ಅಂಕಣಗಳು

ಸೌಂದರ್ಯ ರಾಣಿಗೆ ಮಹಿಳಾ ಸಬಲೀಕರಣದ ತುಡಿತ

ನಾನು ಮಲ್ಲಮ್ಮಾ ಗಾಣಿಗಿ, ಉತ್ತರ ಕರ್ನಾಟಕದ ಮಮಾದಾಪುರ ಎಂಬ ಸಣ್ಣ ಹಳ್ಳಿಯವಳು. ಸದ್ಯಕ್ಕೆ ಮೈಸೂರಿನಲ್ಲಿ ವಾಸಿಸುತ್ತಿದ್ದೇನೆ. ವಿದ್ಯುನ್ಮಾನ ಮತ್ತು ಸಂವಹನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿನ ಹೆಸರಾಂತ ಐ.ಟಿ. ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ‘ಟೆಸ್ಟ್ ಆರ್ಕಿಟೆಕ್ಟ್’ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

ಮಹಿಳಾ ಸಬಲೀಕರಣ ನಾನು ಅಪಾರ ಆಸಕ್ತಿ ಹೊಂದಿರುವ ಮತ್ತು ನನ್ನನ್ನು ತೊಡಗಿಸಿಕೊಂಡಿರುವ ಕ್ಷೇತ್ರ, ಅದರಲ್ಲೂ ಬಡ ಹೆಣ್ಣುಮಕ್ಕಳ ಸಬಲೀಕರಣ ನನ್ನ ಕನಸು, ಮಹಿಳೆಯರು ಸ್ವಾವಲಂಬಿಗಳಾಗಿರಬೇಕು ಎಂಬುದೇ ನನ್ನ ಧ್ಯೇಯ.

ನಾನು ಪರಿಸರ ಪ್ರಿಯೆಯೂ ಹೌದು. ಪರಿಸರ ರಕ್ಷಣೆಯ ವಿಚಾರದಲ್ಲಿ ಹೆಚ್ಚು ಒಲವು ಹೊಂದಿದ್ದೇನೆ. ಮೈಸೂರಿನ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಸಂಸ್ಥೆಗಳು ಆಯೋಜಿಸುವ ಅನೇಕ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತೇನೆ.

ಶಿಕ್ಷಣವು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು. ಪ್ರತಿ ಮಕ್ಕಳೂ ಶಿಕ್ಷಣ ಪಡೆಯಬೇಕು. ಇದಕ್ಕಾಗಿ ನಾನು ಮತ್ತು ನನ್ನ ಪತಿ ಸೇರಿ ಬಡ ಕುಟುಂಬದ ಒಂದೆರಡು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ಬೆಂಬಲವನ್ನು ನೀಡುತ್ತಾ ಬಂದಿದ್ದೇವೆ. ಹಾಗೆಯೇ ಹಲವು ಸಮ ಮನಸ್ಕರ ಜೊತೆಗೂಡಿ ನಾನು ಓದಿದ ಶಾಲೆ ಹಾಗೂ ಕೆಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪುಸ್ತಕಗಳು, ಕಂಪ್ಯೂಟರ್, ಶಾಲಾ ಶುಲ್ಕ ಇವುಗಳಿಗೆ ಅಗತ್ಯವಾದ ನೆರವನ್ನು ನೀಡುತ್ತಾ ಬಂದಿದ್ದೇವೆ. ಇದು ನಾವು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಪ್ರಯತ್ನ.

ಇದರೊಂದಿಗೆ ರೂಪ ದರ್ಶಿಯಾಗಿಯೂ ನನ್ನ ಬದುಕು ಉತ್ತಮವಾಗಿದೆ. ಪ್ರತಿ ಮಹಿಳೆಯೂ ತನ್ನದೇ ಆದ ರೀತಿಯಲ್ಲಿ ಅನನ್ಯ ಮತ್ತು ಸುಂದರ, ವಿವಾಹಿತ ಮಹಿಳೆಯರಿಗಾಗಿ ಮಿಸೆಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ಈ ಸ್ಪರ್ಧೆಯಲ್ಲಿ ಕೇವಲ ಬಾಹ್ಯ ಸೌಂದರ್ಯಕ್ಕೆ ಮಾತ್ರವಲ್ಲದೆ, ಆಂತರಿಕ ಸೌಂದರ್ಯ, ಪ್ರತಿಭೆ, ಬುದ್ಧಿವಂತಿಕೆ ಜತೆಗೆ ವಿವಾಹಿತ ಮಹಿಳೆಯ ವ್ಯಕ್ತಿತ್ವವನ್ನೂ ಗುರುತಿಸಲಾಗುತ್ತದೆ.

ಈ ಸ್ಪರ್ಧೆಯು ಎಲ್ಲ ವಯಸ್ಸಿನ, ಜನಾಂಗದ ಮಹಿಳೆಯರಿಗೆ ತೆರೆದಿರುತ್ತದೆ. ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು, ನಿಮ್ಮ ಗುರಿಗಳನ್ನು ತಲುಪಲು ಇಲ್ಲಿ ಉತ್ತಮ ಮಾರ್ಗದರ್ಶನ ಸಿಗಲಿದೆ.
ಈ ಸ್ಪರ್ಧೆಯು ಮನರಂಜನಾ ಪ್ರಪಂಚದೊಂದಿಗೆ ಸಂಬಂಧ ಹೊಂದಿರುವುದರಿಂದ ಈ ಸ್ಪರ್ಧೆಯ ಕಾರ್ಯಕ್ರಮಗಳು ನಮಗೆ ಬಹಳಷ್ಟು ಅವಕಾಶಗಳನ್ನು
ಒದಗಿಸಿಕೊಡುತ್ತದೆ.

ಮಾಡೆಲಿಂಗ್, ನಟನೆ, ಸೌಂದರ್ಯ ಪ್ರದರ್ಶನದಂತಹ ಅನೇಕ ಅವಕಾಶಗಳನ್ನು ದೊರಕಿಸಿಕೊಡುತ್ತದೆ. ಮನರಂಜನೆಯ ಕ್ಷೇತ್ರ ಎಂಬುದು ನಮ್ಮ ಕನಸನ್ನು ನನಸು ಮಾಡಲು ಸಹಾಯ ಮಾಡಬಹುದು. ನಾನು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹದಿಂದ ಇತ್ತೀಚೆಗೆ ರಾಜಸ್ಥಾನದ ರಾಣತಂಬೂರ್‌ನಲ್ಲಿ ವಿವಾಹಿತ ಹೆಣ್ಣು ಮಕ್ಕಳಿಗೆ ನಡೆದ ರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಾಹಿಸಿ Mrs India Corporate Queen ಎಂಬ ಬಿರುದು ಪಡೆದಿದ್ದೇನೆ.

ಇದು ನನಗೆ ಬಹಳಷ್ಟು ಹೆಮ್ಮೆ ತಂದಿದೆ. ಬಿರುದು, ಪ್ರಶಸ್ತಿಗಳು ಒಂದೆಡೆ ಇರಲಿ. ಈ ಸ್ಪರ್ಧೆ ಯಿಂದ ನಾನು ಅನೇಕ ವಿಷಯಗಳನ್ನು ಕಲಿತೆ. ನನ್ನೊಳಗಿನ ಆಂತರಿಕ ಶಕ್ತಿ, ಆತ್ಮಸ್ಥೆರ್ಯ, ಪ್ರತಿಭೆಗಳನ್ನು ವೇದಿಕೆಗೆ ತರಲು ಸಹಾಯ ಮಾಡಿ ನನ್ನ ಬೆಳವಣಿಗೆಗೆ ಸಹಕಾರಿಯಾಗಿದೆ. 7-8 ವರ್ಷಗಳ ಕಲಿಕೆ 6 ತಿಂಗಳಿನಲ್ಲಿ ಆಯಿತು. ವಿಭಿನ್ನ ರೀತಿಯ ಉಡುಪು – ಅಲಂಕಾರ, ಆತ್ಮ ವಿಶ್ವಾಸ ಮತ್ತು ಮುಗುಳ ನಗೆಯ ನಡಿಗೆ, ಒಳ್ಳೆಯ ಮಾತುಗಾರಿಕೆ, ನಾವು ಜಗತ್ತಿಗೆ ನಮ್ಮನ್ನು ಪ್ರಸ್ತುತಪಡಿಸುವ ರೀತಿ, ಒಟ್ಟಾರೆ ವಕ್ತಿತ್ವ ವಿಕಸನಕ್ಕೆ ದಾರಿಯಾಯಿತು.

ನನ್ನ ಜೀವನದ ಓದು, ಮದುವೆ, ಉದ್ಯೋಗ, ಎಲ್ಲ ಹಂತಗಳಲ್ಲಿಯೂ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಕಠಿಣ ಪರಿಶ್ರಮ, ಧೈರ್ಯ, ದೃಢ ನಿಶ್ಚಯದಿಂದ ಆ ಸವಾಲುಗಳನ್ನು ನಿಭಾಯಿಸಿದ್ದೇನೆ. ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ. ಏನನ್ನಾದರೂ ಸಾಧಿಸಬೇಕು ಎಂಬುದು ನಮ್ಮ ಮನಸ್ಸಿನಲ್ಲಿ ದೃಢವಾಗಿದ್ದರೆ ಸಾಕು ನಾವು ಸಣ್ಣ ಹಳ್ಳಿಯ ಬಡ ಕುಟುಂಬದಿಂದ ಬಂದಿದ್ದರೂ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೂ ಯಾವ ಸಾಧನೆ ಬೇಕಿದ್ದರೂ ಮಾಡಬಹುದು. ಇದರ ಜೊತೆಗೆ ನಾನು ಹಾಡುವುದು, ಓದುವುದು, ಮೋಟಾರ್ ಬೈಕ್ ಓಡಿಸುವುದು ಹೀಗೆ ಅನೇಕ ಹವ್ಯಾಸಗಳಲ್ಲಿಯೂ ತೊಡಗಿದ್ದೇನೆ. ಬಲವಾದ ಮಹಿಳೆ ತನ್ನನ್ನು ತಾನೇ ಪ್ರತಿನಿಧಿಸುತ್ತಾಳೆ, ಬಲಿಷ್ಠವಾದ ಮಹಿಳೆ ಪ್ರತಿಯೊಬ್ಬರ ಪರವಾಗಿಯೂ ನಿಲ್ಲುತ್ತಾಳೆ ನಾವೆಲ್ಲರೂ ಬಲಿಷ್ಠವಾದ ಮಹಿಳೆಯರಾಗೋಣ.

andolana

Recent Posts

ಅಪ್ರಾಪ್ತನಿಗೆ ದ್ವಿಚಕ್ರ ವಾಹನ ನೀಡಿದ ಪೋಷಕರಿಗೆ 30 ಸಾವಿರ ರೂ.ದಂಡ

ಸಿದ್ದಾಪುರ : ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ಪೋಷಕರಿಗೆ ನ್ಯಾಯಾಲಯ ಹಾಗೂ ಬಾಲ…

2 hours ago

ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲೂ ಬದಲಾವಣೆ ; ಭಾಗವತ್‌ ಕುರಿತು ಖರ್ಗೆ ವ್ಯಂಗ್ಯ

ಬೆಂಗಳೂರು : ಆರ್‌ಎಸ್‌ಎಸ್ ಸಂಘಟನೆಯ ಕಾರ್ಯವೈಖರಿ ಹಾಗೂ ವಿದೇಶದಲ್ಲಿನ ಅದರ ಚಟುವಟಿಕೆಗಳ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಸಾಮಾಜಿಕ ಜಾಲತಾಣದಲ್ಲಿ…

2 hours ago

ಚಿತ್ರಕೂಟ ; ಮಂದಾಕಿನಿ ನದಿ ಪ್ರವಾಹ ಭೀತಿ

ಚಿತ್ರಕೂಟ : ಮಧ್ಯಪ್ರದೇಶ-ಉತ್ತರ ಪ್ರದೇಶ ಗಡಿಯಲ್ಲಿರುವ ಧಾರ್ಮಿಕ ಕ್ಷೇತ್ರ ಚಿತ್ರಕೂಟದಲ್ಲಿ ಮಂದಾಕಿನಿ ನದಿ ಅಪಾಯಕಾರಿಯಾಗಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ…

3 hours ago

ನೇಪಾಳ ಪ್ರವಾಹ ; ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

ಮೃತರ ಸಂಖ್ಯೆ 750 ಕ್ಕೆ ಏರಿಕೆ; 3,044 ನಾಪತ್ತೆ ಕಠ್ಮಂಡು : ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ…

3 hours ago

ಕೆಪಿಎಸ್‌ಸಿ ಹಗರಣ : ಐಎಎಸ್‌ ಅಧಿಕಾರಿ ಘ್ಯಾನೇಂದ್ರ ಕುಮಾರ್‌ ಬಂಧನ

ಬೆಂಗಳೂರು : ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ(ಕೆಪಿಎಸ್‌ಸಿ) ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಘ್ಯಾನೇಂದ್ರ ಕುಮಾರ್‌ ಗಂಗ್ವಾರ್‌ ಅವರನ್ನು ಸಿಐಡಿ…

4 hours ago

ಹನೂರು ಶೂಟ್‌ಔಟ್ ಪ್ರಕರಣ | ಸ್ಥಳ ಮಹಜರ್, ಸಾಕ್ಷಿ ವಿಚಾರಣೆ

ಹನೂರು : ಕಾವೇರಿ ವನ್ಯಜೀವಿಧಾಮದ ಹೊಲೆಮುರಿದಟ್ಟಿ ಕರಿಕಲ್ಲು ಗುಡ್ಡ ಅರಣ್ಯ ಪ್ರದೇಶದಲ್ಲಿ ಶೂಟ್‌ಔಟ್ ನಡೆದ ಸ್ಥಳಕ್ಕೆ ಪ್ರಕರಣದ ಪ್ರಮುಖ ಸಾಕ್ಷಿ…

7 hours ago