ಚಿತ್ರ ಮಂಜರಿ

ಕರ್ಮದ ಏಟು ತಪ್ಪಲ್ಲ : ನಟ ಧನ್ವೀರ್‌ ಎಚ್ಚರಿಕೆ

ಧರ್ಮದ ಏಟಿನಿಂದ ತಪ್ಪಿಸಿಕೊಳ್ಳಬಹುದು ಆದರೆ ಕರ್ಮದ ಏಟಿನಿಂದ ತಪ್ಪಿಸಿಕೊಳ್ಳು ಸಾಧ್ಯವಿಲ್ಲ ಅಂತಾ ನೆಗಿಟಿವ್‌ ಕಮೆಂಟ್‌ ಮಾಡುವವರಿಗೆ ನಟ ಧನ್ವೀರ್‌ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.
ಈಗಾಗಲೇ ಧನ್ವೀರ್‌ ಹಾಗೂ ಮೇಘಾ ಶೆಟ್ಟಿ ಅಭಿನಯದ ಕೈವ ಸಿನಿಮಾ ಬಿಡುಗಡೆಯಾಗಿದ್ದು, ಸಿನಿ ರಸಿಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಧನ್ವೀರ್‌ ಹಾಗೂ ಮೇಘಾ ಶೆಟ್ಟಿ ಅಭಿನಯದ ಕೈವ ಸಿನಿಮಾ 80 ರ ದಶಕದಲ್ಲಿನ ಬೆಂಗಳೂರು ಕರಗದ ವೇಳೆ ನಡೆದ ನೈಜ ಘಟನೆಯನ್ನು ಬಿಚ್ಚಿಡುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ವಿಮರ್ಶೆ ಜೋರಾಗಿದೆ. ಧನ್ವೀರ್‌ ಅವರಿಗೆ ಯಾವಾಗಲೂ ಸಪೋರ್ಟ್‌ ಮಾಡುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಫೋಟೋ ಬಳಸಿಕೊಂಡು ನೆಗಿಟಿವ್‌ ಕಮೆಂಟ್‌ ಮಾಡಲಾಗುತ್ತಿದೆ. ಹೇಗೆ ನೆಗಿಟಿವ್‌ ಕಾಮೆಂಟ್‌ ಮಾಡುತ್ತಿರುವವರ ಮೇಲೆ ನಟ ಧನ್ವೀರ್‌ ಬೇಸರ ಹೊರ ಹಾಕಿದ್ದಾರೆ.
ಧರ್ಮದ ಏಟಿನಿಂದ ತಪ್ಪಿಸಿಕೊಳ್ಳಬಹುದು. ಆದರೆ ಕರ್ಮದ ಏಟಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಾಧ್ಯಮಗಳಲ್ಲಿ ನಿಜವಾದ ವಿಮರ್ಶೆ ಕೊಡುವವರು ಸಿನಿಮಾ ಬಿಡುಗಡೆ ಆದಮೇಲೆ ಜನರ ಬಳಿ ಬಂದು ಕೇಳಿ ವಿಮರ್ಶೆ ಪಡೆಯುವವರು ನಿಜವಾದ ಸಿನಿ ಪ್ರೇಮಿಗಳು. ರಿವ್ಯೂವರ್ಸ್‌ ಅಂತಾ ಹೇಳಿಕೊಂಡು ಏನೇನೋ ಬರೆದುಕೊಂಡು ತುಳಿಯಲು ಪ್ರಯತ್ನಿಸುತ್ತಾರೆ. ಅಂತಹವರು ನಿಜವಾದ ಚಿತ್ರ ಪ್ರೇಮಿಗಳಲ್ಲ. ಹೊಟ್ಟೆ ಪಾಡಿಗಾಗಿ ಈ ರೀತಿಯ ಕೆಲಸ ಮಾಡಿಕೊಂಡು  ಕೂರುತ್ತಾರೆ. ಯಾರೋ ಏನೋ ಹೇಳುತ್ತಾರೆ ಅಂತಾ ಸುದ್ದಿ ಮಾಡುತ್ತಾರೆ. ಏನು ಮಾಡುತ್ತಾರೋ ಮಾಡಲಿ. ಧರ್ಮಕ್ಕೂ ಕರ್ಮಕ್ಕೂ ಸಮಯ ಬರುತ್ತೆ ಅದಕ್ಕೆ ಕಾಯುತ್ತೀನಿ.
ನನ್ನ ಹಿಂದಿನ ಸಿನಿಮಾ ಸಮಯದಲ್ಲಿಯೂ ಕೂಡ ಇದೇ ರೀತಿ ಆಗಿತ್ತು. ಇರ್ಲಿ ಪರವಾಗಿಲ್ಲ, ಬೆಳೆಯುತ್ತಿದ್ದೀಯ, ಬೆಳೆದ ಮೇಲೆ ಕಾಂಟ್ರವರ್ಸಿ ಅನ್ನೋದು ಶುರುವಾಗುತ್ತೆ ತಲೆ ಕೆಡಿಸಿಕೊಳ್ಳಬೇಡ ಅಂತಾ ದೊಡ್ಡವರು ಹೇಳಿದ್ದಾರೆ ಅಂತಾ ನಟ ಧನ್ವೀರ್‌ ಹೇಳಿದ್ದಾರೆ.
lokesh

Recent Posts

ಹನೂರು ತಾಲ್ಲೂಕಿನಲ್ಲಿ ಕೇಂದ್ರ ಬರ ಅಧ್ಯಯನ ತಂಡದಿಂದ ಎರಡನೇ ದಿನದ ಸಮಗ್ರ ಪರಿಶೀಲನೆ

ಹನೂರು: ತಾಲ್ಲೂಕಿನಾದ್ಯಂತ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ಎರಡನೇ ದಿನವಾದ ಇಂದು ಹನೂರು…

12 hours ago

ಬಿರುಗಾಳಿ ಮಳೆಗೆ ಬಾಳೆ ಬೆಳೆ ನೆಲಕಚ್ಚಿ:ರೈತರಿಗೆ ಲಕ್ಷಾಂತರ ರೂ. ನಷ್ಟ!

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಸಂಪೂರ್ಣ…

12 hours ago

ಕಾಡುಪ್ರಾಣಿಗಳ ಹಾವಳಿ ತಡೆಗೆ ಸ್ಟೀಲ್ ರೋಪ್ ಬ್ಯಾರಿಕೇಡ್

ಮಂಜು ಕೋಟೆ ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಕೆ  ಎಚ್.ಡಿ.ಕೋಟೆ: ತಾಲ್ಲೂಕಿನ ಕಾಡಂಚಿನಲ್ಲಿ ಕಾಡು ಪ್ರಾಣಿಗಳು…

13 hours ago

ದಸರೆಯಲ್ಲಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದ ಮುಖ್ಯಮಂತ್ರಿ

ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ…

13 hours ago

ಪೌರಕಾರ್ಮಿಕರಿಗೆ ಉಚಿತ ಸಾಬೂನು ಗ್ಯಾರಂಟಿ ಕೊಡಿ

ವಸಂತಕುಮಾರ್ ಮೈಸೂರು ಮಠ ಮೈಸೂರಿನ ಸ್ವಚ್ಛತೆ ಜವಾಬ್ದಾರಿ ಪೌರಕಾರ್ಮಿಕರ ಹೆಗಲ ಮೇಲಿದೆ ಇದು ನಮ್ಮ ಕಸ, ಇದರ ನಿರ್ವಹಣೆ ನಮ್ಮ…

13 hours ago

ಅಸ್ತ್ರಗಳು, ಅಂಧಕಾರ, ಆತಂಕ

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ   ಪ್ರಯೋಗಕೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕದ ರಾಜಕಾರಣ ಎಷ್ಟು ಆತಂಕದ ಮಟ್ಟಕ್ಕೆ…

13 hours ago