ಅಂಕಣಗಳು

ಮಹಿಳೆಯರಿಗೆ ನೇರ ನಗದು ವರ್ಗಾವಣೆ ಸಮಾನತೆಯೆಡೆಗೆ ಹೆಜ್ಜೆ

ಸಾಮಾಜಿಕ ಸುಧಾರಣೆಗಳ ಅಂಗವಾಗಿ ಆರ್ಥಿಕ-ಸಾಮಾಜಿಕ ಹಿಂದುಳಿಯುವಿಕೆಯನ್ನು ಹೋಗಲಾಡಿಸಲು ನೋಂದಾಯಿತ ಅರ್ಹರಿಗೆ ನೇರ ನಗದು ವರ್ಗಾವಣೆಗಳು ೧೯೭೦ರ ದಶಕದಿಂದಲೇ ಆರಂಭವಾದವು. ಆಗ ಪೋಷಣೆ ಮಾಡುವವರಿಲ್ಲದ ಹಿರಿಯ ನಾಗರಿಕ ನಿರ್ಗತಿಕರಿಗೆ ಓಲ್ಡ್ ಏಜ್ ಪೆನ್ಷನ್ (Old age Pension) ನಂತಹ ಪಿಂಚಣಿ ಯೋಜನೆಗಳು ಆರಂಭವಾದವು.

ಬ್ಯಾಂಕಿಂಗ್ ಸೇವೆಗಳು ಹಳ್ಳಿಗಳವರೆಗೆ ಇನ್ನೂ ಹೋಗದೇ ಇದ್ದಾಗ ಪೋಸ್ಟ್ ಆಫೀಸ್ ಮನಿ ಆರ್ಡರ್ ಮೂಲಕ ಕಳುಹಿಸಲಾಗುತ್ತಿತ್ತು. ಬ್ಯಾಂಕಿಂಗ್ ವಿಸ್ತರಣೆಯಾದ ನಂತರ ಬ್ಯಾಂಕ್ ಖಾತೆ ಹೊಂದುವಂತೆ ಮಾಡಿ ಅವುಗಳ ಮುಖಾಂತರ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಬ್ಯಾಂಕ್ ಸೇವೆಯನ್ನು ಬಳಸುವುದನ್ನು ಕಲಿಸುವ ಯೋಜನೆಯ ಭಾಗವೂ ಇದಾಗಿದೆ. ಮಹಿಳಾ ಸಬಲೀಕರಣದ ಭಾಗವಾಗಿ ಆರ್ಥಿಕ, ಸಾಮಾಜಿಕ ಹಿಂದುಳಿಯುವಿಕೆ ಅನುಭವಿಸುತ್ತಿರುವ ಅರ್ಹ ನೋಂದಾಯಿತ ಮಹಿಳೆಯರಿಗೆ ನೇರ ನಗದು ವರ್ಗಾವಣೆಗಳನ್ನು ಬಹುತೇಕ ಎಲ್ಲ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಒಂದಿಲ್ಲೊಂದು ಯೋಜನೆಯಡಿ ನೇರವಾಗಿಯೋ, ಪರೋಕ್ಷವಾಗಿಯೋ ಮಾಡುತ್ತಿವೆ.

ಅರ್ಹ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ವಿಶೇಷ ಸಹಾಯಧನ ಕೊಡುವ ಯೋಜನೆಗಳೂ ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿವೆ. ಮಹಿಳೆ ಆರ್ಥಿಕವಾಗಿ ಸಬಲಳಾದರೆ ಸಾಮಾಜಿಕ ಸಮಾನತೆಗೆ ಬಲ ತರುತ್ತದೆ ಎನ್ನುವ ತತ್ವದ ಭಾಗವೇ ಇದಾಗಿದೆ. ಅಲ್ಲದೇ ಅವರ ಆಹಾರದ ಸೇವನೆಯು ಹೆಚ್ಚುವುದಲ್ಲದೇ ಪೌಷ್ಟಿಕತೆಯೂ ಹೆಚ್ಚುತ್ತದೆ ಎಂಬ ವಿಶ್ವಾಸವೂ ಇದರಲ್ಲಿದೆ. ಆರೋಗ್ಯ ಸುಭದ್ರತೆಯ ಆಶಯವೂ ಇದರಲ್ಲಿದೆ. ಆಹಾರ ಸೇವನೆಯಲ್ಲಿ ಪುರುಷ ಮತ್ತು ಸೀಯರಲ್ಲಿ ಇರುವ ಅಸಮಾನತೆಯನ್ನು (ಸೀಯರಲ್ಲಿ ಕಡಿಮೆ ಇರುವುದನ್ನು) ಒಮ್ಮೆಲೇ ಪೂರ್ಣವಾಗಿ ಹೋಗಲಾಡಿಸ ಲಾಗದಿದ್ದರೂ ಕಡಿಮೆ ಮಾಡುತ್ತ ಹೋಗುವುದು ಸಾಧ್ಯವಾಗಬಹುದು. ಅಲ್ಲದೇ ತೀರ ಚಿಕ್ಕ ಮಕ್ಕಳ (ಕೈಗೂಸುಗಳು ಮತ್ತು ಎರಡು , ಮೂರು ವರ್ಷ ವಯಸ್ಸಿನ ಮಕ್ಕಳ) ಪೋಷಣೆಯಲ್ಲಿಯೂ ಈ ವರ್ಗಾವಣೆಗಳಿಂದ ಸುಧಾರಣೆಯಾಗುವುದೆಂದು ಆಶಿಸಲಾಗಿದೆ. ಇದು ಕೌಟುಂಬಿಕ ಹಣಕಾಸು ಸ್ಥಿತಿ ಸುಧಾರಿಸಲು ಸಹಕಾರಿಯಾಗುತ್ತದೆ.

ಇದನ್ನು ಓದಿ: ಉಂಡು ಮಲಗಿದರೂ ನಿಲ್ಲದ ಮುನಿಸು

‘ದಿ ಎಕನಾಮಿಸ್ಟ್’ ಪತ್ರಿಕೆಯ ಒಂದು ವಿಶ್ಲೇಷಣೆಯ ಪ್ರಕಾರ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡು ಆರಂಭವಾದ ರಾಜ್ಯ ಸರ್ಕಾರಗಳ ನಗದು ವರ್ಗಾವಣೆ ಯೋಜನೆ ೨೦೧೩ರಲ್ಲಿ ಆರಂಭವಾದ ಗೋವಾ ಸರ್ಕಾರದ ‘ಗೃಹ ಆಧಾರ’ ಯೋಜನೆ (ಮಾಸಿಕ ೧,೫೦೦ ರೂ. ವರ್ಗಾವಣೆ) ಮಾತ್ರ ಇದ್ದದ್ದು ೨೦೨೪ರ ಹೊತ್ತಿಗೆ ದೇಶಾದ್ಯಂತ ವ್ಯಾಪಿಸಿ ಬಹುತೇಕ ಎಲ್ಲ ರಾಜ್ಯಗಳಲ್ಲಿ ಸಣ್ಣ ದೊಡ್ಡ ವರ್ಗಾವಣೆ ಯೋಜನೆಗಳೊಂದಿಗೆ ದೇಶದ ಜಿಡಿಪಿಯ ಶೇ.೦೬ರ ಮಟ್ಟಕ್ಕೆ ತಲುಪಿತ್ತು. ಪ್ರಮುಖವಾಗಿ ದೊಡ್ಡ ಮೊತ್ತದ ವರ್ಗಾವಣೆಯ ಯೋಜನೆಗಳನ್ನು ರೂಪಿಸಿರುವ ೧೬ ರಾಜ್ಯಗಳ ಯೋಜನೆಗಳ ವಿವರಗಳನ್ನು ಇಲ್ಲಿನ ಸಂಖ್ಯಾ ಪಟ್ಟಿಯಲ್ಲಿ ಕೊಡಲಾಗಿದೆ.

ಯೋಜನೆಗಳು ಸಮರ್ಪಕವಾಗಿ ಜಾರಿಯಾಗಬೇಕು ನ್ಯಾಷನಲ್ ಬ್ಯೂರೋ ಆ- ಇಕನಾಮಿಕ್ ರಿಸರ್ಚ್ ಸಂಸ್ಥೆಯೂ ಸೇರಿ ದಂತೆ ಹಲವು ಅಧ್ಯಯನಗಳು ಈ ಯೋಜನೆಗಳ ಮೌಲ್ಯಮಾಪನ ಮಾಡಿರುವ ವರದಿಗಳಿವು. ಅವುಗಳಂತೆ ನೇರ ನಗದು ವರ್ಗಾವಣೆ ಯೋಜನೆಯಿಂದ ಸಾಕಷ್ಟು ಅನುಕೂಲಗಳಾಗಿವೆ. ಮಕ್ಕಳು ಮತ್ತು ಮಹಿಳೆಯರ ಆಹಾರ ಸೇವನೆಯ ಪ್ರಮಾಣ ಜಾಸ್ತಿಯಾಗಿದ್ದು, ಪುರುಷರು, ಮಹಿಳೆಯರು ಮತ್ತು ಮಕ್ಕಳ ಪೌಷ್ಟಿಕಾಂಶ ಸೇವನೆಯ ನಡುವಿನ ಅಂತರ ಗಣನೀಯವಾಗಿ ಕಡಿಮೆಯಾಗಿದೆ ಎಂದು ವರದಿಗಳು ಹೇಳುತ್ತವೆ .

ಒಟ್ಟಾರೆ ಈ ವರ್ಗಾವಣೆಗಳಿಂದ ಹಲವು ರಾಜ್ಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಹಾಗೂ ಮಹಿಳೆಯರ ಸ್ವಾತಂತ್ರ್ಯ ಹೆಚ್ಚಾಗಿವೆ ಎಂದು ಅಧ್ಯಯನಗಳು ಹೇಳುತ್ತವೆ. ಈ ವರ್ಗಾವಣೆ ಯೋಜನೆಗಳು ಮುಂದುವರಿಯಬೇಕಲ್ಲದೆ ಅರ್ಹರಿಗೆ ಮತ್ತು ಅವಶ್ಯವಿರುವವರಿಗೆ ತಲುಪಬೇಕು. ಅಲ್ಲದೇ ಸಮಾಜದ ಕಟ್ಟ ಕಡೆಯ ಮಹಿಳೆಯೂ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲತೆ ಹೊಂದಿ ಸಮಾನತೆಯನ್ನು ಅನುಭವಿಸುವವರೆಗೆ ಈ ನೇರ ವರ್ಗಾವಣೆಗಳು ಅವಶ್ಯ. ಇವುಗಳನ್ನು ಸದುಪಯೋಗಪಡಿಸಿಕೊಂಡು ಸಬಲರಾಗಲು ಕುಟುಂಬದ ಎಲ್ಲ ಸದಸ್ಯರು ಮಹಿಳೆಯರಿಗೆ ಸಹಕಾರ ಮತ್ತು ಬೆಂಬಲ ಒದಗಿಸಬೇಕು. ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯ ಸಮಪಾಲು ಎಂಬುದನ್ನು ಅರಿಯಬೇಕು.

” ಒಟ್ಟಾರೆ ಈ ವರ್ಗಾವಣೆಗಳಿಂದ ಹಲವು ರಾಜ್ಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಹಾಗೂ ಮಹಿಳೆಯರ ಸ್ವಾತಂತ್ರ್ಯ ಹೆಚ್ಚಾಗಿವೆ ಎಂದು ಅಧ್ಯಯನಗಳು ಹೇಳುತ್ತವೆ. ಈ ವರ್ಗಾವಣೆ ಯೋಜನೆಗಳು ಮುಂದುವರಿಯಬೇಕಲ್ಲದೆ ಅರ್ಹರಿಗೆ ಮತ್ತು ಅವಶ್ಯವಿರುವವರಿಗೆ ತಲುಪಬೇಕು.”

-ಪ್ರೊ.ಆರ್.ಎಂ.ಚಿಂತಾಮಣಿ

ಆಂದೋಲನ ಡೆಸ್ಕ್

Recent Posts

ಯುವಕರೇ, ನಿಯಮ ಪಾಲಿಸಿ ಜೀವ ಉಳಿಸಿ : ಎಸ್‌ಪಿ ಶೋಭಾರಾಣಿ ಮನವಿ

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ಅಧಿಕ್ಷಕಿ ಡಾ.ವಿ.ಜೆ.ಶೋಭಾರಾಣಿ ಮಂಡ್ಯ : ಯುವಜನತೆ ರಸ್ತೆ ಸುರಕ್ಷತಾ…

22 mins ago

ಕೊಕ್ಕರೆ ಬೆಳ್ಳೂರನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿಸಲು ಚಿಂತನೆ : ಶಾಸಕ ಉದಯ್‌

ಮದ್ದೂರು : ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಚಿಂತನೆ ನಡೆದಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು…

30 mins ago

ನೈಜ ಕೃಷಿಗೆ ಪ್ರೋತ್ಸಾಹ : ಸಚಿವ.ಎನ್.ಚಲುವರಾಯಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಶೇ 75% ರಷ್ಟು ಸಣ್ಣ ಮತ್ತು ಅತೀ ಸಣ್ಣ ರೈತರಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು…

1 hour ago

ಮಹದೇಶ್ವರ ಬೆಟ್ಟ | ಪಾದಯಾತ್ರೆ, ದ್ವಿಚಕ್ರ ವಾಹನಕ್ಕೆ ತಾತ್ಕಾಲಿಕ ನಿರ್ಬಂಧ

ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಾಗೂ ದ್ವಿಚಕ್ರ ವಾಹನದಲ್ಲಿ ತೆರಳುವುದಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಅರಣ್ಯ ಇಲಾಖೆ…

2 hours ago

ಮುಡುಕುತೊರೆ ಜಾತ್ರೆ : ಪೋಸ್ಟರ್ ಬಿಡುಗಡೆಗೊಳಿಸಿದ ಸಚಿವ ಎಚ್‌ಸಿಎಂ

ಮೈಸೂರು : ಮುಡುಕುತೊರೆ ಭ್ರಮರಾಂಬ ಸಮೇತ ಶ್ರೀ ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಮತ್ತು ದತ್ತಿ ಇಲಾಖೆ ಹಾಗೂ…

2 hours ago

ಗುರಿ ಇಟ್ಟುಕೊಂಡು ನಿರಂತರ ಓದಿ : ಪಿಯುಸಿ ವಿದ್ಯಾರ್ಥಿಗಳಿಗೆ ನಿಶಾಂತ್‌ ಸಲಹೆ

ಹನೂರು : ಪ್ರತಿಯೊಬ್ಬ ವಿದ್ಯಾರ್ಥಿಗೂ ದ್ವಿತೀಯ ಪಿಯುಸಿ ಒಂದು ಪ್ರಮುಖ ಘಟವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಒಂದು ಗುರಿ…

3 hours ago