ಅಂಕಣಗಳು

ಉದ್ಯೋಗ ಬಿಟ್ಟು ಸಾವಯವ ಕೃಷಿಯತ್ತ ಮರಳಿದ ನೂರಲಕುಪ್ಪೆಯ ಮಹೇಶ್

• ಅನಿಲ್ ಅಂತರಸಂತೆ

ದಶಕಗಳ ಹಿಂದೆ ದೇಶದ ಶೇ.50ಕ್ಕಿಂತಲೂ ಅಧಿಕ ಜನರ ಮುಖ್ಯ ಕಸುಬಾಗಿದ್ದ ಕೃಷಿ ಕ್ಷೇತ್ರ ಇತ್ತೀಚೆಗೆ ಹಂತ ಹಂತವಾಗಿ ಇಳಿಮುಖವಾಗುತ್ತಿದೆ. ಕೃಷಿಯಲ್ಲಿ ಲಾಭವಿಲ್ಲ, ಬೆಳಗೆ ಬೆಂಬಲ ಬೆಲೆ ಇಲ್ಲ, ಕೃಷಿಯನ್ನು ನಂಬಿ ಗುಣಮಟ್ಟದ ಜೀವನ ಸಾಗಿಸಲು ಸಾಧ್ಯವಿಲ್ಲ ಎಂಬೆಲ್ಲ ಭಾವನೆ ಗಳಿಂದ ಸಾಕಷ್ಟು ಯುವಕರು ಕೃಷಿಯನ್ನು ತ್ಯಜಿಸಿ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬರು ತಮ್ಮ ವೃತ್ತಿ ಬದುಕನ್ನೇ ತ್ಯಜಿಸಿ ತಾವೊಬ್ಬ ಕೃಷಿಕನಾಗಬೇಕು ಎಂಬ ಮಹದಾಸೆಯಿಂದ ಕೃಷಿ ಕ್ಷೇತ್ರಕ್ಕೆ ತೆರಳಿ, ಯುವಕರಿಗೆ ಮಾದರಿಯಾಗಿದ್ದಾರೆ. ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ, ಎಚ್‌.ಡಿ.ಕೋಟೆ ತಾಲ್ಲೂಕಿನ ನೂರಲಕುಪ್ಪೆ ‘ಎ’ ಗ್ರಾಮದ ಎನ್.ಎನ್. ಮಹೇಶ್ ತಮ್ಮ ವೃತ್ತಿಯಿಂದ ವೈಯಕ್ತಿಕ ನಿವೃತ್ತಿ ಪಡೆದು ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಹೇಶ್ ತಮ್ಮ 10 ಎಕರೆ ಜಮೀನಿನಲ್ಲಿ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದು, ಕೃಷಿಯಲ್ಲಿ ಶ್ರಮವಹಿಸಿ, ಆಸಕ್ತಿಯಿಂದ ದುಡಿದರೆ ಅಲ್ಲಿಯೂ ಲಾಭವಿದೆ, ಉತ್ತಮ ಆದಾಯ ಗಳಿಸಿ ಆರ್ಥಿಕವಾಗಿ ಮುಂದೆ ಬರಬಹುದು ಎಂಬುದನ್ನು ಸಾಧಿಸಿ ಉಳಿದವರಿಗೆ ಮಾದರಿಯಾಗಿದ್ದಾರೆ. ಜಮೀನಿಗೆ ಯಾವುದೇ ರಾಸಾಯನಿಕಗಳನ್ನು ಬಳಸದೇ ಸಾವಯವ ಕೃಷಿ ಮಾಡುತ್ತಿರುವ ಮಹೇಶ್, ‘ಸುಭಾಷ್ ಪಾಳೇಕರ್ ನ್ಯಾಚುರಲ್ ಫಾಮಿಂಗ್’ ವಿಧಾನವನ್ನು ಅಳವಡಿಸಿಕೊಂಡಿ ದ್ದಾರೆ. ಈ ಕೃಷಿ ಪದ್ಧತಿಯ ಮೂಲಕ ‘ಫೈವ್ (5) ಲೇಯರ್ ಫಾರ್ಮಿಂಗ್’ ಪದ್ಧತಿಯನ್ನು ಅಳವಡಿಸಿಕೊಂಡು ತೆಂಗು, ಅಡಕೆ, ಬಾಳೆ, ಶುಂಠಿ ಸೇರಿದಂತೆ ಇತರೆ ತರಕಾರಿಗಳು, ಮೆಣಸು, ಗೆಡ್ಡೆಗೆಣಸುಗಳನ್ನು ಬೆಳೆಯುತ್ತಿದ್ದಾರೆ. ಬಿಎಸ್‌ಎನ್‌ಎಲ್‌ ಸಂಸ್ಥೆಯಲ್ಲಿನ ಉತ್ತಮ ಉದ್ಯೋಗದಲ್ಲಿದ್ದ ಇವರು ಅದನ್ನು ತ್ಯಜಿಸಿ ಕೃಷಿಯತ್ತ ವಾಲಿದ್ದೇ ಒಂದು ವಿಶೇಷ. ವೃತ್ತಿಯಿಂದ ಅಷ್ಟಾಗಿ ಆರ್ಥಿಕ ಸ್ಥಿತಿ ಸುಧಾರಿಸದ ಪರಿಣಾಮ ಕೆಲಸಕ್ಕೆ ವೈಯಕ್ತಿಕ ನಿವೃತ್ತಿ ಪಡೆದು ತಮ್ಮ ತಂದೆಯಿಂದ ಬಳುವಳಿಯಾಗಿ ಬಂದ ಭೂಮಿಯಲ್ಲಿ ದುಡಿಯಲು ಆರಂಭಿಸಿದರು.

ತಾವು ಕೃಷಿ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಕೇವಲ ಆರ್ಥಿಕ ಸ್ಥಿತಿ ಮಾತ್ರವಲ್ಲದೆ, ಸಾವಯವ ಕೃಷಿಯ ಬಗ್ಗೆ ಅವರಲ್ಲಿದ್ದ ಒಲವೂ ಅಧ್ಯಯನದ ಕ್ರಿಯಾಶೀಲತೆ, ಹತ್ತಾರು ಕಡೆ ಸುತ್ತಿ ಸಾವಯವ ಕೃಷಿಯ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುವಂತೆ ಮಾಡಿತು. ಅಲ್ಲದೆ, ಕೃಷಿಯಿಂದ ದೂರಾಗುತ್ತಿರುವ ಯುವ ಸಮೂಹವನ್ನು ಮತ್ತೆ ಕೃಷಿಯತ್ತ ಸೆಳೆಯಬೇಕು, ಅವರಿಗೆ ಇದರಲ್ಲಿಯೂ ಉತ್ತಮ ಆದಾಯವಿದೆ ಎಂಬುದನ್ನು ತೋರಿಸಿಕೊಡಬೇಕು, ಕೃಷಿಕರಾದ ತಾವು ಪ್ರಕೃತಿಯೊಂದಿಗೆ ನೇರ ಸಂಪರ್ಕದಲ್ಲಿರ ಬಹುದು ಎಂಬೆಲ್ಲ ಕಾರಣಗಳ ಜತೆಗೆ ತಮ್ಮ ಮಕ್ಕಳಿಗೂ ಕೃಷಿಯ ಮೇಲೆ ಆಸಕ್ತಿ ಹೆಚ್ಚಾಗಿ, ಅವರೂ ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿ ಕೊಳ್ಳಲು ಅನುಕೂಲವಾಗಲಿ ಎಂಬ ಕಾರಣ ಕ್ಕಾಗಿ ಮಹೇಶ್ ಕೃಷಿ ಕ್ಷೇತ್ರಕ್ಕೆ ಮರಳಿದ್ದಾರೆ.

2 ವರ್ಷಗಳಿಂದ ಕೃಷಿಕರಾಗಿ ಬೇಸಾಯದ ಬಗ್ಗೆ ಹೆಚ್ಚು ಒಲವು ತೋರಿರುವ ಮಹೇಶ್, ಅಡಕೆ ಮತ್ತು ತೆಂಗು ಉತ್ತಮ ಫಲಸು ನೀಡಲು ಆರಂಭಿಸಿದರೆ ವಾರ್ಷಿಕ 50 ಲಕ್ಷ ರೂ.ಗಳ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದು, ಮಹೇಶ್, ಮಾದರಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ.
ania64936@gmail.com

andolanait

Recent Posts

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ; 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ

ಮೊದಲಬಾರಿಗೆ ರಾಷ್ಟ್ರರಾಜಧಾನಿಯಿಂದ ಹೊರಗೆ ಆಯೋಜನೆ   72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಮೊದಲ ಬಾರಿಗೆ ನವದೆಹಲಿಯಿಂದ…

37 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 21 ಶುಕ್ರವಾರ

3 hours ago

911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ : ಗೃಹ ಸಚಿವ ಖರ್ಗೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…

15 hours ago

ಕಾವೇರಿ ವನ್ಯಧಾಮದಲ್ಲಿ 8 ಕಳ್ಳಬೇಟೆ ಶಿಬಿರ ಧ್ವಂಸ : ಎಫ್‌ಐಆರ್ ದಾಖಲು, ತನಿಖೆ ಚುರುಕು

ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…

16 hours ago

1984 ಸಿಖ್‌ ವಿರೋಧಿ ದಂಗೆ ಪ್ರಕರಣ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್‌ ಕುಮಾರ್‌ ನಿಧನ

ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…

18 hours ago

ನಾರಾಯಣಸ್ವಾಮಿಗೆ ಕಮಾಂಡೆಂಟ್‌ ಬೆಳ್ಳಿ ಪದಕ

ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…

18 hours ago