ಅಂಕಣಗಳು

ಪೋಷಕರೇ ಮಕ್ಕಳ ಬಗ್ಗೆ ಎಚ್ಚರವಿರಲಿ

– ಡಾ.ಭಾಗ್ಯವತಿ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಮನೋವೈದ್ಯಕೀಯ ವಿಭಾಗ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಂಡ್ಯ.

ವಿಶ್ವ ಆಟಿಸಂ ಜಾಗೃತಿ ದಿನವು ವಾರ್ಷಿಕವಾಗಿ ಏಪ್ರಿಲ್ 2ರಂದು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ದಿನವಾಗಿದ್ದು, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಪ್ರಪಂಚದಾದ್ಯಂತ ಆಟಿಸಂ ವ್ಯಕ್ತಿಗಳ ಬಗ್ಗೆ ಜಾಗೃತಿ ಮೂಡಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುತ್ತವೆ.

ವಿಶ್ವ ಆಟಿಸಂ ದಿನವು ಕೇವಲ ಏಳು ಅಧಿಕೃತ ಆರೋಗ್ಯ-ನಿರ್ದಿಷ್ಟ ವಿಶ್ವಸಂಸ್ಥೆಯ ದಿನಗಳಲ್ಲಿ ಒಂದಾಗಿದೆ. ಮಕ್ಕಳಲ್ಲಿಯೂ ಆಟಿಸಂ ಕಂಡು ಬರುತ್ತದೆ. ವಿಶ್ವ ಆಟಿಸಂ ಜಾಗೃತಿ ದಿನ ಇದನ್ನು 2007ರಲ್ಲಿ ವಿಶ್ವಸಂಸ್ಥೆ ಅಧಿಕೃತವಾಗಿ ಘೋಷಿಸಿತು. ಈ ದಿನದ ಉದ್ದೇಶ ಆಟಿಸಂ ಇರುವ ವ್ಯಕ್ತಿಗಳಿಗೆ ಸಮಾನ ಹಕ್ಕುಗಳಿಗಾಗಿ ಹೋರಾಡುವುದು ಮತ್ತು ಸಾಮಾಜಿಕ ಸ್ವೀಕೃತಿಯನ್ನು ಹೆಚ್ಚಿಸಿ ಅರಿವು ಮೂಡಿಸುವುದಾಗಿದೆ.

ಆಟಿಸಂ ಒಂದು ನ್ಯೂರೋಡೆವಲಪ್ ಮೆಂಟ್  (ನರಗಳ ಬೆಳವಣಿಗೆ )ಸಂಬಂಧಿತ ವೈಶಿಷ್ಟವಾಗಿದೆ.  ಇದು ಮಗು ಬಾಲ್ಯದಲ್ಲಿ ಬೆಳೆಯುವ ಸಂದರ್ಭದಲ್ಲಿ ಕಂಡುಬರುವ ಮೆದುಳಿನ ಬೆಳವಣಿಗೆಯಲ್ಲಿ ಆಗುವ ವ್ಯತ್ಯಾಸದಿಂದಾಗಿ ಅದರ ಸಂವಹನ, ಸಾಮಾಜಿಕ ಪರಸ್ಪರತೆ, ವರ್ತನೆ ಮತ್ತು ಕಲಿಕೆ ಹಾದಿಗಳ ಮೇಲೆ ಪರಿಣಾಮ ಬೀರುತ್ತದೆ.

ಪ್ರತಿ ಮಗುವಿನ ಆಟಿಸಂ ಅನುಭವ ವಿಭಿನ್ನವಾಗಿರಬಹುದು. ಆದರೆ, ಸಾಮಾನ್ಯವಾಗಿ ಕಂಡುಬರುವ ಕೆಲವು ಲಕ್ಷಣಗಳನ್ನು ನಾವು ಕಾಣಬಹುದು.

ಆಟಿಸಂ ಇರುವ ಮಕ್ಕಳಿಗೆ ಸಾಮಾನ್ಯ ಶಾಲೆಯಲ್ಲಿ ಶಿಕ್ಷಣ ಕೊಡಿಸಬಹುದು. ಆದರೆ, ಕೆಲವು ಮಕ್ಕಳಿಗೆ ವಿಶೇಷ ಶಿಕ್ಷಣದ ಅಗತ್ಯವಿರುತ್ತದೆ. ಪೋಷಕರು ಮಕ್ಕಳು ಹೇಗೆ ಕಲಿಯುತ್ತಾರೆ ಎಂಬುದನ್ನು ಅರ್ಥೈಸಿಕೊಂಡು ಸಹಾಯ ಮಾಡಬೇಕು. ಆಟಿಸಂ ಇರುವ ಮಕ್ಕಳಿಗೆ ಪ್ರೀತಿ, ಸಹಾನುಭೂತಿ ಮತ್ತು ಸಮರ್ಥ ಬೆಂಬಲ ನೀಡುವುದು ಅತ್ಯಗತ್ಯ. ಹಾಗೆಯೇ ಅವರ ಸಾಮರ್ಥ್ಯಗಳನ್ನು ಗುರುತಿಸಿ ಅವರಿಗೆ ಬೇಕಾದ ಪ್ರೋತ್ಸಾಹವನ್ನು ನೀಡುವುದು ಪೋಷಕರ ಜವಾಬ್ದಾರಿಯಾಗಿದೆ.

ಕುಟುಂಬದ ಸದಸ್ಯರು ಶಿಕ್ಷಕರು ಮತ್ತು ಸ್ನೇಹಿತರು ಇಂತಹ ಮಕ್ಕಳಿಗೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಿಕೊಡಬೇಕು. ಪೋಷಕರು ಸಹಾಯಕರ ಗುಂಪುಗಳಲ್ಲಿ ಸೇರಿಕೊಂಡು ಅನುಭವವನ್ನು ಹಂಚಿಕೊಳ್ಳಬೇಕು. ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದ್ದು ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೆ ಸಮಾಜದಲ್ಲಿ ಅರ್ಥ ಮಾಡಿಕೊಂಡು ಮುನ್ನಡೆಯಬೇಕು ಆಟಿಸಂ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡು ಜಾಗೃತಿ ಮೂಡಿಸಬೇಕಿದೆ.

ಆಟಿಸಂ ಮಕ್ಕಳ ಪೋಷಕರು ಏನು ಮಾಡಬೇಕು?

  • ಶೀಘ್ರ ಪತ್ತೆ ಮತ್ತು ಚಿಕಿತ್ಸೆ ನೀಡುವುದು.
  • ಮಕ್ಕಳ ಬೆಳವಣಿಗೆಯನ್ನು ಗಮನಿಸಿ ಒಂದು ಅಥವಾ ಎರಡು ವರ್ಷದಲ್ಲಿ ಮಾತು ನಿಧಾನ, ವರ್ತನೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ವ್ಯತ್ಯಾಸ ಕಂಡು ಬಂದರೆ ತಕ್ಷಣ ತಜ್ಞರ ಸಲಹೆ ಪಡೆಯಬೇಕು.
  • ಮಕ್ಕಳನ್ನು ಚಿಕಿತ್ಸೆಗೆ ಒಳಪಡಿಸಿ ವೈದ್ಯರಿಂದ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುವುದು.

ಸಂವಹನ ಸಮಸ್ಯೆಗಳು

  • ಮಾತು ತಡವಾಗಿ ಅಥವಾ ಸರಿಯಾಗಿ ಬಾರದಿರುವುದು.
  • ಇತರರ ಜೊತೆ ಕಣ್ಣಿನಲ್ಲಿ ಕಣ್ಣೆದುರು ನೋಡುವುದಿಲ್ಲ.
  • ತಮ್ಮ ಭಾವನೆಗಳನ್ನು ಅಥವಾ ಅಗತ್ಯಗಳನ್ನು ಸರಿಯಾಗಿ ವ್ಯಕ್ತಪಡಿಸಲು ಕಷ್ಟಕರ.
  • ಕೆಲವು ಮಕ್ಕಳು ಮಾತನಾಡದೆ ಇರುತ್ತಾರೆ ಅಥವಾ ಅಪ್ರಸ್ತುತ ಶಬ್ದಗಳನ್ನು ಪುನರಾವರ್ತನೆ ಮಾಡುತ್ತಾರೆ.
  • ಇನ್ನೂ ಸಾಮಾಜಿಕ ಬೆಳವಣಿಗೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದು, ಇತರೆ ಮಕ್ಕಳೊಂದಿಗೆ ಆಡಲು, ಮಾತುಕತೆ ನಡೆಸಲು ಆಸಕ್ತಿ ಕಡಿಮೆಯಾಗುತ್ತದೆ.  ಸ್ನೇಹಿತರನ್ನು ಮಾಡಿಕೊಳ್ಳಲು ಕಷ್ಟವಲ್ಲದೆ ತಾಯಿ ಅಥವಾ ತಂದೆಯ ಪ್ರಕ್ರಿಯೆಗಳಿಗೆ
    ಸ್ಪಂದಿಸದಿರುವುದು ಕಂಡುಬರುತ್ತದೆ.
  • ನಿರ್ದಿಷ್ಟ ದಿನಾಚರಣೆ ಅಥವಾ ಶಿಸ್ತುಬದ್ಧವಾಗಿ ಇರುವುದು. ಕೆಲವು ವಿಶೇಷ ವಿಷಯಗಳಲ್ಲಿ ಮಾತ್ರ
    ಆಸಕ್ತಿ ತೋರುವುದು. (ಉದಾಹರಣೆಗೆ ಅಂಕಿಗಳು, ನಕ್ಷೆಗಳು, ಕಾರು ಮತ್ತು ಇಂಜಿನ್‌ಗಳ ಬಗ್ಗೆ ಅಗಾಧವಾದ ಆಸಕ್ತಿ
    ಹೊಂದಿರುವುದನ್ನು ಕಾಣಬಹುದು.)
  • ನಿರ್ದಿಷ್ಟ ಆಟಗಳು ಅಥವಾ ಚಟುವಟಿಕೆಗಳನ್ನು ಪದೇಪದೇ ಮಾಡುವುದು. ಬೆಳಕು, ಶಬ್ದ ಅಥವಾ ಸ್ಪರ್ಶದ ಮೇಲಿನ ಅತಿಯಾದ ಸಂವೇದನಾಶೀಲತೆ ನೋಡಬಹುದು.
ಆಂದೋಲನ ಡೆಸ್ಕ್

Recent Posts

ಯುಪಿಯಲ್ಲಿ ತಯಾರಾಗುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಗಳು ಪಾಕ್‌ ನಿದ್ದೆಗೆಡಿಸಿವೆ: ಅಮಿತ್‌ ಶಾ

ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.…

15 hours ago

ಪ್ರಜಾಪ್ರಭುತ್ವ ರಕ್ಷಿಸಲು ಗಾಂಧಿ ಜಯಂತಿಯಂದು ಪ್ರತಿಜ್ಞೆ ಮಾಡೋಣ: ಅಭಿಜಿತ್‌ ದೀಪ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…

16 hours ago

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ

ಕೊಡಗು: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.89 ಮಿ.ಮೀ. ಮಳೆಯಾಗಿದೆ. ಕಳೆದ…

16 hours ago

ಜನರೊಂದಿಗೆ ಬೆರೆಯುವುದು ಅದ್ಭುತ ಅನುಭವ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಸೇವಾ ಸಂಕಲ್ಪ ಅಭಿಯಾನದಡಿ ವಾರಣಾಸಿಯಿಂದ ಗುಜರಾತ್‌ನ ವಡನಗರಕ್ಕೆ ತೆರಳುತ್ತಿರುವ ಯುವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ವಿಡಿಯೋ…

16 hours ago

2028ಕ್ಕೂ ಡಿಕೆಶಿ ಸಿಎಂ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ: ಸತೀಶ್ ಜಾರಕಿಹೊಳಿ

ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸತೀಶ್…

20 hours ago

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

1 day ago