ಅಂಕಣಗಳು

ಜ್ಯೋತಿ ಬಾಯ್‌ ಅವರ ವೃದ್ಧಾಶ್ರಮ

ಅನಿಲ್ ಅಂತರಸಂತೆ

ಬದುಕಿನ ಜಂಜಾಟಗಳಿಂದ ಬೇಸತ್ತು ಕುಟುಂಬಗಳಿಂದ ದೂರಾದವರು, ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಅವರಿಂದ ದೂರಾಗಿ ಒಂಟಿಯಾಗಿ ಬದುಕುತ್ತಿರುವವರು, ಸಾಲು ಸಾಲು ಸಾವಲುಗಳನ್ನು ಎದುರಿಸಿ ಬದುಕಿನಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿರುವವರು, ವಿಶೇಷಚೇತನರು, ಅಸಹಾಯಕರು ಕುಟುಂಬದಿಂದ ದೂರಾಗಿ ಜೀವನ ಸಾಗಿಸುವುದು ಕಷ್ಟವಾಗಿರುತ್ತದೆ. ಇಂತಹವರಿಗೆ ಓಂ ಶ್ರೀ ಮಲೆ ಮಹದೇಶ್ವರ ಚಾರಿಟಬಲ್ ಫೌಂಡೇಶನ್‌ನ ವಯೋವೃದ್ಧರ ಆರೈಕೆ ಮತ್ತು ಆಶ್ರಯ ತಾಣ ನೆಮ್ಮದಿಯ ಸೂರು ನೀಡಿದೆ.

ಮೈಸೂರಿನ ಅರವಿಂದ ನಗರದಲ್ಲಿರುವ ವಯೋವೃದ್ಧರ ಆರೈಕೆ ಮತ್ತು ಆಶ್ರಯ ತಾಣವು ಕುಟುಂಬದಿಂದ ದೂರಾದವರು, ಬುದ್ಧಿಮಾಂದ್ಯ ಹಿರಿಯರು, ವಿಶೇಷಚೇತನ ಹಿರಿಯರು ಹೀಗೆ ಹತ್ತು ಹಲವು ಸಮಸ್ಯೆಗಳಿಂದಾಗಿ ಕುಟುಂಬದಿಂದ ದೂರಾದವರಿಗೆ ಆಶ್ರಯ ನೀಡುವ ಜತೆಗೆ ಅವರಿಗೆ ವೈದ್ಯಕೀಯ ನೆರವನ್ನೂ ನೀಡುತ್ತಿದೆ.

ಮಲೆ ಮಹದೇಶ್ವರ ಚಾರಿಟಬಲ್ ಫೌಂಡೇಶನ್‌ಅನ್ನು ಜ್ಯೋತಿ ಬಾಯ್ (ಪುರ್ನವತಿ ಸಿಂಗ್ ರಾಜ್‌ಪೂತ್) ಸ್ಥಾಪಿಸಿ ಕಳೆದ ೧೩ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಸದ್ಯ ಕೊಡಗು, ಶ್ರೀರಂಗಪಟ್ಟಣ, ಮದ್ದೂರು, ಮಂಡ್ಯ, ಮೈಸೂರು ಹಾಗೂ ತಮಿಳುನಾಡಿನ ಸುಮಾರು ೩೧ ವಯೋವೃದ್ಧರು ಆಶ್ರಯ ಪಡೆದಿದ್ದಾರೆ.

ಈ ವೃದ್ಧಾಶ್ರಮದಲ್ಲಿರುವವರ ಪೈಕಿ ಮದುವೆಯೇ ಆಗದೆ ಒಂಟಿಯಾಗಿ ಜೀವನ ಸಾಗಿಸಿದವರು, ಹುಟ್ಟು ವಿಶೇಷ ಚೇತನರಾಗಿರುವವರು, ಅನಾರೋಗ್ಯ ಪೀಡಿತರು, ಕುಡಿತದ ಚಟಕ್ಕೆ ಬಲಿಯಾದವರು, ಬುದ್ಧಿ ಮಾಂದ್ಯರೇ ಹೆಚ್ಚಾಗಿದ್ದಾರೆ.

ಇಲ್ಲಿನ ಮತ್ತೊಂದು ವಿಶೇಷವೆಂದರೆ ಅನುಕೂಲಸ್ಥ ಕುಟುಂಬಗಳ ಹಿರಿಯರನ್ನು ಇಲ್ಲಿ ಸೇರಿಸಿಕೊಳ್ಳುವುದಿಲ್ಲ. ಬದಲಿಗೆ ಬಡಕುಟುಂಬವಾಗಿದ್ದು, ಹಿರಿಯರ ಆರೋಗ್ಯ ಆರೈಕೆಗೆ ಹಣ ಹೊಂದಿಸಲಾಗದ, ಅವರನ್ನು ನಿರ್ವಹಣೆ ಮಾಡಲಾಗದೆ ಪರದಾಡುವ ಕುಟುಂಬಗಳ ಹಿರಿಯರನ್ನು ಮಾತ್ರ ಸೇರಿಸಿಕೊಂಡು ಅವರ ಆರೈಕೆ ಮಾಡಲಾಗುತ್ತದೆ.

ಸದ್ಯ ಈ ವೃದ್ಧಾಶ್ರಮ ೬೦ಕ್ಕಿಂತ ಮೇಲ್ಪಟ್ಟವರಿಂದ ಹಿಡಿದು ೧೦೦ ವರ್ಷಗಳನ್ನು ಪೂರೈಸಿದ ಹಿರಿಯರ ವರೆಗೆ ಆಶ್ರಯ ನೀಡಿದೆ. ಇಲ್ಲಿ ಅವರಿಗೆ ವೈದ್ಯಕೀಯ ಆರೈಕೆ ನೀಡಲಾಗುತ್ತದೆ.

ಸ್ವತಃ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಜ್ಯೋತಿ ಬಾಯ್ ಅವರೇ ಇವರ ಆರೋಗ್ಯ ಕಾಳಜಿ ವಹಿಸುತ್ತಾರೆ. ವೈದ್ಯರ ಅವಶ್ಯಕತೆ ಎದುರಾದಾಗ ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಇಲ್ಲಿರುವ ಹಿರಿಯರು ಬದುಕಿನುದ್ದಕ್ಕೂ ಸವಾಲುಗಳನ್ನು ಮೆಟ್ಟಿನಿಂತು ಬಂದವರು. ಕೊನೆಗಾಲದಲ್ಲಿ ಆರೈಕೆ ಅರಸಿ ಬಂದಾಗ ಅವರನ್ನು ಕಾಪಾಡಬೇಕಾದದ್ದು ನಮ್ಮ ಧರ್ಮ ಎನ್ನುವುದು ಜ್ಯೋತಿ ಬಾಯ್‌ರವರ ಮಾತು. ಇಲ್ಲಿರುವ ವೃದ್ಧರಿಗೆ ಹಲವಾರು ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ಇಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಮಕ್ಕಳಂತೆ ಆಡುತ್ತಾರೆ. ನಿತ್ಯ ಪತ್ರಿಕೆಗಳನ್ನು ಓದುವುದು, ಟಿ.ವಿ. ನೋಡುವುದು, ಕೇರಂ ಸೇರಿದಂತೆ ಇತರೆ ಆಟಗಳನ್ನು ಆಡಿಸುತ್ತಾರೆ. ಅಲ್ಲದೆ ಗಿಡಗಳಿಗೆ ನೀರು ಹಾಕುವುದು ಮುಂತಾದ ಇತರೆ ಕೆಲಸ ಕಾರ್ಯಗಳಲ್ಲಿ ಅವರನ್ನು ತೊಡಗಿಸಿಕೊಳ್ಳಲಾಗುತ್ತದೆ.

ವಿಶೇಷಚೇತನರೂ ಇದರಲ್ಲಿ ಸಂತೋಷದಿಂದ ಭಾಗಿಯಾಗುತ್ತಾರೆ ಎಂಬುದು ವಿಶೇಷ. ಇಲ್ಲಿ ಹಿರಿಯರಿಗೆ ರುಚಿಕರವಾದ, ಆರೋಗ್ಯಕರವಾದ ಆಹಾರವನ್ನು ಪೂರೈಕೆ ಮಾಡಲಾಗುತ್ತದೆ. ನಿತ್ಯ ಇಡ್ಲಿ, ದೋಸೆ, ಪುಳಿಯೋಗರೆ ಸೇರಿದಂತೆ ಹಲವು ಆಹಾರವನ್ನು ನೀಡಲಾಗುತ್ತದೆ. ಚಿಕ್ಕ ವಯಸ್ಸಿನಿಂದಲೂ ವೃದ್ಧರ ಆರೈಕೆ ಮಾಡಬೇಕು ಎಂದುಕೊಂಡಿದ್ದ ಜ್ಯೋತಿ ಬಾಯ್ ಅಂದುಕೊಂಡಂತೆ ವೃದ್ಧಾಶ್ರಮವನ್ನು ಸ್ಥಾಪಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆರಂಭದಲ್ಲಿ ತಾವು ದುಡಿದ ಹಣದಲ್ಲಿಯೇ ವೃದ್ಧಾಶ್ರಮ ನಡೆಸುತ್ತಿದ್ದ ಇವರ ಬೆನ್ನಿಗೆ ಈಗ ಕೆಲವೊಂದು ಎನ್‌ಜಿಒಗಳು ನಿಂತಿವೆ. ಈ ಕೆಲಸದಲ್ಲಿ ನನಗೆ ಖುಷಿಯಿದೆ, ಕುಟುಂಬದ ಸಹಕಾರವೂ ಇದೆ ಎನ್ನುತ್ತಾರೆ ಜ್ಯೋತಿ ಬಾಯ್.

” ವಯಸ್ಸಾದವರನ್ನು ನೋಡಿಕೊಳ್ಳಲು ಆಗುತ್ತಿಲ್ಲ. ಅವರ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ ಎನ್ನುವವರನ್ನು ಮಾತ್ರ ಸೇರಿಸಿಕೊಳ್ಳುತ್ತೇವೆ. ಆರ್ಥಿಕವಾಗಿ ಚೆನ್ನಾಗಿರುವವರನ್ನು ಹೆಚ್ಚಾಗಿ ಸೇರಿಸಿಕೊಳ್ಳುವುದಿಲ್ಲ. ನಾನು ಚಿಕ್ಕವಳಿದ್ದಾಗಿನಿಂದ ವೃದ್ಧರ ಆರೈಕೆ ಮಾಡಬೇಕು ಎಂಬುದು ನನ್ನ ಆಸೆಯಾಗಿತ್ತು. ಅದರಂತೆ ವೃದ್ಧಾಶ್ರಮ ಸ್ಥಾಪಿಸಿ ಮುಂದುವರಿಸಿಕೊಂಡು ಬಂದಿದ್ದೇನೆ. ಈ ಕೆಲಸದಲ್ಲಿ ನನಗೆ ತೃಪ್ತಿ ಇದೆ.”

ಜ್ಯೋತಿ ಬಾಯ್ (ಪುರ್ನವತಿ ಸಿಂಗ್ ರಾಜ್‌ಪೂತ್),

ಸಂಸ್ಥಾಪಕರು, ಮಲೆ ಮಹದೇಶ್ವರ ಚಾರಿಟಬಲ್

ಫೌಂಡೇಶನ್, ಮೈಸೂರು

ವೃದ್ಧಾಶ್ರಮದ ವಿಳಾಸ ಓಂ ಶ್ರೀ ಮಲೆ ಮಹದೇಶ್ವರ ಚಾರಿಟಬಲ್ ಫೌಂಡೇಶನ್, ವಯೋವೃದ್ಧರ ಆರೈಕೆ ಮತ್ತು ಆಶ್ರಯ ತಾಣ, ನಂ.೬೫೭, ೩ನೇ ಮುಖ್ಯರಸ್ತೆ, ಅರವಿಂದನಗರ, ಮೈಸೂರು-೫೭೦೦೨೩. ಸಂಪರ್ಕ ಸಂಖ್ಯೆ: ೯೯೬೪೧೦೧೭೩೮, ೯೯೦೦೮೪೯೮೨೩.

ಆಂದೋಲನ ಡೆಸ್ಕ್

Recent Posts

ಇರಾನಿನ ಗಿಣಿ ಮತ್ತು ಹಿಂದೂಸ್ಥಾನದ ಗಿಣಿ

 ಶೇಷಾದ್ರಿ ಗಂಜೂರು ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ದೇಶಗಳು ಮುಂದುವರಿಸಿರುವ ಯುದ್ಧ ಸದ್ಯಕ್ಕೆ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ. ಏತನ್ಮಧ್ಯೆ…

40 seconds ago

ನಾಳೆ ರಾಜ್ಯ ಬಜೆಟ್:‌ ಬಸ್‌ ನಿಲ್ದಾಣಗಳಲ್ಲಿ ನೇರ ಪ್ರಸಾರ

ಬೆಂಗಳೂರು: ನಾಳೆ ರಾಜ್ಯ ಬಜೆಟ್‌ ಮಂಡನೆಯಾಗಲಿದ್ದು, ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್‌ ಮಂಡನೆ ಮಾಡಲಿದ್ದಾರೆ. ರಾಜ್ಯ ಬಜೆಟ್‌ ಮಂಡನೆಯ…

12 hours ago

ಹನೂರು: ಬೈಕ್ ಹಾಗೂ ಕಾರಿನ ನಡುವೆ ಅಪಘಾತ: ಬೈಕ್ ಸವಾರ ಸಾವು

ಹನೂರು: ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ತೀವ್ರ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ…

12 hours ago

ಹನೂರು: ವಿಶ್ವ ವನ್ಯಜೀವಿ ದಿನ ಕಾರ್ಯಕ್ರಮ ಆಯೋಜನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ವನ್ಯಜೀವಿಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕೊಳ್ಳೇಗಾಲ…

12 hours ago

ಸಚಿವ ದಿನೇಶ್‌ ಗುಂಡೂರಾವ್‌ಗೆ ಮಹತ್ವದ ಜವಾಬ್ದಾರಿ ಕೊಟ್ಟ ಎಐಸಿಸಿ: ಏನದು ಗೊತ್ತಾ?

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ಎಐಸಿಸಿ ಮಹತ್ವದ ಜವಾಬ್ದಾರಿ ಕೊಟ್ಟಿದೆ. ಈ…

12 hours ago

ಮಂಡ್ಯ: ಕೃಷಿ ಯಂತ್ರೋಪಕರಣದಿಂದ ಆಧುನಿಕ ಕೃಷಿಯತ್ತ ರೈತರು: ಡಾ. ಕೆ.ಸಿ.ನಾರಾಯಣಸ್ವಾಮಿ

ಮಂಡ್ಯ: ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣದ ಮಹತ್ವವನ್ನು ರೈತರಿಗೆ ಪರಿಚಯಿಸುವ ಉದ್ದೇಶದಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ ವತಿಯಿಂದ “ಕೃಷಿ ಯಂತ್ರೋಪಕರಣ…

13 hours ago