ಜಿಎಸ್‌ಟಿಗೆ ಐದು ವರ್ಷ; ರಾಜ್ಯಗಳಿಗೆ ದಕ್ಕಿದ್ದೆಷ್ಟು?

ರಾಜ್ಯಗಳ ಸರಾಸರಿ ತೆರಿಗೆ ಸಂಗ್ರಹ ಬೆಳವಣಿಗೆ ಶೇ.೧೪ರ ಮಟ್ಟ ಮುಟ್ಟುವವರೆಗೆ ತೆರಿಗೆ ಪರಿಹಾರವನ್ನು ಹೊಸ ರೂಪದಲ್ಲಿ ಮುಂದುವರಿಸಬೇಕು! 

 

ಪ್ರೊ.ಆರ್.ಎಂ. ಚಿಂತಾಮಣಿ

ಕೇಂದ್ರ ಮತ್ತು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದ್ದ ಹದಿನೆಂಟಕ್ಕೂ ಹೆಚ್ಚು ಪರೋಕ್ಷ ತೆರಿಗೆಯನ್ನು ಒಟ್ಟುಗೂಡಿಸಿ ಇಡೀ ದೇಶಕ್ಕೆ ಒಂದು ಪರೋಕ್ಷ ತೆರಿಗೆ ಎಂಬ ಪರಿಕಲ್ಪನೆಯಂತೆ ಸರಕುಗಳ ಮತ್ತು ಸೇವೆಗಳ ತೆರಿಗೆಯನ್ನು (ಎಟಟ ಚ್ಞ ಖಛ್ಟಿಜ್ಚಿಛಿ ಚ್ಡ- ಎಖ) ಜಾರಿಗೆ ತಂದು ಇದೇ ೩೦ನೇ ದಿನಾಂಕಕ್ಕೆ ಐದು ವರ್ಷ ಪೂರ್ಣವಾಗುತ್ತವೆ. ಇದಕ್ಕೆ ಮೊದಲು ರಾಜ್ಯಗಳಲ್ಲಿ ಮಾರಾಟ ತೆರಿಗೆ ಬದಲಾಗಿ ಏಕರೂಪ ಮೌಲ್ಯವರ್ಧಿತ ತೆರಿಗೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿತ್ತು. ಅಂದು (ಜುಲೈ ೦೧, ೨೦೧೭) ಜಿಎಸ್‌ಟಿ ಜಾರಿ ಮಾಡಿದಾಗ ಆತುರವಾಯಿತೆನ್ನಿಸಿದರೂ ರಾಜ್ಯಗಳ ಅರ್ಥಮಂತ್ರಿಗಳು ಮತ್ತು ಕೇಂದ್ರ ವಿತ್ತ ಸಚಿವರು ಒಟ್ಟಿಗೆ ಸುದೀರ್ಘ ಚರ್ಚೆಗಳ ನಂತರ ಒಟ್ಟಾಭಿಪ್ರಾಯ ಮೂಡಿದ ಮೇಲೆಯೇ ತೀರ್ಮಾನ ತೆಗೆದುಕೊಂಡಿರುವದು ಒಕ್ಕೂಟ ವ್ಯವಸ್ಥೆಯ ಯಶಸ್ಸು ಎಂದೇ ಹೇಳಬೇಕು. ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಅಭಿನಂದನಾರ್ಹರು.

ಹೊಸ ತೆರಿಗೆ ಬಂದಾಗ ತಾತ್ಕಾಲಿಕವಾಗಿ ರಾಜ್ಯಗಳ ತೆರಿಗೆ ಆದಾಯ ಕಡಿಮೆಯಾಗುವದು ಸ್ವಾಭಾವಿಕ. ಹಿಂದೆ ವ್ಯಾಟ್ ಜಾರಿಯಾದಾಗಲೂ ಹೀಗೆ ಆಗಿತ್ತು. ಆಗ ಕೇಂದ್ರ ಸರ್ಕಾರ ಮೊದಲ ಐದು ವರ್ಷಗಳವರೆಗೆ ಕೊರತೆ ಪರಿಹಾರ ಒದಗಿಸಿತ್ತು. ಈಗಲೂ ಕೇಂದ್ರ ಸರ್ಕಾರ ಈ ಐದು ವರ್ಷ ಜಿಎಸ್‌ಟಿ ಕೊರತೆ ಪರಿಹಾರವನ್ನು ಒದಗಿಸೀತು. ಇದನ್ನು ಮುಂದುವರಿಸುವುದಿಲ್ಲವೆಂದು ಕೇಂದ್ರ ಅರ್ಥ ಮಂತ್ರಿಗಳು ಖಡಾ ಖಂಡಿತವಾಗಿ ಹೇಳಿದ್ದಾರೆ. ಜಿಎಸ್‌ಟಿ ಕೊರತೆ ಪರಿಹಾರ ಲೆಕ್ಕ, ಹಾಕಲು ೨೦೧೬-೧೭ ಹಣಕಾಸು ವರ್ಷವನ್ನು ಆಧಾರ ವರ್ಷವೆಂದು ಪರಿಗಣಿಸಿ ಆಗ ಜಿಎಸ್‌ಟಿಯಲ್ಲಿ ವಿಲೀನವಾದ ರಾಜ್ಯದ ತೆರಿಗೆಗಳ ಸಂಗ್ರಹಕ್ಕೆ ವಾರ್ಷಿಕ ಶೇ.೧೪ರಷ್ಟು ಸರಾಸರಿ ಬೆಳೆವಣಿಗೆ ಎಂದು ಗ್ರಹಿಸಿ ಅದನ್ನು ಸಂಗ್ರಹಕ್ಕೆ ಸೇರಿಸಿ ಆಯಾ ವರ್ಷದ ಜಿಎಸ್‌ಟಿ ಸಂಗ್ರಹವಿರಬೇಕೆಂದು ಲೆಕ್ಕ ಹಾಕಿ ಆ ವರ್ಷ ಸಂದಾಯವಾದ ಸ್ಟೇಟ್ ಜಿಎಸ್‌ಟಿ ಪಾಲನ್ನು ಕಳೆದು ಉಳಿದುದನ್ನು ಜಿಎಸ್‌ಟಿ ಕೊರತೆ ಪರಿಹಾರವೆಂದು ಕೇಂದ್ರ ಕೊಡುತ್ತಿತ್ತು. ಮುಂದೆ ಅದಿಲ್ಲ. ಈ ವೆಚ್ಚವನ್ನು ತೂಗಿಸಲು ಕೇಂದ್ರ ಸರ್ಕಾರ ತನ್ನ ಕೆಲವು ತೆರಿಗೆಗಳ ಮೇಲೆ ತೆರಿಗೆದಾರರಿಂದ ಜಿಎಸ್‌ಟಿ ಪರಿಹಾರ ಸೆಸ್ ಎಂದು ಮೇಲ್ತೆರಿಗೆಯನ್ನು ಸಂಗ್ರಹಿಸುತ್ತಿದೆ. ಪರಿಹಾರ ಮುಂದುವರಿಸಬೇಕೆಂಬ ಬೇಡಿಕೆಯೂ ರಾಜ್ಯಗಳಿಂದ ಇದೆ.
ಜಿಎಸ್‌ಟಿ ಜಾರಿಗೊಳಿಸುವಾಗ ರಾಜ್ಯಗಳಿಗೆ ಸಂಬಂಧಿಸಿದಂತೆ ದೀರ್ಘಾವಧಿಯಲ್ಲಿ ಎರಡು ಪ್ರಮುಖ ಆಶಯಗಳು/ನಿರೀಕ್ಷೆಗಳು ಇದ್ದವು ಒಂದು: ರಾಜ್ಯಗಳ ಜಿಎಸ್ಟಿ ಆದಾಯ ತೀವ್ರ ಗತಿಯಲ್ಲಿ ಹೆಚ್ಚುತ್ತ ಹೋಗುತ್ತದೆ. ಎರಡನೆದಾಗಿ ರಾಜ್ಯಗಳ ಸ್ವಂತ ತೆರಿಗೆ ಆದಾಯದಲ್ಲಿ (ಖಠಿಠಿಛಿ ಡ್ಞಿ ಚ್ಡ ್ಕಛಿಛ್ಞ್ಠಿಛಿ) ಜಿಎಸ್‌ಟಿ (ಸ್ಟೇಟ್) ಭಾಗ ವೇಗವಾಗಿ ಹೆಚ್ಚುತ್ತಿರುತ್ತದೆ. ಐದು ವರ್ಷಗಳ ನಂತರ ಈಗ ಏನಾಗಿದೆ? ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಇಂಡಿಯಾ ರೇಟಿಂಗ್ಸ್ ಪ್ರಮಾಣೀಕರಣ ಮತ್ತು ಆರ್ಥಿಕ ಸಂಶೋಧನಾ ಸಂಸ್ಥೆ ಒಂದು ಸ್ಥೂಲ ಸಮೀಕ್ಷೆ ನಡೆಸಿ ಪರಿಣಾಮಗಳನ್ನು ಪ್ರಕಟಿಸಿದೆ. ಅವುಗಳ ವಿಶ್ಲೇಷಣೆ ಮಾಡುವದು ಇಲ್ಲಿಯ ಉದ್ದೇಶ.

ನಿರೀಕ್ಷಿತ ಬೆಳವಣಿಗೆ ಕಂಡು ಬಂದಿಲ್ಲ

೨೦೧೨-೧೩ರಿಂದ ೨೦೧೬-೧೭ ಜಿಎಸ್‌ಟಿ ಪೂರ್ವ ಐದು ವರ್ಷಗಳ ಮತ್ತು ಜಿಎಸ್ಟಿ ಐದು ವರ್ಷಗಳ ಅಂಕಿ ಸಂಖ್ಯೆಗಳನ್ನು ಅಧ್ಯಯನ ಮಾಡಲಾಗಿದೆ. ೨೦೧೪-೧೭ರ ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯಗಳ ಸ್ವಂತ ತೆರಿಗೆ ಆದಾಯದಲ್ಲಿ ಹೊಸ ತೆರಿಗೆಯಲ್ಲಿ ವಿಲೀನವಾದ ರಾಜ್ಯ ತೆರಿಗೆಗಳ ಭಾಗ ಶೇ.೫೫.೫೨ರಷ್ಟು ಇತ್ತು. ನಂತರ ೨೦೧೭-೨೧ರ ಅವಧಿಯಲ್ಲಿ ರಾಜ್ಯಗಳ ಜಿಎಸ್‌ಟಿ ಪಾಲು (ಎಸ್‌ಜಿಎಸ್‌ಟಿ) ಅವುಗಳ ಸ್ವಂತ ತೆರಿಗೆ ಆದಾಯದ ಶೇ.೫೫.೫೪ರಷ್ಟು ಇತ್ತು. ಅಂದರೆ ಹೇಳಿಕೊಳ್ಳುವಂಥ ಬದಲಾವಣೆ (ಹೆಚ್ಚಳ) ಆಗಿಲ್ಲವೆಂದೇ ಅರ್ಥವಲ್ಲವೆ? ಒಂದು ವೇಳೆ ಜಿಎಸ್‌ಟಿ ಆದಾಯ ಹೆಚ್ಚಾಗಿದ್ದರೂ ರಾಜ್ಯಗಳ ಇತರ ತೆರಿಗೆಗಳ ಆದಾಯವೂ ಅದೇ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದರ್ಥ. ಅಂದರೆ ರಾಜ್ಯಗಳ ಸ್ವಂತ ತೆರಿಗೆ ಆದಾಯಕ್ಕೆ ಜಿಎಸ್ಟಿ ಜಾರಿಯಿಂದ ಹೆಚ್ಚಿನ ಕಾಣಿಕೆ ಸಂದಿಲ್ಲ. ಇದಕ್ಕೆ ಹಲವು ಕಾರಣಗಳಿರಬಹುದು.

ಇನ್ನೂ ಜಿಎಸ್‌ಟಿ ಸಂಗ್ರಹಣದ ಬಗ್ಗೆ ಹೇಳುವುದಾದರೆ ಇತ್ತೀಚಿನ ವರದಿಗಳಂತೆ ತಿಂಗಳಿಗೆ ೧.೪೧ ಲಕ್ಷ ಕೋಟಿ ರೂ.ಗೂ ಹೆಚ್ಚು ಸಂಗ್ರಹವಾಗಿದೆ. ಇದು ಕೋವಿಡ್-೧೯ಗಿಂತ ಹಿಂದಿನ ಅವಧಿಯ ಮಾಸಿಕ ಸಂಗ್ರಹಕ್ಕಿಂತ ಹೆಚ್ಚೇ ಅಗಿದೆ. ಆದರೆ, ರಾಜ್ಯಗಳ ಪಾಲಿನ ಎಸ್‌ಜಿಎಸ್‌ಟಿ ವಿಷಯಕ್ಕೆ ಬಂದರೆ ಈ ಐದು ವರ್ಷಗಳಲ್ಲಿ ವಾರ್ಷಿಕ ಶೇ.೬.೭ರಷ್ಟು ಮಾತ್ರ ಹೆಚ್ಚಾಗಿರುವುದನ್ನು ಗಮನಿಸಿಬಹುದು. ಅದೇ ಹಿಂದಿನ ಐದು ವರ್ಷಗಳಲ್ಲಿ ಇದರಲ್ಲಿ ವಿಲೀನವಾದ ರಾಜ್ಯಗಳ ತೆರಿಗೆಗಳ ವಾರ್ಷಿಕ ಬೆಳವಣಿಗೆ ಶೇ.೯.೮ರಷ್ಟಿತ್ತು.
ಒಂದೊಂದೇ ರಾಜ್ಯವನ್ನು ಗಣನೆಗೆ ತೆಗೆದುಕೊಂಡರೆ ಓಡಿಶಾ ರಾಜ್ಯ ಮಾತ್ರ ವಾರ್ಷಿಕ ಜಿಎಸ್‌ಟಿ ಬೆಳವಣಿಗೆ ಗತಿ ಅತಿ ಹೆಚ್ಚು ಶೇ.೨೦.೦೬ರಷ್ಟು ಹೊಂದಿದೆ. ಇದೊಂದೇ ಪರಿಹಾರಕ್ಕೆ ಮಾನದಂಡ ಶೇ.೧೪ರಷ್ಟು ಬೆಳವಣಿಗೆಗೆಗಿಂತ ಹೆಚ್ಚು ಪಡೆದಿರುವದು. ಉಳಿದವೆಲ್ಲ ಅದಕ್ಕಿಂತ ಕಡಿಮೆ ಇರುವ ರಾಜ್ಯಗಳೇ. ಇಷ್ಟೇ ಅಲ್ಲ. ೧೭ ದೊಡ್ಡ ರಾಜ್ಯಗಳು ಶೇ.೪.೫ರಷ್ಟು ಕಡಿಮೆ ಬೆಳವಣಿಗೆ ಹೊಂದಿವೆ. ಕೆಲವು ರಾಜ್ಯಗಳು ಶೇ.೦.೧೬ರಷ್ಟಕ್ಕಿಂತ ಕಡಿಮೆ ಹೆಚ್ಚಳ ಹೊಂದಿರುವದು ಗಮನಾರ್ಹ. ಈ ಏರಿಳಿತ ಸರಿಪಡಿಸಬೇಕು.
ಉತ್ತರಾಖಂಡ ಒಂದು ರಾಜ್ಯ ಮಾತ್ರ ವಾರ್ಷಿಕ ಬೆಳವಣಿಗೆ ಬದಲು ವಾರ್ಷಿಕ ಶೇ. -೪.೦೨ರಷ್ಟು ಕಡಿಮೆ ಪಡೆದಿರುವದು ಗಮನಾರ್ಹ.
ಜಿಎಸ್‌ಟಿ ಬರುವುದಕ್ಕೂ ಮೊದಲು ಉತ್ಪಾದಕ ಮತ್ತು ರಫ್ತು ರಾಜ್ಯಗಳು ತಮ್ಮ ರಾಜ್ಯಗಳಲ್ಲಿಯ ಮಾರಾಟಕ್ಕೆ ವ್ಯಾಟ್ ಸಂಗ್ರಹಿಸುತ್ತಿದ್ದು, ಬೇರೆ ರಾಜ್ಯಗಳಿಗೆ ಕಳಿಸಿದ್ದಕ್ಕೆ ಸೆಂಟ್ರಲ್ ಸೇಲ್ಸ್ ಟ್ಯಾಕ್ಸ್ ಆಕರಿಸುತ್ತಿದ್ದವು. ಅದು ಅವುಗಳ ಸ್ವಂತ ತೆರಿಗೆ ಆದಾಯದ ಶೇ.೪.೫ರಷ್ಟಾಗುತ್ತಿತ್ತು. ಈಗ ಆ ಆದಾಯವಿಲ್ಲ. ಅಳಿದುಳಿದ ಕೆಲವು ವಲಯಗಳಲ್ಲಿದ್ದರೂ ಅದು ತೀರ ನಗಣ್ಯ. ಹೀಗಾಗಿ ರಾಜ್ಯಗಳ ಆದಾಯ ಹೆಚ್ಚಿಸುವ ಕ್ರಮ ಬೇಕು.

೨೦೧೪-೧೭ರ ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯಗಳ ಸ್ವಂತ ತೆರಿಗೆ ಆದಾಯದಲ್ಲಿ ಹೊಸ ತೆರಿಗೆಯಲ್ಲಿ ವಿಲೀನವಾದ ರಾಜ್ಯ ತೆರಿಗೆಗಳ ಭಾಗ ಶೇ.೫೫.೫೨ರಷ್ಟು ಇತ್ತು. ನಂತರ ೨೦೧೭-೨೧ರ ಅವಧಿಯಲ್ಲಿ ರಾಜ್ಯಗಳ ಜಿಎಸ್‌ಟಿ ಪಾಲು ಅವುಗಳ ಸ್ವಂತ ತೆರಿಗೆ ಆದಾಯದ ಶೇ.೫೫.೫೪ರಷ್ಟು ಇತ್ತು. ಅಂದರೆ ಹೇಳಿಕೊಳ್ಳುವಂಥ ಬದಲಾವಣೆ (ಹೆಚ್ಚಳ) ಆಗಿಲ್ಲವೆಂದೇ ಅರ್ಥವಲ್ಲವೆ? ಒಂದು ವೇಳೆ ಜಿಎಸ್‌ಟಿ ಆದಾಯ ಹೆಚ್ಚಾಗಿದ್ದರೂ ರಾಜ್ಯಗಳ ಇತರ ತೆರಿಗೆಗಳ ಆದಾಯವೂ ಅದೇ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದರ್ಥ. ಅಂದರೆ ರಾಜ್ಯಗಳ ಸ್ವಂತ ತೆರಿಗೆ ಆದಾಯಕ್ಕೆ ಜಿಎಸ್ಟಿ ಜಾರಿಯಿಂದ ಹೆಚ್ಚಿನ ಕಾಣಿಕೆ ಸಂದಿಲ್ಲ.

ಪರಿಹಾರ ಎರಡು ವರ್ಷವಾದರೂ ಮುಂದುವರಿಯಬೇಕು

ಹೀಗಾಗಲು ಮೇಲ್ನೋಟಕ್ಕೆ ಕಾಣುವ ಕಾರಣವೆಂದರೆ ಜಾಗತಿಕವಾಗಿ ಕಾಡಿದ ಸಾಂಕ್ರಾಮಿಕ ರೋಗ ಕೋವಿಡ್-೧೯. ನಮ್ಮಲ್ಲಿ ೨೦೨೦-೨೧ರಲ್ಲಿ ಶೇ.೬.೭ರಷ್ಟು ಆರ್ಥಿಕ ಹಿನ್ನಡೆಯೇ ಆಯಿತು. ಕಳೆದ ವರ್ಷದಲ್ಲಿ (೨೦೨೧-೨೨) ಎರಡು ಮತ್ತು ಮೂರನೇ ಅಲೆಗಳು ಕಾಡಿದವು. ಅವು ಚೇತರಿಸಿಕೊಳ್ಳಲು ಕೆಲವು ವರ್ಷಗಳೇ ಬೇಕಾದೀತು. ರಾಜ್ಯಗಳ ಆರ್ಥಿಕ ಸದೃಢತೆಗಳನ್ನು ಹೆಚ್ಚಿಸಲು ಕೇಂದ್ರವೂ ಉದಾರತೆಯನ್ನು ತೋರಬೇಕು. ಸಮರ್ಥ ರಾಜ್ಯಗಳಿದ್ದರೆ ಒಕ್ಕೂಟ (ಕೇಂದ್ರ) ಸರ್ಕಾರವೂ ಸಮರ್ಥವಾಗಿರುತ್ತದೆ.
ಜಿಎಸ್‌ಟಿ ವ್ಯವಸ್ಥೆಯಲ್ಲಿಯ ಲೋಪದೋಷಗಳನ್ನು ಚರ್ಚೆಗಳ ಮೂಲಕ ತಿದ್ದಲು ಒಟ್ಟಾಭಿಪ್ರಾಯ ಮೂಡಿಸುವುದಲ್ಲದೆ ರಾಜ್ಯಗಳನ್ನು ಇನ್ನಷ್ಟು ಶಕ್ತಿಯುತಗೊಳಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ತಿಳಿದಿರುವಂತೆ ಎರಡು ವರ್ಷಗಳಲ್ಲಿ (ಕೋವಿಡ್ ಅವಧಿ) ಬೆಳವಣಿಗೆಯ ಅವಕಾಶಗಳು ತಪ್ಪಿರುವುದು ಸ್ಪಷ್ಟವಾಗಿದೆ. ಅದನ್ನು ಸರಿದೂಗಿಸಲು ಇನ್ನೆರಡು ವರ್ಷಗಳಾದರೂ ರಾಜ್ಯಗಳಿಗೆ ಉತ್ತೇಜನದ ಅವಶಕತೆಯಿದೆ. ಹೇಗೂ ಜಿಎಸ್‌ಟಿ ಪರಿಹಾರ ಸೆಸ್ ಮುಂದುವರಿಯುತ್ತಿದೆ. ಜಿಎಸ್‌ಟಿ ಕೊರತೆ ಪರಿಹಾರವನ್ನು ಮುಂದುವರಿಸುವದು ಸೂಕ್ತ. ಒಂದು ಹೆಜ್ಜೆ ಮುಂದಿಟ್ಟು ಹೇಳುವುದಾದರೆ ಈಗಾಗಲೇ ಪರಿಗಣಿಸಿರುವ ಶೇ.೧೪ರಷ್ಟು ಸರಾಸರಿ ತೆರಿಗೆ ಸಂಗ್ರಹ (ರಾಜ್ಯಗಳ) ಬೆಳವಣಿಗೆ ಮಟ್ಟವನ್ನು ಎಲ್ಲ ರಾಜ್ಯಗಳೂ ತಲುಪುವವರೆಗೆ ಹೊಸ ರೂಪದಲ್ಲಿ ಮುಂದುವರಿಸಬೇಕು. ರಾಜ್ಯಗಳು ತಮ್ಮ ಕಾಲ ಮೇಲೆ ತಾವು ನಿಲ್ಲಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.

ಒಂದು ಮಾತು: ಇತ್ತೀಚಿನ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಜಿಎಸ್ಟಿ ಕೌನ್ಸಿಲ್ ನಿರ್ಣಯಗಳನ್ನು ರಾಜ್ಯಗಳು ಪಾಲಿಸಬಹುದು ಅಥವಾ ಪಾಲಿಸದೇ ಇರಬಹುದು. ಪಾಲಿಸದೇ ಇರುವ ವಿಪರೀತ ಪರಿಸ್ಥಿತಿ ನಿರ್ಮಾಣ ಆಗದಂತೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಕೇಂದ್ರದ್ದು!

andolana

Recent Posts

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

19 mins ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

45 mins ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

2 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

2 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

2 hours ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

3 hours ago