Categories: ಅಂಕಣಗಳು

ಭಯೋತ್ಪಾದನೆ ನಾಶಪಡಿಸಲು ದಿಟ್ಟ ಕ್ರಮ ಅನಿವಾರ್ಯ

ದೆಹಲಿ ಕಣ್ಣೋಟ 

ಶಿವಾಜಿ ಗಣೇಶನ್‌ 

ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಅನೇಕ ದಶಕಗಳಿಂದ ನೆರೆಹೊರೆ ರಾಷ್ಟ್ರಗಳ ಕುಮ್ಮಕ್ಕಿನಿಂದ ಭಯೋತ್ಪಾದನೆಯನ್ನು ಎದುರಿಸುತ್ತಿವೆ. ಭಾರತ ಮೂಲತಃ ಶಾಂತಿ ಸಂದೇಶ ಸಾರುವ ರಾಷ್ಟ್ರ ಎನ್ನುವುದು ಜಗತ್ತಿಗೇ ತಿಳಿದ ಸಂಗತಿ. ಆದರೆ ಸ್ವಾತಂತ್ರ್ಯಾನಂತರ ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿ ಪ್ರತ್ಯೇಕಗೊಂಡ ನಂತರ ಅದು ಮಿತ್ರ ರಾಷ್ಟ್ರ ವಾಗುವ ಬದಲಿಗೆ ಶತ್ರು ರಾಷ್ಟ್ರವಾಗಿ ಭಯೋತ್ಪಾದಕರನ್ನು ಹುಟ್ಟುಹಾಕಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಾ ಬಂದದ್ದು ಈ ಹೊತ್ತಿನ ಎಲ್ಲ ಸಮಸ್ಯೆಗಳಿಗೆ ಮೂಲ.

ಪಾಕಿಸ್ತಾನ ಉತ್ತೇಜಿಸುತ್ತಾ ಬಂದ ಈ ಭಯೋತ್ಪಾದನೆ ವಿರುದ್ಧ ಈಗ ಯುದ್ಧವನ್ನೇ ಸಾರುವ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಅದನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಭಾರತ ದಿಟ್ಟ ಹೆಜ್ಜೆ ಇಟ್ಟಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಭಯೋತ್ಪಾದನೆ ಎನ್ನುವುದು ಯಾವುದೇ ದೇಶಕ್ಕೂ ಒಳಿತು ಮಾಡುವುದಿಲ್ಲ. ಭಾರತಕ್ಕೆ ಪಾಕಿಸ್ತಾನದ ಕಡೆಯಿಂದ ಎದುರಾಗುವ ಭಯೋತ್ಪಾದನೆ ಜೊತೆಗೆ ಈಶಾನ್ಯ ರಾಜ್ಯಗಳಲ್ಲಿ ನೆರೆ ರಾಷ್ಟ್ರ ಗಳಿಂದ ನುಸುಳುವ ಕೆಲವು ಬಂಡುಕೋರ ಸಂಘಟನೆಗಳ ಉಗ್ರಗಾಮಿಗಳು ಕಳೆದ ಎಪ್ಪತ್ತು ವರ್ಷಗಳಿಂದಲೂ ತಲೆನೋವಾಗಿದ್ದಾರೆ.

೧೯೭೫ರಿಂದ ೨೦೧೭ರವರೆಗೆ ನೆರೆಹೊರೆ ರಾಷ್ಟ್ರಗಳ, ಅದರಲ್ಲೂ ವಿಶೇಷವಾಗಿ ಪಾಕಿಸ್ತಾನದ ಉಗ್ರಗಾಮಿಗಳಿಂದ ಒಟ್ಟು ೧೨,೦೦೨ ಭಯೋತ್ಪಾದಕ ಘಟನೆಗಳು, ದಾಳಿಗಳು ಭಾರತದ ಮೇಲೆ ನಡೆದಿವೆ. ಈ ದಾಳಿಗಳಿಂದ ಒಟ್ಟು ೧೯,೮೬೬ ಜನರು ಪ್ರಾಣಕಳೆದುಕೊಂಡಿದ್ದಾರೆ. ಹೀಗೆ ಪ್ರಾಣ ಕಳೆದು ಕೊಂಡವರಲ್ಲಿ ಅಮಾಯಕರ ಸಂಖ್ಯೆಯೇ ಹೆಚ್ಚು. ಮತ್ತು ಈ ಘಟನೆಗಳಿಂದ ಗಾಯಗೊಂಡವರ ಸಂಖ್ಯೆ ೩೦,೫೪೪. ೨೦೧೭ರ ನಂತರವೂ ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳ ದಾಳಿ ನಿರಂತರವಾಗಿ ನಡೆದಿದೆ.

ಈ ಉಗ್ರಗಾಮಿಗಳ ದಾಳಿ ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಅಮೆರಿಕದ ಗೃಹ ಇಲಾಖೆಯು ೨೦೧೨ರಲ್ಲಿ ನೀಡಿರುವ ಮಾಹಿತಿಯಂತೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ೧೯೭೦ರಿಂದ ೨೦೧೬ರವರೆಗೆ ನಡೆದಿರುವ ದಾಳಿಗಳಿಂದ ಆಫ್ಘಾನಿಸ್ತಾನದಲ್ಲಿ ೨,೬೩೨, ಇರಾಕ್‌ನಲ್ಲಿ ೨,೪೩೬, ಪಾಕಿಸ್ತಾನದಲ್ಲಿ ೮೪೮ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಮಾಹಿತಿಯ ಪ್ರಕಾರ ಮುಸ್ಲಿಂ ರಾಷ್ಟ್ರಗಳಲ್ಲಿಯೇ ಭಯೋತ್ಪಾದಕರ ಚಟುವಟಿಕೆಗಳು ನಡೆಯುತ್ತಿದ್ದು ಅವರಿಗೆ ಬಹುತೇಕ ಈ ರಾಷ್ಟ್ರಗಳೇ ಆಶ್ರಯ ನೀಡುತ್ತಾ ಬಂದಿರುವುದು ವಿಪರ್ಯಾಸ.

ಬಹುತೇಕ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ಪೂರೈಸುವ ಅಮೆರಿಕ ಕೂಡ ಭಯೋತ್ಪಾದನೆಯಿಂದ ಹೊರತಾಗಿಲ್ಲ. ಇತಿಹಾಸದಲ್ಲಿ ಮರೆಯಲಾಗದ ೨೦೦೧ರ ಸೆಪ್ಟೆಂಬರ್ ೧೧ರಂದು ಪಾಕ್ ಬೆಂಬಲಿತ ಅಲ್ ಖೈದಾ ಸಂಘಟನೆ ವಿಶ್ವ ವಾಣಿಜ್ಯ ಕೇಂದ್ರವನ್ನು ವೈಮಾನಿಕ ದಾಳಿಯಿಂದ ನಾಶ ಪಡಿಸಿದ್ದರಿಂದ ೨,೯೯೬ ಮಂದಿ ಪ್ರಾಣ ಕಳೆದುಕೊಳ್ಳಬೇಕಾಯಿತು. ಈ ದಾಳಿಯ ರೂವಾರಿ ಅಲ್ ಖೈದಾ ಉಗ್ರಗಾಮಿ ಸಂಘಟನೆಯನ್ನು ಹುಟ್ಟುಹಾಕಿದ್ದ ಒಸಾಮ ಬಿನ್ ಲಾಡೆನ್. ಈ ಕುಖ್ಯಾತ ಉಗ್ರಗಾಮಿ ನಾಯಕನನ್ನು ಅಮೆರಿಕ ದಿಟ್ಟ ಕ್ರಮ ಕೈಗೊಂಡು ಆತನನ್ನು ಮುಗಿಸುವ ಮೂಲಕ ತನ್ನ ಸೇಡನ್ನು ತೀರಿಸಿಕೊಂಡಿತು. ಈ ವಿಶ್ವ ವಾಣಿಜ್ಯ ಕೇಂದ್ರವನ್ನು ಉಗ್ರಗಾಮಿಗಳು ನಾಶಪಡಿಸಲು ೧೯೯೩ರಲ್ಲಿ ವಾಣಿಜ್ಯ ಕೇಂದ್ರದ ಪಾರ್ಕಿಂಗ್ ಜಾಗದಲ್ಲಿ ನಡೆಸಿದ ಬಾಂಬ್ ಸೋಟದಿಂದ ಆರು ಮಂದಿ ಸಾವನ್ನಪ್ಪಿ ಸುಮಾರು ಒಂದು ಸಾವಿರ ಮಂದಿ ಗಾಯಗೊಂಡ ಘಟನೆ ನಡೆದು ಕೊನೆಗೂ ೨೦೧೧ರಲ್ಲಿ ಈ ಬೃಹತ್ ವ್ಯಾಪಾರ ವಹಿವಾಟು ನಡೆಸುವ ಅಂತಾರಾಷ್ಟ್ರೀಯ ವಾಣಿಜ್ಯ ಕೇಂದ್ರವನ್ನು ಉಗ್ರಗಾಮಿಗಳುನಾಶಪಡಿಸುವಲ್ಲಿ ಯಶಸ್ವಿಯಾದರು. ವಿಶ್ವದ ಆರ್ಥಿಕ ಸ್ಥಿತಿಯನ್ನು ನಾಶಪಡಿಸುವುದೇ ಉಗ್ರಗಾಮಿಗಳ ದುರುದ್ದೇಶವಾಗಿತ್ತು ಎನ್ನುವುದು ಇಡೀ ಜಗತ್ತಿಗೇ ತಿಳಿದ ಸಂಗತಿ.

ಇನ್ನು ನಮ್ಮ ನೆರೆಯ ದ್ವೀಪ ರಾಷ್ಟ್ರವಾದ ಶ್ರೀಲಂಕಾ ಎಲ್‌ಟಿಟಿಇ ಉಗ್ರ ಸಂಘಟನೆಯಿಂದ ತತ್ತರಿಸಿಹೋಗಿತ್ತು. ಭಾರತದಿಂದ ನೂರಾರು ವರ್ಷಗಳ ಹಿಂದೆಯೇ ಶ್ರೀಲಂಕಾಗೆ ವಲಸೆ ಹೋದ ತಮಿಳು ಜನರನ್ನು ಶ್ರೀಲಂಕಾ ಜನರು ಮತ್ತು ಅಲ್ಲಿನ ಆಡಳಿತ ನಡೆಸಿಕೊಂಡು ಬಂದ ದೌರ್ಜನ್ಯದ ವಿರುದ್ಧ ಹೋರಾಡಲು ಈ ಉಗ್ರ ಸಂಘಟನೆಯು ಹುಟ್ಟಿಕೊಂಡರೂ ಅದು ಹಿಡಿದ ಹಿಂಸಾ ಮಾರ್ಗದಿಂದ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯಾದದ್ದು ಭಾರತೀಯರ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದ ಕಹಿ ಘಟನೆ.

ಹತ್ತಾರು ವರ್ಷ ಶ್ರೀಲಂಕಾ ಸರ್ಕಾರ ನಡೆಸಿದ ಆಕ್ರಮಣಕಾರಿ ಹೋರಾಟದಿಂದ ಈ ಸಂಘಟನೆಯನ್ನು ಹುಟ್ಟುಹಾಕಿದ ವೇಲುಪಿಳ್ಳೈ ಪ್ರಭಾಕರನ್ ಮತ್ತವರ ತಂಡವನ್ನು ಶ್ರೀಲಂಕಾ ಸೇನೆಯು ೨೦೦೯ರಲ್ಲಿ ಕೊಂದು ಹಾಕಿತು. ಈ ಮಿಲಿಟರಿ ಕ್ರಮದಿಂದ ಶ್ರೀಲಂಕಾ ಎಲ್‌ಟಿಟಿಈ ಉಗ್ರಸಂಘಟನೆಯನ್ನು ನಾಶಪಡಿಸಿತು. ಅದೀಗ ತಲೆ ಎತ್ತದಂತೆ ಮಾಡುವಲ್ಲಿ ಅಲ್ಲಿನ ಆಡಳಿತ ಯಶಸ್ವಿಯಾಯಿತು.

ಈ ಉಗ್ರಗಾಮಿ ಸಂಘಟನೆಗಳಿಂದ ಭಾರತ ನಷ್ಟ ಅನುಭವಿಸಿರುವುದು ಅಷ್ಟಿಷ್ಟಲ್ಲ. ೨೦೦೧ರ ಡಿಸೆಂಬರ್ ೧೩ರಂದು ನಮ್ಮ ಪ್ರಜಾಪ್ರಭುತ್ವದ ದೇಗುಲ ಎಂದೇ ಹೆಸರಾದ ಸಂಸತ್ ಭವನದ ಮೇಲೆ ಜೈಷ್ ಎ ಮೊಹಮದ್ ಉಗ್ರಸಂಘಟನೆ ನಡೆಸಿದ ದಾಳಿಯಿಂದ ಆರು ಮಂದಿ ದೆಹಲಿ ಪೊಲೀಸರು, ಇಬ್ಬರು ಸಂಸತ್ ಭವನದ ಭದ್ರತಾ ಸಿಬ್ಬಂದಿ ಮತ್ತು ಗಾರ್ಡನ್ ನೋಡಿಕೊಳ್ಳುತ್ತಿದ್ದ ಒಬ್ಬ ನೌಕರ ಪ್ರಾಣ ಕಳೆದುಕೊಳ್ಳಬೇಕಾಯಿತು. ಆದರೆ ನಮ್ಮ ಭದ್ರತಾ ಸಿಬ್ಬಂದಿ ನಡೆಸಿದ ಹೋರಾಟದಿಂದ ಸ್ಥಳದಲ್ಲಿಯೇ ಐದು ಮಂದಿ ಉಗ್ರರನ್ನು ಕೊಂದು ಹಾಕಲಾಯಿತು. ಆ ದಿನದಂದು ಸಂಸತ್ತಿನಲ್ಲಿ ಕಲಾಪ ನಡೆಯುತ್ತಿದ್ದು, ಭಾರತೀಯ ಸಂಸದರನ್ನು ಹತ್ಯೆ ಮಾಡುವ ಸಂಚು ಅವರದಾಗಿತ್ತು.

ಭಾರತವನ್ನು ಘಾಸಿಗೊಳಿಸಿದ ಮತ್ತೊಂದು ಘಟನೆ ೨೦೦೮ರ ನವೆಂಬರ್ ೨೬ ರಂದು ಮುಂಬೈನಲ್ಲಿ ತಾಜ್ ಹೋಟೆಲ್ ಮೇಲೆ ಲಷ್ಕರ್‌ಎ ತೊಯ್ಬಾ ನಡೆಸಿದ ದಾಳಿ. ಈ ದಾಳಿಯಿಂದ ೧೭೫ ಮಂದಿ ಅಮಾಯಕರು ಬಲಿಯಾಗಬೇಕಾಯಿತು. ಸುಮಾರು ೩೦೦ ಮಂದಿ ಈ ದಾಳಿಯಿಂದ ಗಾಯಗೊಂಡರು. ಹೀಗೆ ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿ ಸಂಘಟನೆಗಳು ನಿರಂತರವಾಗಿ ಭಾರತದ ಮೇಲೆ ನಡೆಸುತ್ತಾ ಬಂದಿರುವ ದಾಳಿಗಳಿಗೆ ಈಗ ಕೊನೆ ಹೇಳುವ ಸಮಯ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮಗಳಿಂದ ಹಲವು ವರ್ಷಗಳಿಂದ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಶಾಂತಯುತವಾಗಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಿದ ಮೇಲೆ ಮತ್ತು ಕಾಶ್ಮೀರದ ಮೇಲೆ ಕೇಂದ್ರ ಸರ್ಕಾರದ ಬಿಗಿ ಕ್ರಮ ಹೆಚ್ಚಾಗಿತ್ತು. ಕಾಶ್ಮೀರ ವಿಧಾನಸಭೆ ಚುನಾವಣೆಯೂ ಅಚ್ಚರಿ ಎನ್ನುವಂತೆ ಶಾಂತಿಯುತವಾಗಿ ನಡೆದು ವಿಧಾನಸಭೆಯೂ ಅಸ್ತಿತ್ವಕ್ಕೆ ಬಂದು ನ್ಯಾಷನಲ್ ಕಾನ್ಛರೆನ್ಸ್ ಪಕ್ಷದ ನೇತೃತ್ವದಲ್ಲಿ ಹೊಸ ಆಡಳಿತ ವ್ಯವಸ್ಥೆಯೂ ಬಂದಿತು. ಇನ್ನು ಎಲ್ಲವೂ ಸರಿಹೋಯಿತು. ಉಗ್ರಗಾಮಿಗಳ ಉಪಟಳ ತಹಬದಿಗೆ ಬಂದಿತೆಂಬ ನಿಟ್ಟಿಸಿರು ಬಿಡುವಷ್ಟರಲ್ಲಿ ಪಹಲ್ಗಾಮ್ ಹತ್ಯಾಕಾಂಡ ದೇಶದ ಭದ್ರತೆ ಮತ್ತು ಸ್ವಾಭಿಮಾನವನ್ನು ಘಾಸಿಗೊಳಿಸಿದೆ. ಪಹಲ್ಗಾಮ್‌ನಲ್ಲಿ ೨೬ ಮಂದಿ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರಗಾಮಿಗಳನ್ನು ಮಟ್ಟಹಾಕಲು ಭಾರತ ಸರ್ಕಾರ ದಿಟ್ಟ ನಿಲುವ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಈ ದಿಸೆಯಲ್ಲಿ ಕಳೆದ ಎರಡು ವಾರಗಳಿಂದ ಕೇಂದ್ರ ಸರ್ಕಾರ ಭಯೋತ್ಪಾದಕರಿಗೆ ಬೆಂಬಲವಾಗಿ ನಿಂತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ನಿರಂತರವಾಗಿ ಕೈಗೊಳ್ಳುತ್ತಿರುವ ಕ್ರಮಗಳು ಸ್ವಾಗತಾರ್ಹ ಮತ್ತು ಅನಿವಾರ್ಯ.

ಭಾರತ ಈಗ ನಡೆಸುತ್ತಿರುವ ಸೇನಾ ಕ್ರಮಗಳ ಉದ್ದೇಶ ಭಯೋತ್ಪಾದನೆಯನ್ನು ನಿರ್ನಾಮ ಮಾಡುವುದೇ ಆಗಿದೆ. ಕಾಶ್ಮೀರದ ಗಡಿ ಭಾಗದಲ್ಲಿ ಮತ್ತೆ ಉಗ್ರರು ತಲೆ ಎತ್ತದಂತೆ ಉಗ್ರರ ಕಾರ್ಯಸ್ಥಾನಗಳನ್ನು ವೈಮಾನಿಕ ದಾಳಿಯಿಂದ ನಾಶಪಡಿಸಿದ್ದು ಅನಿವಾರ್ಯ. ಆದರೆ ಪಾಕಿಸ್ತಾನ ಉಗ್ರರ ಬೆಂಬಲಕ್ಕೆ ನಿಂತು ಭಾರತದ ವಿರುದ್ಧ ಕ್ಷಿಪಣಿ ದಾಳಿ ನಡೆಸಿದ ಕ್ರಮವನ್ನು ಭಾರತೀಯ ವೈಮಾನಿಕ ಪಡೆ ಯಶಸ್ವಿಯಾಗಿ ನಿರ್ವಹಿಸಿದೆ. ಉಗ್ರಗಾಮಿಗಳಿಗೆ ಆಶ್ರಯ ನೀಡುತ್ತಾ ಭಾರತದ ವಿರುದ್ಧ ಪರೋಕ್ಷವಾಗಿ ಹೋರಾಟ ಮಾಡಿಕೊಂಡು ಬಂದಿರುವ ಪಾಕಿಸ್ತಾನದ ಈ ನಡೆಯನ್ನು ಕೊನೆಗಾಣಿಸುವ ಕಾಲ ಸನ್ನಿಹಿತವಾಗಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಸೇನಾ ಕ್ರಮಗಳನ್ನು ಇಡೀ ದೇಶದ ಜನರು ಮತ್ತು ಎಲ್ಲ ರಾಜಕೀಯ ಪಕ್ಷಗಳೂ ಬೆಂಬಲಿಸಿರುವುದು ಒಳ್ಳೆಯ ಬೆಳವಣಿಗೆ. ಪಾಕಿಸ್ತಾನವು ಉಗ್ರಗಾಮಿ ಚಟುವಟಿಕೆಗೆ ನೆರವಾಗುವ ಮೂಲಕ ಆ ದೇಶವೂ ಆಂತರಿಕವಾಗಿ ನಾಶವಾಗುತ್ತಾ ಬಂದಿರುವುದನ್ನು ಅಲ್ಲಿನ ಆಡಳಿತ ತಿಳಿದುಕೊಳ್ಳುವಲ್ಲಿ ವಿಫಲವಾಗಿರುವುದು ದುರಂತ.

ಪಾಕಿಸ್ತಾನವು ಈಗ ಭಾರತದ ವಿರುದ್ಧ ಪ್ರತಿದಾಳಿ ನಡೆಸುತ್ತಿರುವುದು ನೇರಾ ನೇರಾ ಯುದ್ಧಕ್ಕೆ ಆಮಂತ್ರಣ ನೀಡಿದಂತಿದೆ. ಆದರೆ ಪಾಕಿಸ್ತಾನವನ್ನು ಬಗ್ಗುಬಡಿಯುವುದು ಭಾರತಕ್ಕೆ ಕಷ್ಟವೇನಲ್ಲ. ೧೯೬೩ ಮತ್ತು ೧೯೭೧ರಲ್ಲಿ ನಡೆದ ಯುದ್ಧಗಳಲ್ಲಿ ಪಾಕಿಸ್ತಾನವನ್ನು ಭಾರತ ಯಶಸ್ವಿಯಾಗಿ ಸೋಲಿಸಿದೆ. ಆದರೂ ಆ ದೇಶದ ಉದ್ಧಟತನ ಮುಂದಿವರಿದೇ ಇದೆ. ಈ ದಾಳಿಕೋರ ಪಾಕಿಸ್ತಾನ ಮತ್ತೆಂದೂ ಭಾರತದ ವಿರುದ್ಧ ಭಯೋತ್ಪಾದಕರನ್ನು ಬೆಂಬಲಿಸಿ ನಡೆಸುವ ಹೋರಾಕ್ಕೆ ಇತಿಶ್ರೀ ಹಾಡುವ ದಿನಗಳು ಈಗ ಎದುರಾಗಿವೆ. ಈ ದಿಸೆಯಲ್ಲಿ ದೇಶದ ಸೇನಾ ಕ್ರಮಕ್ಕೆ ಬೆಂಬಲವಾಗಿ ನಿಲ್ಲುವುದು ಈಗ ಭಾರತೀಯರ ಆದ್ಯ ಕರ್ತವ್ಯ. ಅಂತು ಕದನ ಶುರುವಾಗಿದೆ ಭಯೋತ್ಪಾದಕರ ಅಟ್ಟಹಾಸ ಕೊನೆಗೊಳ್ಳಲಿ.

” ಭಾರತ ಈಗ ನಡೆಸುತ್ತಿರುವ ಸೇನಾ ಕ್ರಮಗಳ ಉದ್ದೇಶಭಯೋತ್ಪಾದನೆಯನ್ನು ನಿರ್ನಾಮ ಮಾಡುವುದೇ ಆಗಿದೆ. ಕಾಶ್ಮೀರದ ಗಡಿ ಭಾಗದಲ್ಲಿ ಮತ್ತೆ ಉಗ್ರರು ತಲೆ ಎತ್ತದಂತೆ ಉಗ್ರರ ಕಾರ್ಯಸ್ಥಾನಗಳನ್ನು ವೈಮಾನಿಕ ದಾಳಿಯಿಂದ ನಾಶಪಡಿಸಿದ್ದು ಅನಿವಾರ್ಯ. ಆದರೆ ಪಾಕಿಸ್ತಾನ ಉಗ್ರರ ಬೆಂಬಲಕ್ಕೆ ನಿಂತು ಭಾರತದ ವಿರುದ್ಧ ಕ್ಷಿಪಣಿ ದಾಳಿ ನಡೆಸಿದ ಕ್ರಮವನ್ನು ಭಾರತೀಯ ವೈಮಾನಿಕ ಪಡೆ ಯಶಸ್ವಿಯಾಗಿ ನಿರ್ವಹಿಸಿದೆ.”

ಆಂದೋಲನ ಡೆಸ್ಕ್

Recent Posts

ಹನೂರು: ಪಾದಯಾತ್ರಿಕರು ಬಿಸಾಡುವ ಕಸ ಸಂಗ್ರಹಣೆ ಡಬ್ಬ ನಿರ್ಮಾಣ ಕಾಮಗಾರಿಗೆ ಚಾಲನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿರುವ…

26 mins ago

ಕೇಂದ್ರ ಬಜೆಟ್‌ಗೆ ರಾಜ್ಯ ಬಿಜೆಪಿ ನಾಯಕರ ಮೆಚ್ಚುಗೆ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ…

32 mins ago

ಮಂಡ್ಯ| ನಿಂತಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಮಂಡ್ಯ‌: ನಿಂತಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಮೂವರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ…

2 hours ago

ಬಜೆಟ್‌ ದೇಶದ ಅಭಿವೃದ್ಧಿಗೆ ಹೊಸ ಸ್ಪರ್ಶ ತುಂಬಲಿದೆ: ಪ್ರಧಾನಿ ಮೋದಿ

ನವದೆಹಲಿ: 2026ರ ಬಜೆಟ್‌ 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಕುರಿತು…

2 hours ago

ಬಜೆಟ್‌ನಲ್ಲಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಕ್ಕೆ ಮತ್ತೆ ಅನ್ಯಾಯ: ಈಶ್ವರ ಖಂಡ್ರೆ

ಬೆಂಗಳೂರು: ಭಾನುವಾರ ಮಂಡಿಸಲಾದ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ರಜೆ ನೀಡುವಂತಿದೆ. ಸಂಪೂರ್ಣ ನಿರಾಶಾದಾಯಕವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು…

2 hours ago

ಕೇಂದ್ರ ಬಜೆಟ್:‌ ಯಾವ ವಸ್ತುಗಳ ದರ ಏರಿಕೆ? ಯಾವುದು ಇಳಿಕೆ?

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಯಲ್ಲಿ ಇಂದು 2026-27ನೇ ಕೇಂದ್ರ ಬಜೆಟ್‌ ಮಂಡನೆ ಮಾಡಿದ್ದಾರೆ. ಬಜೆಟ್‌ನಲ್ಲಿ…

2 hours ago