ಅಂಕಣಗಳು

ಪಂಜು ಗಂಗೊಳ್ಳಿ ಅವರ ವಾರದ ಅಂಕಣ : ಮಾನವ್‌ ಸೋನಿ ಎಂಬ ಮಾನವೀಯ ಕಳಕಳಿಯ ಮನಸ್ಸು

ʼಫನ್‌ ಸ್ಮಾರ್ಟ್‌ ನಾಲೆಡ್ಜ್‌ ಸಲ್ಯೂಶನ್‌ ಫೌಂಡೇಶನ್‌ʼ ಮೂಲಕ ಮಾನವೀಯ ಸೇವೆ

 

೨೬ ವರ್ಷ ಪ್ರಾಯದ, ಕೊಲ್ಕೊತ್ತಾದ ಮಾನವ್ ಸೋನಿ ಎರಡು ವರ್ಷಗಳ ಹಿಂದೆ ಆಗಷ್ಟೇ ಕಾನೂನು ವ್ಯಾಸಂಗ ಮುಗಿಸಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕಾರ್ಪೋರೇಟ್ ಲಾಯರಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಕೈತುಂಬಾ ಸಂಬಳ. ನಿಶ್ಚಿತ ಹಾಗೂ ಸುರಕ್ಷಿತ ಉದ್ಯೋಗ. ಅದು ಆತನ ಪ್ರಾಯದ ಅಸಂಖ್ಯ ಯುವಕರ ಕನಸು. ಮಾನವ್ ಸೋನಿ ಆ ಕನಸನ್ನು ಸುಲಭದಲ್ಲಿ ನನಸಾಗಿಸಿಕೊಂಡಿದ್ದರು.

ಕೊಲ್ಕೊತ್ತಾದಲ್ಲಿ ಹುಟ್ಟಿ ಬೆಳೆದ ಮಾನವ್ ಬಾಲ್ಯದಿಂದಲೇ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಶಾಲಾ ದಿನಗಳಲ್ಲಿ ಅವರು ಪರಿಸರ ಕ್ಲಬ್‌ಗಳ ಭಾಗವಾಗಿ ಸಮುದಾಯದ ಕೆಲಸಗಳಲ್ಲಿ ಸಕ್ರಿಯರಾಗಿರುತ್ತಿದ್ದರು. ಉದ್ಯೋಗಸ್ಥರಾದ ಮೇಲೂ ಅವರು ವಾರದ ದಿನಗಳಲ್ಲಿ ತನ್ನ ಕಚೇರಿಯಲ್ಲಿ ಪ್ರತೀ ದಿನ ಬಿಡುವಿಲ್ಲದ ದಿನಚರಿ ನಡೆಸಿದರೂ ವಾರಾಂತ್ಯದಲ್ಲಿ, ತನ್ನ ಶಾಲಾ ದಿನಗಳಲ್ಲಿ ಮಾಡುತ್ತಿದ್ದಂತೆಯೇ, ಸಾಮಾಜಿಕ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದರು.

ಅಕ್ಕಪಕ್ಕದ ಸರ್ಕಾರಿ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಿದ್ದರು. ಸ್ನೇಹಿತರನ್ನು ಸೇರಿಸಿಕೊಂಡು ಉಚಿತವಾಗಿ ಆಹಾರ ಹಂಚುವ ಕಾರ್ಯಕ್ರಮ ನಡೆಸುತ್ತಿದ್ದರು. ಮತ್ತು, ಬಡ ಸಮುದಾಯಗಳಿಂದ ಬಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ಕೊಡಿಸುತ್ತಿದ್ದರು. ಹೀಗೆ ಮಾಡುತ್ತಿದ್ದಾಗ ಆದ ಒಂದು ಅನುಭವ ಅವರ ಬದುಕಿನ ದಿಕ್ಕನ್ನು ಎತ್ತಲೋ ತಿರುಗಿಸಿತು.

ಮಾನವ್ ಸೋನಿ ಆರ್ಥಿಕವಾಗಿ ಸಹಾಯ ಮಾಡಿದ ಬಡಕುಟುಂಬದ ಒಬ್ಬಳು ಚಿಕ್ಕ ಹುಡುಗಿ ಚೆನ್ನಾಗಿ ಕಲಿತು, ಮುಂದೆ ದೊಡ್ಡ ಶಾಲೆಯೊಂದರಲ್ಲಿ ಪ್ರವೇಶ ಪಡೆದಳು. ಆಗ ಅವಳ ಹೆತ್ತವರು ಮಾನವ್ ಸೋನಿಗೆ ಆ ಸುದ್ದಿಯನ್ನು ಹೇಳುತ್ತ ಅವರು ತೋರಿಸಿದ ಸಂತೋಷ ಹಾಗೂ ಕೃತಜ್ಞತೆಯ ಭಾವ ಅವರ ಮೇಲೆ ತೀವ್ರವಾದ ಪರಿಣಾಮ ಬೀರಿತು. ಆ ದೃಶ್ಯ ಆಗಾಗ್ಗೆ ಮಾನವ್ ಸೋನಿಯ ಕಣ್ಣೆದುರು ಬಂದು ನಿಲ್ಲುತ್ತಿತ್ತು. ಆಗ ಅವರು, ‘ಒಬ್ಬ ವ್ಯಕ್ತಿಗೆ ಮಾಡಿದ ಸಹಾಯ ಇಷ್ಟೊಂದು ಪರಿಣಾಮ ಬೀರಲು ಸಾಧ್ಯವಾಗುವುದಾದರೆ, ನಾನೇಕೆ ಇಷ್ಟು ಚಿಕ್ಕ ಮಿತಿಯೊಳಗೆ ಕಾರ್ಯ ನಿರ್ವಸುತ್ತಿದ್ದೇನೆ? ಎಂದು ಅವರು ತನಗೆ ತಾನೇ ಕೇಳಿಕೊಳ್ಳತೊಡಗಿದರು.

ಹಾಗೆ ಕೇಳಿಕೊಳ್ಳುತ್ತಲೇ ಅವರು ‘ಫನ್ ಸ್ಮಾರ್ಟ್ ನಾಲೆಡ್ಜ್ ಸಲ್ಯೂಶನ್ -ಫೌಂಡೇಶನ್’ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದರು. ಮಾನವ್ ಸೋನಿ ಪ್ರಾರಂಭದಲ್ಲಿ ವಾರದ ದಿನಗಳಲ್ಲಿ ತನ್ನ ಕಾರ್ಪೊರೇಟ್ ಲಾಯರ್ ಉದ್ಯೋಗ ಹಾಗೂ ಬಿಡುವಿನ ದಿನಗಳಲ್ಲಿ ತನ್ನ -ಫೌಂಡೇಶನ್ನಿನ ಕಾರ್ಯಗಳು ಎರಡನ್ನೂ ನಿಭಾಯಿಸುತ್ತಿದ್ದರು. ಮಾನವ್ ತನ್ನ ಲಾಯರ್ ಪ್ರಾಕ್ಟೀಸ್ ಹಾಗೂ -ಫೌಂಡೇಶನ್‌ನ ಕೆಲಸಗಳ ಕಾರಣ ಮುನಿಸಿಪಾಲಿಟಿ ಹಾಗೂ ಹಲವಾರು ಸರ್ಕಾರಿ ಅಧಿಕಾರಿಗಳ ಸಂಪರ್ಕಕ್ಕೆ ಬಂದಿದ್ದರು. ೨೦೨೫ರಲ್ಲಿ ಅವರಿಗೆ ಚಿಕ್ಕದೊಂದು -ಫೌಂಡಿಂಗ್ ಲಭಿಸಿತು.

ಅದಾಗಿ ಒಂದು ತಿಂಗಳ ನಂತರ, ಅದೇನು ಅನ್ನಿಸಿತೋ, ಮಾನವ್ ತನ್ನ ಕಾರ್ಪೊರೇಟ್ ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ಆದರೆ, ತನ್ನ ಆ ನಿರ್ಧಾರ ಬಹಳ ಆತುರದ್ದು ಎಂಬುದು ಕೆಲವೇ ಸಮಯದಲ್ಲಿ ಅವರ ಅನುಭವಕ್ಕೆ ಬಂದಿತು. ಮಾನವ್ ಸೋನಿಗೆ ಯಾವುದೇ ದೊಡ್ಡ -ಫೌಂಡಿಂಗ್ ಬೆಂಬಲರಲಿಲ್ಲ. ಶ್ರೀಮಂತ ಕುಟುಂಬದ ಆಸರೆ ಇರಲಿಲ್ಲ. ಒಂದೇ ಒಂದು ಪ್ರಾಜೆಕ್ಟ್ ಸಿಗದ ತಿಂಗಳುಗಳೂ ಎದುರಾದವು. ಯಾವುದೇ ಕೆಲಸಕ್ಕೂ ಹಣವಿಲ್ಲದೆ ಪರದಾಡಬೇಕಾದ ದಿನಗಳೂ ಬಂದವು. ಇದೆಲ್ಲದರ ಪರಿಣಾಮವಾಗಿ ಒತ್ತಡಕ್ಕೊಳಗಾದ ಮಾನವ್ ಸೋನಿ ಅಸ್ವಸ್ಥರಾದರು. ಅಲ್ಲಿಯ ತನಕ ಮಾನವ್ ತಾನು ಉದ್ಯೋಗ ಬಿಟ್ಟುದುದನ್ನು ತನ್ನ ಹೆತ್ತವರಿಗೆ ಹೇಳಿರಲಿಲ್ಲ. ಮಗ ಅಸ್ವಸ್ಥನಾಗಿ ಮಲಗಿದಾಗ ಅವರಿಗೆ ಆ ವಿಚಾರ ತಿಳಿಯಿತು. ತಮ್ಮ ಮಗನ ಕೆಲಸಕ್ಕೆ ಅವರು ಸಹಜವಾಗಿಯೇ ಅಸಮಾಧಾನ ಸೂಚಿಸಿದರು. ಆದರೆ, ಕೊನೆಗೆ ಅವರೇ ಮಗನ -ಫೌಡೇಶನ್ ಸ್ಥಿರವಾಗಿ ನಿಲ್ಲಲು ಆರ್ಥಿಕವಾಗಿ ನೆರವಾದರು. ಅದರ ನಂತರ, ಸಮಯ ಸರಿದಂತೆ, ದಾನಿಗಳು ಆರ್ಥಿಕವಾಗಿ ಮಾನವ್ ಸೋನಿಯವರ ಸಹಾಯಕ್ಕೆ ಬರತೊಡಗಿದರು. ಫನ್ ಸ್ಮಾರ್ಟ್ ನಾಲೆಡ್ಜ್ ಸಲ್ಯೂಶನ್ -ಫೌಂಡೇಶನ್ ಈಗ ಕಸ ಲೇವಾರಿ, ನೈರ್ಮಲ್ಯ, ಗಿಡ ನೆಡುವುದು, ಶಿಕ್ಷಣ ಕ್ಷೇತ್ರ, ವಿಕಲಾಂಗರಿಗೆ ಸಹಾಯ ಹಾಗೂ ಮಹಿಳಾ ಅಭ್ಯುದಯ ಮೊದಲಾದ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ. ಈವರೆಗೆ ಸುಮಾರು ೫೦ ಪ್ರಾಜೆಕ್ಟುಗಳನ್ನು ಮುಗಿಸಿ, ಮೂರೂವರೆ ಲಕ್ಷಕ್ಕೂ ಅಽಕ ಜನರಿಗೆ ನೆರವಿನ ಹಸ್ತವನ್ನು ಚಾಚಿದೆ. ಮಿಯಾವಾಕಿ ಎಂಬ ಜಪಾನಿ ಕ್ರಮದಲ್ಲಿ ಚಿಕ್ಕ ಚಿಕ್ಕ ಕಾಡುಗಳನ್ನು ಸೃಷ್ಟಿಸುವುದು -ನ್ ಸ್ಮಾರ್ಟ್ ನಾಲೆಡ್ಜ್ ಸಲ್ಯೂಶನ್ -ಂಡೇಶನ್‌ನ ಮೊತ್ತ ಮೊದಲ ಹಾಗೂ ಪ್ರಧಾನ ಪ್ರಾಜೆಕ್ಟ್‌ಗಳಲ್ಲೊಂದು. ಪ. ಬಂಗಾಳದಲ್ಲಿ ಹೀಗೆ ನಿರ್ಮಿಸಲ್ಪಟ್ಟ ಒಂದು ಮಿಯಾವಾಕಿ ಕಾಡು ಇಂದು ಸುಮಾರು ೩೦ ಬಡ ಕುಟುಂಬಗಳಿಗೆ ಬದುಕಿನ ದಾರಿಯನ್ನು ಹಾಕಿಕೊಟ್ಟಿದೆ. ಈ ಕುಟುಂಬಗಳು ನೀರು, ಗೊಬ್ಬರ ಹಾಕಿ ಈ ಕಾಡನ್ನು ಪೋಷಿಸಿ, ಅದರಲ್ಲಿ ಸಿಗುವ ಕಾಡುತ್ಪನ್ನಗಳನ್ನು ಸಂಗ್ರಹಿಸಿ, ಮಾರಿ ತಮ್ಮ ಬದುಕಿಗೆ ದಾರಿ ಮಾಡಿಕೊಂಡಿವೆ. ಕಳೆದ ಬಾರಿಯ ದುರ್ಗಾ ಪೂಜೆಯ ಸಮಯದಲ್ಲಿ -ನ್ ಸ್ಮಾರ್ಟ್ ನಾಲೆಡ್ಜ್ ಸಲ್ಯೂಶನ್ -ಫೌಂಡೇಶನ್‌ನ ಸ್ವಯಂ ಸೇವಕರು ೧೨ ಟನ್ನುಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಸಿ, ಅದನ್ನು ಪರಿಷ್ಕರಿಸಿ, ಮಕ್ಕಳ ಕುರ್ಚಿ, ಬೆಂಚುಗಳನ್ನು ತಯಾರಿಸಿ ತರಿಸಿದರು. ಹೀಗೆ ಕಿರಿಯ ಪ್ರಾಯದ ಮಾನವ್ ಸೋನಿ ತಮ್ಮ ‘-ನ್ ಸ್ಮಾರ್ಟ್ ನಾಲೆಡ್ಜ್ ಸಲ್ಯೂಶನ್ -ಂಡೇಶನ್’ ಮೂಲಕ ಮಾನವೀಯ ಸೇವೆಯಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್!

ಬೆಂಗಳೂರು: ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಗೆ ತಡೆ…

8 hours ago

ಮೈಸೂರು–ಮಾನಂದವಾಡಿ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು!

ಮೈಸೂರು: ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕೋಹಳ ಬಳಿಯ ಮೈಸೂರು–ಮಾನಂದವಾಡಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್ಆರ್‌ಟಿಸಿ ಬಸ್…

8 hours ago

174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ಗೆ ಇಸ್ರೇಲ್‌ನ ಶೌರ್ಯ ಪ್ರಶಸ್ತಿ!

ಜೆರುಸೇಲಂ: ಭೀಕರ ವಿಮಾನ ಅವಘಡವನ್ನು ತಪ್ಪಿಸಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ…

9 hours ago

ರಾಜ್ಯ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್‌ಗೆ ಸಂಚು?: ಶಾಸಕ ಗಣಿಗ ರವಿ ಗಂಭೀರ ಆರೋಪ!

ಮಂಡ್ಯ: ರಾಜ್ಯದ ಸಚಿವರಿಗೆ ಮುಜುಗರ ಉಂಟುಮಾಡಲು ಕೇಂದ್ರ ಸಚಿವರೊಬ್ಬರು ಹಾಗೂ ಕರ್ನಾಟಕದ ಬಿಜೆಪಿ ನಾಯಕರೊಬ್ಬರು ಸ್ಟಿಂಗ್ ಆಪರೇಷನ್‌ಗೆ ಸಂಚು ರೂಪಿಸಿದ್ದಾರೆ…

9 hours ago

ಸಿದ್ದಾಪುರ ಮೈಸೂರು ಮುಖ್ಯ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ

ಸಿದ್ದಾಪುರ: ಸಿದ್ದಾಪುರ ಮೈಸೂರು ಮುಖ್ಯ ರಸ್ತೆಯ ಘಟ್ಟತಳ ಹೇರೂರು ಎಸ್ಟೇಟ್ ಬಳಿ ಗುರುವಾರ ರಾತ್ರಿ ಹುಲಿ ಕಾಣಿಸಿಕೊಂಡಿದ್ದು ಬಳಿಕ ಸಮೀಪದ…

10 hours ago

ಓದುಗರ ಪತ್ರ: ಬಂತು ಎಟಿಎಂನಲ್ಲಿ ‘ತೇಪೆ’ ಹಾಕಿದ ನೋಟು!

ಒಂದು ಕಾಲದಲ್ಲಿ (ಒಂದಾನೊಂದು ಕಾಲದಲ್ಲಿ ಎಂಬ ಮಾತಿನಂತೆ) ಎಟಿಎಂ ಯಂತ್ರಗಳಿಂದ ಹಣ ಡ್ರಾ ಮಾಡಿದಾಗ ಸಾಮಾನ್ಯವಾಗಿ ಹೊಸ ಗರಿಗರಿನೋಟುಗಳು ಬರುತ್ತಿದ್ದವು.…

11 hours ago