ಅಂಕಣಗಳು

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಆಸಿಡ್ ದಾಳಿಯ ಸಂತ್ರಸ್ತೆಯರನ್ನು ಸಂತೈಸುವ ‘ದಿ ನೆಸ್ಟ್ ಸಲೂನ್’

ಬ್ಯೂಟಿ ಪಾರ್ಲರ್‌ಗಳನ್ನು ತೆರೆದು ಅದರಿಂದ ಬದುಕು ನಡೆಸಲು ತರಬೇತಿ

೨೦೧೪ರಲ್ಲಿ ದೆಹಲಿಯ ಅಂಶು ರಜಪೂತ್ ೧೫ ವರ್ಷದವಳಾಗಿದ್ದಾಗ ಎಂದಿನಂತೆ ತನ್ನ ಮನೆಯ ಚಾವಡಿಯಲ್ಲಿ ಚಾರ್‌ಪಾಯಲ್ಲಿ ಮಲಗಿದ್ದಳು. ಆಗ ಅವಳ ನೆರೆಮನೆಯ ೫೫ ವರ್ಷ ಪ್ರಾಯದ ವ್ಯಕ್ತಿ ಆಮನೆಯ ಗೋಡೆ ಹಾರಿ ಬಂದು ಅವಳ ಮೇಲೆ ಆಸಿಡ್ ಎರಚಿದನು. ಆಕೆ ಅವನ ಲೈಂಗಿಕ ಕೀಟಲೆಯನ್ನು ಪ್ರತಿಭಟಿಸಿದ್ದಕ್ಕೆ ಸಿಟ್ಟಾದ ಆ ದುಷ್ಟ ಆ ಕೆಲಸ ಮಾಡಿದ್ದ. ಅಂಶು ಏಳು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು. ಆಸಿಡ್ ದಾಳಿ ಅವಳ ಮುಖವನ್ನು ವಿರೂಪಗೊಳಿಸಿದರೆ, ಪ್ರತೀದಿನ ಅವಳನ್ನು ದಿಟ್ಟಿಸಿ ನೋಡುವವರು, ಅವಳನ್ನು ನೋಡಿದ ತಕ್ಷಣ ಮೌನವಾಗುವವರು, ಕನಿಕರದಿಂದ ಲೊಚಗುಟ್ಟುವವರು ಅವಳ ಆತ್ಮವಿಶ್ವಾಸವನ್ನು ಮುದುಡಿಸಿದರು.

ಅಂಶುಗೆ ಈಗ ೨೮ ವರ್ಷ. ಆಕೆಗೆ ಆಗಾಗ್ಗೆ ಬ್ಯೂಟಿ ಪಾರ್ಲರ್‌ಗೆ ಹೋಗಿ ತನ್ನನ್ನು ಶೃಂಗರಿಸಿಕೊಳ್ಳುವುದು ಅತ್ಯಂತ ಪ್ರಿಯವಾದುದಾಗಿತ್ತು. ಆಸಿಡ್ ದಾಳಿಯ ನಂತರ ಆಕೆ ಒಂದೆರಡು ಬಾರಿ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದರೂ ಅಲ್ಲಿನ ಬ್ಯೂಟಿಷಿಯನ್ಗಳು ತನ್ನ ಮುಖವನ್ನು ನೋಡದೆ ಎತ್ತೆತ್ತಲೋ ನೋಡುತ್ತ ಮೇಕಪ್ ಮಾಡುವಾಗ ಅವಳು ಕುಳಿತಲ್ಲೇ ಕುಗ್ಗಿ ಹೋಗುತ್ತಿದ್ದಳು. ಹೀಗಾಗಿ ಅವಳು ಬ್ಯೂಟಿ ಪಾರ್ಲರ್‌ಗಳಿಗೆ ಹೋಗುವುದನ್ನು ನಿಲ್ಲಿಸಿದಳು, ಅವಳ ಗೆಳತಿಯರಲ್ಲಿ ಕೆಲವರು ಅವಳ ಮನೆಗೇ ಬಂದು ಅವಳಿಗೆ ತ್ರಡ್ಡಿಂಗ್, ಐ ಬ್ರೋ, ಹೇರ್ ಕಟ್ಟಿಂಗ್, ವ್ಯಾಕ್ಸಿಂಗ್ ಮೊದಲಾದುದವನ್ನು ಮಾಡಿ ಹೋಗುತ್ತಿದ್ದರು.

ಪಶ್ಚಿಮ ಬಂಗಾಳದ ೩೧ ವರ್ಷ ಪ್ರಾಯದ ಮೌಸಮಿಯದೂ ಅದೇ ಪರಿಸ್ಥಿತಿ. ಆಕೆ ಅಡುಗೆ ಮಾಡುತ್ತಿದ್ದಾಗ ಬೆಂಕಿ ತಗಲಿ ಅವಳ ಮುಖ ಸುಟ್ಟು ಹೋಯಿತು. ಮೌಸಮಿ ದೀರ್ಘ ಕಾಲ ವೈದ್ಯಕೀಯ ಆರೈಕೆ ಪಡೆಯಬೇಕಾಗಿ ಬಂದಿತು. ಈ ಅವಽಯಲ್ಲಿ ಅತ್ತ ಅವಳ ಗಂಡ ಬೇರೊಬ್ಬಳನ್ನು ಮದುವೆಯಾದರೆ, ಇತ್ತ ಮೌಸಮಿ ಜನರ ಪ್ರಶ್ನಾರ್ಥಕ ನೋಟ, ಗುಸುಗುಸು, ಕನಿಕರದ ಭಾವವನ್ನು ಎದುರಿಸಲಾಗದೆ ತನ್ನ ಮನೆಯೊಳಗೆ ಬಂದಿಯಾದಳು. ತುಟಿಯಂಚಿನ ತುಸು ಕೆಳಕ್ಕೆ ಚಿಕ್ಕದೊಂದು ಮಚ್ಚೆ ಇರುವ ರೂಪಾಳಿಗೆ ತಾನು ತನ್ನ ತಾಯಿಯಂತೆಯೇ ಸುಂದರಳಾಗಿ ಕಾಣಿಸುತ್ತಿದ್ದೇನೆ ಎಂಬ ಕಾರಣಕ್ಕೆ ಬಹಳ ಸಂತೋಷಪಡುತ್ತಿದ್ದಳು. ಆದರೆ, ೨೦೦೮ರಲ್ಲಿ ರೂಪಾಳ ಮಲತಾಯಿ ಅವಳ ಮೇಲೆ ಆಸಿಡ್ ಎರಚಿ ಅವಳ ಆ ಸಂತೋಷವನ್ನು ಸುಟ್ಟು ಬೂದಿ ಮಾಡಿದಳು.

ಆಗ ಕೇವಲ ೧೩ ವರ್ಷ ಪ್ರಾಯವಾಗಿದ್ದ ಅವಳು ಮೂವತ್ತು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು. ಅಂಶು, ಮೌಸಮಿ, ರೂಪಾರಂತಹವರಿಗೂ ಇತರ ಸಾಮಾನ್ಯರಂತೆ ತಾವೂ ಚಂದ ಕಾಣಬೇಕು, ಕನ್ನಡಿ ನೋಡಬೇಕೆಂಬ ಬಯಕೆ ಇರುತ್ತದೆ. ಆದರೆ, ಇವರುಗಳು ಸಲೂನ್‌ಗಳೊಳಗೆ ಹೋದಾಗ ಅಲ್ಲಿನ ವಾತಾವರಣ ಇವರನ್ನು ಇನ್ನಷ್ಟು ಕುಗ್ಗಿಸುವಂತಹದಾಗಿರುತ್ತದೆ. ಇಂತಹ ಅಂಶು, ಮೌಸಮಿ, ರೂಪಾರಂತಹವರಿಗಾಗಿ ದೆಹಲಿಯ ಗ್ರೀನ್ ಪಾರ್ಕ್ ಮಾರ್ಕೆಟ್ ನಲ್ಲಿ ವಿಶೇಷವಾದ ಒಂದು ಸಲೂನ್ ಹುಟ್ಟಿಕೊಂಡಿದೆ. ಅದರ ಹೆಸರು ‘ದಿ ನೆಸ್ಟ್ ಸಲೂನ್’.

ರಾಜಸ್ತಾನಿ ಅರಮನೆಗಳ ವಾಸ್ತು ಶೈಲಿಯಲ್ಲಿ ಡಿಸೈನ್ ಮಾಡಲಾದ ‘ದಿ ನೆಸ್ಟ್ ಸಲೂನ್’ ಹೊರನೋಟಕ್ಕೆ ಬೇರಾವುದೇ ಐಷರಾಮಿ ಸಲೂನ್‌ಗಳಂತೆಯೇ ಕಂಡರೂ ಇದರ ಅಂತರಂಗ ಭಿನ್ನವಾದುದು. ‘ದಿ ನೆಸ್ಟ್ ಸಲೂನ್’ನಲ್ಲಿ ಆಸಿಡ್ ದಾಳಿಗೊಳಗಾದವರಾಗಲೀ, ಸುಟ್ಟ ಗಾಯಗಳಿಂದ ವಿರೂಪಗೊಂಡವರಾಗಲೀ ಯಾವುದೇ ಅಳುಕು ಆತಂಕಗಳಿಲ್ಲದೆ ಸೀದಾ ಒಳ ಬರಬಹುದು. ಅಲ್ಲಿ ಅವರಿಗಾಗಿಯೇ ಪ್ರತ್ಯೇಕವಾದದ್ದೊಂದು ಖಾಸಗೀ ವಿಐಪಿ ಕೋಣೆಯನ್ನು ನಿರ್ಮಿಸಲಾಗಿದೆ. ಅಲ್ಲಿ ಯಾರೂ ಅವರತ್ತ ಪ್ರಶ್ನಾರ್ಥಕ ನೋಟವನ್ನಾಗಲೀ, ಕನಿಕರದ ದೃಷ್ಟಿಯನ್ನಾಗಲೀ ಬೀರುವುದಿಲ್ಲ. ಅಲ್ಲಿನ ಸಿಬ್ಬಂದಿಯೂ ಅವರತ್ತ ದಿಟ್ಟಿಸಿ ನೋಡುವುದಾಗಲೀ, ಅವರಿಗೆ ಇರುಸುಮುರುಸಾಗುವಂತಹ ದ್ದೇನನ್ನೂ ಕೇಳುವುದಾಗಲೀ, ಅವರನ್ನು ಇತರರಿಗಿಂತ ಭಿನ್ನವಾಗಿ ಪರಿಗಣಿಸುವುದಾಗಲೀ ಮಾಡುವುದಿಲ್ಲ. ಆ ರೀತಿಯಲ್ಲಿ ಅವರಿಗೆ ತರಬೇತಿ ನೀಡಲಾಗಿದೆ. ಅಲ್ಲಿ ಅವರಿಗೆ ಯಾವ ರೀತಿಯ ಸೌಂದರ್ಯ ವರ್ಧಕ ಸೇವೆಗಳು ಬೇಕೋ ಅವುಗಳನ್ನು ಮಾಡಲಾಗುತ್ತದೆ. ಮತ್ತು, ಅಲ್ಲಿ ಆ ಎಲ್ಲಾ ಸೇವೆಗಳು ಉಚಿತ!ಹರಿತಾ ಮೆಹ್ತಾ ದೆಹಲಿ ಹೈಕೋರ್ಟಿನ ವಕೀಲರು ಮತ್ತು ಮಹಿಳಾ ಹಕ್ಕು ಕಾರ್ಯಕರ್ತೆ. ಅವರು ‘ಮೇಹರ್ ಫೌಂಡೇಶನ್’ ಎಂಬ ಒಂದು ಸಾಮಾಜಿಕ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಆಸಿಡ್ ದಾಳಿ ಅಥವಾ ಬೆಂಕಿ ಅವಗಢದಿಂದ ಬದುಕುಳಿಯುವುದರೊಂದಿಗೆ ಸಂತ್ರಸ್ತರ ಕಷ್ಟಕೋಟಲೆಗಳು ಅಂತ್ಯವಾಗುವುದಿಲ್ಲ. ಬದಲಿಗೆ, ಬಾಹ್ಯ ದೈಹಿಕ ಸೌಂದರ್ಯ ವಿರೂಪಗೊಂಡ ಅವರನ್ನು ಅವರ ಕುಟುಂಬಗಳೇ ದೂರ ಮಾಡುವುದು ಮತ್ತು ಸುತ್ತಲಿನ ಸಮಾಜ ಅವರನ್ನು ಕನಿಕರದಿಂದಲೋ ಅಥವಾ ತಿರಸ್ಕಾರದಿಂದಲೋ ನೋಡುವ ಮೂಲಕ ಅವರ ಕಷ್ಟಕೋಟಲೆಗಳು ಮುಂದುವರಿಯುತ್ತವೆ. ‘ದೆಹಲಿ ಮಹಿಳಾ ಆಯೋಗ’ದೊಂದಿಗೆ ದಶಕಗಳ ಕಾಲ ಕೆಲಸ ಮಾಡಿರುವ ಹರಿತಾ ಮೆಹ್ತಾ ಇದನ್ನು ಚೆನ್ನಾಗಿ ಬಲ್ಲವರಾದುದರಿಂದ ಅವರು ಇಂತಹ ಸ್ತ್ರೀಯರಿಗಾಗಿ ಈ ಸಲೂನನ್ನು ತೆರೆದಿದ್ದಾರೆ.

‘ಮಹಿಳೆಯರ ಮೇಲೆ ದಾಳಿ ನಡೆದು ಅದು ಮಾಧ್ಯಮಗಳಲ್ಲಿದೊಡ್ಡದಾಗಿ ಸುದ್ದಿಯಾದ ನಂತರ ಕೆಲವೇ ದಿನಗಳಲ್ಲಿ ಸಮಾಜ ಅದನ್ನು ಮರೆಯುತ್ತದೆ. ಆ ದಾಳಿಗಳ ಸಂತ್ರಸ್ತ ಮಹಿಳೆಯರುಕುಟುಂಬಕ್ಕೂ ಸಮಾಜಕ್ಕೂ ಬೇಡದವರಾಗಿ ತೆರೆಯ ಮರೆಯಲ್ಲಿ ಜೀವಚ್ಛವದಂತೆ ಬದುಕು ನಡೆಸಬೇಕಾಗುತ್ತದೆ. ಅವರು ಎದುರಿಗೆ ಬರುವುದು ಯಾರಿಗೂ ಇಷ್ಟವಿರುವುದಿಲ್ಲ. ಇಂತಹ ಸಂತ್ರಸ್ತರು ತೆರೆಯ ಮರೆಯಲ್ಲಿ ಬದುಕದೆ ಆದಷ್ಟು ಮಟ್ಟಿಗೆ ಅವರು ಇತರ ಸಾಮಾನ್ಯರಂತೆ ಸಹಜವಾಗಿ ಬದುಕು ನಡೆಸಬೇಕು ಎಂಬ ಕಾರಣಕ್ಕೆ ಈ ಸಲೂನು ಹುಟ್ಟಿಕೊಂಡಿದೆ. ಸ್ತ್ರೀಯರು ಫಿನಿಕ್ಸ್ ಪಕ್ಷಿಯಂತೆ ಸುಟ್ಟ ಬೂದಿಯಿಂದ ಎದ್ದು ಬರುತ್ತಾರೆ. ಒಮ್ಮೆಯಲ್ಲ, ಪ್ರತೀದಿನ’ ಎಂದು ಹರಿತಾ ಮೆಹ್ತಾ ಹೇಳುತ್ತಾರೆ.

ಆಸಿಡ್ ಅಥವಾ ಬೆಂಕಿ ದಾಳಿಯ ಸಂತ್ರಸ್ತರು ‘ದಿ ನೆಸ್ಟ್’ನಲ್ಲಿ ಕೇವಲ ಉಚಿತ ಸೌಂದರ್ಯ ವರ್ಧಕ ಸೇವೆಗಳನ್ನು ಮಾತ್ರ ಪಡೆಯುವುದಿಲ್ಲ. ಅವರು ಸ್ವತಃ ಬ್ಯೂಟಿ ಪಾರ್ಲರ್‌ಗಳನ್ನು ತೆರೆದು ಅದರಿಂದ ಬದುಕುನಡೆಸಲು ಮುಂದಾದರೆ ಅವರಿಗೆ ಅಲ್ಲಿ ಉಚಿತ ತರಬೇತಿಯನ್ನೂ ನೀಡಲಾಗುತ್ತದೆ. ‘ದಿ ನೆಸ್ಟ್’ನ ತನ್ನ ಲಾಭಾಂಶದಲ್ಲಿ ಒಂದಷ್ಟನ್ನು ಸಂತ್ರಸ್ತೆಯರ ವೈದ್ಯಕೀಯ ಆರೈಕೆ, ಮುಖದ ಮರುನಿರ್ಮಾಣ, ಪ್ಲಾಸ್ಟಿಕ್ ಸರ್ಜರಿ, ಕಾನೂನು ಹೋರಾಟ ಮತ್ತು ಅವರ ಶಿಕ್ಷಣಕ್ಕೆ ವಿನಿಯೋಗಿಸುತ್ತದೆ.

” ದಿ ನೆಸ್ಟ್ ಸಲೂನ್’ನಲ್ಲಿ ಆಸಿಡ್ ದಾಳಿಗೊಳಗಾದವರಾಗಲೀ, ಸುಟ್ಟ ಗಾಯಗಳಿಂದ ವಿರೂಪಗೊಂಡವರಾಗಲೀ ಯಾವುದೇ ಅಳುಕು ಆತಂಕಗಳಿಲ್ಲದೆ ಸೀದಾ ಒಳಬರಬಹುದು. ಅಲ್ಲಿ ಅವರಿಗಾಗಿಯೇ ಪ್ರತ್ಯೇಕವಾದದ್ದೊಂದು ಖಾಸಗೀ ವಿಐಪಿ ಕೋಣೆಯನ್ನು ನಿರ್ಮಿಸಲಾಗಿದೆ.”

 

 

ಆಂದೋಲನ ಡೆಸ್ಕ್

Recent Posts

ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಅಜ್ಜಿ ನಿಧನ

ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…

6 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ನಾಳೆ ಅಧಿಕೃತ ಚಾಲನೆ

ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…

7 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…

8 hours ago

ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅಜಿಂಕ್ಯ ಶಿಂಧೆ ಸಾರಥ್ಯ

ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…

9 hours ago

ಓದುಗರ ಪತ್ರ: ಹೋರಾಟಗಳು ರಚನಾತ್ಮಕವಾಗಿರಲಿ, ಗಂಭೀರವಾಗಿರಲಿ

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…

12 hours ago

ಓದುಗರ ಪತ್ರ: ಒಂದು ವರ್ಷ ಅಲೆದಾಡಿಸಿದ ನಂತರ… !

ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…

12 hours ago