ಅಂಕಣಗಳು

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ:  ಚಳಿಗಾಲದ ಸಂಸತ್ ಅಧಿವೇಶನದ ಒಂದು ವಾರೆನೋಟ

ದೆಹಲಿ ಕಣ್ಣೋಟ

-ಶಿವಾಜಿ ಗಣೇಶನ್‌ 

ಹತ್ತೊಂಬತ್ತು ದಿನಗಳ ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಎಂದಿನಂತೆ ಹೆಸರು ಬದಲಾವಣೆಯಲ್ಲಿ ತನ್ನ ಆಸಕ್ತಿ ತೋರಿದೆ. ಕೇಂದ್ರದಲ್ಲಿ ಬಿಜೆಪಿ ಅಽಕಾರಕ್ಕೆ ಬಂದ ಮೇಲೆ ಕಳೆದ ಹತ್ತು ವರ್ಷಗಳಿಂದ ಸಂಸತ್ ಕಲಾಪದಲ್ಲಿ ಯಾವುದೇ ವಿಷಯ ಮತ್ತು ಮಸೂದೆಯ ಬಗ್ಗೆ ಸಮರ್ಪಕವಾದ ಚರ್ಚೆ ನಡೆಯದೆ ಬದಲಿಗೆ ಗದ್ದಲ, ಕೂಗಾಟ ಮತ್ತು ಕಲಾಪ ಮುಂದೂಡಿಕೆ ಮಾಮೂಲಿ ಎನಿಸುವಂತೆ ನಡೆದಿರುವುದು ದುರದೃಷ್ಟಕರ ಸಂಗತಿಯಾಗಿದೆ.

ಈ ಅಧಿವೇಶನದಲ್ಲಿ ಮುಖ್ಯವಾಗಿ ಮಹಾತ್ಮ ಗಾಂಧಿ ಹೆಸರಿನಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಡಾ. ಮನಮೋಹನ್ ಸಿಂಗ್ ಸರ್ಕಾರ ಜಾರಿಗೆ ತಂದ ಎಂಎನ್‌ಆರ್‌ಇಜಿಎ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ)ಯ ಹೆಸರನ್ನು ಬದಲಿಸಿರುವುದು ಬಿಜೆಪಿ ಸರ್ಕಾರ ಮಹಾತ್ಮ ಗಾಂಧಿ ಹೆಸರು ಮತ್ತು ಹಿಂದಿನ ಕಾಂಗ್ರೆಸ್ ಆಳ್ವಿಕೆಯ ಕಾರ್ಯಗಳ ಬಗೆಗೆ ಪೂರ್ವಗ್ರಹ ಹೊಂದಿರುವುದನ್ನು ಮತ್ತೊಮ್ಮೆ ಪ್ರರ್ದಶಿಸಿರುವುದು ಗೊತ್ತಾಗುತ್ತದೆ. ಮನರೇಗಾ ಹೆಸರಿನ ಬದಲಿಗೆ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ ( ವಿಬಿ-ಜಿ-ರಾಮ್ ಜಿ ಬಿಲ್) ಹೆಸರು ವಿಚಿತ್ರವಾಗಿದೆ. ಈ ಬದಲಾವಣೆ ಯಿಂದ ಆಡಳಿತ ಪಕ್ಷ ಖುಷಿಗೊಂಡಂತಿದೆ. ಈ ಯೋಜನೆಯ ಹೆಸರಿನ ಬದಲಾವಣೆಗೆ ಟಿಡಿಪಿಯ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದರೂ, ಅವರ ಅಭಿಪ್ರಾಯಕ್ಕೆ ಬಿಜೆಪಿ ಕ್ಯಾರೇ ಎಂದಿಲ್ಲ.

ಬಿಜೆಪಿ ತಾನು ಮಾಡಲು ಹೊರಟಿರುವ ಪ್ರಮುಖ ಕಾರ್ಯಕ್ರಮಗಳ ಕುರಿತು ಎನ್‌ಡಿಎ ಮೈತ್ರಿಕೂಟ ತನ್ನ ಮಿತ್ರ ಪಕ್ಷಗಳ ಜೊತೆ ಚರ್ಚಿಸುವ ಸೌಜನ್ಯವನ್ನು ತೋರದಿರುವುದು ಜನತಾಂತ್ರಿಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಈ ಅಧಿವೇಶನದಲ್ಲಿ ಮುಖ್ಯವಾಗಿ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ, ಎಲ್ಲರಿಗೂ ವಿಮೆ, ಎಲ್ಲರಿಗೂ ಸುರಕ್ಷತೆ ಮತ್ತು ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ಕ್ಷೇತ್ರದ ಪಾಲ್ಗೊಳ್ಳುವಿಕೆಯಂತಹ ಪ್ರಮುಖ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸುವ ಮುನ್ನ ಅವುಗಳ ಸಾಧಕ ಬಾಧಕಗಳ ಬಗೆಗೆ ವ್ಯಾಪಕವಾಗಿ ಚರ್ಚಿಸಬೇಕಿತ್ತು.

ಸರ್ಕಾರವು ಒಟ್ಟು ಹತ್ತು ಮಸೂದೆಗಳನ್ನು ಮಂಡಿಸಿ ಎಂಟಕ್ಕೆ ಸಂಸತ್ತಿನ ಅಂಗೀಕಾರ ಪಡೆದಿದೆ. ವಿಕ್ಷಿತ್ ಭಾರತ್ ಶಿಕ್ಷಾ ಅಽಕ್ಷಣ್ ಮಸೂದೆ ಮತ್ತು ಸೆಕ್ಯೂರಿಟಿಸ್ ಮಾರ್ಕೆಟ್ ಕೋಡ್ ಮಸೂದೆಗಳನ್ನು ಸ್ಥಾಯಿ ಸಮಿತಿಯ ಪರಿಶೀಲನೆಗೆ ಕಳುಹಿಸಲು ನಿರ್ಧರಿಸಲಾಗಿದೆ. ಯುಜಿಸಿ ಮತ್ತು ಎಐಸಿಟಿಇಯನ್ನು ರದ್ದು ಮಾಡಿ ಹೊಸದಾಗಿ ಜಾರಿಗೆ ತರುವ ಉನ್ನತ ಶಿಕ್ಷಣ ಆಯೋಗದ ಮಸೂದೆಗಳನ್ನು ಸಂಸತ್ತಿನ ಜಂಟಿ ಸಲಹಾ ಸಮಿತಿಯ ಪರಾಮರ್ಶೆಗೆ ಒಪ್ಪಿಸಲು ಲೋಕಸಭೆ ನಿರ್ಧರಿಸಿರುವುದು ಒಳ್ಳೆಯ ಬೆಳವಣಿಗೆ.

ಗ್ರಾಮೀಣ ಉದ್ಯೋಗ ಖಾತರಿ ಮಸೂದೆಯ ಹೆಸರು ಮತ್ತು ಕೆಲವು ಬದಲಾವಣೆ ಮಾಡಿ ಸಂಸತ್ತಿನಲ್ಲಿ ಅಂಗೀಕಾರ ಪಡೆದ ಹೊಸ ಮಸೂದೆಗೆ ಕಾಂಗ್ರೆಸ್, ಡಿಎಂಕೆ, ಮತ್ತು ಆಮ್ ಆದ್ಮಿ ಪಕ್ಷದ ಸದಸ್ಯರು ಹಳೆಯ ಸಂಸತ್ ಭವನದ ಮುಖ್ಯದ್ವಾರದ ಬಳಿ ಹಗಲು ರಾತ್ರಿ ಧರಣಿ ಮಾಡಿ ಪ್ರತಿಭಟನೆ ನಡೆಸುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದು ವಿಶೇಷ. ಈ ಅಧಿವೇಶನದಲ್ಲಿ ಬಿಜೆಪಿ ಸರ್ಕಾರವು ಮಹಾತ್ಮ ಗಾಂಧಿ, ನೆಹರೂ ಮತ್ತು ರವೀಂದ್ರ ನಾಥ ಟ್ಯಾಗೋರ್ ಅವರಿಗೆ ಅಪಮಾನ ಮಾಡಿತು ಎಂದು ಕಾಂಗ್ರೆಸ್ ದೂಷಿಸಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಉದ್ದೇಶವನ್ನು ವಿಫಲಗೊಳಿಸುವ ರೀತಿಯಲ್ಲಿ ಮಾಡಿರುವ ಬದಲಾವಣೆಯನ್ನು ವಿರೋಧಿಸಿ ಪ್ರತಿ ರಾಜ್ಯದಲ್ಲೂ ಪ್ರತಿಭಟನೆ ನಡೆಸುವುದಾಗಿ ಪ್ರತಿಪಕ್ಷಗಳು ಪಣತೊಟ್ಟಿವೆ.

ಬಿಹಾರದ ನಂತರ ಈಗ ಹನ್ನೆರಡು ರಾಜ್ಯಗಳಲ್ಲಿ ಕೈಗೊಂಡಿರುವ ವಿವಾದಾತ್ಮಕ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳು ಪಟ್ಟು ಹಿಡಿದವು. ಆದರೆ ಚುನಾವಣಾ ಆಯೋಗ ನಡೆಸುತ್ತಿರುವ ಈ ಕಾರ್ಯವನ್ನು ಸದನದಲ್ಲಿ ಚರ್ಚಿಸಲು ಬರುವುದಿಲ್ಲ. ಚುನಾವಣಾ ಸುಧಾರಣೆ ಬಗೆಗೆ ಚರ್ಚಿಸಬಹುದು ಎನ್ನುವ ನೆಪವೊಡ್ಡಿ ಪ್ರತಿಪಕ್ಷಗಳ ಈ ವಿಷಯವನ್ನು ಸರ್ಕಾರ ನಯವಾಗಿ ತಳ್ಳಿಹಾಕಿದ್ದು ಈ ಬಾರಿಯ ವಿಶೇಷ.

ಈ ಹಿಂದೆ ಪಶ್ಚಿಮ ಬಂಗಾಳ ಮತ್ತು ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಎಡಪಕ್ಷಗಳ ಸದಸ್ಯರು ಆರಿಸಿ ಬರುತ್ತಿದ್ದರು. ಹೆಚ್ಚು ಅಧ್ಯಯನ ಮಾಡಿಕೊಂಡು ಬರುತ್ತಿದ್ದ ಅವರ ಕೊರತೆ ಈಗ ಸಂಸತ್ತಿನ ಉಭಯ ಸದನಗಳಲ್ಲಿಯೂ ಎದ್ದು ಕಾಣುತ್ತಿದೆ. ಎಂತಹ ಕ್ಷಿಷ್ಟ ವಿಷಯಗಳನ್ನು ಅಧ್ಯಯನ ಮಾಡಿ ಅದರ ಆಳ ಅಗಲದ ಕುರಿತು ಎಡ ಪಕ್ಷಗಳ ಸದಸ್ಯರು ಹೆಚ್ಚು ಮಾತನಾಡುವ ಮೂಲಕ ಮಸೂದೆಗಳು ಕಾಯ್ದೆಯಾಗಿ ಜಾರಿಗೆ ಬರುವ ವಿಚಾರದಲ್ಲಿ ಅವರ ಪಾತ್ರ ದೊಡ್ಡದಿತ್ತು. ತೊಂಬತ್ತರ ದಶಕದಲ್ಲಿ ಮುಕ್ತ ಆರ್ಥಿಕ ನೀತಿಯನ್ನು ಜಾರಿಗೆ ತರುವ ಮುನ್ನ ಗ್ಯಾಟ್ ಮತ್ತು ವಿಶ್ವ ವಾಣಿಜ್ಯ ಸಂಸ್ಥೆಯ ಒಪ್ಪಂದ ಮತ್ತು ಷರತ್ತುಗಳಿಗೆ ಭಾರತ ಸಹಿ ಹಾಕುವ ವಿಷಯದಲ್ಲಿ ಎಚ್ಚರಿಕೆಯ ಸಂದೇಶನೀಡಿದ ಅಂದಿನ ಕಲಾಪದತ್ತ ಗಮನ ಹರಿಸಿದಾಗ ಅವರ ಹಾಜರಿಯ ಮಹತ್ವದ ಅರಿವಾಗುತ್ತದೆ.

ಈಗೇನಿದ್ದರೂ ಅಂತಹ ಪಾತ್ರವನ್ನು ತೃಣಮೂಲ ಕಾಂಗ್ರೆಸ್ಸಿನ ಮೊಹುವಾ ಮೊಯಿತ್ರಾ, ಕಲ್ಯಾಣ್ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ ಮತ್ತು ಸಯ್ಯಾನಿ ಘೋಷ್ ಯಶಸ್ವಿಯಾಗಿ ನಿರ್ವಹಿಸುತ್ತಿರುವುದು ಸಮಾಧಾನಕರ ಸಂಗತಿ. ಹೆಚ್ಚು ಅಧ್ಯಯನ ಮಾಡಿಕೊಂಡು ಬರುವುದಲ್ಲದೆ ಬಿಜೆಪಿಯ ಕೆಲವು ಕೂಗುಮಾರಿಗಳಿಗೆ ಪ್ರತಿಸ್ಪರ್ಧಿಯಂತೆ ಮುಖಕ್ಕೆ ನಾಟುವಂತೆ ಉತ್ತರ ಕೊಡುವ ಮೂಲಕ ಅವರ ಬಾಯಿ ಮುಚ್ಚಿಸುವಲ್ಲಿ ಬಂಗಾಳದ ಈ ಸದಸ್ಯರು ಮುಂದಿದ್ದಾರೆ.

ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಮುಖ್ಯವಾಗಿ ಚರ್ಚೆಯಾದ ವಿಷಯ ಎಂದರೆ ನೂರೈವತ್ತು ವರ್ಷ ತುಂಬಿದ ರಾಷ್ಟ್ರಗೀತೆ ವಂದೇ ಮಾತರಂವಿಷಯದ ಸ್ಮರಣೆ. ಇಲ್ಲಿ ಬಿಜೆಪಿ ಹೆಚ್ಚಾಗಿ ನಿಂದಿಸಿದ್ದು ಜವಾಹರ್ ಲಾಲ್ನೆಹರೂ ಅವರ ಆಡಳಿತದಲ್ಲಿ ವಂದೇ ಮಾತರಂ ಗೀತೆಯ ಎರಡು ಸಾಲುಗಳನ್ನು ಮೊಟಕುಗೊಳಿಸಿದ್ದನ್ನು. ಈ ವಿಷಯದಲ್ಲಿ ಕಾಂಗ್ರೆಸ್ ಸದಸ್ಯರು ತಾವೇನೂ ಕಡಿಮೆ ಇಲ್ಲ ಎನ್ನುವಂತೆ ಆಳುವ ಪಕ್ಷಕ್ಕೆ ತಿರುಗೇಟು ನೀಡಿದ್ದು, ಟಿಎಂಸಿಯ ಮೊಹುವಾ ಮೊಯಿತ್ರಾ ವಂದೇ ಮಾತರಂ ಗೀತೆಯ ಪ್ರತಿ ಸಾಲುಗಳನ್ನು ಉಲ್ಲೇಖಿಸಿ ಈ ಬಗೆಗೆ ಆಳುವ ಬಿಜೆಪಿ ಏನು ಮಾಡಿದೆ? ಈ ಗೀತೆಯ ಉದ್ದೇಶದಂತೆ ನಡೆದುಕೊಳ್ಳುತ್ತಿದೆಯಾ ಎಂದು ಪ್ರತಿ ಹೆಜ್ಜೆ ಹೆಜ್ಜೆಗೂ ಪ್ರಶ್ನಿಸುವ ಮೂಲಕ ಆಳುವ ಪಕ್ಷದ ಬೆವರು ಇಳಿಸಿದ್ದು ವಿಶೇಷವಾಗಿತ್ತು. ಅವರಂತೆಯೇರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆಗೆ ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಅವರ ಅರ್ಥಪೂರ್ಣವಾಗಿ ಸುದೀರ್ಘವಾದ ವ್ಯಾಖ್ಯಾನ ಮತ್ತು ಗೀತೆಯ ಉದ್ದೇಶವನ್ನು ಅರ್ಥಪೂರ್ಣವಾಗಿ ವಿವರಿಸುವ ಮೂಲಕ ಅಧ್ಯಯನಶೀಲ ಸದಸ್ಯ ಎನ್ನುವ ಖ್ಯಾತಿಗೆ ಪಾತ್ರರಾದರು.

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಜೊತೆಗೆ ಉತ್ತಮ ವಾಗ್ಮಿಗಳು ಮತ್ತು ಹೆಚ್ಚು ಅನುಭವಿಗಳಾದ ದಿಗ್ವಿಜಯ್ ಸಿಂಗ್, ಜೈರಾಂ ರಮೇಶ್, ಪಿ. ಚಿದಂಬರಂ, ರೇಣುಕಾ ಚೌಧರಿ ಮುಂತಾದವರಿಗೂ ಹೆಚ್ಚು ಅವಕಾಶ ನೀಡಬೇಕು. ಬಿಜೆಪಿ ಸರ್ಕಾರವನ್ನು ಹೆಜ್ಜೆ ಹೆಜ್ಜೆಗೂ ಹಣಿಯಲು ತಾವೊಬ್ಬರೇ ಕಂಠಶೋಷಣೆ ಮಾಡಿಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳುವುದು ಅವಶ್ಯ ಎನ್ನುವುದು ಸದನದ ಕಲಾಪ ವೀಕ್ಷಿಸಿದವರಿಗೆ ಅನ್ನಿಸದೇ ಇರದು.

ಲೋಕಸಭೆಯಲ್ಲಿ ಎಂದಿನಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮತಕಳವು ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿರುವುದು ಈ ಚಳಿಗಾಲದ ಅಽವೇಶನದಲ್ಲೂ ಎದ್ದು ಕಾಣುತ್ತಿತ್ತು. ಅಧಿವೇಶನದ ವೇಳೆ ಮೂರು ದಿನಗಳ ಕಾಲ ತಾವು ಮೂರು ದಿನ ವಿದೇಶ ಪ್ರವಾಸ ಹೋಗಿದ್ದು, ತಮಗೆ ಒಳ್ಳೆಯದೇ ಆಯಿತು. ಇಲ್ಲದಿದ್ದರೆ ತಮ್ಮ ಕಂಠ ಶೋಷಣೆ ಆಗುತ್ತಿತ್ತು ಎಂದು ಸಭಾಧ್ಯಕ್ಷ ಓಂ ಪ್ರಕಾಶ್ ಬಿರ್ಲಾ ಅವರು ಸದನ ಮುಗಿದ ಮೇಲೆ ಸದಸ್ಯರಿಗೆ ನೀಡಿದ ಚಹ ಕೂಟದ ವೇಳೆ ಹೇಳಿ ಕೊಂಡಿರುವುದು ವಿಶೇಷ.

ಸದನದ ಕಲಾಪ ನಡೆಯುವ ದಿನಗಳಲ್ಲಿ ಪ್ರತಿಪಕ್ಷಗಳ ನಾಯಕ ರಾಹುಲ್ ಗಾಂಧಿ ಜರ್ಮನಿ ಪ್ರವಾಸ ಕೈಗೊಂಡಿದ್ದು, ಅವರು ವಿದೇಶ ಪ್ರವಾಸ ಕೈಗೊಳ್ಳುವ ಉದ್ದೇಶವೇನು ಎಂದು ಆಳುವ ಬಿಜೆಪಿ ಸದಸ್ಯರು ಟೀಕಾಪ್ರಹಾರ ನಡೆಸಿದರು. ಹಿಂದಿನ ಅಧಿವೇಶನಗಳಿಗೆ ಹೋಲಿಸಿದರೆ ಈ ಚಳಿಗಾಲದ ೧೯ ದಿನಗಳ ಕಲಾಪ ಹೆಚ್ಚು ಕಡಿಮೆ ಯಶಸ್ವಿಯಾಗಿಯೇ ನಡೆದಿದೆ. ರಾಜ್ಯಸಭೆಯ ಕಲಾಪದಲ್ಲಿ ತಪ್ಪದೆ ಭಾಗವಹಿಸುತ್ತಿರುವ ೯೩ ವರ್ಷದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಸಕ್ತಿಯನ್ನು ಮೆಚ್ಚಲೇಬೇಕು. ಆದರೆ ಅವರು ಪ್ರತಿ ಅಧಿವೇಶನದಲ್ಲೂ ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಖಸ್ತುತಿ ಮಾಡುವುದು ಅನವಶ್ಯಕ ಎನ್ನುವ ಭಾವನೆ ಅವರ ಭಾಷಣವನ್ನು ಆಲಿಸಿದವರಿಗೆ ಅನಿಸದೆ ಇರದು.

ಕರ್ನಾಟಕದಿಂದ ಆರಿಸಿ ಹೋದವರಲ್ಲಿ ದಾವಣಗೆರೆಯ ಲೋಕಸಭೆ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಪ್ರಶ್ನೋತ್ತರ ವೇಳೆಯಲ್ಲಿ ನಿತ್ಯವೂ ಸರ್ಕಾರದ ಗಮನ ಸೆಳೆಯುವುದು ಮತ್ತು ಕೆಲವು ಚರ್ಚೆಯಲ್ಲಿ ಭಾಗವಹಿಸುವುದರಲ್ಲಿ ತೋರುವ ಆಸಕ್ತಿ ಎಲ್ಲರಿಗಿಂತಲೂ ಮುಂದಿರುವುದನ್ನು ಗುರುತಿಸಬಹುದು. ಅವರು ಇಂಗ್ಲಿಷ್, ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುವುದರಿಂದ ಮುಂದೆ ಉತ್ತಮ ಸಂಸದೀಯ ಪಟು ಆಗುವ ಎಲ್ಲ ಲಕ್ಷಣಗಳು ಕಾಣುತ್ತದೆ.

” ಹಿಂದಿನ ಅಧಿವೇಶನಗಳಿಗೆ ಹೋಲಿಸಿದರೆ ಈ ಚಳಿಗಾಲದ ೧೯ ದಿನಗಳ ಕಲಾಪ ಹೆಚ್ಚು ಕಡಿಮೆ ಯಶಸ್ವಿಯಾಗಿಯೇ ನಡೆದಿದೆ. ರಾಜ್ಯಸಭೆಯ ಕಲಾಪದಲ್ಲಿ ತಪ್ಪದೆ ಭಾಗವಹಿಸುತ್ತಿರುವ ೯೩ ವರ್ಷದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಆಸಕ್ತಿಯನ್ನು ಮೆಚ್ಚಲೇಬೇಕು.”

ಆಂದೋಲನ ಡೆಸ್ಕ್

Recent Posts

ಸರಗೂರು ತಾಲ್ಲೂಕು ಕಚೇರಿಯಲ್ಲಿ ಆರ್‌ಡಿಎಕ್ಸ್‌ ಸ್ಫೋಟಕ ಇಟ್ಟಿರುವುದಾಗಿ ಬೆದರಿಕೆ

ಮೈಸೂರು: ಮೈಸೂರು ಜಿಲ್ಲೆ ಸರಗೂರಿನ ತಾಲ್ಲೂಕು ಕಚೇರಿ ಹಾಗೂ ಹಾಸನದ ಆಲೂರು ತಾಲ್ಲೂಕು ಕಚೇರಿಗಳಿಗೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ…

6 mins ago

ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಏಕೆ ನೋಡಿಕೊಳ್ಳುತ್ತಿದ್ದಾರೆ? ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಮೈಸೂರು: ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ವಿರೋಧಿಸುತ್ತಾರೆ. ಪ್ರಚೋದನಾಕಾರಿ ಭಾಷಣ ಮಾಡದೆ ಹೋದರೆ ಸುಮ್ಮನೆ ಪ್ರಕರಣ ದಾಖಲಿಸುವುದಿಲ್ಲ ಎಂದರು. ಬಿಜೆಪಿಯವರು…

11 mins ago

ಮೈಸೂರು| ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು: ಸಿಎಂ ಸಿದ್ದರಾಮಯ್ಯ ಅವರಿಂದು ತಮ್ಮ ನಿವಾಸದ ಬಳಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಕೆಲ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ…

16 mins ago

ಬೆಂಗಳೂರಿಗಿಂತಲೂ ಬಳ್ಳಾರಿಯಲ್ಲಿ ದಿಢೀರ್‌ ಕುಸಿದ ಗಾಳಿಯ ಗುಣಮಟ್ಟ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಜೊತೆಗೆ ವಿವಿಧ ಜಿಲ್ಲೆಗಳಲ್ಲಿಯೂ ಗಾಳಿಯ ಗುಣಮಟ್ಟ ಕಳಪೆ…

1 hour ago

ಬಿಜೆಪಿ ದೃಷ್ಟಿಯಲ್ಲಿಟ್ಟುಕೊಂಡು ದ್ವೇಷ ಭಾಷಣ ಕಾಯ್ದೆ ತಂದಿಲ್ಲ: ಸಚಿವ ಪರಮೇಶ್ವರ್‌

ಬೆಂಗಳೂರು: ಬಿಜೆಪಿ ದೃಷ್ಟಿಯಲ್ಲಿಟ್ಟುಕೊಂಡು ದ್ವೇಷ ಭಾಷಣ ಕಾಯ್ದೆಯನ್ನು ತಂದಿಲ್ಲ. ಇದರಲ್ಲಿ ಬಿಜೆಪಿಯವರು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಗೃಹ ಸಚಿವ…

1 hour ago

ಕಾಡಲ್ಲಿ ಸಿಂಹನೇ ರಾಜ: ಕಿಚ್ಚ ಸುದೀಪ್‌ಗೆ ನಟ ಧನ್ವೀರ್‌ ಟಾಂಗ್‌

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸ್ಟಾರ್‌ ವಾರ್‌ ಶುರುವಾಗಿದೆ. ಕಿಚ್ಚ ಸುದೀಪ್‌ ನೀಡಿದ ಆ ಒಂದು ಹೇಳಿಕೆಯಿಂದ ಡಿ ಬಾಸ್‌ ಅಭಿಮಾನಿಗಳು…

2 hours ago