಾ ಅಂಬಾನಿ ಧರಿಸಿದ್ದ ವಾಚ್‌ ಬೆಲೆ ಎಷ್ಟು ಗೊತ್ತಾ ?

ಭಾರತ ದೇಶದ ಅತ್ಯಂತ ಶ್ರೀಮಂತ ಮುಖೇಶ್‌ ಅಂಬಾನಿ ಪತ್ನಿ ನೀತಾ ಅಂಬಾನಿ ತಮ್ಮ ಐಶಾರಾಮಿ ಜೀವನ ಶೈಲಿಯಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ನೀತಾ ಅಂಬಾನಿ ಅವರಿಗೆ ಅತಿ ದುಬಾರಿ ಹಾಗೂ ಅಪರೂಪದ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವಿದೆ. ಇದೀಗ ನೀತಾ ಅಂಬಾನಿ ಪಾರ್ಟಿಯೋದರಲ್ಲಿ ಧರಿಸಿದ್ದ ವಾಚ್‌ ನ ಬೆಲೆ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.

ನೀತಾ ಅಂಬಾನಿ ಅವರು ಅತಿ ದುಬಾರಿ ಬೆಲೆಯ ಬಟ್ಟೆಗಳು, ಬ್ಯಾಗ್‌, ಸ್ಲಿಪ್ಪರ್ ಸೇರಿದಂತೆ ಇನ್ನಿತರ ವಸ್ತುಗಳ ಸಂಗ್ರಹವನ್ನು ಹೊಂದಿದ್ದಾರೆ. ಇದೀಗ ಅವರ ವಾಚ್‌ ಬೆಲೆ ಕೇಳಿ ಎಲ್ಲರೂ ದಂಗಾಗಿದ್ದಾರೆ.

ನೀತಾ ಅಂಬಾನಿ ಧರಿಸಿದ್ದ ವಿಶಿಷ್ಟವಾದ ವಾಚ್‌ ನ ಬೆಲೆ ಬರೋಬ್ಬರಿ 3 ಕೋಟಿ ರೂ. ಇತ್ತೀಚೆಗೆ ನೀತಾ ಅಂಬಾನಿಯವರು ತಮ್ಮ ಮಗಳು ಇಶಾ ಅಂಬಾನಿ ಅವರ ಮಕ್ಕಳ ಹುಟ್ಟು ಹಬ್ಬದಲ್ಲಿ ಜಾಕೋಬ್‌ ಅಂಡ್‌ ಕೋ ಆಸ್ಟ್ರೋನೋಮಿಯಾ ಫ್ಲೂರ್ಸ್‌ ಡಿ ಜಾರ್ಡಿನ್‌ ವಾಚ್‌ ಅನ್ನು ಧರಿಸಿದ್ದಾರೆ.

ನೀತಾ ಅಂಬಾನಿಯವರು ಧರಿಸಿದ್ದ ವಾಚ್‌ ನ ವಿನ್ಯಾಸ ಅತ್ಯಾಕರ್ಷಣೀಯವಾಗಿದೆ. ಇದು 18k ಚಿನ್ನದ ಕೇಸ್‌ ಹೊಂದಿದೆ. ಹಸಿರು, ನೀಲಿ, ಕೆಂಪು, ಹಳದಿ, ಗುಲಾಬಿ ಬಣ್ಣಗಳನ್ನೊಳಗೊಂಡಿರುವ ಈ ವಾಚ್‌ ರೋಮನ್‌ ಅಂಕಿಗಳಲ್ಲಿ ಸಮಯವನ್ನು ಪ್ರದರ್ಶಿಸುತ್ತದೆ.

ವಾಚ್‌ ನ ಸುತ್ತಲು ಎರಡು ರಿಂಗ್‌ ಗಳ ವಿನ್ಯಾಸವಿದೆ. ಒಳಗೆ ಚಿಟ್ಟೆಯಾಕಾರದ ಹಾಗೂ ನಕ್ಷತ್ರಾಕಾರದ ವಿನ್ಯಾಸವಿದೆ.

ಸೂಕ್ಷ್ಮವಾದ ಚಿಟ್ಟೆಯಾಕಾರದ ಹಾರುವ ಟೂರ್‌ ಬಿಲ್ಲನ್‌, ಸಮಯ ಪ್ರದರ್ಶನ ಹಾಗೂ ಮೇಲಿನ ಹಂತದಲ್ಲಿರುವ ಗುಲಾಬಿ ನೀಲಮಣಿ ಹಾಗೂ ಹೂವುಗಳು ಹತ್ತು ನಿಮಿಷಗಳಲ್ಲಿ ಡಯಲ್‌ ಸುತ್ತಲೂ ಪ್ರದಕಷಿಣಾಕಾರದಲ್ಲಿ ತಿರುಗುತ್ತವೆ. ಆದರೆ ಗುಲಾಬಿ ನೀಲಮಣಿಗಳೊಂದಿಗೆ ಹೊಂದಿಸಲಾಗಿರುವ ಮದರ್‌ ಆಫ್‌ ಪರ್ಲ್‌ ಬೇಸ್‌ ಅದೇ ವೇಗದಲ್ಲಿ ಅಪ್ರದಕ್ಷಿಣಾಕಾರವಾಗಿ ತಿರುಗುತ್ತದೆ.

ಇತ್ತೀಚೆಗೆ ಮುಖೇಶ್‌ ಅಂಬಾನಿಯವರು ತಮ್ಮ ಪತ್ನಿ ನೀತಾ ಅಂಬಾನಿ ಅವರಿಗೆ ದುಬಾರಿ ಬೆಲೆಯ ರೋಲ್ಸ್‌ ರಾಯ್ಸ್‌ ಕಾರ್‌ ಅನ್ನು ಉಡುಗೊರೆಯನ್ನಾಗಿ ನೀಡಿದ್ದರು.

ಕಪ್ಪು ಬಣ್ಣದ ಬ್ಯಾಡ್ಜ್‌ ಆವೃತ್ತಿಯನ್ನೋಳಗೊಂಡ ಐಶಾರಾಮಿ ಕಾರು ಇದಾಗಿದೆ. ಈ ಕಾರಿನ ಆನ್‌ ರೋಡ್‌ ಬೆಲೆ ಸುಮಾರು 10 ಕೋಟಿ ರೂ. ಆಗುತ್ತದೆ. ಇದು ಭಾರತದ ಅತ್ಯಂದ ದುಬಾರಿ ಕಾರು ಹಾಗೂ ದುಬಾರಿ ಉಡುಗೊರೆಯಾಗಿದೆ.

lokesh

Share
Published by
lokesh

Recent Posts

ಓದುಗರ ಪತ್ರ: ಸಾಧಕರಿಗೆ ಸಂದ ಗೌರವ

ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರಕವಿ ಕುವೆಂಪು ಅವರು ನೀಡಿರುವ ಅಪಾರ ಕೊಡುಗೆಯ ಸ್ಮರಣಾರ್ಥ ಹಾಗೂ ಅವರ ಪರಿಕಲ್ಪನೆಯ ಮಾನಸಗಂಗೋತ್ರಿಯಲ್ಲಿ ಇರುವ ಬಯಲು…

3 hours ago

ಓದುಗರ ಪತ್ರ: ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಮುಂದಾಗಲಿ

ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ತಮಿಳುನಾಡು ಸರ್ಕಾರವು ಪದೇ ಪದೇ ಕರ್ನಾಟಕದ ಮೇಲೆ ಒತ್ತಡ ಹೇರುವುದು ಹಾಗೂ ಇದರಿಂದಾಗಿ…

3 hours ago

ಓದುಗರ ಪತ್ರ: ಡಿಜಿಟಲ್ ಲಗೇಜ್ ಲಾಕರ್ ಎಲ್ಲೆಡೆ ವಿಸ್ತರಿಸಲಿ

ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಅತ್ಯಾಧುನಿಕ ಡಿಜಿಟಲ್ ಲಗೇಜ್ ಲಾಕರ್ ವ್ಯವಸ್ಥೆ ಆರಂಭಿಸಿರುವುದು ಶ್ಲಾಘನೀಯ ಹೆಜ್ಜೆಯಾಗಿದೆ. ಪ್ರತಿದಿನ ರಾಜದಾದ್ಯಂತ ಹೆಚ್ಚಿನ…

4 hours ago

ಮಗನ ನೆನಪಲ್ಲಿ ಪೋಷಕರ ಮಾದರಿ ಕಾರ್ಯ

ಪ್ರೊ. ಬಿ. ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ, ಮಂಡ್ಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪಶಸ್ತಿ ಪ್ರೋತ್ಸಾಹ ಮಂಡ್ಯದ ಕರ್ನಾಟಕ…

4 hours ago

ಭತ್ತದ ಬೆಳೆಗೆ ಎಲೆ ಸುರುಳಿ-ಬೆಂಕಿ ರೋಗದ ಬಾಧೆ

ಸಿಂಗಿ ಸತೀಶ್ ತಾಕುಗಳನ್ನು ಪರಿಶೀಲಿಸಿದ ಕೃಷಿ ವಿಜ್ಞಾನಗಳು; ಮುನ್ನೆಚ್ಚರಿಕೆ ವಹಿಸಲು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಲಹೆ  ಗೋಣಿಕೊಪ್ಪ: ಕೊಡಗಿನಲ್ಲಿ ಭತ್ತ…

4 hours ago

ಸಕ್ಕರೆ ನಾಡಿನಲ್ಲಿ ಬರದಿಂದ ಕಂಗಾಲಾದ ರೈತರು

ಹೇಮಂತ್‌ಕುಮಾರ್ ಮಂಡ್ಯ ಜಿಲ್ಲೆಯಲ್ಲಿ ೪೮,೫೯೧ ಹೆ. ಬೆಳೆ ಹಾನಿ ೫೪.೫೩ ಕೋಟಿ ರೂ. ನಷ್ಟದ ಅಂದಾಜು ಮಂಡ್ಯ: ಜಿಲ್ಲೆಯಲ್ಲಿ ಕಳೆದ…

4 hours ago