• ಅನಿಲ್ ಅಂತರಸಂತೆ
ಕುಸ್ತಿ ಆಡಲು ಭಯ ಪಡುವವರೇ ಹೆಚ್ಚು. ಶತಮಾನಗಳ ಹಿಂದೆ ಗ್ರಾಮಗಳಿಗೊಂದ ರಂತಿದ್ದ ಕುಸ್ತಿ ಅಖಾಡದ ಗರಡಿಮನೆಗಳು ಇಂದು ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಅಲ್ಲೊಂದು ಇಲ್ಲೊಂದು ಮಾತ್ರ ಕಾಣಸಿಗುತ್ತವೆ. ಒಂದಿಷ್ಟು ಯುವಕರ ಹೊರತಾಗಿ ಇಂದು ಕುಸ್ತಿಯ ಅರಿವು ಯುವಜನರಿಂದ ದೂರಾಗಿದೆ. ಯುವಸಮೂಹ ಮೋಜುಮಸ್ತಿಯ ಕೂಟಗಳಲ್ಲೇ ಮುಳುಗಿದ್ದು, ದೇಶದ ಪ್ರಾಚೀನ ಕ್ರೀಡೆಯಾದ ಕುಸ್ತಿಯನ್ನು ಸಂಪೂರ್ಣ ಮರೆತ್ತಿದ್ದಾರೆ.
ಅನಾದಿ ಕಾಲದಿಂದಲೂ ಭಾರತ ತನ್ನದೇ ಆದ ಸಂಸ್ಕೃತಿ, ಪರಂಪರೆ, ಕ್ರೀಡೆಯನ್ನು ರೂಢಿಸಿಕೊಂಡು ಬಂದಿದೆ. ಇಂದಿಗೂ ಸಾಕಷ್ಟು ಹಳ್ಳಿಗಳಲ್ಲಿ ಆ ಪರಂಪರೆಗಳನ್ನು ಕಾಣಬಹುದು. ಅಂತಹ ಪರಂಪರೆಗಳಲ್ಲಿ ಕುಸ್ತಿಯೂ ಒಂದು. ರಾಜರ ಆಳ್ವಿಕೆಯ ಕಾಲದಲ್ಲಿ ಜಟ್ಟಿಗಳು ಪ್ರತಿ ಗ್ರಾಮದಲ್ಲಿಯೂ ಕಾಣಸಿಗುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಕುಸ್ತಿ ಒಂದು ಕ್ರೀಡೆಯಾಗಿ ನಡೆಯುತ್ತಿತ್ತು. ಸ್ವತಃ ರಾಜರುಗಳೂ ಜಟ್ಟಿಗಳಾಗಿದ್ದ ಉದಾಹರಣೆಗಳಿವೆ. ಅಂತಹ ದೇಸಿ ಸಂಸ್ಕೃತ ಮತ್ತು ಕ್ರೀಡೆಗಳು ಇಂದು ಯುವಜನರಿಂದ ದೂರಾಗಿ ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಕ್ರೀಡೆಗಳು ನಮ್ಮ ಬದುಕಿನ ಭಾಗವಾಗಿ ಹೋಗಿವೆ. ಇಂತಹ ದಿನಮಾನಗಳಲ್ಲಿಯೂ ದೇಸಿ ಕ್ರೀಡೆಯತ್ತ ಒಲವು ತೋರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಚ್.ಡಿ.ಕೋಟೆ ತಾಲ್ಲೂಕಿನ ವಡ್ಡರಗುಡಿಯ ಕುಸ್ತಿಪಟು ಎನ್.ನಾಗೇಶ್.
ಕುಸ್ತಿ ಭಾರತದ ಅತ್ಯಂತ ಪ್ರಾಚೀನ ಕ್ರೀಡ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ಇಂತಹ ಕುಸ್ತಿಯನ್ನು ಕಳೆದ 6 ವರ್ಷಗಳಿಂದ ನಿರಂತರವಾಗಿ ಅಭ್ಯಾಸ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ ಎನ್.ನಾಗೇಶ್.
ನಾಗೇಶ್ ಮೂಲತಃ ಎಚ್.ಡಿ.ಕೋಟೆ ತಾಲ್ಲೂಕಿನ ವಡ್ಡರಗುಡಿಯ ರೈತಾಪಿ ಕುಟುಂಬದ ಎ.ಪಿ.ನಿತ್ಯಾನಂದ ಮತ್ತು ಬಿ.ವಿ.ಸೌಭಾಗ್ಯ ದಂಪತಿಯ ಎರಡನೇ ಮಗ, ನಾಗೇಶ್ ತಮ್ಮ ಪಿಯುಸಿ ಶಿಕ್ಷಣವನ್ನು ಎಚ್.ಡಿ.ಕೋಟೆಯ ಆದಿಚುಂಚನಗಿರಿ ಕಾಲೇಜು ಮತ್ತು ಪದವಿ ಶಿಕ್ಷಣವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದರು. ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ಕುಸ್ತಿ ಕ್ರೀಡೆಯ ಬಗ್ಗೆ ತಿಳಿಯುತ್ತಾ ಹೋದ ನಾಗೇಶ್ ನಂತರ
ಅದನ್ನು ಕಲಿಯುವ ಹಠ ತೊಟ್ಟರು. ಆರಂಭದಲ್ಲಿ ಮೈಸೂರಿನ ಮಧು ಎಂಬವರ ಬಳಿ ಕುಸ್ತಿ ಕಲಿತರು.
ಸತತ ಪರಿಶ್ರಮ ಮತ್ತು ಶ್ರದ್ಧೆಯಿಂದ ಜಿಲ್ಲಾ, ವಿಭಾಗೀಯ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟಗಳಲ್ಲಿ ಪದಕಗಳನ್ನು ಗಳಿಸಿದ ನಾಗೇಶ್, ಗೋವಾದಲ್ಲಿ ನಡೆದ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಗೆದ್ದು, ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದರು. 2023ರ ಜುಲೈನಲ್ಲಿ ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕುಸ್ತಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ನಾಗೇಶ್ ಅಲ್ಲಿಯೂ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಚಿನ್ನದ ಹುಡುಗನಾಗಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.
ಬಿ.ಕಾಂ ಪದವೀಧರರಾಗಿರುವ ನಾಗೇಶ್ ಮುಂಜಾನೆ ನಾಲ್ಕು ಗಂಟೆಗೆ ಎದ್ದು ಎಚ್.ಡಿ.ಕೋಟೆಯ ತಾಲ್ಲೂಕು ಕ್ರೀಡಾಂಣದಲ್ಲಿ ಲಘು ವ್ಯಾಯಾಮ ಮಾಡಿ ನಂತರ ಜಿಮ್ ಟೈನರ್ ಯಶವಂತ್ ರವರ ಜಿಮ್‌ನಲ್ಲಿ ಅವರ ಮಾರ್ಗದರ್ಶನದಲ್ಲಿ ವರ್ಕ್ ಔಟ್ ಮಾಡುತ್ತಾರೆ.
ನಂತರ ಜಮೀನಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ಅವರು, ಮತ್ತೆ ಸಂಜೆ ತಮ್ಮ ಜಮೀನಲ್ಲಿಯೇ ಸಣ್ಣ ಗರಡಿಮನೆಯನ್ನು ಆರಂಭಿಸಿದ್ದು, ಅಲ್ಲಿಯೇ ಸ್ಥಳೀಯ ಯುವಕರನ್ನೂ ಸೇರಿಸಿಕೊಂಡು ಅಭ್ಯಾಸ ನಿರತರರಾಗುತ್ತಾರೆ, ಪಂದ್ಯಾವಳಿಗಳು ಇದ್ದಾಗ, ಬಿಡುವಿನ ಸಂದರ್ಭದಲ್ಲಿ ಮೈಸೂರಿಗೆ ತೆರಳಿ ಮಧುರವರ ಬಳಿ ತರಬೇತಿಯನ್ನು ಪಡೆಯುತ್ತಾರೆ.
ಆರಂಭದಲ್ಲಿ ಕುಸ್ತಿ ಎಂದ ಕೂಡಲೇ ಬೇಡ ಎಂದಿದ್ದ, ಪೋಷಕರ ನಂತರ ತಮ್ಮ ಮಗನ ನಿರಂತರ ಪರಿಶ್ರಮವನ್ನು ಮೆಚ್ಚಿ ಪ್ರೋತ್ಸಾಹಿಸಲು ಆರಂಭಿಸಿದರು, ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ಬಂದ ಬಳಿಕ ತಮ್ಮ ಆಪ್ತವಲಯದಲ್ಲಿಯೂ, ಕಾಲೇಜಿನಲ್ಲಿಯೂ ಉತ್ತಮ ಪ್ರೋತ್ಸಾಹ ಪಡೆದ ನಾಗೇಶ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಹಾದಿ ಹಿಡಿದರು.
ಇಂದು ಈ ಕುಸ್ತಿಯ ಬಗ್ಗೆ ಯುವಜನರಲ್ಲಿ ಅರಿವು ಕಡಿಮೆ ಯಾಗಿದೆ. ಕುಸ್ತಿ ಎಂದರೆ ಅದೊಂದು ಹೊಡೆದಾಟ ಎಂದಷ್ಟೇ ಯುವಕರು ಭಾವಿಸಿದ್ದಾರೆ. ಆದರೆ ಅದು ಹೊಡೆದಾಟವಲ್ಲ. ಒಂದು ಕ್ರೀಡೆ. ಅದನ್ನು ಅಭ್ಯಾಸ ಮಾಡುವುದರಿಂದ ನಮ್ಮ ಪರಂಪರೆಯನ್ನು ಉಳಿಸಿದಂತಾಗುತ್ತದೆ. ದೇಹದ ಆರೋಗ್ಯವೂ ಅನುಕೂಲಕರವಾಗಿರುತ್ತದೆ. ಆದ್ದರಿಂದಲೇ ನಾನು ಕುಸ್ತಿಯ ಕಡೆ ಒಲವು ತೋರಿದೆ ಎಂಬುದು ಕುಸ್ತಿಪಟು ನಾಗೇಶ್‌ರವರ ಮನದಾಳದ ಮಾತು.
(ania64936@gmail.com)
ಕುಶಾಲನಗರ: ಸ್ನಾನಕ್ಕೆಂದು ನದಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ಜಲ ಸಮಾಧಿಯಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಸಮೀಪದಲ್ಲಿ…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ಪಾರ್ಕ್ ಆದ ಕಬ್ಬನ್ ಪಾರ್ಕ್‌ನಲ್ಲಿ ಇನ್ನು ಮುಂದೆ ಯಾವುದೇ ಸಂಘಟನೆಗಳು ತಮ್ಮ ಚಟುವಟಿಕೆ…
13 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ ಹರಾಜಿನಲ್ಲಿ 1.10 ಕೋಟಿಗೆ ರಾಜಸ್ಥಾನ ತಂಡಕ್ಕೆ ಹರಾಜಾಗುವ ಮೂಲಕ ಕಿರಿಯ ವಯಸ್ಸಿಗೆ ಐಪಿಎಲ್‌ಗೆ…
ಕುವೈತ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕುವೈತ್ ಪ್ರವಾಸ ಕೈಗೊಂಡಿದ್ದು, ಅಲ್ಲಿನ ರಾಜ ಶೇಕ್ ಮಿಶಾಲ್…
ಉತ್ತರ ಪ್ರದೇಶ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಆರ್ಥಿಕತೆ, ಅಸಮಾನ ಆಸ್ತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ…
ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಚಳಿ ತುಂಬಾ ಜಾಸ್ತಿಯಿದ್ದು, ಶೀತಗಾಳಿ ಹೆಚ್ಚಾಗಲು ಕರಾವಳಿ ತೀರ ಪ್ರದೇಶದಲ್ಲಾದ ವಾತಾವರಣ ಬದಲಾವಣೆ ಕಾರಣ ಎಂದು…