ಇಸ್ಲಾಮಾಬಾದ : ಸಾರ್ವತ್ರಿಕ ಚುನಾವಣೆಯಲ್ಲಿ ನಾನು ಜಯಗಳಿಸಿದರೆ ಪಾಕಿಸ್ತಾನದಲ್ಲಿನ ಹಿಂದುಗಳ ಸಮಸ್ಯೆ ಬಗೆಹರಿಸುವೆ ಎಂದು ಪಾಕಿಸ್ತಾನದಲ್ಲಿನ ಮೊದಲ ಮಹಿಳಾ ಅಭ್ಯರ್ಥಿ ಡಾ. ಸವಿರಾ ಪ್ರಕಾಶ ಹೇಳಿಕೆ ನೀಡಿದ್ದಾರೆ.
ಇಸ್ಲಾಮಾಬಾದ ಪಾಕಿಸ್ತಾನದ ಖೈಬರ್ ಪಾಖ್ಟುನಖ್ವ ಈ ಪ್ರಾಂತ್ಯದಲ್ಲಿನ ಬುನೆರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮೊಟ್ಟಮೊದಲು ಹಿಂದೂ ಮಹಿಳೆ ಡಾ. ಸವಿರಾ ಪ್ರಕಾಶ ಇವರ ಕುರಿತು ಪಾಕಿಸ್ತಾನದಲ್ಲಿ ಎಲ್ಲಾ ಕಡೆ ಚರ್ಚೆ ನಡೆಯುತ್ತಿದೆ.
ಅವರು ತಮ್ಮನ್ನು ಓರ್ವ ‘ದೇಶಭಕ್ತ ಹಿಂದೂ’ ಎಂದು ಹೇಳಿದ್ದಾರೆ. ಡಾ. ಸವಿರಾ, ನಾನು ಏನಾದರೂ ಚುನಾವಣೆಯಲ್ಲಿ ಗೆದ್ದರೆ, ಭಾರತ ಮತ್ತು ಪಾಕಿಸ್ತಾನ ನಡುವೆ ಸೇತುವೆಯ ಕೆಲಸ ಮಾಡಿ ಪಾಕಿಸ್ತಾನದಲ್ಲಿನ ಹಿಂದುಗಳ ಸಮಸ್ಯೆ ಪರಿಹರಿಸಲು ಸಹಾಯ ಮಾಡುವೆ ಎಂದು ಹೇಳಿದ್ದಾರೆ.
ಚುನಾವಣಾ ಕ್ಷೇತ್ರದಲ್ಲಿನ ಮುಸಲ್ಮಾನರು ನನಗೆ ಮತ ನೀಡುವ ಆಶ್ವಾಸನೆ ನೀಡಿ ನನಗೆ ಬೆಂಬಲ ನೀಡಿದ್ದಾರೆ. ನನ್ನ ವಿಜಯದ ನಂತರ ಎರಡು ದೇಶದಲ್ಲಿನ ಹಿಂದೂಗಳು ನನ್ನ ಜೊತೆ ನಿರ್ಭಯತೆಯಿಂದ ಸಂಪರ್ಕಿಸಬಹುದು. ಎರಡೂ ದೇಶಗಳಲ್ಲಿನ ಸಂಬಂಧ ದೃಢಗೊಳಿಸುವುದಕ್ಕಾಗಿ ನಾನು ಸಕಾರಾತ್ಮಕ ನಿಲುವು ತಾಳಿ ಪ್ರಯತ್ನ ಮಾಡುವೆನು ಎಂದು ಹೇಳಿದ್ದಾರೆ.
ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…
ಮಂಡ್ಯ: ಮನ್ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…
ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…
ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…
‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…
ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…