• ಅನಿಲ್ ಅಂತರಸಂತೆ
ದಶಕಗಳ ಹಿಂದೆ ದೇಶದ ಶೇ.50ಕ್ಕಿಂತಲೂ ಅಧಿಕ ಜನರ ಮುಖ್ಯ ಕಸುಬಾಗಿದ್ದ ಕೃಷಿ ಕ್ಷೇತ್ರ ಇತ್ತೀಚೆಗೆ ಹಂತ ಹಂತವಾಗಿ ಇಳಿಮುಖವಾಗುತ್ತಿದೆ. ಕೃಷಿಯಲ್ಲಿ ಲಾಭವಿಲ್ಲ, ಬೆಳಗೆ ಬೆಂಬಲ ಬೆಲೆ ಇಲ್ಲ, ಕೃಷಿಯನ್ನು ನಂಬಿ ಗುಣಮಟ್ಟದ ಜೀವನ ಸಾಗಿಸಲು ಸಾಧ್ಯವಿಲ್ಲ ಎಂಬೆಲ್ಲ ಭಾವನೆ ಗಳಿಂದ ಸಾಕಷ್ಟು ಯುವಕರು ಕೃಷಿಯನ್ನು ತ್ಯಜಿಸಿ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬರು ತಮ್ಮ ವೃತ್ತಿ ಬದುಕನ್ನೇ ತ್ಯಜಿಸಿ ತಾವೊಬ್ಬ ಕೃಷಿಕನಾಗಬೇಕು ಎಂಬ ಮಹದಾಸೆಯಿಂದ ಕೃಷಿ ಕ್ಷೇತ್ರಕ್ಕೆ ತೆರಳಿ, ಯುವಕರಿಗೆ ಮಾದರಿಯಾಗಿದ್ದಾರೆ. ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ, ಎಚ್.ಡಿ.ಕೋಟೆ ತಾಲ್ಲೂಕಿನ ನೂರಲಕುಪ್ಪೆ ‘ಎ’ ಗ್ರಾಮದ ಎನ್.ಎನ್. ಮಹೇಶ್ ತಮ್ಮ ವೃತ್ತಿಯಿಂದ ವೈಯಕ್ತಿಕ ನಿವೃತ್ತಿ ಪಡೆದು ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮಹೇಶ್ ತಮ್ಮ 10 ಎಕರೆ ಜಮೀನಿನಲ್ಲಿ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದು, ಕೃಷಿಯಲ್ಲಿ ಶ್ರಮವಹಿಸಿ, ಆಸಕ್ತಿಯಿಂದ ದುಡಿದರೆ ಅಲ್ಲಿಯೂ ಲಾಭವಿದೆ, ಉತ್ತಮ ಆದಾಯ ಗಳಿಸಿ ಆರ್ಥಿಕವಾಗಿ ಮುಂದೆ ಬರಬಹುದು ಎಂಬುದನ್ನು ಸಾಧಿಸಿ ಉಳಿದವರಿಗೆ ಮಾದರಿಯಾಗಿದ್ದಾರೆ. ಜಮೀನಿಗೆ ಯಾವುದೇ ರಾಸಾಯನಿಕಗಳನ್ನು ಬಳಸದೇ ಸಾವಯವ ಕೃಷಿ ಮಾಡುತ್ತಿರುವ ಮಹೇಶ್, ‘ಸುಭಾಷ್ ಪಾಳೇಕರ್ ನ್ಯಾಚುರಲ್ ಫಾಮಿಂಗ್’ ವಿಧಾನವನ್ನು ಅಳವಡಿಸಿಕೊಂಡಿ ದ್ದಾರೆ. ಈ ಕೃಷಿ ಪದ್ಧತಿಯ ಮೂಲಕ ‘ಫೈವ್ (5) ಲೇಯರ್ ಫಾರ್ಮಿಂಗ್’ ಪದ್ಧತಿಯನ್ನು ಅಳವಡಿಸಿಕೊಂಡು ತೆಂಗು, ಅಡಕೆ, ಬಾಳೆ, ಶುಂಠಿ ಸೇರಿದಂತೆ ಇತರೆ ತರಕಾರಿಗಳು, ಮೆಣಸು, ಗೆಡ್ಡೆಗೆಣಸುಗಳನ್ನು ಬೆಳೆಯುತ್ತಿದ್ದಾರೆ. ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿನ ಉತ್ತಮ ಉದ್ಯೋಗದಲ್ಲಿದ್ದ ಇವರು ಅದನ್ನು ತ್ಯಜಿಸಿ ಕೃಷಿಯತ್ತ ವಾಲಿದ್ದೇ ಒಂದು ವಿಶೇಷ. ವೃತ್ತಿಯಿಂದ ಅಷ್ಟಾಗಿ ಆರ್ಥಿಕ ಸ್ಥಿತಿ ಸುಧಾರಿಸದ ಪರಿಣಾಮ ಕೆಲಸಕ್ಕೆ ವೈಯಕ್ತಿಕ ನಿವೃತ್ತಿ ಪಡೆದು ತಮ್ಮ ತಂದೆಯಿಂದ ಬಳುವಳಿಯಾಗಿ ಬಂದ ಭೂಮಿಯಲ್ಲಿ ದುಡಿಯಲು ಆರಂಭಿಸಿದರು.
ತಾವು ಕೃಷಿ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಕೇವಲ ಆರ್ಥಿಕ ಸ್ಥಿತಿ ಮಾತ್ರವಲ್ಲದೆ, ಸಾವಯವ ಕೃಷಿಯ ಬಗ್ಗೆ ಅವರಲ್ಲಿದ್ದ ಒಲವೂ ಅಧ್ಯಯನದ ಕ್ರಿಯಾಶೀಲತೆ, ಹತ್ತಾರು ಕಡೆ ಸುತ್ತಿ ಸಾವಯವ ಕೃಷಿಯ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುವಂತೆ ಮಾಡಿತು. ಅಲ್ಲದೆ, ಕೃಷಿಯಿಂದ ದೂರಾಗುತ್ತಿರುವ ಯುವ ಸಮೂಹವನ್ನು ಮತ್ತೆ ಕೃಷಿಯತ್ತ ಸೆಳೆಯಬೇಕು, ಅವರಿಗೆ ಇದರಲ್ಲಿಯೂ ಉತ್ತಮ ಆದಾಯವಿದೆ ಎಂಬುದನ್ನು ತೋರಿಸಿಕೊಡಬೇಕು, ಕೃಷಿಕರಾದ ತಾವು ಪ್ರಕೃತಿಯೊಂದಿಗೆ ನೇರ ಸಂಪರ್ಕದಲ್ಲಿರ ಬಹುದು ಎಂಬೆಲ್ಲ ಕಾರಣಗಳ ಜತೆಗೆ ತಮ್ಮ ಮಕ್ಕಳಿಗೂ ಕೃಷಿಯ ಮೇಲೆ ಆಸಕ್ತಿ ಹೆಚ್ಚಾಗಿ, ಅವರೂ ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿ ಕೊಳ್ಳಲು ಅನುಕೂಲವಾಗಲಿ ಎಂಬ ಕಾರಣ ಕ್ಕಾಗಿ ಮಹೇಶ್ ಕೃಷಿ ಕ್ಷೇತ್ರಕ್ಕೆ ಮರಳಿದ್ದಾರೆ.
2 ವರ್ಷಗಳಿಂದ ಕೃಷಿಕರಾಗಿ ಬೇಸಾಯದ ಬಗ್ಗೆ ಹೆಚ್ಚು ಒಲವು ತೋರಿರುವ ಮಹೇಶ್, ಅಡಕೆ ಮತ್ತು ತೆಂಗು ಉತ್ತಮ ಫಲಸು ನೀಡಲು ಆರಂಭಿಸಿದರೆ ವಾರ್ಷಿಕ 50 ಲಕ್ಷ ರೂ.ಗಳ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದು, ಮಹೇಶ್, ಮಾದರಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ.
ania64936@gmail.com
ಬೆಂಗಳೂರು: ಅಡುಗೆ ಅನಿಲದ ಬೆಲೆ ಏರಿಕೆ ಮಾಡುವ ಮೂಲಕ ಮಹಿಳೆಯರಿಗೆ ಉಡುಗೊರೆ ನೀಡಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಬಯಸುವೆ.…
ಮೈಸೂರು: ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿದ್ದ 23 ವರ್ಷದ ಜೂನಿಯರ್ ಅಭಿ ಆನೆ ಅನಾರೋಗ್ಯದಿಂದ ಮೃತಪಟ್ಟಿದೆ. ನಾಗರಹೊಳೆ ರಾಷ್ಟ್ರೀಯ…
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಸಿಲ ಝಳ ಹೆಚ್ಚುತ್ತಿದ್ದು, ಹೀಟ್ ಸ್ಟ್ರೋಕ್ ಭೀತಿ ಎದುರಾಗಿದೆ. ಹಲವೆಡೆ…
ಚಾಮರಾಜನಗರ: ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಚಾಮರಾಜನಗರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ…
ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ರೂ.೬೦…
ಭಾರತದಲ್ಲೇ ಮೊದಲ ಆಕಾಶವಾಣಿ ಕೇಂದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರಿನ ಆಕಾಶವಾಣಿ ಕೇಂದ್ರ ೯೦ ವಸಂತಗಳನ್ನು ಪೂರೈಸಿದ್ದು, ಪ್ರಭಾವಿ ಸಾರ್ವಜನಿಕ…