• ಪ್ರಶಾಂತ್ ಎಸ್.
ನಾಗರಹೊಳೆ ರಾಷ್ಟ್ರೀಯ ಉದ್ಯಾ ನವನದ ಡಿ.ಬಿ.ಕುಪ್ಪೆ ಹಾಡಿಯ ಎಸ್. ಆ.ದಿವ್ಯಾ ಪಿಎಚ್.ಡಿ. ಪಡೆದ ಪಣಿ ಎರವ ಬುಡಕಟ್ಟು ಸಮುದಾಯದ ಹೆಣ್ಣುಮಗಳು.
ಡಿ.ಬಿ.ಕುಪ್ಪೆಯ ರಾಜು ಮತ್ತು ಲಕ್ಷ್ಮೀ ದಂಪತಿಯ ಪುತ್ರಿ ಡಿ.ಬಿ.ಕುಪೆ ಹಾಡಿಯ ದಿವ್ಯಾ ಹಂಪಿಯ ಕನ್ನಡ ವಿವಯ ಬುಡಕಟ್ಟು ಅಧ್ಯಯನ ವಿಭಾಗದ ಪ್ರೊ.ಕೆ.ಎಂ.ಮೇತ್ರಿ ಅವರ ಮಾರ್ಗದರ್ಶನದಲ್ಲಿ ‘ಪಣಿಯನ್ ಬುಡಕಟ್ಟು ಸಾಮಾಜಿಕ
ಅಧ್ಯಯನ’ ಎಂಬ ವಿಷಯದಲ್ಲಿ ಸಂಶೋಧನಾ ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದುಕೊಂಡಿದ್ದಾರೆ. ಆ ಮೂಲಕ ತಮ್ಮ ಸಮುದಾಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಸಮುದಾಯಕ್ಕೆ ಕೀರ್ತಿ ತಂದಿದ್ದಾರೆ.
ರಾಜು-ಲಕ್ಷ್ಮಿ ದಂಪತಿಗೆ ದಿವ್ಯಾ, ದೀಬು ಮತ್ತು ದೀಬ ಎಂಬ ಮೂವರು ಮಕ್ಕಳಿದ್ದು, ಬಡತನ, ಮೂಲ ಸೌಕರ್ಯಗಳ ಕೊರತೆಗಳ ನಡುವೆಯೂ ದಿನಕ್ಕೆ 75 ರೂ. ವೇತನದ ಕೂಲಿ ಕೆಲಸ ಮಾಡಿಕೊಂಡು ತಂದೆ ರಾಜು ಮಕ್ಕಳನ್ನು ಓದಿಸಿದ್ದಾರೆ. ಆರ್ಥಿಕ ಸಂಕಷ್ಟದಿಂದ ದಿವ್ಯಾ ಅವರ ಸಹೋದರ ದೀಬು 10ನೇ ತರಗತಿಗೆ, ಸಹೋದರಿ ದೀಬ 7ನೇ ತರಗತಿಗೆ ಶಿಕ್ಷಣವನ್ನು ಮೊಟಕುಗೊಳಿಸಿ ತಮ್ಮ ತಂದೆ ತಾಯಿಯೊಂದಿಗೆ ಕೂಲಿ ಕೆಲಸಕ್ಕೆ ತೆರಳ ಬೇಕಾಗಿ ಬಂತು. ಆದರೆ ಶಿಕ್ಷಣವನ್ನು ಮುಂದವರಿಸಿದೆ ದಿವ್ಯ 1ರಿಂದ ೨ನೇ ತರಗತಿಯವರೆಗೆ ಡಿ.ಬಿ.ಕುಪ್ಪೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಮನೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿದ್ದರೂ ಹಾಡಿಗೆ ಒದಗಿಸಿರುವ ಬೀದಿ ದೀಪವನ್ನೇ ಆಸರೆಯಾಗಿ ಬಳಸಿಕೊಂಡು ಕಾಲೇಜು ಶಿಕ್ಷಣವನ್ನೂ ಮುಗಿಸಿದರು. ಈಗ ಹಂಪಿಯ ಕನ್ನಡ ವಿವಿಯಲ್ಲಿ ಪಿಎಚ್.ಡಿ. ಪದವಿ ಪಡೆದು ಎಚ್ .ಡಿ.ಕೋಟೆ ತಾಲ್ಲೂಕಿಗೆ ಹಾಗೂ ಸಮುದಾಯಕ್ಕೆ ಕೀರ್ತಿ ತಂದಿದ್ದಾರೆ.
ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಪ್ರೌಢಶಾಲೆ, ಪಿಯುಸಿ, ಪದವಿ ಶಿಕ್ಷಣವನ್ನು ಮುಗಿಸಿರುವ ಇವರು, ಮೈಸೂರಿನ ಛಾಯಾದೇವಿ ಬಿ.ಇಡಿ ಕಾಲೇಜಿನಲ್ಲಿ ಶಿಕ್ಷಕ ತರಬೇತಿ ಮುಗಿಸಿದರು. ನಂತರ ಹಂಪಿಯ ಕನ್ನಡ ವಿವಿಯಲ್ಲಿ ಎಂ.ಎ. ಸಮಾಜಶಾಸ್ತ್ರ ವಿಷಯದಲ್ಲಿ 4ನೇ ಬ್ಯಾಂಕ್ ಗಳಿಸಿ ಅಲ್ಲಿಯೇ ಪಿಎಚ್.ಡಿ. ಸಂಶೋಧನೆ ಪೂರ್ಣ ಗೊಳಿಸಿದ್ದಾರೆ, ಜತೆಗೆ ಕೆಎಸ್ ಒಯುನಲ್ಲಿ ಕನ್ನಡ ಎಂ.ಎ. ಪದವಿ ಕೂಡ ಪಡೆದಿದ್ದಾರೆ. ಮೂಲತಃ ಇವರದು ದ್ರಾವಿಡ ಉಪಭಾಷೆಯಾದ ಪಣಿಯನ್ ಮಾತೃಭಾಷೆಯಾಗಿದ್ದು, ಕನ್ನಡವನ್ನು ಸರಾಗವಾಗಿ ಮಾತನಾಡುತ್ತಾರೆ.
ನನ್ನ ಸಮುದಾಯವನ್ನು ನಿರ್ಲಕ್ಷ್ಯಮಾಡುತ್ತಿರುವವರಿಗೆ ನಮಗೂ ಅವಕಾಶ ನೀಡಿ ನಾವು ವಿದ್ಯಾವಂತರಾಗುತ್ತೇವೆ ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ನಮ್ಮ ಪಣಿ ಎರವರ ಸಮುದಾಯಕ್ಕೆ ನಾನು ಏನಾದರೂ ಸೇವೆ ಮಾಡಬೇಕು ಎಂಬುದು ನನ್ನ ಉದ್ದೇಶ. ನಮ್ಮ ಜನರು ರಾಜಕೀಯವಾಗಿ, ಆರ್ಥಿಕವಾಗಿ ಮುಂದುವರಿದಿಲ್ಲ. ನಾನು ವಿದ್ಯಾವಂತಳಾಗಿ ಸಮುದಾಯಕ್ಕೆ ಏಳಿಗೆಗೆ ಶ್ರಮಿಸುತ್ತೇನೆ.
-ಎಸ್.ಆರ್.ದಿವ್ಯಾ, ಪಿಎಚ್.ಡಿ. ಪದವೀಧರೆ
(Prashanthsmysore@gmail.com)
ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಆದ ದೌರ್ಜನ್ಯ ಎಲ್ಲರೂ ತಲೆತಗ್ಗಿಸುವ ಘಟನೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ…
ಬೆಂಗಳೂರು: ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಒಳನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಮತ್ತೆ ಕುಸಿತವಾಗಿದ್ದು, ಚಳಿಯ…
ನವದೆಹಲಿ: 2027ರ ಜನಗಣತಿಯ ಮೊದಲ ಹಂತದ ಮನೆ ಪಟ್ಟಿ ಕಾರ್ಯ ಈ ವರ್ಷದ ಏಪ್ರಿಲ್ 1 ರಿಂದ ಸೆಪ್ಟೆಂಬರ್.30ರವರೆಗೆ ಎಲ್ಲಾ…
ಬೆಂಗಳೂರು: ಬಳ್ಳಾರಿಯಲ್ಲಿ ನಡೆದ ಫೈರಿಂಗ್ ಪ್ರಕರಣವನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ…
ಬೆಂಗಳೂರು: ಆದಷ್ಟು ಬೇಗ ಬಿಜೆಪಿ ಜೊತೆ ಜೆಡಿಎಸ್ ವಿಲೀನ ಆಗಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ…
ಮದ್ದೂರು: ಮದ್ದೂರು ಪಟ್ಟಣದ ಪೊಲೀಸ್ ಠಾಣೆಯ ವಿಶ್ರಾಂತಿ ಗೃಹದಲ್ಲಿ ಕಾನ್‌ಸ್ಟೇಬಲ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ…